ಜೋರಾಗಿ ಸುರಿಯುವ ಮಳೆಯ ಸಂಭ್ರಮವನ್ನು ಇಮ್ಮಡಿಗೊಳಿಸಲು ಬಿಸಿ ಬಿಸಿ ಸಮೋಸ ಮತ್ತು ಟೀ ಅಥವಾ ಚಹವನ್ನು ಬಯಸುತ್ತಾರೆ. ತ್ರಿಕೋಣ ಆಕಾರದ ಸಮೋಸವನ್ನು ಮೆಚ್ಚದವರು ಯಾರು ಇಲ್ಲ. ಇನ್ನು ಇದರ ರುಚಿಯನ್ನು ಬಲ್ಲವರು ಸದಾ ಬಯಸುತ್ತಾರೆ.
ಸದಾ ಮೈದ ಹಿಟ್ಟನ್ನು ಚಪಾತಿ ರೀತಿಯಲ್ಲಿ ಲಾಟಿ, ಅದರಲ್ಲಿ ತ್ರಿಕೋಣಕಾರದ ಕೋನ್ ನ್ನು ಮಾಡಿ ಇತ್ತ ಮೊದಲೇ ತಯಾರಿಸಿಟ್ಟ ಬಟಾಟ್ಟೆ, ಬಟಾಣಿ, ಇರುಳ್ಳಿ, ಕೊತ್ತಂಬರಿ ಸೊಪ್ಪು ಮಿಶ್ರಿತ ಪಲ್ಯವನ್ನು ಕೊನ್ ಒಳಗೆ ಸೇರಿಸಿ, ಕಾದ ಎಣ್ಣೆಯಲ್ಲಿ ಡೀಪ್ ಪ್ರೈ ಮಾಡಿದರೆ ಬಿಸಿ ಬಿಸಿ ಸಮೋಸ ರೆಡಿ.
ಹೀಗೆ ರುಚಿಯಾದ ಸಮೋಸವನ್ನು ತಿನ್ನುತ್ತಿರಬೇಕಾದರೆ ಎಂದಾರು ಯೋಚನೆ ಬಂದಿದೆಯ ಈ ಸಮೋಸದ ಹುಟ್ಟುವಿನ ಬಗ್ಗೆ?
ಇಲ್ಲಿದೆ ನೋಡಿ ಸಮೋಸ ಸ್ಟೋರಿ
ಮೂಲತಃ ಮಧ್ಯ ಏಷ್ಯಾದ ಸಮೋಸದ ರೆಸಿಪಿಯು 10, 13 ನೇ ಶತಮಾನದಲ್ಲಿ ಅರಬ್ ಪಾಕಶಾಸ್ತ್ರದ ಪುಸ್ತಕದಲ್ಲಿ ಲಭ್ಯವಾಗಿದೆ. ಈ ಸಮೋಸವು ಭಾರತಕ್ಕೆ 13, 14 ನೇ ಶತಮಾನದಲ್ಲಿ ಮಧ್ಯಪ್ರಾಚ್ಯ ಮತ್ತು ಮಧ್ಯ ಏಷ್ಯಾದ ಬಾಣಸಿಗರ ಮೂಲಕ ಭಾರತಕ್ಕೆ ಲಗ್ಗೆ ಇಟ್ಟಿತ್ತು.ಇವರು ದೆಹಲಿ ಸುಲ್ತಾನರ ರಾಜಮನೆತನಕ್ಕಾಗಿ ಅಡುಗೆ ಮಾಡುತ್ತಿದ್ದರು.
14ನೇ ಶತಮಾನದಲ್ಲಿ ಮಹಮ್ಮದ್ ಬಿನ್ ತುಘಲಕ್ ನ ಆಸ್ಥನದ ಊಟದ ಬಗ್ಗೆ ಪ್ರಾವಾಸಿಗ ಮತ್ತು ಅನ್ವೇಷಗಾರ ಇಬ್ನ್ ಬಟ್ಟೂಟಾ ವಿವರಿಸುತ್ತಾ ಮಾಂಸ ತುಂಡು, ಬಾದಾಮಿ, ಪಿಸ್ತಾ,ವಾಲ್ನಟ್ ಮಸಾಲೆಗಳಿಂದ ತುಂಬಿದ ಸಮುಶಕ್ ಅಥಾವಾ ಸಂಬುಸಾಕ್ ಬಡಿಸಲಾಗಿತ್ತು ಎಂದು ವಿವರಿಸಿದ್ದಾನೆ.
ಅಚ್ಚರಿಯಾದರು ಇದು ನಿಜ, ರಾಜಮನೆತನಗಳ ರಾಯಲ್ ಫುಡ್ ಇಂದು ಜನಸಾಮನ್ಯರ ಫೇವರೆಟ್. ಈ ಒಂದು ಖಾದ್ಯಕ್ಕೆ ಬಡವ, ಮಧ್ಯಮ ವರ್ಗ, ಶ್ರೀಮಂತ ಎಂಬ ಭೇದವಿಲ್ಲದೆ ರುಚಿಯಾಗಿ, ಸಲೀಸಾಗಿ ಎಲ್ಲರ ಹೊಟ್ಟೆ ತುಂಬುತ್ತದೆ. ಇನ್ನು ಬಡವರಿಗಂತು ಇದು ಫುಲ್ ಮೀಲ್, ಎರಡು ಸಮೋಸ ತಿಂದರೆ ಸಾಕು ಹೊಟ್ಟೆ ತುಂಬುತ್ತದೆ.