ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸ್ಟ್ಯಾನಿ ಆಲ್ವಾರಿಸ್ ಅವರಿಗೆ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರು, ಕೊಂಕಣಿ ಮಾತೃಭಾಷೆಯ ಸುವರ್ಣ ಮಹೋತ್ಸವ ಆಚರಿಸಿದ ಹಿರಿಯ ಸಂಘಟನೆ ಬಂದು ಸನ್ಮಾನ ಮಾಡುವುದು ಸಂತಸದ ಸಂಗತಿ.ಇಡೀ ಕರ್ನಾಟಕ ವ್ಯಾಪ್ತಿಯ ಕೆಬಿಎಂಕೆಯ ಜೊತೆಗಾರಿಕೆಯು ಹೆಚ್ಚಿನ ಕೊಂಕಣಿ ಕೆಲಸಕ್ಕೆ ಪ್ರೋತ್ಸಾಹವಾಗಲಿದೆ ಎಂದರು.
ಸನ್ಮಾನ ಮಾಡಿ ಮಾತನಾಡಿದ ಕೆಬಿಎಂಕೆ ಅಧ್ಯಕ್ಷ ಕೆ ವಸಂತ ರಾವ್ ,ನಮ್ಮ ಹಿರಿಯರು ಚಳುವಳಿ ಮಾಡಿ ಕೊಂಕಣಿ ಆಕಾಡೆಮಿ ಆಗುವಂತೆ ಮಾಡಿದರು.ನಾವು ಜೊತೆಯಲ್ಲಿ ಸದಾ ಇದ್ದೇವೆ ಎಂದರು.
ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿ ಕೊಂಕಣಿ ಅಕಾಡೆಮಿಯ ನೂತನ ಸದಸ್ಯರು ಆದ ನವೀನ್ ಲೋಬೊ, ಹಾಗೂ ರೊನಿ ಕ್ರಾಸ್ಟಾ ಅವರಿಗೂ ಆಭಿನಂದನೆ ಹೇಳಿದರು.
ಕೆಬಿಎಂಕೆ ಖಜಾಂಚಿ ಸುರೇಶ ಶೆಣೈ, ಸಹಕಾರ್ಯದರ್ಶಿ ಜೂಲಿಯೆಟ್ ಫೆರ್ನಾಂಡೀಸ್, ಕಾರ್ಯಕಾರಿ ಸದಸ್ಯ ಡಾ ಅರವಿಂದ ಶಾನಭಾಗ್ ಇದ್ದರು.