ರಾತ್ರಿ ಚೆನ್ನಾಗಿ ನಿದ್ದೆ ಬಂದಿಲ್ಲ ಅಂದರೆ ಬೆಳ್ಳಿಗೆ ಎದ್ದ ಮೇಲೆ ದೇಹದಲ್ಲಿ ಯಾವುದೇ ಉತ್ಸಾಹ ಇರುವುದಿಲ್ಲ. ನಾವು ದಿನವೆಲ್ಲಾ ಆಯಾಸದಿಂದನೇ ಇರುತ್ತೆವೆ. ಹಾಗೆಯೇ ನಮ್ಮ ದೇಹದ ಒಳಗೂ ಕೂಡ ಹಲವಾರು ಬದಲಾವಣೆಗಳು ಆಗುತ್ತವೆ. ನಮ್ಮ ದೇಹದಲ್ಲಿ ಹಾರ್ಮೋನ್ಸ್ ಇಂಬಬ್ಯಾಲೆನ್ಸ್ ಕೂಡ ಆಗಬಹುದು, ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಆದರಿಂದ ನಮ್ಮ ದೇಹಕ್ಕೆ ನಿದ್ರೆ ತುಂಬಾ ಅವಶ್ಯಕ. ನಾವು ಜೀವಿಸಲು ಹೇಗೆ ಒಳ್ಳೆಯ ಗಾಳಿ ನೀರು ಆಹಾರ ಅವಶ್ಯಕವೊ ಹಾಗೇ ನಿದ್ರೆ ಕೂಡ ಅಷ್ಟೇ ಮುಖ್ಯ . ಪ್ರತಿಯೊಬ್ಬರ ದೇಹಕ್ಕೆ ವಿಶ್ರಾಂತಿ ತುಂಬಾ ಅವಶ್ಯಕ.
ಮೈಬಗ್ಗಿಸಿ ದುಡಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಎಂದು ವ್ಯಂಗ್ಯವಾಗಿ ಕೆಲವೊಬ್ಬರು ಹೇಳುತ್ತಾರೆ . ಆದರೆ ಅದೆಲ್ಲ ಕೇವಲ ಹೇಳುವುದಕ್ಕೆ ಮಾತ್ರ ಚಂದ ಕಾರ್ಯರೂಪಕ್ಕೆ ತರುವುದು ಬಹಳ ಕಷ್ಟ . ಆದರಿಂದ ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕಾದರೆ ಈ ಸಲಹೆಗಳನ್ನು ಅನುಸರಿಸಿ.
ಟೀ ಕಾಫಿಯನ್ನು ಸಂಜೆಯ ವೇಳೆ ಕುಡಿಯಬಾರದು
ಐದು ಆರು ಗಂಟೆಗೆ ಟೀ ಕಾಫಿ ಕುಡಿಯುವ ಅಭ್ಯಾಸ ತುಂಬಾ ಜನರಿಗೆ ಇರುತ್ತದೆ ಇದನ್ನು ಮೂರು ನಾಲ್ಕು ಗಂಟೆ ಹೊತ್ತಿಗೆ ಕುಡಿದು ಮುಗಿಸಬೇಕು. ಯಾಕೆಂದರೆ ಟೀ ಕಾಫಿಯಲ್ಲಿ ಕೆಫೆನ್ ಇರುತ್ತದೆ ಅದು ನಮ್ಮ ನರವ ಸಿಸ್ಟಮ್ ನ ಆಕ್ಟಿವ್ ಅಥವಾ ಟ್ರಿಗರ್ ಮಾಡುತ್ತದೆ. ನಮ್ಮ ನರವ ಸಿಸ್ಟಮ್ ರಾತ್ರಿಯಾದ ಮೇಲೆ ಶಾಂತವಾಗಿರಬೇಕು ಆಗ ನಮಗೆ ಮನಸ್ಸು ರಿಲ್ಯಾಕ್ಸ್ ಆಗಿ ಚೆನ್ನಾಗಿ ನಿದ್ರೆ ಬರುತ್ತದೆ.
ರಾತ್ರಿ ಊಟವನ್ನು ಬೇಗ ಮತ್ತು ಹಗುರವಾಗಿ ಮಾಡಬೇಕು
ರಾತ್ರಿ ಊಟವನ್ನು ಎಷ್ಟು ಬೇಗ ಮಾಡುತ್ತೇವೋ ಅಷ್ಟು ಬೇಗ ಮಾಡಿ ಮುಗಿಸಬೇಕು ಮತ್ತೆ ಆದಷ್ಟು ಕಡಿಮೆ ಊಟವನ್ನು ತಿನ್ನುವುದು ಉತ್ತಮ. ಕೆಲವರಲ್ಲಿ ಹೊಟ್ಟೆ ತುಂಬ ತಿಂದರೆ ಮಾತ್ರ ಚೆನ್ನಾಗಿ ನಿದ್ರೆ ಬರುತ್ತದೆ ಎನ್ನುವ ತಪ್ಪು ಕಲ್ಪನೆಗಳಿವೆ. ಆದರೆ ಕಡಿಮೆ ತಿನ್ನುವುದರಿಂದ ದೇಹವು ಹಗುರವಾಗಿದ್ದು ಬೇಗ ನಿದ್ದೆ ಬರುತ್ತದೆ ಮತ್ತು ಬೇಗನೆ ಊಟ ಮಾಡುವುದರಿಂದ ಮಲಗುವ ಮುನ್ನ ನಾವು ತಿಂದ ಆಹಾರ ಜೀರ್ಣವಾಗಿ ಚೆನ್ನಾಗಿ ನಿದ್ರೆ ಬರುತ್ತದೆ.
ಸಂಜೆ ಯೋಗ ಅಥವಾ ವ್ಯಾಯಾಮಗಳನ್ನು ಮಾಡಬೇಕು
ಸರಳವಾದ ಯೋಗ ಅಭ್ಯಾಸ ಮಾಡಿದರೆ ತುಂಬಾ ಒಳ್ಳೆಯದು. ಎಷ್ಟು ದೇಹ ರಿಲ್ಯಾಕ್ಸ್ ಆಗಿರುತ್ತದೊ ಅಷ್ಟು ಮನಸ್ಸು ಕೂಡ ರಿಲ್ಯಾಕ್ಸ್ ಆಗಿರುತ್ತದೆ. ಅದಕ್ಕಾಗಿ ಸಾಯಂಕಾಲ 20 ನಿಮಿಷ ಯೋಗ ಅಥವಾ ವ್ಯಾಯಾಮ ಮಾಡಿದರೆ ಮನಸ್ಸು ನಿರಾಳವಾಗಿರುತ್ತದೆ. ಇದರಿಂದ ರಾತ್ರಿ ಚೆನ್ನಾಗಿ ನಿದ್ರೆ ಕಣ್ತುಂಬಿ ಕೊಳ್ಳುತ್ತದೆ.
ಹಾಗೆಯೇ ರಾತ್ರಿ ಸಮಯದಲ್ಲಿ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಕೆಯನ್ನು ಕಡಿಮೆ ಮಾಡಬೇಕು. ಕಣ್ಣುಗಳಿಗೆ ಆಯಾಸವಾದರೆ ನಿದ್ರೆಯ ಸಮಸ್ಯೆ ನಮ್ಮನ್ನು ಕಾಡುತ್ತದೆ. ಅಷ್ಟೇ ಅಲ್ಲದೇ ಮಲಗಿಕೊಳ್ಳುವ ಮುಂಚೆ 10 ನಿಮಿಷ ಯಾವುದಾದರೂ ಪುಸ್ತಕವನ್ನು ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು. ಯಾವುದೇ ನೆಗೆಟಿವ್ ಯೋಚನೆಯ ಬರದ ಹಾಗೆ ಒಳ್ಳೆಯ ಕಥೆಯನ್ನು ಅಥವಾ ಪಾಸಿಟಿವ್ ವಿಚಾರ ಇರುವ ಪುಸ್ತಕವನ್ನು ಓದಬೇಕು. ಸರಳವಾದ ಧ್ಯಾನವನ್ನು ಮಾಡುವುದು ಅಥವಾ ಲೈಟಾಗಿ ಮ್ಯೂಸಿಕ್ ಅನ್ನು ಕೇಳುವುದು ಮನಸ್ಸನ್ನು ರಿಲ್ಯಾಕ್ಸ್ ಆಗಿಟ್ಟಕೊಂಡು ಮಲಗಿದ್ರೆ ಉತ್ತಮವಾಗಿ ನಿದ್ದೆ ಬರುತ್ತದೆ . ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ರೂಢಿಯನ್ನು ಮಾಡಿಕೊಳ್ಳಬೇಕು ಈ ಎಲ್ಲಾ ಸೂತ್ರಗಳನ್ನು ಅನುಸರಿಸಿಕೊಂಡು ಹೋದರೆ ಉತ್ತಮ ನಿದ್ರೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ