ಭಾರತ ದೇಶವು ವಿವಿಧ ಸಂಸ್ಕ್ರತಿ ಧರ್ಮ ಆಚರಣೆಗಳ ಬೀಡು. ಇಲ್ಲಿ ಎಲ್ಲಾ ಧರ್ಮದವರಿಗೂ ಪ್ರಶಾಸ್ತ್ಯವಿದೆ. ಆದರಿಂದ ಎಲ್ಲಾ ಧರ್ಮದವರು ತಮ್ಮ ತಮ್ಮ ಹಬ್ಬ ಆಚರಣೆಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹಾಗೆಯೇ ಇಂದು ಮುಸ್ಮಿಂ ಸಮುದಾಯದವರು ತಮ್ಮ ಪವಿತ್ರ ಹಬ್ಬವಾದ ರಂಜಾನ್ ಹಬ್ಬವನ್ನು ಆಚರಿಸುತ್ತಿದ್ದಾರೆ.
ಇಸ್ಲಾಮಿಕ್ ಕ್ಯಾಲೆಂಡರ್ನ ಒಂಬತ್ತನೇ ತಿಂಗಳಾದ ರಂಜಾನ್ ತಿಂಗಳಿನಲ್ಲಿ ಒಂದು ತಿಂಗಳ ಕಾಲ ಉಪವಾಸ ವೃತವನ್ನು ಮಾಡಿ ಈ ತಿಂಗಳ ಅಮಾವಾಸೆಯ ನಂತರ ಚಂದ್ರದರ್ಶನವಾದ ದಿನ ಶವ್ವಾಲ್ ತಿಂಗಳ ಮೊದಲ ದಿನ ಎಂದು ಗುರುತಿಸಿ ಈದ್ ಹಬ್ಬವನ್ನು ಆಚರಿಸುತ್ತಾರೆ. ಈ ಬಾರಿ ಕರಾವಳಿಯಾದ್ಯಂತ ಶುಕ್ರವಾರ (ಎಪ್ರಿಲ್ 21) ಚಂದ್ರದರ್ಶನವಾಗದೆ ಉಪವಾಸ ವೃತ ಮಾಡಿ ಶನಿವಾರದಂದು ಈದ್ ಹಬ್ಬವನ್ನು ಆಚರಿಸಲಾಗುತ್ತಿದೆ.
ಇಸ್ಲಾಮಿನ ಐದು ಪಂಚ ಕರ್ಮಗಳಲ್ಲಿ ಒಂದಾದ ಕಡ್ಡಾಯ ದಾನ (ಝಕಾತ್) ಅನ್ನು ನೀಡಲು ರಂಜಾನ್ ಹೆಚ್ಚು ಶ್ರೇಷ್ಠ ತಿಂಗಳಾಗಿದೆ. ತಮ್ಮ ಆದಾಯದ ಉಳಿತಾಯದಲ್ಲಿರುವ ಶೇಕಡಾ 2.5 ನ್ನು ಕಡ್ಡಾಯವಾಗಿ ಬಡವರಿಗೆ, ನಿರ್ಗತಿಕರಿಗೆ ದಾನ ನೀಡುವಂತೆ ಕುರ್ ಆನ್ ತಿಳಿಸುತ್ತದೆ. ರಂಜಾನ್ ತಿಂಗಳಿನಲ್ಲಿಯೇ ಇಸ್ಲಾಮಿನ ಪವಿತ್ರ ಗ್ರಂಥ ಕುರ್ ಅನ್ನು ಪ್ರವಾದಿ ಮುಹಮ್ಮದ್ ಬಹಿರಂಗ ಪಡಿಸಿದರು ಎಂದು ಮುಸ್ಲಿಮರು ನಂಬುತ್ತಾರೆ.
ಈದ್ ಹಬ್ಬವು ಚಂದ್ರನನ್ನು ನೋಡಿದ ನಂತರವೇ ಪ್ರಾರಂಭವಾಗುತ್ತದೆ. ಹಬ್ಬದಂದು ಮುಸ್ಲಿಮರು ಮುಂಜಾನೆ ಬೇಗನೆ ಎದ್ದು ತಮ್ಮ ಸಲಾತ್ ಉಲ್-ಫಜ್ರ್ (ದೈನಂದಿನ ಪ್ರಾರ್ಥನೆಗಳು) ಸಲ್ಲಿಸಿ, ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಇತ್ತರ್ (ಸುಗಂಧ ದ್ರವ್ಯ) ಧರಿಸುತ್ತಾರೆ. ಬಳಿಕ ಹಬ್ಬದ ಪ್ರಾರ್ಥನೆಗೆ ಹೋಗುವ ಮುನ್ನ ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿಯನ್ನು ಸೇವಿಸುತ್ತಾರೆ. ಹುಡುಗರು, ಯುವಕರು ಸೇರಿದಂತೆ ಈದ್ಗ್ ಬಳಿ ಎಲ್ಲಾ ಮುಸ್ಲಿಮರು ಒಟ್ಟಿಗೆ ಸೇರಿ ಹಬ್ಬದ ವಿಶೇಷ ಸಭೆಯಲ್ಲಿ ಪ್ರಾರ್ಥನೆಗಳನ್ನು ಮಾಡುತ್ತಾರೆ. ಆದ್ರೆ ಹೆಣ್ಣು ಮಕ್ಕಳು, ಮಹಿಳೆಯರು ಮನೆಯಲ್ಲೇ ನಮಾಜ್ ಮಾಡಬೇಕು.
ಜನರು ಬೆಳಿಗ್ಗೆ ಸಿಹಿ ತಿನ್ನುವ ಮೂಲಕ ದಿನವನ್ನು ಪ್ರಾರಂಭಿಸುತ್ತಾರೆ. ಫಿರ್ಣಿ ಮತ್ತು ಖೀರ್, ಶೀರ್ ಕುರ್ಮಾ ಮುಂತಾದ ಖಾದ್ಯಗಳನ್ನು ಎಲ್ಲಾ ಮನೆಗಳಲ್ಲಿ ತಯಾರಿಸಲಾಗುತ್ತದೆ. ಹೆಂಗಸರೂ ಕೈಗೆ ಗೋರಂಟಿ ಹಚ್ಚಿಕೊಂಡು ಹೊಸ ಬಟ್ಟೆ ಧರಿಸುತ್ತಾರೆ. ಈ ದಿನದಂದು ಮಕ್ಕಳು ತಮ್ಮ ಕುಟುಂಬದ ಹಿರಿಯರಿಂದ ಈದಿ (ಹಣ) ಪಡೆಯುತ್ತಾರೆ. ಮದುವೆಯಾಗಿ ಗಂಡನ ಮನೆಗೆ ತೆರಳಿದ ಹೆಣ್ಮಕ್ಕಳು ಹಬ್ಬವನ್ನು ಮುಗಿಸಿ ಸಾಯಂಕಾಲ ತಮ್ಮ ತವರಿಗೆ ತೆರಳಿ ಹಬ್ಬದಲ್ಲಿ ಪಾಲ್ಗೋಳುತ್ತಾರೆ.