ಕಸೂತಿಯ ಇತಿಹಾಸ ಚಾಲುಕ್ಯರ ಕಾಲಕ್ಕೆ ಸೇರುತ್ತದೆ. ಕೈ ಎಂದರೆ ಕೈ, ಸುತಿ ಎಂದರೆ ನೇಯ್ಗೆ ಎಂದರ್ಥ. ಹತ್ತಿ ಮತ್ತು ಕೈಗಳನ್ನು ಬಳಸಿ ಮಾಡುವ ಕೆಲಸ ಇದಾಗಿದೆ.
ಕಸೂತಿ ಕೆಲಸ ಗೋಪುರ, ರಥ, ಪಲ್ಲಕ್ಕಿ, ದೀಪಗಳು, ಶಂಖಗಳಂತ ಅತ್ಯಂತ ಸಂಕೀರ್ಣವಾದ ಮಾದರಿಗಳನ್ನು ಒಳಗೊಂಡಿರುತ್ತದೆ. ಕಸೂತಿ ಕೆಲಸವು ಪ್ರಯಾಸಕರವಾಗಿರುತ್ತದೆ ಮತ್ತು ಬಟ್ಟೆಯ ಮೇಲೆ ಪ್ರತಿ ದಾರದ ಎಣಿಕೆಯನ್ನು ಒಳಗೊಂಡಿರುತ್ತದೆ. ಕಸೂತಿಯು ಗವಂತಿ, ಮುರ್ಗಿ ,ನೇಗಿ ಮತ್ತು ಮೆಂತೆ ಎನ್ನುವ ನಾಲ್ಕು ರೀತಿಯ ಹೊಲಿಗೆಗಳನ್ನು ಒಳಗೊಂಡಿರುತ್ತದೆ.
ಕಸೂತಿ ಕಲೆಯನ್ನು ಕಲೆಯಲು ಮೊದಮೊದಲು ಕಷ್ಟವೆನಿಸುತ್ತದೆ ಇದನ್ನು ಕಲಿಯುವ ಮನಸಿದ್ದರೆ ಎಷ್ಟು ಕಷ್ಟವಾದರೂ ಕಲಿಯಬಹುದು ಇದನ್ನು ಹೆಚ್ಚಾಗಿ ಮಹಿಳೆಯರು ಕಲಿಯಲು ಇಷ್ಟಪಡುತ್ತಾರೆ. ಒಮ್ಮೆ ಕಲಿತಾದ ಮೇಲೆ ಇದನ್ನು ಬಟ್ಟೆಯ ಮೇಲೆ ಪ್ರಯೋಗಿಸುವುದು ಸುಲಭ. ಈ ಕಸೂತಿಯನ್ನು ಮಾಡುವವರು ಕಡಿಮೆ ಇರುವರಿಂದ ಇದೊಂದು ದುಬಾರಿಯಾದ ಕಲೆಯಾಗಿದೆ. ಒಂದು ಬ್ಲೌಸ್ ಮೇಲೆ ಕಸೂತಿ ಹಾಕಿಸುವುದಾದರೆ ಮೂರರಿಂದ ಐದು ಸಾವಿರದಷ್ಟು ಹಣ ನೀಡಬೇಕಾಗುತ್ತದೆ. ಇಂದಿನ ಕಾಲದಲ್ಲಿ ಇದೊಂದು ಟ್ರೆಂಡ್ ಕೂಡ ಹೌದು.
ಮಹಿಳೆಯರು ಇದರಿಂದ ಒಂದು ದೊಡ್ಡ ಮೊತ್ತದ ಬಿಜಿನೆಸ್ ಅನ್ನು ಶುರು ಮಾಡಬಹುದಾಗಿದೆ. ಸ್ವಂತ ದುಡಿಮೆ ಮಾಡಲು ಇಚ್ಛಿಸುವವರು ಈ ಕಸೂತಿ ಕೆಲಸವನ್ನು ಕಲಿತುಕೊಳ್ಳುವುದು ತುಂಬಾ ಉತ್ತಮವಾದದ್ದು. ಇದನ್ನು ಒಮ್ಮೆ ಕಲಿಯುವುದು ತನಕ ಇನ್ನೊಬ್ಬರ ಮೇಲೆ ಅವಲಂಬಿತರಾಗಿರಬೇಕಾಗುತ್ತದೆ. ಒಮ್ಮೆ ಕಲಿತಮೇಲೆ ನಮ್ಮಷ್ಟಕ್ಕೆ ನಮಗೆ ಸಮಯ ಸಿಕ್ಕಾಗೆಲ್ಲ ಇದನ್ನು ಮಾಡುತ್ತಾ ಸಾಗಿದರೆ ಮನೆಯಲ್ಲಿ ಸುಮ್ಮನೆ ಕುಳಿತುಕೊಂಡು ಸಮಯವನ್ನು ವ್ಯರ್ಥ ಮಾಡುವುದಕ್ಕಿಂತ ಕಸೂತಿಯನ್ನು ಮಾಡುತ್ತಿದ್ದರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ ಜೊತೆಗೆ ಒಂದಿಷ್ಟು ಹಣವನ್ನು ಕೂಡ ಸಂಪಾದಿಸಿ ಮಹಿಳೆಯು ತನ್ನ ಸಂಪಾದನೆಯನ್ನು ತಾನೇ ಸಂಪಾದಿಸಿಕೊಳ್ಳಬಹುದು.
ಹೀಗೆ ಕಸೂತಿ ಒಂದು ಮುಖ್ಯವಾದ ಕಲೆಯಾಗಿದ್ದು ಅದನ್ನು ಕಲಿತವರು ಸ್ವಂತ ದುಡಿಮೆಯನ್ನು ನಡೆಸಿಕೊಂಡು ಖುಷಿಯಾದ ಜೀವನಶೈಲಿಯಲ್ಲಿ ಬದುಕುವ ಅವಕಾಶ ಈ ಕಲೆಯಲ್ಲಿದೆ.