ಒಂದು ಹೆಣ್ಣಿನ ಅಂದವನ್ನು ಹಿಮ್ಮಡಿಗೊಳಿಸುವಂತಹ ಮಹತ್ತರದ ಕೆಲಸವನ್ನು ಮಾಡುವುದು ಆಕೆಯ ಮೂಗು ಬೊಟ್ಟು ಅಥಾವ ಮೂಗುತ್ತಿ. ಭಾರತದಲ್ಲಿ ಮೂಗು ಚುಚ್ಚುವುದು, ಬಳೆಗಳು ಮಂಗಳಸೂತ್ರ ಅಥವಾ ಬಿಂದಿಯ0ತೆ ಸಂಪ್ರದಾಯದ ಒಂದು ಭಾಗವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಮೂಗುತ್ತಿಗಳನ್ನು ಧರಿಸುವುದರ ಹಿಂದೆ ಅದರದೆ ಆದ ಮಹತ್ವ ಇದೆ.
ಭಾರತೀಯ ಸಂಸ್ಕೃತಿಯಲ್ಲಿ, ಮೂಗು ಚುಚ್ಚುವುದು ಒಂದು ಪ್ರಮುಖ ಪದ್ಧತಿಯಾಗಿದೆ ಮತ್ತು ಇದನ್ನು ಭಾರತೀಯ ಮಹಿಳೆಯರು ಅನುಸರಿಸುತ್ತಾರೆ. ಮೂಗುತ್ತಿ ಅಥವಾ ಮೂಗಿನ ಉಂಗುರವನ್ನು ಆಭರಣವಾಗಿ ಧರಿಸುವುದು ಒಬ್ಬರ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ, ಆದರೆ ಈ ಸಂಪ್ರದಾಯಕ್ಕೆ ಸಂಬ0ಧಿಸಿದ ಕೆಲವು ನಂಬಿಕೆಗಳು ಮತ್ತು ದಂತಕಥೆಗಳಿವೆ.
ಸಾ0ಪ್ರದಾಯಿಕ ಪ್ರಾಮುಖ್ಯತೆ ಎನೇ ಇದ್ದರು ಇಂದು ಮಹಿಳೆಯರು ಹೆಚ್ಚು ಫ್ಯಾಶನೇಬಲ್ ಆಗಿ ಕಾಣಲು ವಿವಿಧ ವಿನ್ಯಾಸದ ಮೂಗುತ್ತಿ ಅಥವಾ ರಿಂಗ್ನ್ನು ಅವಲಂಬಿಸಿದ್ದಾರೆ.
ಹಿ0ಗ್ಡ್ ರಿಂಗ್ಸ್- ಈ ಬಗೆಯ ರಿಂಗ್ ಸುಲಭ ವಿಧಾನದಲ್ಲಿ ತೆರೆಯಬಹುದು ಹಾಗೂ ಅದನ್ನು ಮುಚ್ಚಬಹುದು. ಇದು ಚಿನ್ನ ಬೆಳ್ಳಿ ಹಾಗೂ ಪ್ಲಾಟೀನಂಗಳಲ್ಲಿ ಲಭ್ಯವಿರುತ್ತದೆ.
ತಡೆರಹಿತ ಉಂಗುರಗಳು- ಈ ಬಗೆಯ ಉಂಗುದಲ್ಲಿ ಸ್ವಲ್ಪ ಭಾಗವು ತೆರದುಕೊಂಡಿದ್ದು ಅದನು ಅದುಮಿ ಮೂಗಿಗೆ ಸಿಕ್ಕಿಸಬೇಕಾಗುತ್ತದೆ.
ವೃತ್ತಾಕಾರದ ಬಾರ್ ಬೆಲ್ಗಳು- ಇದು ಯೂ ಶೇಪ್ ನಲ್ಲಿ ಇರುವ ರಿಂಗ್ ಆಗಿದ್ದು, ಮೂಗಿನ ಮಧ್ಯ ಭಾಗದ ಪದರಕ್ಕೆ ಚುಚ್ಚಿಸಿ ಕೊಳ್ಳಲಾಗುತ್ತದೆ.
ಕ್ಯಾಪ್ಟಿವ್ ಬೀಡ್ ರಿಂಗ್- ಹೆಸರೆ ಹೇಳುವಂತೆ ರಿಂಗ್ನ ಒಂದು ಭಾಗದಲ್ಲಿ ಇಂದು ಬೀಡ್ನ್ನು ಅಳವಡಿಸಲಾಗಿರುತ್ತದೆ. ರಿಂಗ್ ನ್ನು ಸುಲಭವಾಗಿ ತೆರೆಯಲು ಮುಚ್ಚಲು ಅನುಕೂಲವಾಗುವಂತೆ ಅಳವಡಿಸಲಾಗಿದೆ.
ನೋಸ್ ಸ್ಕೂçರ್- ನೇರವಾದ ಧಾತುನ ಒಂದು ಭಾಗದಲ್ಲಿ ಹೂವಿನ ಚಿತ್ತಾರ ಇನ್ನೊಂದು ಭಾಗ ಕೊಕ್ಕೆಯ ಆಕಾರದ ರೀತಿಯ ವಿನ್ಯಾಸವನ್ನು ಮಾಡಲಾಗಿರುತ್ತದೆ. ಇದನ್ನು ಮೂಗಿಗೆ ಸೇರಿಸಿ ಸುಲಭದಲ್ಲಿ ಕೂರುವಂತೆ ಮಾಡಬಹುದು.
ಎಲ್ ಬೆಂಡ್- ನೇರವಾಗಿ ಒಂದು ಕೊನೆಯು ಎಲ್ ಆಕಾರದಲ್ಲಿ ಬೆಂಡ್ ಮಾಡಲಾಗಿರುತ್ತದೆ.
ಲ್ಯಾಬೆರೆಟ್ ಶೈಲಿ- ಮೂಗತ್ತಿಯ ಒಂದು ಕೊನೆಯಲ್ಲಿ ಹೂವಿನ ವಿನ್ಯಾಸ ಇನ್ನೊಂದು ಕೊನೆಗೆ ಯಾವುದೇ ಕೊಂಡಿ ಇರುವುದಿಲ್ಲ.
ಆದುನಿಕ ಶೈಲಿಯ ಈ ಮೂಗುತ್ತಿಗಳು ಅವರ ಅವರ ಮುಖ ಸೌದಂರ್ಯಕ್ಕೆ ಒಪ್ಪುವಂತಿದೆ. ಮಹಿಳೆಯರ ಟ್ರೇಂಡಿ ಕಲೆಕ್ಷನ್ ಗಳು ಇಂದು ಪ್ರಮುಖ ಆಕರ್ಷಣೆಗಳಾಗಿವೆ. ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಇಂದು ಮಹತ್ತರವಾದ ಪಾತ್ರವಹಿಸುತ್ತದೆ.