ಚುನಾವಣೆಯ ರಂಗು ಎರುತ್ತಿದೆ. ಅಭ್ಯರ್ಥಿಗಳು ಮತಯಾಚನೆಗೆ ಗಲ್ಲಿ-ಗಲ್ಲಿ, ಮನೆ-ಮನೆಗೆ ಭೇಟಿ ನೀಡಿ ಭರ್ಜರಿಯಾಗಿ ಮತಯಾಚಿಸುತ್ತಿದ್ದಾರೆ. ತುಂಬಾನೇ ಯೋಜನೆಗಳನ್ನು ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ಮತಭೇಟೆಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎನ್ನಬಹುದು. ಪ್ರಿಯಾಂಕ ಗಾಂಧಿ ಊರೆಲ್ಲ ಸುತ್ತಾಡಿ ಜನಸಾಮಾನ್ಯರ ಮನೆಗೆ ತೆರಳಿ ಪಕ್ಷದ ಪ್ರಣಾಳಿಕೆಯನ್ನು ವಿವರಿಸಿ ಮನವೊಲಿಸಲು ಪ್ರಯತ್ನಿಸಿದ್ದಾಯಿತ್ತು.
ಸಿದ್ದರಾಮಯ್ಯ ಪರ ಅವರ ಸೊಸೆ ಇದೆ ಮೊದಲ ಬಾರಿಗೆ ಸ್ಮಿತಾ ರಾಕೇಶ್ ಮತಯಾಚನೆಯಲ್ಲಿ ಸಕ್ರಿಯಾವಾಗಿ ಪಾಲ್ಗೋಳ್ಳುತ್ತಿದ್ದಾರೆ. ಇತ್ತ ಪತಿಯ ಗೆಲುವಿಗಾಗಿ ಟೊಂಕ ಕಟ್ಟಿ ನಿಂತು ತಮ್ಮ ಪತಿಯ ಪರವಾಗಿ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ ಅಭ್ಯರ್ಥಿಗಳ ಪತ್ನಿಯಂದಿರು ಬಿರುಸಿನ ಮತ ಬೇಟೆಯಲ್ಲಿ ತೊಡಗಿದ್ದಾರೆ. ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿಯವರ ಪತ್ನಿ ಶೀವಲೀಲಾ ಕುಲಕರ್ಣಿ ಕ್ಷೇತ್ರದ ವ್ಯಾಪಿಯಲ್ಲಿ ಭರ್ಜರಿ ಮತ ಪ್ರಚಾರ ಮಾಡಿದ್ದಾರೆ.
ಕೆಕೆಆರ್ಡಿಬಿ ಅಧ್ಯಕ್ಷ, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ಅವರ ಪತ್ನಿ ಲಕ್ಷ್ಮಿ ಪಾಟೀಲ ರೇವೂರ ಅವರು ನಗರದ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಮಹಿಳಾ ಮತದಾರರನ್ನು ಭೇಟಿ ಮಾಡಿ ಪತಿಯ ಪರ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯಕರ್ತೆಯರ ಸಹಕಾರದಿಂದ ನಿತ್ಯವು ಸಭೆ ನಡೆಸಿ ಮರುದಿನ ಯಾವ ಬಡಾವಣೆಗಳಲ್ಲಿ ಮತಯಾಚನೆ ಮಾಡಬೇಕು ಎಂದು ಸೂಕ್ತ ಯೋಜನೆಯಂದಿಗೆ ಸಂಚರಿಸುತ್ತದ್ದಾರೆ.
ಹೆಬಸೂರ ಗ್ರಾಮದಲ್ಲಿ ಎನ್.ಎಚ್. ಕೋನರೆಡ್ಡಿ ಅವರು ಧರ್ಮಪತ್ನಿ ಪ್ರೇಮಾ ಕೋನರಡ್ಡಿ ಅವರು ಭರ್ಜರಿ ಮತಯಾಚನೆ ಮಾಡಿದ್ದಾರೆ. ಕೆಕೆಆರ್ಟಿಸಿ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಪತ್ನಿ ಸಂತೋಷಿ ಪಾಟೀಲ, ಮಾಜಿ ಶಾಸಕ ಡಾ. ಶರಣಪ್ರಕಾಶ ಪಾಟೀಲ ಪತ್ನಿ ಡಾ. ಭಾಗ್ಯಶ್ರೀ ಪಾಟೀಲ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಪತ್ನಿ ಸವಿತಾ ಸಿಂಗ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಪತ್ನಿ ಜಯಶ್ರೀ ಮತ್ತಿಮಡು, ಕಲಬುರಗಿ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ ಪತ್ನಿ ಪ್ರೇಮಲತಾ ಪಾಟೀಲ, ಚಿಂಚೋಳಿ ಜೆಡಿಎಸ್ ಅಭ್ಯರ್ಥಿ ಸಂಜೀವನ ಯಾಕಾಪುರ ಪತ್ನಿ ಶಕುಂತಲಾ ಸೇರಿದಂತೆ ಪ್ರಮುಖ ಅಭ್ಯರ್ಥಿಗಳ ಪತ್ನಿಯರು ಬಿಸಿಲಿಲ ದಗೆಯನ್ನು ಲೆಕ್ಕಿಸದೆ ಕ್ಷೇತ್ರಗಳನ್ನು ಸುತ್ತಾಡುತ್ತಿದ್ದಾರೆ.
ಇನ್ನು ಕೆಲವು ಕ್ಷೇತ್ರಗಳಲ್ಲಿ ಮಹಿಳಾ ಮೋರ್ಚಾದ ಸದಸ್ಯರು ತಮ್ಮ ಅಭ್ಯರ್ಥಿಗಳ ಪರ ಮತಯಾಚನೆಯನ್ನು ಮಾಡುತ್ತಿದ್ದಾರೆ. ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರ ಪತ್ನಿ ಕಾವ್ಯಾ ಎಚ್.ಜಿ. ಅವರು ಪ್ರೀತಂ ಗೌಡ ನಾಮಪತ್ರ ತಿರಸ್ಕೃತಗೊಂಡರೆ ಎಂಬ ಮುಂಜಾಗ್ರತಾ ಕ್ರಮವಾಗಿ ಕಾವ್ಯಾ ಅವರು ಕೂಡ ನಾಮಪತ್ರ ಸಲ್ಲಿಸಿದ್ದಾರೆ. ಇದು ಯೋಜಿತ ನಿರ್ಧಾರ ಎನ್ನಬಹುದು ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯು ಅಭ್ಯರ್ಥಿಗಳ ಪರ ಮಹಿಳಾ ಮಣಿಗಳು ಹೆಚ್ಚು ಸಂಖ್ಯೆಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ವಿಶೇಷವಾಗಿದೆ.