ಈ ಸಸ್ಯವು ಎಲ್ಲಾ ಋತುಗಳಲ್ಲಿಯು ಸದಾ ಹಸುರಾಗಿರುತ್ತದೆ. ಗಾಳಿ ಮಣ್ಣು ಬೆಂಕಿ ಪ್ರವಾಹ ಉಪ್ಪು ನೀರು ಹೀಗೆ ಎಲ್ಲ ತರದ ಭೌಗೋಳಿಕ ಗುಣಗಳಿಗೆ ಹೊಂದಿಕೊಂಡು ಬೆಳೆಯುವ ಗಿಡ.
ನೋಣಿ ಗಿಡ ಎಲೆಗಳು ಉದ್ದನೆ ಇದ್ದು ಹಸಿರಾಗಿ ಹೊಳೆಯುತ್ತದೆ ತುಸು ದಪ್ಪವಾಗಿರುತ್ತದೆ. ನಸು ಹಳದಿ ಬಣ್ಣದ ಹಣ್ಣುಗಳು ಅನಾನಾಸು ರೀತಿಯಲ್ಲಿ ಹಣ್ಣಿನ ಮೇಲೆ ಚುಕ್ಕೆಗಳು ಇರುತ್ತದೆ.
ನೋಣಿ ಹಣ್ಣಿನ ರಸವು ಆರೋಗ್ಯ ವರ್ಧಕಗಳಾಗಿ ಕಾರ್ಯನಿರ್ವಹಿಸುವಲ್ಲಿ ಸಫಲತೆಯನ್ನು ಕಂಡಿರುವುದರಿAದ ಇಂದು ಮಾರುಕಟ್ಟೆಗಳಲ್ಲಿ ಸಾಕಷ್ಟು ನೋಣಿ ಹಣ್ಣಿನ ರಸದ ಉತ್ಪನಗಳು ಲಭ್ಯವಿದೆ.
ಇದರ ಆರೋಗ್ಯ ಪ್ರಯೋಜನಗಳು ನೋಣಿ ಹಣ್ಣಿನ ರಸವನ್ನು ಗಂಟು, ಮಂಡಿ ಮತ್ತು ಕೀಲು ನೋವಿಗೆ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಮಧುಮೇಹ ಮತ್ತು ರಕ್ತದ ಒತ್ತಡದ ನಿಯಂತ್ರಣಕ್ಕು ಇದು ಸಹಕಾರಿಯಾಗಿದೆ.
ವಾಸ್ತವವಾಗಿ ಈ ಗಿಡದ ಬಗ್ಗೆ ಹೆಚ್ಚು ಮಾಹಿತಿ ಇಲ್ಲದವರು ಇದನ್ನು ಕಳೆ ಗಿಡವೆಂದು ಭಾವಿಸಿದವರು ಹಲವರು. ಎತಂಹ ವಿಪರೀತ ವತಾವರಣದಲ್ಲಿಯು ಇದು ಸೊಗಸಾಗಿ ಬೆಳೆಯುತ್ತದೆ. ರೈತರು ತಮ್ಮ ತೋಟದಲ್ಲಿ ಮಿಶ್ರ ಬೆಳೆಗಳಲ್ಲಿ ಒಂದಾಗಿ ಬೆಳೆಸಬಹುದು.
ಸಂಧಿತವಾತ, ತ್ವಚೆಯ ಮೊಯಿಶ್ಚರೈಸ್, ದೇಹದಲ್ಲಿ ಶಕ್ತಿ , ಆಂಟಿ ಏಜಿಂಗ್, ಕ್ಯಾನ್ಸರ್ ಕೋಶವನ್ನು ನಾಶ ಮಾಡಲು ಹಾಗೂ ಜ್ವರಕ್ಕೂ ಉತ್ತಮ ಮದ್ದಾಗಿದೆ.
150ಕ್ಕೂ ಹೆಚ್ಚಿನ ಪೋಶಕಾಂಶಗಳನ್ನು ಹೊಂದಿರುವ ನೋಣಿ ಗಿಡವನ್ನು ನಿರ್ಲಕ್ಷಿಸದೆ ಕಾಪಾಡಿಕೊಳ್ಳ ಬೇಕಾಗಿದೆ. ಬಹಳಷ್ಟು ಮಂದಿಗೆ ಈ ಗಿಡದ ಮಹತ್ವದ ಬಗ್ಗೆ ಅರಿವಿಲ್ಲ. ಇದನ್ನು ಕಳೆ ಎಂಬ ಬಾವನೆ ಇದೆ.
ರೋಗ ನಿರೋಧಕ ಶಕ್ತಿಯುಳ್ಳ ನೋಣಿ ರಸವನ್ನು ನೇರವಾಗಿ ಸೇವಿಸವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.