ಫ್ಯಾಷನ್ ಎನ್ನುವುದು ಕೆಲವು ವಸ್ತುಗಳು ಮತ್ತು ಮನುಷ್ಯರು ಮನಸ್ಸಿನಲ್ಲಿ ಉಂಟುಮಾಡಿಕೊಳ್ಳುವ ಆಹ್ಲಾದಕರ ಭಾವನೆ ಆಗಿರುತ್ತದೆ. ಸೌಂದರ್ಯ ಅನ್ನೋದು ಬಾಹ್ಯವಾಗಿ ಕಾಣಿಸುವಂತ ಬಣ್ಣ, ರಚನೆ ಇತ್ಯಾದಿಗಳಿಂದ ಕೂಡಿರುತ್ತದೆ. ಇಂದಿನ ಡಿಜಿಟಲ್ ಪ್ರಪಂಚದಲ್ಲಿ ಯಾರಾದರೂ ಒಂದು ಪ್ಯಾಶನ್ ಮಾಡಿಕೊಂಡು ಹೊರ ಪ್ರಪಂಚಕ್ಕೆ ಬಂದರೆ ಸಾಕು ಅದನ್ನೇ ಉಳಿದವರು ಬೇಗ ಫಾಲೋ ಮಾಡಿ ಅದನ್ನೇ ಟ್ರೆಂಡ್ ಆಗಿ ತೊಗೊಂಡು ಬಿಡುತ್ತಾರೆ.
ಕಾಂತಾರ ಚಲನಚಿತ್ರ ಬಿಡುಗಡೆಯಾದ ಮೇಲೆ ರಿಷಬ್ ಶೆಟ್ಟಿಯವರು ಸಿನಿಮಾ ಮೊದಲಿನಿಂದ ಮುಗಿಯುವವರೆಗೂ ಪಂಚೆಯನ್ನು ಧರಿಸಿರುತ್ತಾರೆ. ಅದನ್ನು ನೋಡಿದ ಈಗಿನ ಜನರೇಶನ್ ಆ ಲುಂಗಿಯನ್ನು ಟ್ರೆಂಡ್ ಆಗಿ ಮಾಡಿಕೊಂಡಿದ್ದಾರೆ. ಮೊದಲು ಜೀನ್ಸ್ ಟೀ ಶರ್ಟ್ ಧರಿಸಿ ಮದುವೆ ಸಮಾರಂಭಗಳಲ್ಲಿ ಓಡಾಡುತ್ತಿದ್ದವರು ಈಗ ಯಾವುದೇ ಸಮಾರಂಭವಿರಲಿ ಲುಂಗಿ ಧರಿಸುತ್ತಾರೆ. ಎಲ್ಲರೂ ಪಂಚೆ ಧರಿಸಿಕೊಂಡು ಯುನಿಫಾರ್ಮ್ ತರ ಒಂದೇ ಬಣ್ಣದ ಶರ್ಟ್ ಹಾಕಿ ಎಲ್ಲರ ಕಣ್ಣು ಅವರುಗಳ ಮೇಲೆ ಗೋಚರಿಸುವಂತೆ ಮಾಡುತ್ತಿದ್ದಾರೆ. ವಾಸ್ತವವಾಗಿ ಪಂಚೆ ಎನ್ನುವುದು ತುಂಬಾ ಹಿಂದಿನ ಕಾಲದಿಂದ ಧರಿಸುತ್ತಿದ್ದರು. ಅವರು ಕೇವಲ ಅವರ ಮೈಮುಚ್ಚಿಕೊಳ್ಳಲು ಪಂಚೆಯನ್ನು ಉಪಯೋಗಿಸುತ್ತಿದ್ದರು. ಆದರೆ ಇಂದಿನ ಪ್ರಪಂಚಕ್ಕೆ ಆ ಪಂಚೆ ಟ್ರೆಂಡ್ ಆಗಿದೆ. ಯುವಜನತೆ ಕೂಡ ಈ ಪಂಚೆಯನ್ನು ಸಂದರ್ಭ ಸಿಕ್ಕಲ್ಲೆಲ್ಲ ಉಪಯೋಗಿಸುತ್ತಿದ್ದಾರೆ. ಅಲ್ಲದೆ ಕಾಲೇಜು ವಿದ್ಯಾರ್ಥಿಗಳು ಅವರ ಕಾಲೇಜಿನಲ್ಲಿ ನಡೆಯುವ ಸಾಂಪ್ರದಾಯಕ ದಿನಾಚರಣೆಯನ್ನು ಆಚರಿಸುತ್ತಾ ಅದರಲ್ಲಿ ಆ ಪಂಚೆಯನ್ನು ಧರಿಸಿ ಸಂಭ್ರಮ ಪಡುತ್ತಾರೆ. ಈ ಪಂಚೆಯು ಮೊದಮೊದಲು ಗಂಡಸರು ಮಾತ್ರ ಧರಿಸಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಕೂಡ ಈ ಪಂಚೆಯನ್ನು ಟ್ರೆಂಡ್ ಎನ್ನುವ ರೀತಿ ಉಪಯೋಗಿಸುತ್ತಾರೆ. ಆಧುನಿಕ ಜಗತ್ತಿನ ಪೋಷಕರಂತೂ ಬಿಡಿ ತಮ್ಮ ಮಕ್ಕಳಿಗೆ ಯಾವುದೇ ಕಾರ್ಯಕ್ರಮವಿದ್ದರೂ ಈ ಪಂಚೆ ಮತ್ತು ಶರ್ಟನ್ನೇ ಧರಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ.
ಕೊನೆದಾಗಿ ಹೇಳಬೇಕೆಂದರೆ ಯಾವುದೇ ಸಮಾರಂಭವಿದ್ದರೂ ಜನಗಳು ಅಲ್ಲಿ ಡಿಜೆ ಹಾಕಿ ಕೊನೆಯಲ್ಲಿ ಲುಂಗಿ ಡಾನ್ಸ್ ಎನ್ನುವ ಪದ್ಯಕ್ಕೆ ನಾಲ್ಕು ಹೆಜ್ಜೆ ಹಾಕದೆ ಬಿಡುವುದಿಲ್ಲ. ಒಟ್ಟಿನಲ್ಲಿ ಪಂಚೆ ಎನ್ನುವುದು ಈಗಿನ ಟ್ರೆಂಡ್ ಆಗಿಬಿಟ್ಟಿದೆ.