ಒಂದು ಭಾಷೆ ಶ್ರೀಮಂತವಾಗ ಬೇಕಾದರೆ ಅದರಲ್ಲಿ ಸಾಹಿತ್ಯ ಕೃಷಿ ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು ಒಂದು ಭಾಷೆಯು ಬೆಳೆಯ ಬೇಕಾದರೆ ಅದರಲ್ಲಿ ಸಾಹಿತ್ಯದ ಕುರಿತು ವಿಚಾರ ವಿಮರ್ಶೆಗಳು ನಡೆಯಬೇಕು ಅಂದಾಗ ಮಾತ್ರ ಭಾಷೆಯು ನಿಂತ ನೀರಾಗಿರದೆ ಹರಿಯುವ ನೀರಾಗಿತ್ತದೆ. ಮತ್ತು ಹರಿಯುವ ನೀರೆ ಸುಂದರವಾದ ಜಲಪಾತದ ಸೃಷ್ಟಿಗೆ ಕಾರಣವಾಗುತ್ತದೆ. ಅದರಂತೆಯೇ ಎಲ್ಲ ಭಾಷೆಗಳಲ್ಲಿಯು ಸೃಜನಶೀಲ ಸಾಹಿತ್ಯ ಹೊರ ಹೊಮ್ಮಬೇಕು ಅಂದಾಗ ಮಾತ್ರ ಹೊಸ ಹೊಸ ವಿಚಾರಗಳು ಸಮಾಜದಲ್ಲಿ ಬರಲು ಸಾಧ್ಯ.
ಭಾಷೆಯನ್ನು ಒಂದು ವಸ್ತುವನ್ನಾಗಿ ಪರಿಗಣಿಸಿದರೆ ಸಾಹಿತ್ಯವು ಅದನ್ನು ತಯಾರಿಸುವ ಕಾರ್ಖಾನೆ ಎಂದು ಹೇಳಬಹುದು. ಕಾರ್ಖಾನೆಯಲ್ಲಿ ಕುಶಲತೆಯಿಂದ ಕಾರ್ಯ ಮಾತ್ರವೇ ವಸ್ತು ಸರಿಯಾಗಿ ಉತ್ಪಾದನೆಯಾಗಲು ಸಾಧ್ಯ. ಅಂತೆಯೇ ಸೃಜನಶೀಲ ಸಾಹಿತ್ಯ ಹುಟ್ಟಿಕೊಂಡಷ್ಟು ಭಾಷೆ ಬೆಳೆಯುತ್ತದೆ.
ಇದಕ್ಕೆ ಸಾಕ್ಷಿಯಾಗಿ ಸಂಸ್ಕೃತ, ಪ್ರಾಕೃತ ಭಾಷೆಯಲ್ಲಿ ಹುಟ್ಟಿದ ಸಾಹಿತ್ಯ, ತದನಂತರ ಕನ್ನಡ ಹಾಗೂ ದ್ರಾವಿಡ ಭಾಷೆಗಳಲ್ಲಿ ಸಾಹಿತ್ಯದ ರಚನೆಯಾಯಿತು ಹೀಗೆ ರಚನೆಯಾದ ಕೃತಿಗಳನ್ನು ರಚಿಸಿ ಅಲ್ಲಿಯೇ ಬಿಟ್ಟು ಬಿಟ್ಟಿದ್ದರೆ ಇಂದು ಭಾಷೆ ಎಂಬುದು ನಿಂತು ಬಿಡುತ್ತಿದ್ದು ಕೇವಲ ಪ್ರಾಚೀನರು ರಚಿಸಿದ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡೆ ಭಾಷೆಯನ್ನು ಬಳಿಸುವಂತಾಗಿದ್ದರೆ ಇಂದು ಕನ್ನಡ ಅಥವಾ ಇತರ ಭಾಷೆಗಳಲ್ಲಿ ಹೊಸ ಹೊಸ ಶಬ್ದಗಳು ಪ್ರಯೋಗಕ್ಕೆ ಬರುತ್ತಿರಲಿಲ್ಲ. ಆದರೆ ಯಾವುದೇ ಭಾಷೆಗಳು ಕೊನೆಗೊಂಡಿಲ್ಲ ಎಂತೆಂದರೆ ಅದಕ್ಕೆ ಮುಖ್ಯಕಾರಣ ಅಲ್ಲಿಯ ಜನರು ತಮ್ಮ ತಮ್ಮ ಭಾಷೆಯಲ್ಲಿ ಸಾಹಿತ್ಯವನ್ನು ಸೃಷ್ಠಿ ಮಾಡುತಿದ್ಧಾರೆ ಎಂದರ್ಥ ಕನ್ನಡದ ಮೊದಲ ಗ್ರಂಥವಾದ ಕವಿರಾಜ ಮಾರ್ಗದಿಂದ ಇಂದಿನ ವರೆಗೆ ಅನೇಕ ಜನ ಸಾಹಿತಿಗಳು ಕನ್ನಡದಲ್ಲಿ ತಮ್ಮ ಕೃತಿ ಮೂಲಕ ಭಾಷೆಯ ಅಸ್ಥಿತ್ವಕ್ಕೆ ಕಾರಣರಾಗಿದ್ದಾರೆ.
ಭಾಷೆ ಇಲ್ಲಿಯವರೆಗೆ ಉಳಿಯಲು ಹಲವಾರು ಕಾರಣಗಳಿಗೆ ಅವುಗಳಲ್ಲಿ ಅನೇಕ ಧಾರ್ಮಿಕ ಸಾಹಿತ್ಯದ ಕೊಡುಗೆಯು ಅದೇ ಪ್ರಮಾಣದಲ್ಲಿದೆ. ಇದರಲ್ಲಿ ದಾಸ ಸಾಹಿತ್ಯ ಮತ್ತು ವಚನ ಸಾಹಿತ್ಯದ ಪ್ರಭಾವವು ಅತ್ಯಂತ ಮಹತ್ವದ್ದಾಗಿದೆ. ದಾಸ ಸಾಹಿತ್ಯವು ಕಬ್ಬಿಣದ ಕಡಲೆಯಂತಿದ್ದ ವ್ಯಾಸ ಸಾಹಿತ್ಯವನ್ನು ಕನ್ನಡಿಕರಿಸಿ ಎಲ್ಲರಿಗೂ ತಿಳಿಯುವಂತೆ ಮಾಡಿದ್ದು ದಾಸ ಸಾಹಿತ್ಯದ ಹಿರಿಮೆಯೇ ಸರಿ. ಇನ್ನು ವಚನ ಸಾಹಿತ್ಯವು ಸಹ ಅನೇಕ ಸಾಮಾಜಿಕ ಹಾಗೂ ಧಾರ್ಮಿಕ ವಿಚಾರ ಮತ್ತು ಸಮಾನತೆಯ ವಿಚಾರಗಳನ್ನು ಸುಲಭವಾದ ತಿಳಿಗನ್ನಡದಲ್ಲಿ ತಿಳಿಸಿ ಜನರಿಗೆ ಉಪಕಾರವನ್ನು ಮತ್ತು ಕನ್ನಡದ ಅಸ್ಥಿತ್ವಕ್ಕೆ ಮರೆಯಲಾರಂದತಹ ಉಪಕಾರವನ್ನು ಮಾಡಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.