ಮುಂಬೈ : ಕಡಿಮೆ ದರದಲ್ಲಿ ಹೆಚ್ಚು ವಿಶೇಷತೆಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಸ್ಮಾರ್ಟ್ ಫೋನ್ ಗಳ ಟೆಕ್ ನೊ, ಭಾರತದ ಮಾರುಕಟ್ಟೆಗೆ ಪರಿಚಯಿಸುವ ಮೊಟ್ಟ ಮೊದಲ ಪೋರ್ಟೆಬಲ್ ಸ್ಮಾರ್ಟ್ ಫೋನ್ ಇದಾಗಿದೆ.
ಎಪ್ರಿಲ್ 22 ರಿಂದ ಮಾರುಕಟ್ಟೆಯಲ್ಲಿ ಸುದ್ದಿ ಮಾಡುತ್ತಿರುವ ಮೊಬೈಲ್ ಇದಾಗಿದ್ದು ಅಮೆಜಾನ್ ನಲ್ಲಿ ಅಡ್ವಾನ್ಸ್ ಬುಕಿಂಗ್ ಸೌಲಭ್ಯವಿದ್ದು ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಕಂಪನಿ ತಿಳಿಸಿದೆ.
ಮುಂಬೈಯಲ್ಲಿ ಬಾಲಿವುಡ್ ನಟ ಹಾಗೂ ಟೆಕ್ ನೊ ಪ್ರಚಾರ ರಾಯಬಾರಿ ಆಯುಷ್ಮಾನ್ ಖುರಾನ್ ಅವರು ಈ ಸ್ಮಾರ್ಟ್ ಫೋನ್ನ್ನು ಅನಾವರಣಗೊಳಿಸಿದ್ದಾರೆ.
ಪೋರ್ಟೆಬಲ್ ಸ್ಮಾರ್ಟ್ ಫೋನ್ ವಿಶೇಷತೆ:
ಈ ಮೊಬೈಲ್ ಎರಡು ಬದಿಯಲ್ಲಿ ಸ್ಕ್ರೀನ್ ಹೊಂದಿರುತ್ತದೆ. ಬಳಸುವಾಗ ಪರದೆ ದೊಡ್ಡದಾಗಿದ್ದು ಬೇಡವೆಂದಾಗ ಮಡಚಿ ಸಾಮಾನ್ಯ ಮೊಬೈಲ್ ರೀತಿಯಲ್ಲಿ ಉಪಯೋಗಿಸಬಹುದಾಗಿದೆ. ಇದೊಂದು 5ಜಿ ಸ್ಮಾರ್ಟ್ ಫೋನ್ ಆಗಿದ್ದು ಡ್ಯುಯಲ್ ಎಲ್ ಟಿಪಿಒ ಅಮೋಲ್ಡ್ 7.85 ಸ್ಕ್ರೀನ್ ಹೊಂದಿದೆ. ಮುಖ್ಯ ಕ್ಯಾಮೆರಾ 50 ಎಂಪಿ, ಸೆಕೆಂಡರಿ ಕ್ಯಾಮೆರಾ 32 ಎಂಪಿ ಇದ್ದು ಫ್ರೆಂಟ ಕ್ಯಾಮೆರಾ 16 ಎಂಪಿ ಗಾತ್ರವನ್ನು ಹೊಂದಿದೆ.
ಈ ಸ್ಮಾರ್ಟ್ ಫೋನ್ 5,000 ಎಮ್ ಎ ಎಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು 45 ವೋಲ್ಟ್ನ ಚಾರ್ಜರ್ ಸಪೋರ್ಟ್ ಮಾಡಲಿದೆ. ಇದರ ಇನ್ನೊಂದು ವಿಶೇಷವೆಂದರೆ ಫ್ಯಾಂತಮ್ ವಿ ಫೋರ್ಡ್ ಆಗಿದ್ದು 12ಜಿಬಿ ರಾಮ್ ನೊಂದಿಗೆ 256 /512 ಮೆಮೊರಿಗಳಲ್ಲಿ ಸಿಗಲಿದೆ ಎಂದು ಟೆಕ್ ನೊ ಕಂಪನಿ ತಿಳಿಸಿದೆ.
ಇನ್ನು ಈ ಮೊಬೈಲ್ ನ ಬೆಲೆ 88,888ರೂ ಆಗಿದ್ದು, ಆರಂಭಿಕ ಕೊಡುಗೆಯಾಗಿ ಟೆಕ್ ನೊ ಹಲವು ಆಫರ್ ಗಳನ್ನು ಘೋಷಣೆ ಮಾಡಿದೆ. ಅಮೆಜಾನ್ ನಲ್ಲಿ ಸದ್ಯ 77,777ರೂಪಾಯಿಗೆ ಖರೀದಿ ಮಾಡಲು ಲಭ್ಯವಿದೆ.