ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಮೇ 10 ರಂದು ಚುನಾವಣೆಯ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರ ಬೀಳಲಿದೆ.
2023ನೇ ಸಾರ್ವತ್ರಿಕ ಚುನಾವಣೆಯ ಬ್ಯಾಲೆಟ್ ಪೇಪರ್ ಮತದಾನ ಎಪ್ರಿಲ್ 29 ರಿಂದ ಮೇ 6 ರವರೆಗೆ ಮತದಾನಕ್ಕೆ ಅವಕಾಶವಿದೆ. ರಾಜ್ಯದ ಎಲ್ಲಾ ಕಡೆಯಲ್ಲಿ ಈ ಬ್ಯಾಲೆಟ್ ಪೇಪರ್ ಓಟಿಂಗ್ ಗೆ ಅವಕಾಶವಿದೆ.
80 ವರ್ಷ ಮೇಲ್ಪಟ್ಟ ವೃದ್ಧರು, ವಿಕಲಚೇತನರಿಗೆ ಮತ್ತು ಚುನಾವಣೆಯಲ್ಲಿ ಭಾಗವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಈ ಅವಕಾಶ ದೊರೆಯಲಿದೆ.
80 ವರ್ಷದ ವೃದ್ಧರು ಹಾಗೂ ಅಂಗವಿಕಲರು ಇರುವ ಸ್ಥಳಕ್ಕೆ ಚುನಾವಣಾ ಆಯೋಗದ ಸಿಬ್ಬಂದಿಗಳು ಮತ್ತು ಸ್ಥಳೀಯ ಪೊಲೀಸರು ಬಂದು ಬ್ಯಾಲೆಟ್ ಪೇಪರ್ ನೀಡುತ್ತಾರೆ. ಈ ಮತದಾನ ಗೌಪ್ಯವಾಗಿರುತ್ತದೆ. ಮನೆಯಲ್ಲಿಯೇ ಮತದಾನ ಮಾಡುವಾಗ ವಿಡಿಯೋ ರೆಕಾರ್ಡಿಂಗ್ ಮಾಡಲಾಗುವುದು. ಮತದಾನದ ನಂತರ ಆ ಅಧಿಕಾರಿಗಳು ಮತಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಲಾಗುವರು.
ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಮತ್ತು ಪೊಲೀಸರಿಗೆ ಬ್ಯಾಲೆಟ್ ಮತದಾನದ ವ್ಯವಸ್ಥೆ ಇದ್ದು ಅವರು ಅದನ್ನು ಪೋಸ್ಟ್ ಮೂಲಕ ಮಾಡಬಹುದಾಗಿದೆ. ಈ ಎಲ್ಲ ಮತಗಳನ್ನು ಮೇ 13 ರಂದು ಮತ ಎಣಿಕೆ ದಿನವೇ ತೆರೆಯಲಾಗುತ್ತದೆ.