ಬೆಂಗಳೂರು: ತನ್ನ ವಿಶಿಷ್ಟವಾದ ಉಪಕ್ರಮ”ಮ್ಯಾಗ್ಗಿ ಅಪ್ನ ಫುಡ್ ಬಿಜಿನೆಸ್’ನ ಇತ್ತೀಚಿನ ಆವೃತ್ತಿಯನ್ನು ಪರಿಚಯಿಸಲು MAGGI ಉತ್ಸುಕಗೊಂಡಿದೆ. ದೇಶಾದ್ಯಂತ ಬೆಳೆಯುತ್ತಿರುವ ಮನೆ ಬಾಣಸಿಗರಿಗೆ ಬೆಂಬಲ ಒದಗಿಸಲು ಮ್ಯಾಗ್ಗಿ ಸಿದ್ಧವಾಗುತ್ತಿರುವಂತೆಯೇ, ಈ ಆವೃತ್ತಿಯು ಒಂದು ಹೊಸ ಅಧ್ಯಾಯವನ್ನು ಸೂಚಿಸುತ್ತದೆ. ಮಹತ್ವಾಕಾಂಕ್ಷೆಯುಳ್ಳ ಕಂಟೆಂಟ್ ಸೃಷ್ಟಿಕರ್ತರು, ಯಶಸ್ವೀ ಅಡುಗೆಶಾಸ್ತ್ರದ ಕಂಟೆಂಟ್ ರಚನಕಾರರಾಗುವುದಕ್ಕೆ ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಪಡೆದುಕೊಂಡು ಬಲಶಾಲಿಗಳಾಗುವಂತೆ ಮಾಡುವುದು MAGGI ಗುರಿಯಾಗಿದೆ. ವಿಜೇತರು, ತಮ್ಮದೇ ಸ್ವಂತ ಆನ್ಲೈನ್ ಆಹಾರ ಚಾನೆಲ್ ಪ್ರಾರಂಭಿಸುವುದಕ್ಕೆ ಅಗತ್ಯವಾದ ಮೂಲ ಬಂಡವಾಳವಾಗಿ ರೂ. 5 ಲಕ್ಷ ಗೆಲ್ಲುವ ಅವಕಾಶವೂ ಇರುತ್ತದೆ.
ಭಾರತದಲ್ಲಿ ಕಳೆದ ನಾಲ್ಕು ದಶಕಗಳಿಂದ ವಿಶ್ವಸನೀಯ ಸಂಗಾತಿಯಾಗಿರುವ MAGGI, ವಿಕಸನಶೀಲ ಬಾಣಸಿಗರ ಪಾಕವೈವಿಧ್ಯ ಆಸಕ್ತಿಯನ್ನು ಬೆಳಗಿಸುತ್ತಿದೆ. MAGGI ಪೋರ್ಟ್ಫೋಲಿಯೋದೊಂದಿಗೆ, ಲಕ್ಷಾಂತರ ಗೃಹಿಣಿಯರು ಮತ್ತು ಆಹಾರ ವ್ಯಾಪಾರಸ್ಥರು ಪ್ರತಿದಿನ ಅದ್ವಿತೀಯವಾದ ಅಡುಗೆಗಳೊಂದಿಗೆ ಜನರಿಗೆ ಸಂತೋಷ ನೀಡುತ್ತಿದ್ದಾರೆ. ಅಡುಗೆವಿಧಾನದಲ್ಲಿ ಪ್ರತಿಭೆ ಹಾಗೂ ಆವಿಷ್ಕಾರವನ್ನು ಪ್ರೋತ್ಸಾಹಿಸುವ ತನ್ನ ಬದ್ಧತೆಗೆ ಅನುಗುಣವಾಗಿ MAGGI ಅಪ್ನ ಫುಡ್ ಬಿಜಿನೆಸ್, ಆಹಾರ ಕಂಟೆಂಟ್ ರಚನಕಾರರಾಗಿ ತಮ್ಮ ಪಯಣವನ್ನು ಪ್ರಾರಂಭಿಸುವುದಕ್ಕೆ ಜನರಿಗೆ ಒಂದು ನಿಖರ ವೇದಿಕೆ ಒದಗಿಸುತ್ತಿದೆ. ಇದಕ್ಕೆ ಸೇರ್ಪಡೆಯಾಗಿ, ಪ್ರತಿಯೊಬ್ಬ ನೋಂದಿತರಿಗೂ ಆಲೋಚನಾಪೂರ್ಣವಾಗಿ ಸೃಷ್ಟಿಸಲಾದ ಸ್ಟಾರ್ಟರ್ ಕಿಟ್ ದೊರೆಯಲಿದೆ. ಈ ಕಿಟ್, ಆಹಾರ ಕಂಟೆಂಟ್ ರಚನೆಯ ಸಾಮ್ರಾಜ್ಯಕ್ಕೆ ಕಾಲಿರಿಸಲು ಅಗತ್ಯವಾದ ಎಲ್ಲಾ ಅವಶ್ಯಕ ಸಾಧನಗಳು ಮತ್ತು ಮಾರ್ಗದರ್ಶನವನ್ನು ಒಳಗೊಂಡಿರುತ್ತದೆ.
ಈ ಉಪಕ್ರಮದ ಬಗ್ಗೆ ಮಾತನಾಡುತ್ತಾ, ನೆಸ್ಲೆ ಇಂಡಿಯಾದ ಫುಡ್ಸ್ ಬಿಜಿನೆಸ್ ವಿಭಾಗದ ನಿರ್ದೇಶಕ ರಜತ್ ಜೈನ್, “ಕಳೆದ ಹಲವಾರು ವರ್ಷಗಳಿಂದ MAGGI ಶಕ್ತಿ, ಆವಿಷ್ಕಾರ ಮತ್ತು ಅಡುಗೆಕಲೆಯ ಆಚರಣೆಯ ಚಿಹ್ನೆಯಾಗಿ ಬೆಳೆದುಬಂದಿದೆ, ‘MAGGI ಅಪ್ನ ಫುಡ್ ಬಿಜಿನೆಸ್’, ಬಾಣಸಿಗರನ್ನು ಅಭಿನಂದಿಸಿ ಅವರ ಜೊತೆಗಾರರಾಗಿರುವೆಡೆಗಿನ ನಮ್ಮ ಅಚಲ ಬದ್ಧತೆಗೆ ಮತ್ತೊಂದು ಪುರಾವೆಯಾಗಿದೆ. ಈ ಪ್ರಯತ್ನದಲ್ಲಿ ನಮ್ಮೊಂದಿಗೆ ಕೈಜೋಡಿಸುತ್ತಿರುವ ನಮ್ಮ ಭಾಗೀದಾರರಿಗೆ ಅಂದರೆ, ಇಂಡಿಯಾ ಫುಡ್ ನೆಟ್ವರ್ಕ್ ಮತ್ತು ಭಾರತದ ಕೆಲವು ಪ್ರಮುಖ ಆಹಾರ ಪ್ರಭಾವಕರಾದ ಕಬಿತಾ ಸಿಂಗ್(ಕಬಿತಾಸ್ ಕಿಚನ್), ಮಧುರ ಬಚಲ್(ಮಧುರಾಸ್ ರೆಸಿಪಿ), ತೇಜಾ ಪರುಚೂರಿ(ವಿಸ್ಮಯ್ ಫುಡ್ಸ್), ಮತ್ತು ತನ್ಹಿಶಿಕ ಮುಖರ್ಜಿ(ತನ್ಹಿರ್ ಪಾಕಶಾಲ) ಅವರುಗಳಿಗೆ ನಾವು ಧನ್ಯವಾದ ಅರ್ಪಿಸಬಯಸುತ್ತೇವೆ.
ನಮ್ಮ ದೇಶದಲ್ಲಿ, ಅದ್ವಿತೀಯವಾದ ಅಡುಗೆತಯಾರಿ ಕೌಶಲ್ಯಗಳಿಂದ ಹೊಂದಿರುವ ಅಸಂಖ್ಯ ಮಂದಿ ಕಂಟೆಂಟ್ ರಚನೆ ಪ್ರಾರಂಭಿಸುವ ಆಕಾಂಕ್ಷೆ ಹೊಂದಿದ್ದಾರೆ. ಆದರೆ, ತಮ್ಮದೇ ಸ್ವಂತ ಆನ್ಲೈನ್ ಆಹಾರ ಚಾನೆಲ್ ಪ್ರಾರಂಭಿಸಲು ಅವರಿಗೆ ಅವಶ್ಯಕ ಮಾರ್ಗದರ್ಶನ, ನೈಪುಣ್ಯತೆ ಮತ್ತು ಸಂಪನ್ಮೂಲಗಳು ಬೇಕು. MAGGI ಅಪ್ನ ಫುಡ್ ಬಿಜಿನೆಸ್, ಅವರ ಕನಸುಗಳನ್ನು ನನಸಾಗಿಸಿಕೊಳ್ಳಲು ಅಗತ್ಯವಾದ ಆರಂಭಿಕ ಬೆಂಬಲ ಒದಗಿಸುವುದಕ್ಕಾಗಿಯೇ ವಿನ್ಯಾಸಗೊಂಡಿದೆ.”ಎಂದು ಹೇಳಿದರು.
‘MAGGI ಅಪ್ನ ಫುಡ್ ಬಿಜಿನೆಸ್’ ಗೆ ನೋಂದಣಿ ಈಗ ತೆರೆದಿದ್ದು, ಈ ಮಹತ್ತರವಾದ ಅವಕಾಶವನ್ನು ಬಳಸಿಕೊಳ್ಳಲು ಮತ್ತು ಪ್ರತಿಯೊಂದು ರೀತಿಯಲ್ಲು ಕೇವಲ ದೊಡ್ಡದು ಮತ್ತು ದಿಟ್ಟವಾದುದು ಮಾತ್ರವಲ್ಲದೆ ಉತ್ತಮವಾಗಿರುವುದರ ಭಾಗವಾಗಿರಲು ಆಹಾರ ಕಂಟೆಂಟ್ ರಚನಕಾರರನ್ನು ಆಹ್ವಾನಿಸಲಾಗಿದೆ. ಎಲ್ಲರಿಗೂ ಸುಲಭವಾಗಿ ಪ್ರವೇಶಾವಕಾಶ ಸಿಗುವುದನ್ನು ಖಾತರಿಪಡಿಸಲು ಮಾಡಬೇಕಾದುದು ಇಷ್ಟೆ- 9289722997ಗೆ ಮಿಸ್ಡ್ ಕಾಲ್ ಮಾಡಿ, MAGGI ಅಪ್ನ ಫುಡ್ ಬಿಜಿನೆಸ್’ ಉಪಕ್ರಮಕ್ಕೆ ನೋಂದಣಿ ಮಾಡಿಕೊಳ್ಳುವುದು. ಭಾಗೀದಾರರು ತಮ್ಮ ಇಚ್ಛೆಯ ಭಾಷೆಯಲ್ಲಿ ನೋಂದಣಿ ಮಾಡಿಕೊಂಡು, ಕಂಟೆಂಟ್ಅನ್ನು ಇಂಗ್ಲಿಷ್, ಹಿಂದಿ, ಮರಾಠಿ, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸ್ವೀಕರಿಸಬಹುದು. ತನ್ನ ಮೊಟ್ಟಮೊದಲ ಆವೃತ್ತಿಯಂತೆ, ಈ ಆವೃತ್ತಿಯೂ ಕೂಡ, ಅಡುಗೆತಯಾರಿ ಉತ್ಸಾಹಿಗಳು ತಮ್ಮ ಉತ್ಕಂಟತೆಯನ್ನು ಶೋಧಿಸಿ, ಬಾಯಲ್ಲಿ ನೀರೂರಿಸುವ ಕಂಟೆಂಟ್ ರಚಿಸಿ, ದೇಶಾದ್ಯಂತ ಇರುವ ಪ್ರೇಕ್ಷಕರೊಡನೆ ಸಂಪರ್ಕಗೊಳ್ಳುವುದಕ್ಕೆ ಹೆಜ್ಜೆ-ಹೆಜ್ಜೆಯ ಮಾರ್ಗದರ್ಶಿಯಾಗಿರುವ ಗುರಿಯನ್ನು ಹೊಂದಿದೆ.