ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್ಸಂಗ್ ಇಂದು ಅದ್ಭುತ ಆವಿಷ್ಕಾರಗಳನ್ನು ಹೊಂದಿರುವ ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಅನ್ನು ಬಿಡುಗಡೆ ಮಾಡಿದೆ. ಹೊಸ ಎ ಸರಣಿಯ ಸಾಧನಗಳು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ಪ್ರೊಟೆಕ್ಷನ್, ಎಐ ಆಧರಿತ ಕ್ಯಾಮೆರಾ ವೈಶಿಷ್ಟ್ಯಗಳು ಮತ್ತು ಟ್ಯಾಂಪರ್-ನಿರೋಧಕ ಸೆಕ್ಯೂರಿಟಿ ಫೀಚರ್ ಆದ ಸ್ಯಾಮ್ಸಂಗ್ ನಾಕ್ಸ್ ವಾಲ್ಟ್ ಸೇರಿದಂತೆ ಅನೇಕ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿವೆ.
ಸೊಗಸಾದ ವಿನ್ಯಾಸ ಮತ್ತು ಉತ್ತಮ ಬಾಳಿಕೆ
ಸ್ಯಾಮ್ಸಂಗ್ ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಹಲವಾರು ವಿನ್ಯಾಸ ಆವಿಷ್ಕಾರಗಳನ್ನು ಒಳಗೊಂಡಿದೆ.
ಗ್ಯಾಲಕ್ಸಿ ಎ55 5ಜಿ: ಮೊದಲ ಬಾರಿಗೆ ಮೆಟಲ್ ಫ್ರೇಮ್ ಹೊಂದಿದೆ.
ಗ್ಯಾಲಕ್ಸಿ ಎ35 5ಜಿ: ಮೊದಲ ಬಾರಿಗೆ ಹಿಂಬದಿಯಲ್ಲಿ ಪ್ರೀಮಿಯಂ ಗ್ಲಾಸ್ ಹೊಂದಿದೆ.
ಈ ಫೋನ್ಗಳು ಲೀನಿಯರ್ ವಿನ್ಯಾಸದ ಜೊತೆಗೆ ಅತ್ಯುನ್ನತ ಫ್ಲೋಟಿಂಗ್ ಕ್ಯಾಮೆರಾ ವಿನ್ಯಾಸವನ್ನು ಹೊಂದಿವೆ. ಈ ಪ್ರೀಮಿಯಂ ಮತ್ತು ಗಟ್ಟಿಮುಟ್ಟಾದ ಫೋನ್ಗಳು ಮೂರು ಟ್ರೆಂಡಿ ಬಣ್ಣಗಳಲ್ಲಿ ಲಭ್ಯವಿದೆ – ಆಸಮ್ ಲಿಲಾಕ್, ಆಸಮ್ ಐಸ್ಬ್ಲೂ ಮತ್ತು ಆಸಮ್ ನೇವಿ.
ಉತ್ತಮ ಬಾಳಿಕೆ ಈ ಸ್ಮಾರ್ಟ್ಫೋನ್ಗಳ ಪ್ರಮುಖ ಗುಣವಾಗಿದೆ. ಈ ಸಾಧನಗಳಿಗೆ ಐಪಿ67 ಎಂದು ರೇಟಿಂಗ್ ಕೊಡಲಾಗಿದೆ. ಅಂದರೆ ಈ ಫೋನ್ ಗಳು 1 ಮೀಟರ್ ತಾಜಾ ನೀರಿನಲ್ಲಿ 30 ನಿಮಿಷಗಳವರೆಗೆ ಮುಳುಗಿಸಿಟ್ಟರೂ ಅವು ತಡೆದುಕೊಳ್ಳುತ್ತವೆ. ಧೂಳು ಮತ್ತು ಮರಳು ನಿರೋಧಕ ಹೊಂದಿದ್ದು, ಯಾವುದೇ ಪರಿಸ್ಥಿತಿಯಲ್ಲೂ ಅವುಗಳನ್ನು ಬಳಕೆ ಮಾಡಬಹುದಾಗಿದೆ. ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಹೆಚ್ಚುವರಿಯಾಗಿ ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ಪ್ರೊಟೆಕ್ಷನ್ ಹೊಂದಿದ್ದು, ಸ್ಲಿಪ್ ಆಗುವುದು ಕೈ ಜಾರುವ ತೊಂದರೆ ತೊಡೆಯಲು ಈ ರೀತಿ ವಿನ್ಯಾಸಗೊಳಿಸಲಾಗಿದೆ.
ಕ್ಯಾಮರಾ ವೈಶಿಷ್ಟ್ಯಗಳು: ಎಐ ಬಳಕೆ
ಈ ಹೊಸ ಎ ಸರಣಿಯ ಸ್ಮಾರ್ಟ್ಫೋನ್ಗಳು ಬಳಕೆದಾರರು ಅತ್ಯುತ್ತಮವಾದ ಫೋಟೋ, ವಿಡಿಯೋ ಕಂಟೆಂಟ್ ಗಳನ್ನು ಸಿದ್ಧಗೊಳಿಸಲು ನವೀನ ಎಐ ಆಧರಿತ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ. ಚಿತ್ರವನ್ನು ಸೆರೆಹಿಡಿದ ನಂತರ, ಫೋಟೋ ರೀಮಾಸ್ಟರ್ನಂತಹ ಎಐ ಟೂಲ್ ನಿಂದ ಮಾಡಿದ ಎಡಿಟ್ ಗಳು ಬಳಕೆದಾರರ ಚಿತ್ರಗಳನ್ನು ಸುಂದರವಾಗಿಸಲು ಸಹಾಯ ಮಾಡುತ್ತದೆ. ಪೋರ್ಟ್ರೇಟ್ ಎಫೆಕ್ಟ್ ಮುಖ್ಯವಾದ ವಸ್ತು ವಿಚಾರವನ್ನು ಫೋಕಸ್ ಮಾಡಲು ನೆರವಾಗುತ್ತದೆ ಮತ್ತು ಫೋಟೋ ಬಾಂಬರ್ಗಳನ್ನು ಹಾಗೂ ಪ್ರತಿಫಲನಗಳನ್ನು ತೆಗೆದುಹಾಕಲು ಆಬ್ಜೆಕ್ಟ್ ಎರೇಸರ್ ವೈಶಿಷ್ಟ್ಯವನ್ನು ಬಳಸಬಹುದು. ಅತ್ಯಂತ ಜನಪ್ರಿಯವಾಗಿರುವ ಇಮೇಜ್ ಕ್ಲಿಪ್ಪರ್, ಯಾವುದೇ ಚಿತ್ರದ ವಿಷಯವನ್ನು ಕ್ಲಿಪ್ ಮಾಡಲು ಮತ್ತು ಅದನ್ನು ಸ್ಟಿಕ್ಕರ್ ಆಗಿ ಬಳಸಲು ಅನುಮತಿಸುತ್ತದೆ. ಅಡ್ಜಸ್ಟ್ ಸ್ಪೀಡ್ ಎಂಬ ವೈಶಿಷ್ಟ್ಯವು ಅಸಾಧಾರಣವಾಗಿದ್ದು, ಇದು ವೀಡಿಯೊಗಳ ವೇಗವನ್ನು ಕ್ರಿಯಾತ್ಮಕವಾಗಿ ಬದಲಾಯಿಸುತ್ತದೆ ಮತ್ತು ವೃತ್ತಿಪರವಾಗಿ ಚಿತ್ರೀಕರಿಸಿದ ಕ್ಲಿಪ್ಗಳಂತೆಯೇ ಕಾಣಿಸಲು ಸಹಾಯ ಮಾಡುತ್ತದೆ.
ಇದಷ್ಟೇ ಅಲ್ಲ, ಹೆಚ್ಚಿನ ನೈಟೋಗ್ರಫಿಯೊಂದಿಗೆ, ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ 50%ರಷ್ಟು ಕಡಿಮೆ ಅಸ್ಪಷ್ಟತಯೊಂದಿಗೆ ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿಯೂ ಸಹ ಸ್ಪಷ್ಟ ಮತ್ತು ಹೆಚ್ಚು ಚೆಂದದ ಫೋಟೋಗಳನ್ನು ತೆಗೆಯುತ್ತದೆ. ಅಂದರೆ ರಾತ್ರಿ ಫೋಟೋಗಳು ಅದ್ಭುತವಾಗಿ ಮೂಡಿ ಬರಲಿವೆ. ಗ್ಯಾಲಕ್ಸಿ ಎ55 5ಜಿ ಯ ಅಡ್ವಾನ್ಸ್ ಡ್ ಎಐ ಇಮೇಜ್ ಸಿಗ್ನಲ್ ಪ್ರೊಸೆಸಿಂಗ್ (ಐ ಎಸ್ ಪಿ) ಗ್ಯಾಲಕ್ಸಿ ಎ ಸರಣಿಯಲ್ಲಿ ಹಿಂದೆಂದೂ ನೋಡಿರದ ಅತ್ಯದ್ಭುತ ಕಡಿಮೆ-ಬೆಳಕಿನ ಚಿತ್ರಗಳನ್ನು ತೆಗೆಯಲು ನೆರವಾಗುತ್ತದೆ. ಇದು ಅದ್ಭುತವಾಗಿ ಕಾಣುವ ದೃಶ್ಯಾವಳಿ ಮಾತ್ರವಲ್ಲ, ಮನಮೋಹಕವಾಗಿಯೂ ಇರುತ್ತದೆ. ಎಐ ಚಾಲಿತ ಪೋರ್ಟ್ರೇಟ್ ಮೋಡ್ ಮತ್ತು ಸೂಪರ್ ಎಚ್ ಡಿ ಆರ್ ವೀಡಿಯೋ ಪ್ರತಿ ಫ್ರೇಮ್ನಲ್ಲಿರುವ ಜನರು ಉತ್ತಮವಾಗಿ ಕಾಣುವಂತೆ ಮಾಡುತ್ತದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೆನಪುಗಳನ್ನು ಸೆರೆಹಿಡಿಯುವುದು ಬೆಳಕಿನ ಮೇಲೆ ಅವಲಂಬಿತವಾಗಿರುವುದಿಲ್ಲವಾದ್ದರಿಂದ ಈ ಕ್ಯಾಮೆರಾ ವೈಶಿಷ್ಟ್ಯಗಳು ಖುಷಿ ಕೊಡುತ್ತವೆ.
ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಎರಡೂ ಸ್ಯಾಮ್ಸಂಗ್ ಗ್ಯಾಲಕ್ಸಿ ಹೆಸರುವಾಸಿಯಾಗಿರುವ ನಂಬಲಾಗದ ಫೋಟೋಗ್ರಫಿ ಸಾಮರ್ಥ್ಯಗಳನ್ನು ಹೊಂದಿವೆ. ವಿಡಿಐಎಸ್ + ಅಡಾಪ್ಟಿವ್ ವಿಡಿಐಎಸ್ (ವೀಡಿಯೋ ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್) ಮತ್ತು ಓಐಎಸ್ (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ನಂತಹ ವೈಶಿಷ್ಟ್ಯ ಹೊಂದಿದ್ದು, ಇದು ಫೋಟೋಗಳು ಮತ್ತು ವೀಡಿಯೊಗಳನ್ನು ಸುಂದರವಾಗಿ ಕಾಣಿಸುತ್ತದೆ. ಪ್ರಯಾಣದಲ್ಲಿರುವಾಗಲೂ ಚಿತ್ರೀಕರಣ ಮಾಡಬಹುದಾಗಿದೆ.
ಗ್ಯಾಲಕ್ಸಿ ಎ55 5ಜಿ 50ಎಂಪಿ ಮುಖ್ಯ ಕ್ಯಾಮೆರಾ ಜೊತೆಗೆ ಓಐಎಸ್ ಮತ್ತು 12ಎಂಪಿ ಅಲ್ಟ್ರಾ-ವೈಡ್ ಜೊತೆಗೆ ಲಭ್ಯವಿದೆ. ಗ್ಯಾಲಕ್ಸಿ ಎ35 5ಜಿ 50ಎಂಪಿ ಮುಖ್ಯ ಕ್ಯಾಮೆರಾ ಜೊತೆಗೆ ಓಐಎಸ್ ಮತ್ತು 8 ಎಂಪಿ ಅಲ್ಟ್ರಾ-ವೈಡ್ ಜೊತೆಗೆ ಬರುತ್ತದೆ. ಎರಡೂ ಫೋನುಗಳು 5ಎಂಪಿ ಮ್ಯಾಕ್ರೋವನ್ನು ಹೊಂದಿವೆ. ಗ್ಯಾಲಕ್ಸಿ ಎ55 5ಜಿ 32ಎಂಪಿ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಗ್ಯಾಲಕ್ಸಿ ಎ35 5ಜಿ 13ಎಂಪಿ ಫ್ರಂಟ್ ಕ್ಯಾಮೆರಾ ಹೊಂದಿದೆ.
ಮನರಂಜನೆಯ ಮರು ವ್ಯಾಖ್ಯಾನ
ಗ್ಯಾಲಕ್ಸಿ ಎ55 ಮತ್ತು ಗ್ಯಾಲಕ್ಸಿ ಎ35 ಬಳಕೆದಾರರಿಗೆ ಭರಪೂರ ಮನರಂಜನೆ ಒದಗಿಸುತ್ತದೆ. ಎರಡೂ ಸಾಧನಗಳಲ್ಲಿ ಅಪೂರ್ವವಾದ 6.6-ಇಂಚಿನ ಎಫ್ಎಚ್ಡಿ + ಸೂಪರ್ ಅಮೋಲ್ಡ್ ಡಿಸ್ಪ್ಲೇ ಇದೆ ಮತ್ತು ಕಡಿಮೆಗೊಳಿಸಿದ ಬೆಜೆಲ್ಗಳ ಮೂಲಕ ನಿಜವಾದ ಜೀವನ ಬಣ್ಣಗಳನ್ನು ತೋರಿಸುತ್ತದೆ. 120ಹರ್ಟ್ಜ್ ರಿಫ್ರೆಶ್ ದರವು ವೇಗದ ಚಲನೆ ಸಾಧ್ಯವಾಗಿಸುತ್ತದೆ. ಅಡಾಪ್ಟಿವ್ ರಿಫ್ರೆಶ್ ದರವು ಬ್ಯಾಟರಿ ದಕ್ಷತೆಯನ್ನು ಹೆಚ್ಚಿಸುತ್ತದೆ. ವಿಷನ್ ಬೂಸ್ಟರ್ ಪ್ರಕಾಶಮಾನವಾದ ಸೂರ್ಯನ ಬೆಳಕಿನಲ್ಲಿಯೂ ಡಿಸ್ ಪ್ಲೇ ಗೋಚರತೆಯನ್ನು ಹೆಚ್ಚಿಸುತ್ತದೆ. ಕ್ವಿಕ್ ಪ್ಯಾನೆಲ್ ನಲ್ಲಿ ಐ ಕಂಫರ್ಟ್ ಶೀಲ್ಡ್ ಲಭ್ಯವಿದ್ದು, ಇದು ಬಳಕೆದಾರರ ಕಣ್ಣುಗಳಿಗೆ ರಕ್ಷಣೆ ನೀಡುತ್ತದೆ.
ಈ ಸ್ಮಾರ್ಟ್ಫೋನ್ಗಳು ಡಾಲ್ಬಿ-ಎಂಜಿನಿಯರಿಂಗ್ ಸ್ಟಿರಿಯೊ ಸ್ಪೀಕರ್ಗಳೊಂದಿಗೆ ಅತ್ಯುತ್ತಮ ಸೌಂಡ್ ನೀಡುತ್ತವೆ. ಇದು ಪ್ರೀಮಿಯಂ ಆಡಿಯೊ ಅನುಭವವನ್ನು ನೀಡುತ್ತದೆ.
ಅತ್ಯುತ್ತಮ ಪ್ರದರ್ಶನ
ಗ್ಯಾಲಕ್ಸಿ ಎ55 5ಜಿ 4ಎನ್ಎಂ ಪ್ರೊಸೆಸ್ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಹೊಸ ಎಕ್ಸಿನೋಸ್ 1480 ಪ್ರೊಸೆಸರ್ ಹೊಂದಿದೆ. ಗ್ಯಾಲಕ್ಸಿ ಎ35 5ಜಿ ಅನ್ನು 5ಎನ್ಎಂ ಪ್ರೊಸೆಸ್ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಎಕ್ಸಿನೋಸ್ 1380 ಪ್ರೊಸೆಸರ್ ನಲ್ಲಿ ಲಭ್ಯವಿದೆ. ಈ ಫೋನ್ಗಳು ಹಲವಾರು ಎನ್ ಪಿ ಯು, ಜಿಪಿಯು ಮತ್ತು ಸಿಪಿಯು 70% ಅಪ್ಗ್ರೇಡ್ ಆಗಿವೆ + ದೊಡ್ಡ ಕೂಲಿಂಗ್ ಚೇಂಬರ್ನೊಂದಿಗೆ ಬರುತ್ತವೆ. ಈ ವೈಶಿಷ್ಟ್ಯ ನೀವು ಆಟವಾಡುವಾಗ ಅಥವಾ ಮಲ್ಟಿ ಟಾಸ್ಕಿಂಗ್ ಮಾಡುವಾಗ ಸೂಕ್ಷ್ಮ ಫಲಿತಾಂಶ ಒದಗಿಸುತ್ತದೆ.
ಗ್ಯಾಲಕ್ಸಿ ಎ55 5ಜಿ ಯಲ್ಲಿ 12ಜಿಬಿ ರಾಮ್ ಇದೆ. ಈ ವಿಭಾಗದಲ್ಲಿ ಈ ಸೌಕರ್ಯ ಅಚ್ಚರಿಯನ್ನು ಒದಗಿಸುವಂತೆ ಇದೆ. ಸಾಧನಗಳು 25ಡಬ್ಲ್ಯೂ ಚಾರ್ಜಿಂಗ್ನೊಂದಿಗೆ 5000ಎಂಎಎಚ್ ಬ್ಯಾಟರಿ ಹೊಂದಿವೆ ಮತ್ತು ಆಂಡ್ರಾಯ್ಡ್14 ಜೊತೆಗೆ ಒನ್ ಯುಐ 6.1ನೊಂದಿಗೆ ಬರುತ್ತದೆ.
ಬೇರೆಲ್ಲಕ್ಕಿಂತ ಹೆಚ್ಚು ಸುರಕ್ಷಿತ
ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಪ್ರಮುಖ ಗ್ಯಾಲಕ್ಸಿ ಸಾಧನಗಳಿಂದ ಗ್ಯಾಲಕ್ಸಿ ಎ ಸರಣಿಯ ಬಳಕೆದಾರರಿಗೆ ಮೊದಲ ಬಾರಿಗೆ ಸ್ಯಾಮ್ಸಂಗ್ ನ ಅತ್ಯಂತ ನವೀನ ಸೆಕ್ಯುರಿಟಿ ಫೀಚರ್ ಗಳಲ್ಲೇ ಒಂದನ್ನು ನೀಡುತ್ತಿದೆ. ಅದರ ಹೆಸರು ಸ್ಯಾಮ್ಸಂಗ್ ನಾಕ್ಸ್ ವಾಲ್ಟ್. ಈ ಹಾರ್ಡ್ವೇರ್ ಆಧಾರಿತ ಭದ್ರತಾ ವ್ಯವಸ್ಥೆಯು ಸಿಸ್ಟಮ್ನ ಮುಖ್ಯ ಪ್ರೊಸೆಸರ್ ಮತ್ತು ಮೆಮೊರಿಯಿಂದ ಭೌತಿಕವಾಗಿ ಪ್ರತ್ಯೇಕವಾಗಿರುವ ಸುರಕ್ಷಿತ ಎಕ್ಸಿಕ್ಯೂಶನ್ ಪರಿಸರವನ್ನು ನಿರ್ಮಿಸುವ ಮೂಲಕ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ದಾಳಿಗಳ ವಿರುದ್ಧ ರಕ್ಷಣೆ ನೀಡುತ್ತದೆ. ಪಿನ್ ಕೋಡ್ಗಳು, ಪಾಸ್ವರ್ಡ್ಗಳು ಮತ್ತು ಪ್ಯಾಟರ್ನ್ಗಳನ್ನು ಒಳಗೊಂಡಂತೆ ಸಾಧನದಲ್ಲಿನ ಅತ್ಯಂತ ಮುಖ್ಯ ಡೇಟಾವನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ. ಸ್ಯಾಮ್ಸಂಗ್ ನಾಕ್ಸ್ ವಾಲ್ಟ್ ಸಾಧನದ ಎನ್ಕ್ರಿಪ್ಶನ್ ಕೀಗಳನ್ನು ಸಹ ರಕ್ಷಿಸುತ್ತದೆ. ಸಾಧನದಲ್ಲಿ ಸಂಗ್ರಹವಾಗಿರುವ ಬಳಕೆದಾರರ ಖಾಸಗಿ ಡೇಟಾವನ್ನು ಸುರಕ್ಷಿತಗೊಳಿಸುತ್ತದೆ. ಸರಿಯಾದ ಲಾಕ್ ಸ್ಕ್ರೀನ್ ಕ್ರೆಡೆನ್ಷಿಯಲ್ಸ್ ಹೊಂದಿರುವ ಬಳಕೆದಾರರು ಮಾತ್ರ ಸಾಧನವು ಕಳೆದುಹೋದರೂ ಅಥವಾ ಕದ್ದರೂ ಸಹ ಅವರ ಡೇಟಾವನ್ನು ಪಡೆಯಬಹುದು.
ಸಂರಕ್ಷಿತವಾಗಿರಲು ಹೆಚ್ಚುವರಿಯಾಗಿ, ಗ್ಯಾಲಕ್ಸಿ ಎ ಸರಣಿಯು ಆಟೋ ಬ್ಲಾಕರ್ ಅನ್ನು ನೀಡುತ್ತದೆ. ಇದು ಸ್ವಿಚ್ ಆನ್ ಮಾಡಿದಾಗ ಅನಧಿಕೃತ ಮೂಲಗಳಿಂದ ಬರುವ ಆಪ್ ಇನ್ ಸ್ಟಾಲೇಷನ್ ಗಳನ್ನು ನಿರ್ಬಂಧಿಸಬಹುದು. ಸಂಭಾವ್ಯ ಮಾಲ್ವೇರ್ಗಳನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಯು ಎಸ್ ಬಿ ಕೇಬಲ್ ಮೂಲಕ ಸಂಪರ್ಕಗೊಂಡಿರುವಾಗ ನಿಮ್ಮ ಸಾಧನಕ್ಕೆ ಒದಗಬಹುದಾದ ದುರುದ್ದೇಶಪೂರಿತ ಆಜ್ಞೆಗಳು ಮತ್ತು ಸಾಫ್ಟ್ವೇರ್ ಸ್ಥಾಪನೆಗಳನ್ನು ನಿರ್ಬಂಧಿಸಬಹುದಾಗಿದೆ. ಅವರು ಪ್ರೈವೇಟ್ ಶೇರಿಂಗ್ ಸೌಲಭ್ಯ ಹೊಂದಬಹುದು, ಇದು ಪ್ರಮುಖ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಹೊಂದಿರುವ ಖಾಸಗಿ ಫೈಲ್ಗಳ ಸುರಕ್ಷಿತ ಮತ್ತು ಎನ್ಕ್ರಿಪ್ಟ್ ಶೇರಿಂಗ್ ಮಾಡುವ ಅವಕಾಶ ಒದಗಿಸುತ್ತದೆ. ಬಳಕೆದಾರರು ಸೆಕ್ಯೂರ್ ಫೋಲ್ಡರ್ ವೈಶಿಷ್ಟ್ಯವನ್ನು ಸಹ ಪಡೆಯುತ್ತಾರೆ. ಆ ಮೂಲಕ ಅವರು ತಮ್ಮ ಸಾಧನಗಳಲ್ಲಿ ಸಂಪೂರ್ಣ ಎನ್ಕ್ರಿಪ್ಟ್ ಮಾಡಿದ ಸ್ಪೇಸ್ ಅನ್ನು ರಚಿಸಬಹುದು, ಅದನ್ನು ಅವರು ತಮ್ಮ ಫಿಂಗರ್ಪ್ರಿಂಟ್ ಅಥವಾ ಪಾಸ್ವರ್ಡ್ ಹಾಕುವುದರ ಮೂಲಕ ಮಾತ್ರ ಪ್ರವೇಶಿಸಬಹುದು.
ಅದ್ಭುತ ಅನುಭವಗಳು
ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಖರೀದಿದಾರರು ಸ್ಯಾಮ್ಸಂಗ್ ವ್ಯಾಲೆಟ್ ಸೌಲಭ್ಯ ಪಡೆಯುತ್ತಾರೆ. ಇದು ನಿಮ್ಮ ಗ್ಯಾಲಕ್ಸಿ ಸಾಧನದಲ್ಲಿ ನಿಮ್ಮ ಅಗತ್ಯ ವಸ್ತುಗಳನ್ನು ಅನುಕೂಲಕರವಾಗಿ ಮತ್ತು ಸುರಕ್ಷಿತವಾಗಿ ಸಾಗಿಸಲು ಅನುವು ಮಾಡಿಕೊಡುವ ಮೊಬೈಲ್ ವ್ಯಾಲೆಟ್ ಪರಿಹಾರವಾಗಿದೆ. ನಿಮ್ಮ ಪಾವತಿ ಕಾರ್ಡ್ಗಳು, ಡಿಜಿಟಲ್ ಐಡಿ, ಪ್ರಯಾಣ ಟಿಕೆಟ್ಗಳು ಮತ್ತು ಹೆಚ್ಚಿನದನ್ನು ಇದರಲ್ಲಿ ಸೇರಿಸಬಹುದು. ಹೆಚ್ಚುವರಿಯಾಗಿ, ಸ್ಯಾಮ್ಸಂಗ್ ವ್ಯಾಲೆಟ್ ಸೀಮಿತ ಅವಧಿಯ ಕೊಡುಗೆಯನ್ನು ಸಹ ನೀಡುತ್ತಿದೆ, ಇದರಲ್ಲಿ ಪ್ರತಿಯೊಬ್ಬ ಗ್ರಾಹಕರು ತಮ್ಮ ಮೊದಲ ಯಶಸ್ವಿ ಟ್ಯಾಪ್ & ಪೇ ವಹಿವಾಟು ನಡೆಸುವ ಮೂಲಕ ರೂ. 250 ಮೌಲ್ಯದ ಅಮೆಜಾನ್ ವೋಚರ್ ಅನ್ನು ಪಡೆಯುತ್ತಾರೆ.
ಈ ಸಾಧನಗಳು ಹೆಚ್ಚು ಜನಪ್ರಿಯವಾಗಿರುವ ವಾಯ್ಸ್ ಫೋಕಸ್ ವೈಶಿಷ್ಟ್ಯವನ್ನು ಹೊಂದಿದ್ದು, ಅದು ಬಳಕೆದಾರರಿಗೆ ವಾತಾವರಣದಲ್ಲಿರುವ ಶಬ್ದವನ್ನು ಕಡಿಮೆಗೊಳಿಸಿ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅವಕಾಶ ಮಾಡಿಕೊಡುತ್ತದೆ.
ಹೊಸ ಗ್ಯಾಲಕ್ಸಿ ಎ ಸರಣಿಯ ಸ್ಮಾರ್ಟ್ಫೋನ್ಗಳು ಗ್ಯಾಲಕ್ಸಿ ಸಾಧನಗಳು ಹೆಚ್ಚು ಕಾಲ ಸುರಕ್ಷಿತವಾಗಿ ಮತ್ತು ನವೀಕೃತವಾಗಿರುತ್ತವೆ. ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಜೊತೆಗೆ, ಬಳಕೆದಾರರು 4 ಜನರೇಷನ್ ಗಳ ಆಂಡ್ರಾಯ್ಡ್ ಓಎಸ್ ಅಪ್ಗ್ರೇಡ್ಗಳು ಮತ್ತು ಐದು ವರ್ಷಗಳ ಸೆಕ್ಯುರಿಟಿ ಅಪ್ಡೇಟ್ ಪ್ರಯೋಜನ ಪಡೆಯುತ್ತಾರೆ.
ಭವಿಷ್ಯದ ಗ್ಯಾಲಕ್ಸಿ
ಗ್ಯಾಲಕ್ಸಿ ಎ55 ಮತ್ತು ಗ್ಯಾಲಕ್ಸಿ ಎ35 ಫೋನುಗಳನ್ನು ಭವಿಷ್ಯದ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ ಮತ್ತು ರಚಿಸಲಾಗಿದೆ. ಈ ಸಾಧನಗಳ ಉತ್ಪಾದನೆಯಲ್ಲಿ ಮರುಬಳಕೆಯ ಪ್ಲಾಸ್ಟಿಕ್ ಮತ್ತು ಕಾಗದವನ್ನು ಬಳಸಲಾಗಿದೆ. ಅವು ಅಪಾಯಕಾರಿ-ದ್ರವ್ಯಗಳಿಂದ ಮುಕ್ತವಾಗಿವೆ.
ಮೆಮೊರಿ ವೇರಿಯಂಟ್ ಗಳು, ಬೆಲೆ, ಲಭ್ಯತೆ ಮತ್ತು ಕೊಡುಗೆಗಳು
ಉತ್ಪನ್ನ ಸ್ಟೋರೇಜ್ ವೇರಿಯೆಂಟ್ ಬೆಲೆ*
ಗ್ಯಾಲಕ್ಸಿ ಎ55 5ಜಿ 8GB+128GB INR 36999
8GB+256GB INR 39999
12GB+256GB INR 42999
ಗ್ಯಾಲಕ್ಸಿ ಎ35 5ಜಿ 8GB+128GB INR 27999
8GB+256GB INR 30999
*ಎಚ್ ಡಿ ಎಫ್ ಸಿ, ಒನ್ ಕಾರ್ಡ್, ಐ ಡಿ ಎಫ್ ಸಿ, ಫಸ್ಟ್ ಬ್ಯಾಂಕ್ ಕಾರ್ಡ್ಗಳಲ್ಲಿ ಖರೀದಿಸಿದರೆ ರೂ. 3000 ರ ಬ್ಯಾಂಕ್ ಕ್ಯಾಶ್ಬ್ಯಾಕ್ ಸೇರಿದಂತೆ ಎಲ್ಲಾ ಬೆಲೆಗಳು ಜೊತೆಗೆ 6 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಗಳು ದೊರೆಯಲಿವೆ. ಪರ್ಯಾಯವಾಗಿ, ಗ್ರಾಹಕರು ಗ್ಯಾಲಕ್ಸಿ ಎ55 5ಜಿ ಅನ್ನು ತಿಂಗಳಿಗೆ ಕೇವಲ ರೂ. 1792 ಕ್ಕೆ ಮತ್ತು ಗ್ಯಾಲಕ್ಸಿ ಎ35 ಅನ್ನು ತಿಂಗಳಿಗೆ ಕೇವಲ ರೂ. 1723 ಗೆ Samsung Finance+ ಮತ್ತು ಎಲ್ಲಾ ಪ್ರಮುಖ ಎನ್ ಬಿ ಎಫ್ ಸಿ ಪಾಲುದಾರರ ಮೂಲಕ ಹೊಂದಬಹುದು.
ಇತರೆ ಕೊಡುಗೆಗಳು
• ಸ್ಯಾಮ್ಸಂಗ್ ವ್ಯಾಲೆಟ್: ಮೊದಲ ಯಶಸ್ವಿ ಟ್ಯಾಪ್ ಮತ್ತು ಪಾವತಿ ವಹಿವಾಟಿನಲ್ಲಿ ರೂ. 250 ಮೌಲ್ಯದ ಅಮೆಜಾನ್ ವೋಚರ್ ಪಡೆಯಬಹುದು
• ಯೂಟ್ಯೂಬ್ ಪ್ರೀಮಿಯಂ: 2 ತಿಂಗಳು ಉಚಿತ (ಏಪ್ರಿಲ್ 1, 2025 ರವರೆಗೆ)
• ಮೈಕ್ರೋಸಾಫ್ಟ್ 365: ಮೈಕ್ರೋಸಾಫ್ಟ್ 365 ಬೇಸಿಕ್ + 6 ತಿಂಗಳ ಕ್ಲೌಡ್ ಸ್ಟೋರೇಜ್ (100ಜಿಬಿ ವರೆಗೆ, ಜೂನ್ 30, 2024ರ ಮೊದಲು ಮಾಡಬೇಕಾದ ರಿಡೆಂಪ್ಶನ್ ಆಫರ್)
ಲಭ್ಯತೆ
ಮಾರ್ಚ್ 14, 2024 ರಂದು ಮಧ್ಯಾಹ್ನ 12ರ ಬಳಿಕ Samsung.com ನಲ್ಲಿ ಮತ್ತು ಸ್ಯಾಮ್ಸಂಗ್ ಎಕ್ಸ್ ಕ್ಲೂಸಿವ್ ಮತ್ತು ಪಾಲುದಾರ ಅಂಗಡಿಗಳಲ್ಲಿ ಖರೀದಿಸಬಹುದು. ಮಾರ್ಚ್ 18, 2024 ರಿಂದ ಇತರ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಎರಡು ಸಾಧನಗಳು ಖರೀದಿಗೆ ಲಭ್ಯವಿರುತ್ತವೆ.