ಮುಂಬೈ: ವಿವಾದಗಳಿಂದನೇ ಕೂಡಿದ್ದ ಆಲಿಯಾ ಭಟ್ ನಟನೆಯ ಸಂಜಯ್ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಭಾರೀ ಸದ್ದು ಮಾಡಿತ್ತು. ಈ ಭಾರಿಯ ಫಿಲ್ಮ್ಫೇರ್ ಪ್ರಶಸ್ತಿಯಲ್ಲಿ ಬರೋಬ್ಬರಿ ೧೦ ಪ್ರಶಸ್ತಿಗಳನ್ನು ಬಾಚಿಕೊಳ್ಳುವುದರ ಮೂಲಕ ಸಿನಿಮಾ ಈಗ ಮತ್ತೆ ಸುದ್ದಿಯಲ್ಲಿದೆ.
ಭಾರೀ ವಿವಾದದ ನಡುವೆ ರಿಲೀಸ್ ಆಗಿ ಸಿನಿ ೧೦೦ಕ್ಕೂ ಹೆಚ್ಚು ಕೋಟಿ ರೂಪಾಯಿ ಬಾಚಿದ ಸಿನಿಮಾಕ್ಕೆ ಈದೀಗ ಫಿಲ್ಮ್ಫೇರ್ನಲ್ಲಿಯೂ ಮನ್ನಣೆ ದೊರೆತಿದೆ.
ಗಂಗೂ ಬಾಯಿ ಕಾಥಿಯಾವಾಡಿ ಸಿನಿಮಾದಲ್ಲಿ ಆಲಿಯಾ ಭಟ್ ಆಕ್ಟಿಂಗ್ ಜನರನ್ನು ಅಚ್ಚರಿಗೊಳಿಸಿತ್ತು. ಸಿನಿಮಾ ಮೇಕಿಂಕ್ಗೆ ಸಿನಿಪ್ರಿಯರು ಮನಸೋತಿದ್ದರು.
ಯಾವೆಲ್ಲಾ ಪ್ರಶಸ್ತಿ ದೊರೆತಿದೆ:
ಅತ್ಯುತ್ತಮ ನಟಿ: ಆಲಿಯಾ ಭಟ್
ಅತ್ಯುತ್ತಮ ನಿರ್ದೇಶಕ: ಸಂಜಯ್ ಲೀಲಾ ಬನ್ಸಾಲಿ
ಅತ್ಯುತ್ತಮ ಸಂಭಾಷಣೆ: ಪ್ರಕಾಶ್ ಕಪಾಡಿಯಾ ಹಾಗೂ ಉತ್ಕರ್ಷಿಣಿ ವಸಿಷ್ಠ
ಅತ್ಯುತ್ತಮ ಹಿನ್ನಲೆ ಸಂಗೀತ: ಸಂಚಿಲ ಬಲ್ಹಾರಾ-ಅಂಕಿತ್ ಬಲ್ಹಾರಾ
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಸುಬ್ರತಾ ಅಮಿತ್
ಅತ್ಯುತ್ತಮ ವಸ್ತ್ರ ವಿನ್ಯಾಸ: ಶೀತಲ್ ಇಕ್ಬಾಲ್ ಶರ್ಮಾ
ಅತ್ಯುತ್ತಮ ಕೊರಿಯೋಗ್ರಫಿ: ಕೃತಿ ಮಹೇಶ್
ಅತ್ಯುತ್ತಮ ಸಿನಿಮಾಟೋಗ್ರಫಿ: ಸುದೀಪ್ ಚಟರ್ಜಿ
ಅತ್ಯುತ್ತಮ ಅಪ್ಕಮಿಂಗ್ ಮ್ಯೂಸಿಕಲ್ ಟ್ಯಾಲೆಂಟ್: ಶ್ರೀಮಂಕರ್