ಅಡುಗೆ ಮನೆ ಪ್ರತಿಯೊಬ್ಬ ಗೃಹಿಣಿಗೂ ಅಚ್ಚುಮೆಚ್ಚಿನ ಸ್ಥಳ. ತನ್ನ ದಿನಚರಿ ಪ್ರಾರಂಭವಾಗಿ, ಕೊನೆಯಗುವುದು ಈ ಕೋಣೆಯಲ್ಲಿ. ಹಾಗಾಗಿ ಇಡೀ ಮನೆಯವರ ಮತ್ತು ಮಕ್ಕಳ ಆರೋಗ್ಯದ ಜವಾಬ್ದಾರಿ ಆ ಗೃಹಿಣಿಯ ಮೇಲೆ ಇರುತ್ತದೆ. ಹಾಗೆಯೇ ಮನೆಗೆ ತರುವ ದಿನಸಿ ಸಾಮಾನಿಂದ ಹಿಡಿದು ಅಡುಗೆ ಮಾಡುವ ಪಾತ್ರೆಯವೆರೆಗೆ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಯಾಕಂದ್ರೆ ಇವಾಗ ಒಲೆ ಬದಲಾಗಿ ಗ್ಯಾಸ್ ಸ್ಟವ್ , ಅರೆಯುವ ಕಲ್ಲಿನ ಬದಲಾಗಿ ಮಿಕ್ಸಿ, ಮಣ್ಣಿನ ಪಾತ್ರೆಯ ಬದಲಾಗಿ ಪ್ಲಾಸ್ಟಿಕ್ ನಮ್ಮ ಕೆಲಸದ ಹೊರೆಯನ್ನೇನೋ ಕಡಿಮೆ ಮಾಡಿದೆ, ಆದರೆ ಅದರ ಜೊತೆಗೆ ಕ್ಯಾನ್ಸರ್ ಮತ್ತಿತರ ರೋಗಗಳಿಗೆ ಆಹ್ವಾನ ಕೊಟ್ಟಿದೆ.
ಇತ್ತೀಚೆಗೆ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಒಬ್ರು ಬಹಳ ಸಕತ್ತಾಗಿ ಫಿಶ್ ಫ್ರೈ ಮಾಡಿ ತೋರ್ಸಿದ್ರು. ಮೀನಿಗೆ ಮಸಾಲಾ ಹಾಕಿ, ನಾನ್ ಸ್ಟಿಕ್ ಖಾವಲಿಯಲ್ಲಿ ಬೇಯಿಸಿ ಮತ್ತೆ, ಅಲ್ಯೂಮಿನಿಯಂ ಫಾಯ್ಲ್ ನಲ್ಲಿ ಸುತ್ತಿ ಮತೊಮ್ಮೆ ಖಾವಲಿಯಲ್ಲಿ ಇಟ್ಟು ಬೇಯಿಸ್ತಾರೆ. ಹಾಗೆ ಕೊನೆಗೆ ಒಂದು ನೋಟ್ ಕೂಡ ಹಾಕಿದ್ರು, ಏನಂದ್ರೆ ಬಾಳೆಎಲೆ ಸಿಗ್ಲಿಲ್ಲ, ಹಾಗಾಗಿ ಫಾಯ್ಲ್ ಉಪಯೋಗ ಮಾಡಿದೆ ಎಂದು. ನಿಜವಾಗ್ಲೂ ಆ ಅಡುಗೆ ಚೆನ್ನಾಗಿರ್ಬೋದು, ಆದ್ರೆ ಅದಕ್ಕೆ ಬಳಸಿದ ಎರಡು ವಸ್ತುಗಳು ವಿಶಾಕಾರಕಗಳು.
ಅಡುಗೆ ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಲ್ಪನೆ ಹೊಂದಿರುತ್ತೇವೆ. ಆದರೆ ನಮಗೆ ಗೊತ್ತಿಲ್ಲದೇ ಕೆಲವು ವಿಷಜಂತುಗಳನ್ನು ಆಶ್ರಯಿಸುತ್ತಿದ್ದೇವೆ. ಕೂಡಲೇ ಅವು ಯಾವುದು ಎಂದು ಗುರುತಿಸಿ ಎಸೆಯುವುದು ಉತ್ತಮ.
ಪ್ಲಾಸ್ಟಿಕ್ ಟಿಫಿನ್ ಬಾಕ್ಸ್ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿಯೂ ಸುಂದರವಾದ ಬಣ್ಣ ಬಣ್ಣಗಳ ಪ್ಲಾಸ್ಟಿಕ್ ಟಿಫಿನ್ ಬಾಕ್ಸ್ ಗಳು ಇದೆ. ನೀವು ಈ ಡಬ್ಬಿಗಳಲ್ಲಿ ಹಾಕುವ ಆಹಾರವು ಬಿಸಿಯಾಗಿರಲಿ ಅಥವಾ ತಣ್ಣಗಿರಲಿ, ಅದರಿಂದ ಕೆಲವು ಗ್ಯಾಸ್ಟ್ರಿಕ್ ಸಮಸ್ಯೆಗಳು ಉಂಟಾಗುತ್ತದೆ. ಜೊತೆಗೆ ರಾಸಾಯನಿಕ ವಿಷವನ್ನು ಹೊಂದಿರುತ್ತವೆ. ಆದಷ್ಟು ಸ್ಟೀಲ್ ಪಾತ್ರೆಯನ್ನು ಬಳಸಿ.
ಅಲ್ಯೂಮಿನಿಯಂ ಫಾಯಿಲ್: ಇಂದು ನೀವು ಯಾವ ರೆಸ್ಟೋರೆಂಟ್ಗೆ ಹೋದರೂ, ಈ ಅಲ್ಯೂಮಿನಿಯಂ ಫಾಯಿಲ್ ಇಲ್ಲದೇ ನಿಮ್ಮ ಆಹಾರವು ಬರುವುದಿಲ್ಲ.ಹಾಗೆಯೇ ಆಹಾರವನ್ನು ಪಾರ್ಸೆಲ್ ತರುವಾಗ ಕೂಡ ಈ ಬಿಸಿಯಾದ ಆಹಾರ ಆ ಫಾಯ್ಲ್ ಜೊತೆ ಸೇರುತ್ತದೆ.ಅದರಲ್ಲಿಯೂ ಬೇಸರದ ಸಂಗತಿ ಎಂದರೆ ಹೋಟೆಲ್ಗಳನ್ನು ಮೀರಿ ಇಂದು ಮನೆಯಲ್ಲಿರುವ ಅಡುಗೆ ಮನೆಗಳಲ್ಲಿಯೂ ಅಲ್ಯೂಮಿನಿಯಂ ಫಾಯಿಲ್ ಕಾಣಲು ಆರಂಭಿಸಿವೆ. ತುಂಬಾ ಬಿಸಿಯಾದ ಆಹಾರವನ್ನು ಇಟ್ಟುಕೊಳ್ಳಲು ಬಳಸಿದರೂ ಅದರಲ್ಲಿರುವ ಲೋಹಗಳು ನಮ್ಮ ಆಹಾರದೊಂದಿಗೆ ಬೆರೆತು ಹೋಗುತ್ತವೆ. ಆದರೆ ಈ ವಿಚಾರ ನಮಗೆ ತಿಳಿಯುವುದಿಲ್ಲ.
ಪ್ಲಾಸ್ಟಿಕ್ ಕವರ್: ಪ್ಲಾಸ್ಟಿಕ್ ಕವರ್ಗಳಲ್ಲಿ ಪಾರ್ಸೆಲ್ ಮಾಡಿದ ಅಥವಾ ಅದರೊಂದಿಗೆ ಸಂಗ್ರಹಿಸಿದ ಆಹಾರಗಳು ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ಇದು ನಮ್ಮ ದೇಹವನ್ನು ಪ್ರವೇಶಿಸುತ್ತದೆ ಮತ್ತು ಹಾರ್ಮೋನುಗಳನ್ನು ಬದಲಾಯಿಸುತ್ತದೆ. ಹಾಗಾಗಿ ಈ ಪ್ಲಾಸ್ಟಿಕ್ ಕವರ್ಗಳ ಬದಲಿಗೆ ಹತ್ತಿ ಬಟ್ಟೆ ಅಥವಾ ಪೇಪರ್ ಫಾಯಿಲ್ ಅನ್ನು ಬಳಸಬೇಕು.
ಟೆಫ್ಲಾನ್ ಲೇಪಿತ ಅಡುಗೆ ಪಾತ್ರೆಗಳು: ಕುಕ್ ವೇರ್ ನೋಡಲು ಆಕರ್ಷಕವಾಗಿರಬೇಕು ಮತ್ತು ಸ್ವಚ್ಛಗೊಳಿಸಲು ಸುಲಭವಾಗಬೇಕು ಎಂಬ ಕಾರಣದಿಂದ ಅನೇಕ ಮಂದಿ ಈ ರೀತಿಯ ಕುಕ್ ವೇರ್ ಗಳನ್ನು ಬಳಸುತ್ತಾರೆ. ಆದರೆ, ಇವು ಅಡುಗೆಗೆ ಸೂಕ್ತವಲ್ಲ. ಉಕ್ಕಿನ ಪಾತ್ರೆಗಳು ಅಥವಾ ಸಾಂಪ್ರದಾಯಿಕ ಮಣ್ಣಿನ ಪಾತ್ರೆಗಳನ್ನು ಬಳಸುವುದು ಉತ್ತಮ