ಬೇಕಾಗುವ ಸಾಮಾಗ್ರಿಗಳು:
ಅಂಜೂರದ ಹಣ್ಣು- 3ರಿಂದ 4
ಬಾದಾಮಿ- ಕಾಲು ಕಪ್
ಗೋಡಂಬಿ- ಕಾಲು ಕಪ್
ಒಣ ದ್ರಾಕ್ಷಿ – ಕಾಲು ಕಪ್
ಪಿಸ್ತಾ – ಕಾಲು ಕಪ್
ಖರ್ಜೂರ- 7ರಿಂದ 8
ತಣ್ಣಗಿನ ಹಾಲು- ಅರ್ಧ ಲೀಟರ್
ಕೇಸರಿ- ಸ್ವಲ್ಪ
ಸಕ್ಕರೆ- 2 ಚಮಚ
ಮೊದಲಿಗೆ ಅಂಜೂರದ ಹಣ್ಣುಗಳನ್ನು ನೀರಿನಲ್ಲಿ ನೆನೆಹಾಕಿ ಅರ್ಧಗಂಟೆ ನೆನೆಯಲು ಬಿಡಬೇಕು. ಹಾಗೆಯೇ ಖರ್ಜೂರದ ಬೀಜವನ್ನು ತೆಗೆದು ಅದನ್ನೂ ಸಹ ನೆನೆಸಿಟ್ಟುಕೊಳ್ಳಬೇಕು. ಖರ್ಜೂರ ಹಾಗೂ ಅಂಜೂರ ನೆನೆಸಿದ ಬಳಿಕ ಅದನ್ನು ಚಿಕ್ಕ ಗಾತ್ರದಲ್ಲಿ ಹೆಚ್ಚಿಕೊಳ್ಳಿ.
ಬಳಿಕ ಒಂದು ಮಿಕ್ಸಿ ಜಾರಿಗೆ ಎಲ್ಲಾ ಡ್ರೈಫ್ರೂಟ್ಸ್ಗಳನ್ನು ಹಾಕಿಕೊಂಡು ಅದಕ್ಕೆ ಅರ್ಧ ಕಪ್ ತಣ್ಣಗಿನ ಹಾಲನ್ನು ಸೇರಿಸಿಕೊಂಡು ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಬಳಿಕ ಇದಕ್ಕೆ ಸ್ವಲ್ಪ ಕೇಸರಿಯನ್ನು ಸೇರಿಸಿಕೊಳ್ಳಿ. ಇದು ಉತ್ತಮ ರುಚಿಯನ್ನು ನೀಡುತ್ತದೆ. ನಂತರ ಇದಕ್ಕೆ ಉಳಿದ 2 ಕಪ್ ಹಾಲನ್ನು ಸೇರಿಸಿಕೊಂಡು ಮತ್ತೊಮ್ಮೆ ರುಬ್ಬಿಕೊಳ್ಳಿ. ಸಕ್ಕರೆ ಅಥವಾ ಬೆಲ್ಲ ಇಷ್ಟಪಡುವವರು 1ರಿಂದ 2 ಚಮಚ ಸಕ್ಕರೆ ಅಥವಾ ಬೆಲ್ಲವನ್ನೂ ಸೇರಿಸಿಕೊಂಡು ರುಬ್ಬಿ. ನಂತರ ಮಿಲ್ಕ್ಶೇಕ್ ಅನ್ನು ಒಂದು ಗ್ಲಾಸಿಗೆ ಹಾಕಿಕೊಳ್ಳಿ. ಡ್ರೈಫ್ರೂಟ್ಸ್ ತಿನ್ನಲು ಇಚ್ಚಿಸುವವರು ಇದರ ಮೇಲೆ ಚಿಕ್ಕದಾಗಿ ಹೆಚ್ಚಿದ ಡ್ರೈಫ್ರೂಟ್ಸ್ ಅನ್ನು ಹಾಕಿ ಅಲಂಕರಿಸಿಕೊಂಡರೆ ಡ್ರೈಫ್ರೂಟ್ಸ್ ಮಿಲ್ಕ್ಶೇಕ್ ಸವಿಯಲು ಸಿದ್ಧವಾಗಿದೆ