ಗುರುಗ್ರಾಮ : ಇಂಡಿಯಾದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಇಂದು ಗ್ಯಾಲಕ್ಸಿ ಎಐ ಪರಿಸರ ವ್ಯವಸ್ಥೆಗೆ ಹೊಸತಾಗಿ ಸೇರ್ಪಡೆಗೊಂಡಿರುವ ಗ್ಯಾಲಕ್ಸಿ ಎಸ್24 ಎಫ್ಇ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಫೋನ್ ಹೆಚ್ಚಿನ ಬಳಕೆದಾರರಿಗೆ ಪ್ರೀಮಿಯಂ ಮೊಬೈಲ್ ಅನುಭವ ಒದಗಿಸಲು ವಿನ್ಯಾಸಗೊಂಡಿದೆ.
ಗ್ಯಾಲಕ್ಸಿ ಎಸ್24 ಎಫ್ಇ ಫೋನ್ ಎಐ – ಆಧಾರಿತ ಪ್ರೊ ವಿಶುವಲ್ ಎಂಜಿನ್ ಮತ್ತು ಗ್ಯಾಲಕ್ಸಿ ಎಐನ ಫೋಟೋ ಅಸಿಸ್ಟ್ ಫೀಚರ್ ಗಳಿಂದ ನಡೆಸಲ್ಪಡುವ ಅತ್ಯುತ್ತಮ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಅದು ಬಳಕೆದಾರರಿಗೆ ಹೆಚ್ಚು ಸೃಜನಶೀಲವಾಗಿರಲು ಅವಕಾಶ ಒದಗಿಸುತ್ತದೆ. 6.7-ಇಂಚಿನ ಡೈನಾಮಿಕ್ ಅಮೋಲ್ಡ್ 2ಎಕ್ಸ್ ಡಿಸ್ಪ್ಲೇ, ದೀರ್ಘಾವಧಿಯ 4,700 ಎಂಎಎಚ್ ಬ್ಯಾಟರಿ ಮತ್ತು ಶಕ್ತಿಶಾಲಿ ಎಕ್ಸಿನೋಸ್ 2400 ಸರಣಿಯ ಚಿಪ್ಸೆಟ್ ನೊಂದಿಗೆ ಪ್ರಯಾಣದಲ್ಲಿರುವಾಗಲೂ ಗೇಮಿಂಗ್ಗೆ ಇದು ಪರಿಪೂರ್ಣ ಸಾಧನವಾಗಿದೆ. ಗ್ಯಾಲಕ್ಸಿ ಎಸ್24 ಎಫ್ಇ ಸಂವಹನ ಉತ್ತಮಗೊಳಿಸಲು, ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಲು ಪ್ರೀಮಿಯಂ ಗ್ಯಾಲಕ್ಸಿ ಎಐ ಪರಿಕರಗಳು ಮತ್ತು ಎಐ ಪರಿಸರ ವ್ಯವಸ್ಥೆಯ ಸಂಪರ್ಕವನ್ನು ನೀಡುತ್ತದೆ. ಅದ್ಭುತವಾಗಿ ವಿನ್ಯಾಸದಲ್ಲಿ ರೂಪುಗೊಂಡಿದೆ ಮತ್ತು ದೃಢವಾದ ಸ್ಯಾಮ್ ಸಂಗ್ ನಾಕ್ಸ್ ಭದ್ರತೆಯಿಂದ ರಕ್ಷಿಸಲ್ಪಟ್ಟಿದೆ.
ಎಐ ಸಾಮರ್ಥ್ಯದ ಕ್ಯಾಮೆರಾ ಮತ್ತು ಎಡಿಟಿಂಗ್
ಗ್ಯಾಲಕ್ಸಿ ಎಸ್24 ಎಫ್ಇಯ ಪ್ರೀಮಿಯಂ ಕ್ಯಾಮೆರಾ ಸೆಟಪ್ 3x ಆಪ್ಟಿಕಲ್ ಜೂಮ್ ನೊಂದಿಗೆ 50ಎಂಪಿ ವೈಡ್ ಲೆನ್ಸ್ ಮತ್ತು 8ಎಂಪಿ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಎರಡೂ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ಓಐಎಸ್) ಮೂಲಕ ಕಾರ್ಯ ನಿರ್ವಹಿಸುತ್ತದೆ. ಜೊತೆಗೆ 12ಎಂಪಿ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 10ಎಂಪಿ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಎಫ್ಇ ಸರಣಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲ್ಪಡುತ್ತಿರುವ ಪ್ರೊ ವಿಶುವಲ್ ಎಂಜಿನ್ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಾಧುನಿಕ ಎಐ ಸಾಮರ್ಥ್ಯಗಳನ್ನು ಬಳಸುವಂತೆ ಮಾಡಿ ಅದ್ಭುತವಾದ ಸ್ಪಷ್ಟತೆಯ ಕಂಟೆಂಟ್ ಗಳು ಮತ್ತು ಸೂಕ್ಷ್ಮ ಟೆಕ್ಷ್ಚರ್ ಗಳನ್ನು ಒದಗಿಸುತ್ತದೆ:
ಕಡಿಮೆ ಬೆಳಕಿನಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸಲು, ರಾತ್ರಿಯಲ್ಲಿಯೂ ಸುಂದರವಾದ ಭಾವಚಿತ್ರಗಳನ್ನು ತೆಗೆಯಲು ಎಐ ಇಮೇಜ್ ಸಿಗ್ನಲ್ ಪ್ರೊಸೆಸಿಂಗ್ (ಐ ಎಸ್ ಪಿ) ಜೊತೆಗೆ ನೈಟೋಗ್ರಫಿ
ಆಪ್ಟಿಕಲ್ 3x ಜೂಮ್ ಜೊತೆಗೆ 2x ನಿಂದ ಶುರುವಾಗುವ ಜೂಮ್ ಹಂತಗಳಲ್ಲಿ ಆಪ್ಟಿಕಲ್ ಗುಣಮಟ್ಟದ ಕಾರ್ಯಕ್ಷಮತೆ ಒದಗಿಸಲು ವಿಶಾಲ ಕ್ಯಾಮರಾದ 50ಎಂಪಿ ಅಡಾಪ್ಟಿವ್ ಪಿಕ್ಸೆಲ್ ಸೆನ್ಸರ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಎಐ ಜೂಮ್ ಡಿಜಿಟಲ್ ಜೂಮ್ ಉದ್ದಗಳ ನಡುವಿನ ಅಂತರದಲ್ಲಿ ಚಿತ್ರದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಆಬ್ಜೆಕ್ಟ್ ಅವೇರ್ ಎಂಜಿನ್ ದೃಶ್ಯಗಳನ್ನು ಗುರುತಿಸಲು ಮತ್ತು ಸೂಪರ್ ಹೈ ಡೈನಾಮಿಕ್ ರೇಂಜ್ (ಎಚ್ ಡಿ ಆರ್) ನಲ್ಲಿ ಬಣ್ಣಗಳನ್ನು ಒದಗಿಸಿ ಅತ್ಯುತ್ತಮವಾದ ಮತ್ತು ಅದ್ಭುತವಾದ ಫೋಟೋಗಳು ಮತ್ತು ವೀಡಿಯೊಗಳನ್ನು ಒದಗಿಸುತ್ತದೆ.
ಎಡಿಟ್ ವಿಚಾರಕ್ಕೆ ಬದರೆ ಫೋಟೋ ಅಸಿಸ್ಟ್ ಫೀಚರ್ ಗಳು ಗ್ರಾಹಕರ ಆಲೋಚನೆಗಳಿಗೆ ಜೀವ ತುಂಬುತ್ತವೆ. ಗ್ಯಾಲಕ್ಸಿ ಎಸ್24 ಸರಣಿಯ ಸಾಧನಗಳಲ್ಲಿ ಪರಿಚಯಿಸಿದಾಗಿನಿಂದ, ಗ್ಯಾಲಕ್ಸಿ ಎಐ ಚಿತ್ರಗಳನ್ನು ಎಡಿಟ್ ಮಾಡಲು ಮತ್ತು ಸೃಜನಶೀಲವಾಗಿರಲು ಅಮೂಲ್ಯ ಕೊಡುಗೆ ನೀಡುತ್ತಿವೆ:
ಜನರೇಟಿವ್ ಎಡಿಟ್ ಫೀಚರ್ ಆಬ್ಜೆಕ್ಟ್ ಅನ್ನು ಸ್ಥಾನ ಬದಲಿಸುವ ಮತ್ತು ತೆಗೆಯುವ ಸಾಮರ್ಥ್ಯಗಳ ಮೂಲಕ ಮರು ಜೋಡಿಸುವ ಅವಕಾಶ ಮಾಡಿಕೊಡುತ್ತದೆ. ಗ್ರಾಹಕರಿಗೆ ಇದು ಹೆಚ್ಚು ಸೃಜನಶೀಲ ಸ್ವಾತಂತ್ರ್ಯವನ್ನು ನೀಡುತ್ತದೆ.
ಪೋಟ್ರೇಟ್ ಸ್ಟುಡಿಯೋ ಫೀಚರ್ ಆನ್ ಲೈನ್ ಪ್ರೊಫೈಲ್ ಗಳನ್ನು ವಿಶೇಷವಾಗಿಸಲು ಸೆಲ್ಫೀಗಳನ್ನು ಕಾರ್ಟೂನ್ಗಳು, ಕಾಮಿಕ್ಸ್, ಜಲವರ್ಣ ವರ್ಣಚಿತ್ರಗಳು ಅಥವಾ ರೇಖಾಚಿತ್ರಗಳಾಗಿ ಚಿತ್ರಿಸುತ್ತದೆ.
ಎಡಿಟ್ ಸಜೆಷನ್ಸ್ ಫೀಚರ್ ಎಡಿಟ್ ಬಟನ್ ಒತ್ತುವುದರೊಂದಿಗೆ ರಿಫ್ಲೆಕ್ಷನ್ ಗಳಂತಹ ದೋಷಗಳನ್ನು ತ್ವರಿತವಾಗಿ ತೆಗೆದುಹಾಕುತ್ತದೆ.
ಇನ್ ಸ್ಟಾಂಟ್ ಸ್ಲೋ ಮೋ ಫೀಚರ್ ಜೀವನದ ಪ್ರಮುಖ ಕ್ಷಣಗಳ ಪ್ರತಿ ಸೆಕೆಂಡ್ಗಳನ್ನು ಕ್ಷಣಮಾತ್ರದಲ್ಲಿ ಅಮರಗೊಳಿಸುತ್ತದೆ.
ಅತ್ಯುತ್ತಮ ಕಾರ್ಯ ನಿರ್ವಹಣೆ
ಅತ್ಯುತ್ತಮ ಎಕ್ಸಿನಾಸ್ 2400 ಸರಣಿಯ ಚಿಪ್ ಸೆಟ್ ರೇ ಟ್ರೇಸಿಂಗ್ ನಂತಹ ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿದ್ದು, ಅದ್ಭುತ ಗೇಮಿಂಗ್ ಅನುಭವವನ್ನು ಒದಗಿಸುತ್ತದೆ. ವೇಗ ಮತ್ತು ದಕ್ಷತೆ ಬಹಳ ಮುಖ್ಯವಾಗಿರುವ ಈ ಜಗತ್ತಿನಲ್ಲಿ, ಗ್ಯಾಲಕ್ಸಿ ಎಸ್24 ಎಫ್ಇ ಸ್ಪರ್ಧೆಯಲ್ಲಿ ಮುಂದೆ ಉಳಿಯಲು ಹಲವಾರು ಪ್ರಮುಖ ಫೀಚರ್ ಗಳನ್ನು ಬಳಸುತ್ತದೆ:
1.1x ದೊಡ್ಡದಾದ ವೇಪರ್ ಚೇಂಬರ್ ದೀರ್ಘಾವಧಿಯವರೆಗೆ ಗರಿಷ್ಠ ಕಾರ್ಯಕ್ಷಮತೆಯನ್ನು ಸಾಧ್ಯವಾಗುವಂತೆ ಮಾಡಲು ತಂಪಾಗಿಸುವಿಕೆಯ ಶಕ್ತಿಯನ್ನು ಸುಧಾರಿಸುತ್ತದೆ.
ದೊಡ್ಡ 4700 ಎಂಎಎಎಚ್ ಬ್ಯಾಟರಿಯು ದೀರ್ಘ, ತೊಂದರೆ-ಮುಕ್ತ ಗೇಮಿಂಗ್ ಸೆಷನ್ ಗಳಿಗೆ ಅನುವು ಮಾಡಿ ಕೊಡುತ್ತದೆ.
6.7″ ಅಡಾಪ್ಟಿವ್ ಡೈನಾಮಿಕ್ ಅಮೋಲ್ಡ್ 2ಎಕ್ಸ್ ಡಿಸ್ಪ್ಲೇ ಹೊಂದಿದ್ದು, ಎಫ್ಇ ಸರಣಿಯಲ್ಲಿ ಇದುವರೆಗೆ ಬಳಸಿದ ಅತಿದೊಡ್ಡ ಡಿಸ್ಪ್ಲೇ ಆಗಿದೆ. 120Hz ವರೆಗಿನ ರಿಫ್ರೆಶ್ ದರವು ಸುಗಮವಾದ ಮತ್ತು ಅದ್ಭುತವಾದ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ.
ವಿಷನ್ ಬೂಸ್ಟರ್ ಫೀಚರ್ ಸೂರ್ಯನ ಬೆಳಕಿನಲ್ಲಿಯೂ ಸಹ ಸ್ಪಷ್ಟ ಮತ್ತು ಆರಾಮದಾಯಕ ಗೇಮಿಂಗ್ ಗೆ ಬಣ್ಣ ಮತ್ತು ಕಾಂಟ್ರಾಸ್ಟ್ ಅನ್ನು ಉತ್ತಮಗೊಳಿಸುತ್ತದೆ.
ಗ್ಯಾಲಕ್ಸಿ ಎಐ ಅನುಭವ
ಗ್ಯಾಲಕ್ಸಿ ಎಸ್24 ಎಫ್ಇ ಅದೇ ಸುಧಾರಿತ ಎಐ ಅನುಭವವನ್ನು ಗ್ಯಾಲಕ್ಸಿ ಎಸ್24 ಸರಣಿಯಂತೆಯೇ ಒದಗಿಸುತ್ತದೆ. ಕೆಲಸವನ್ನು ವರ್ಧಿಸಲು, ಸಂವಹನವನ್ನು ಸರಳಗೊಳಿಸಲು ಮತ್ತು ಕನೆಕ್ಟಿವಿಟಿಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಎಸ್24 ಎಫ್ಇನಲ್ಲಿ ಗ್ಯಾಲಕ್ಸಿ ಎಐ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಅವಕಾಶ ನೀಡುತ್ತದೆ:
ಗೂಗಲ್ ನೊಂದಿಗೆ ಕಾರ್ಯ ನಿರ್ವಹಿಸುವ ಸರ್ಕಲ್ ಟು ಸರ್ಚ್ ಫೀಚರ್ ಸರ್ಕಲ್ ಮತ್ತು ಹೋಮ್ ಬಟನ್ ಅನ್ನು ದೀರ್ಘವಾಗಿ ಒತ್ತುವ ಮೂಲಕ ತ್ವರಿತವಾಗಿ ನೀವು ಹುಡುಕಾಡುವ ವಿಚಾರದ ಫಲಿತಾಂಶಗಳನ್ನು ನೀಡುವ ಮೂಲಕ ಸುಲಭವಾಗಿ ಕುತೂಹಲವನ್ನು ಪೂರೈಸಲು ಉತ್ತರ ನೀಡುತ್ತದೆ.
ಇಂಟರ್ಪ್ರಿಟರ್ ಫೀಚರ್ ಆಫ್ಲೈನ್ ನಲ್ಲಿರುವಾಗಲೂ ಸಹ ವ್ಯಕ್ತಿಗತ ಸಂಭಾಷಣೆಗಳು, ಉಪನ್ಯಾಸಗಳು ಅಥವಾ ಯಾವುದೇ ರೀತಿಯ ಪ್ರೆಸೆಂಟೇಷನ್ ಗಳನ್ನು ತಕ್ಷಣ ಅನುವಾದಿಸುತ್ತದೆ.
ಲೈವ್ ಟ್ರಾನ್ಸ್ ಲೇಟ್ ಫೋನ್ ಕರೆಗಳಲ್ಲಿನ ಸಂವಹನ ಅಡೆತಡೆಗಳನ್ನು ತಡೆಯುತ್ತದೆ ಮತ್ತು ಇದೀಗ ಜನಪ್ರಿಯ ಮೂರನೇ ಸಂಸ್ಥೆಯ ಅಪ್ಲಿಕೇಶನ್ ಗಳಲ್ಲೂ ಅನುವಾದ ಅವಕಾಶ ಒದಗಿಸುತ್ತದೆ.
ಸ್ಯಾಮ್ ಸಂಗ್ ಕೀಬೋರ್ಡ್ ನಿಂದ ಕಂಪೋಸರ್ ಮೂಲಕ ಇಮೇಲ್ ಮತ್ತು ಇತರ ಸಾಮಾಜಿಕ ಮಾಧ್ಯಮ ಆಪ್ ಗಳಿಗೆ ಸರಳ ಕೀವರ್ಡ್ಗಳ ಆಧಾರದ ಮೇಲೆ ಸೂಚಿಸಲಾದ ಪಠ್ಯವನ್ನು ರಚಿಸುತ್ತದೆ.
ನೋಟ್ ಅಸಿಸ್ಟ್ ಟಿಪ್ಪಣಿ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಫಾರ್ಮ್ಯಾಟಿಂಗ್ ಮತ್ತು ಅನುವಾದವನ್ನು ಸ್ವಯಂಚಾಲಿತವಾಗಿ ಮಾಡುತ್ತದೆ. ಸ್ಯಾಮ್ ಸಂಗ್ ನೋಟ್ ಗಳಲ್ಲಿ ನೀವು ವಾಯ್ಸ್ ರೆಕಾರ್ಡಿಂಗ್ಗಳ ಟ್ರಾನ್ಸ್ ಕ್ರಿಪ್ಷನ್, ಅನುವಾದ ಮತ್ತು ಸಾರಾಂಶವನ್ನು ಪಡೆಯಬಹುದು. ಪಿಡಿಎಫ್ ಫೈಲ್ಗಳಲ್ಲಿನ ಪಠ್ಯಗಳನ್ನು ಪಿಡಿಎಫ್ ಓವರ್ಲೇ ಟ್ರಾನ್ಸ್ ಲೇಷನ್ ಮೂಲಕ ಅನುವಾದಿಸಬಹುದು.
ಸ್ಯಾಮ್ ಸಂಗ್ ಗ್ಯಾಲಕ್ಸಿ ವ್ಯವಸ್ಥೆ
ಗ್ಯಾಲಕ್ಸಿ ಎಸ್24 ಎಫ್ಇ ಅನ್ನು ಸ್ಯಾಮ್ ಸಂಗ್ ನ ವಿಸ್ತಾರವಾದ ಮೊಬೈಲ್ ಪರಿಸರ ವ್ಯವಸ್ಥೆಗೆ ಸಂಪರ್ಕಿಸಿದಾಗ ಗ್ಯಾಲಕ್ಸಿ ಎಐ ಒದಗಿಸುವ ಹೆಚ್ಚಿನ ಸಾಮರ್ಥ್ಯವು ಇನ್ನಷ್ಟು ಉಪಯುಕ್ತವಾಗುತ್ತದೆ. ವೇಗವಾಗಿ ಫೈಲ್ಗಳನ್ನು ವರ್ಗಾಯಿಸುತ್ತದೆ, ವಿಸ್ತೃತ ಡಿಸ್ ಪ್ಲೇ ಒದಗಿಸುತ್ತದೆ ಮತ್ತು ಅರ್ಥಗರ್ಭಿತ ಇನ್ಪುಟ್ಗಳ ಮೂಲಕ ಸಂಕೀರ್ಣ ಸೃಜನಶೀಲ ಸಂಗತಿಗಳನ್ನು ಸಲೀಸಾಗಿ ಕಾರ್ಯಗತಗೊಳಿಸುತ್ತದೆ. ಈ ಹೈಪರ್ ಕನೆಕ್ಟೆಡ್ ಸ್ಯಾಮ್ ಸಂಗ್ ಗ್ಯಾಲಕ್ಸಿ ಪರಿಸರ ವ್ಯವಸ್ಥೆಯಲ್ಲಿ, ಗ್ಯಾಲಕ್ಸಿ ಎಸ್24 ಎಫ್ಇ ಹೆಚ್ಚಿನ ಉತ್ಪಾದಕತೆ, ಸೃಜನಶೀಲತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಅನುಭವಗಳನ್ನು ಒದಗಿಸುತ್ತದೆ.
ಎಸ್ ಸರಣಿಯ ಹೊಸ ಪರಂಪರೆಯನ್ನು ನಿರ್ಮಿಸುವ ಮೂಲಕ, ಗ್ಯಾಲಕ್ಸಿ ಎಸ್24 ಎಫ್ಇ ಅನ್ನು ಬಲವಾದ ಭದ್ರತೆಯೊಂದಿಗೆ ನಿರ್ಮಿಸಲಾಗಿದೆ. ಸ್ಯಾಮ್ ಸಂಗ್ ಮಾಕ್ಸ್ ಗ್ಯಾಲಕ್ಸಿಯ ಬಹು-ಪದರದ ಭದ್ರತಾ ಪ್ಲಾಟ್ಫಾರ್ಮ್ ಬಹುಮುಖ್ಯ ಮಾಹಿತಿಯನ್ನು ರಕ್ಷಿಸುತ್ತದೆ ಮತ್ತು ಸಂಪೂರ್ಣವಾಗಿ ಸುರಕ್ಷಿತ ಹಾರ್ಡ್ವೇರ್, ನೈಜ ಸಮಯದ ರಿಸ್ಕ್ ಪತ್ತೆ ಮತ್ತು ಸಹಯೋಗದ ರಕ್ಷಣೆ ಮೂಲಕ ರಕ್ಷಿಸುತ್ತದೆ.
ಸುಸ್ಥಿರ ವಿನ್ಯಾಸದ ಎಸ್24 ಸರಣಿಯ ಸಂಪ್ರದಾಯದ ಮುಂದುವರಿಕೆಯಾಗಿ ಗ್ಯಾಲಕ್ಸಿ ಎಸ್24 ಎಫ್ಇ ಅನ್ನು ಗ್ರಹಕ್ಕೆ ಒಳಿತು ಮಾಡಲು ಕೊಡುಗೆ ನೀಡುವಂತೆ ವಿನ್ಯಾಸ ಮಾಡಲಾಗಿದೆ. ಇದು ಮರುಬಳಕೆಯ ಪ್ಲಾಸ್ಟಿಕ್ಗಳು, ಅಲ್ಯೂಮಿನಿಯಂ, ಗಾಜು ಮತ್ತು ಆಂತರಿಕ ಮತ್ತು ಬಾಹ್ಯ ಘಟಕಗಳಲ್ಲಿ ಅಪರೂಪದ ಭೂಮಿಯ ಅಂಶಗಳ ಬಳಕೆ ಒಳಗೊಂಡಂತೆ ವಿವಿಧ ರೀತಿಯ ಮರುಬಳಕೆಯ ವಸ್ತುಗಳನ್ನು ಒಳಗೊಂಡಿದೆ. ಇದು ಏಳು ಜನರೇಷನ ಗಳ ಓಎಸ್ ಅಪ್ ಡೇಟ್ ಗಳು ಮತ್ತು ಏಳು ವರ್ಷಗಳ ಭದ್ರತಾ ಅಪ್ ಡೇಟ್ ಗಳನ್ನು ಸಹ ಒಳಗೊಂಡಿದೆ ಮತ್ತು ಶೇ.100 ಮರುಬಳಕೆಯ ಕಾಗದದ ವಸ್ತುಗಳಿಂದ ಮಾಡಿದ ಪ್ಯಾಕೇಜಿಂಗ್ ಬಾಕ್ಸ್ ನಲ್ಲಿ ಬರುತ್ತದೆ.
ಲಭ್ಯತೆ ಮತ್ತು ಬೆಲೆ
ಗ್ಯಾಲಕ್ಸಿ ಎಸ್24 ಎಫ್ಇ ಮೂರು ಬ್ಲೂ, ಗ್ರ್ಯಾಫೈಟ್ ಮತ್ತು ಮಿಂಟ್ ಎಂಬ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಗ್ಯಾಲಕ್ಸಿ ಎಸ್24 ಎಫ್ಇ ಗಾಗಿ ಪ್ರೀ ಬುಕಿಂಗ್ ಸೆಪ್ಟೆಂಬರ್ 27, 2024 ರಿಂದ ಪ್ರಾರಂಭವಾಗಿದೆ. ಗ್ರಾಹಕರು Samsung.com ನಲ್ಲಿ ಮತ್ತು ಪ್ರಮುಖ ರಿಟೇಲ್ ಅಂಗಡಿಗಳಲ್ಲಿ ಗ್ಯಾಲಕ್ಸಿ ಎಸ್24 ಎಫ್ಇ ಅನ್ನು ಪ್ರೀ ಬುಕ್ ಮಾಡಬಹುದು.