ಬೆಂಗಳೂರು: ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಇಂದು ಭಾರತದಾದ್ಯಂತ 300 ಬ್ಲೂ ಸ್ಕ್ವೇರ್ ಶೋರೂಮ್ಗಳನ್ನು ಸ್ಥಾಪಿಸುವ ಮೂಲಕ ತನ್ನ ನೆಟ್ ವರ್ಕ್ ಅನ್ನು ವಿಸ್ತರಿಸಿಕೊಂಡು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಯಮಹಾ ಬ್ಲೂ ಥೀಮ್ನ ಅಡಿಯಲ್ಲಿ ಬಲವಾದ ನೆಟ್ವರ್ಕ್ ಅನ್ನು ನಿರ್ಮಿಸಲು ಮತ್ತು ಆ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ನೀಡಬಯಸುವ ಯಮಹಾದ ಬದ್ಧತೆಯನ್ನು ಈ ಯಶಸ್ಸು ಪ್ರತಿಬಿಂಬಿಸುತ್ತದೆ.
2018ರಲ್ಲಿ ‘ಕಾಲ್ ಆಫ್ ದಿ ಬ್ಲೂ’ ಬ್ರ್ಯಾಂಡ್ ಅಭಿಯಾನವನ್ನು ಆರಂಭಿಸಲಾಯಿತು. ಈ ಅಭಿಯಾನವು ಗ್ರಾಹಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ಮತ್ತು ಪ್ರೀಮಿಯಂ ಇಮೇಜ್ ಅನ್ನು ಒದಗಿಸುವ ಯಮಹಾದ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. 2019ರಲ್ಲಿ, ಯಮಹಾ ಈ ಅಭಿಯಾನದ ಭಾಗವಾಗಿ ಗ್ರಾಹಕರಿಗೆ ಅವರ ಎಲ್ಲಾ ಬೈಕಿಂಗ್ ಅಗತ್ಯಗಳಿಗೆ ಸಮಗ್ರ ಪರಿಹಾರವನ್ನು ನೀಡಲೆಂದು ಬ್ಲೂ ಸ್ಕ್ವೇರ್ ಶೋರೂಮ್ಗಳನ್ನು ಪ್ರಾರಂಭಿಸಿತು. ಈ ಹಲವು ವರ್ಷಗಳಲ್ಲಿ, ಈ ಪ್ರೀಮಿಯಂ ಔಟ್ಲೆಟ್ಗಳು ಗ್ರಾಹಕರಿಗೆ ಬ್ರ್ಯಾಂಡ್ನ ಸಂಸ್ಕೃತಿ ಮತ್ತು ಶ್ರೀಮಂತ ರೇಸಿಂಗ್ ಪರಂಪರೆಯನ್ನು ತಿಳಿಯುವ ಅಪೂರ್ವ ಸ್ಥಳಗಳಾಗಿ ಹೊರಹೊಮ್ಮಿವೆ.
ಇದೊಂದು ರಿಟೇಲ್ ಸ್ಥಳವಷ್ಟೇ ಆಗಿ ಉಳಿದಿಲ್ಲ. ಅದಕ್ಕೂ ಮೀರಿದ ಸ್ಥಳವಾಗಿದೆ. ಈ ಶೋರೂಮ್ಗಳು ಗ್ರಾಹಕರಿಗೆ ಯಮಹಾದ ಬ್ಲೂ ಸ್ಟ್ರೀಕ್ಸ್ ರೈಡರ್ ಸಮುದಾಯದ ಜೊತೆ ತೊಡಗಿಕೊಳ್ಳುವ, ಸಂವಾದ ಮಾಡುವ, ಒಂದೇ ಮನಸ್ಥಿತಿಯ ರೈಡಿಂಗ್ ಆಸಕ್ತರೊಂದಿಗೆ ಬೆರೆಯುವ ಅವಕಾಶ ಒದಗಿಸುತ್ತದೆ. “ಬ್ಲೂ” ಥೀಮ್, ಬ್ರ್ಯಾಂಡ್ನ ಹೆಮ್ಮೆಯ ರೇಸಿಂಗ್ ಪರಂಪರೆಯನ್ನು ಪ್ರತಿನಿಧಿಸುತ್ತದೆ ಮತ್ತು “ಸ್ಕ್ವೇರ್” ಎಂಬುದು ಯಮಹಾದ ಸ್ಪೋರ್ಟಿ ಮತ್ತು ಸ್ಟೈಲಿಶ್ ಶ್ರೇಣಿಯ ದ್ವಿಚಕ್ರ ವಾಹನಗಳ ಪ್ರದರ್ಶನದ ವೇದಿಕೆಯನ್ನು ಸಂಕೇತಿಸುತ್ತದೆ.
ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನೀಸ್ನ ಅಧ್ಯಕ್ಷರಾದ ಐಶಿನ್ ಚಿಹಾನಾ ಅವರು ಈ ಮಹತ್ವದ ಸಂದರ್ಭದಲ್ಲಿ, “ದಿ ಕಾಲ್ ಆಫ್ ದಿ ಬ್ಲೂ’ ಅಭಿಯಾನದ ಅಡಿಯಲ್ಲಿ ಮಹತ್ವದ ಮೈಲಿಗಲ್ಲನ್ನು ಯಶಸ್ವಿಯಾಗಿ ಸಾಧಿಸಿರುವುದನ್ನು ಘೋಷಿಸಲು ನನಗೆ ಅಪಾರ ಸಂತೋಷವಿದೆ. ಯಮಹಾ ಭಾರತದಾದ್ಯಂತ 300 ಬ್ಲೂ ಸ್ಕ್ವೇರ್ ಶೋರೂಮ್ಗಳನ್ನು ಸ್ಥಾಪಿಸುವ ಗಮನಾರ್ಹ ಸಾಧನೆ ಮಾಡಿದೆ. ಈ ಶೋರೂಮ್ಗಳು ಯಮಹಾದ ಗ್ರಾಹಕರಿಗೆ ತೃಪ್ತಿ ಮತ್ತು ನೆಮ್ಮದಿ ಒದಗಿಸುವ ನಮ್ಮ ಬದ್ಧತೆಯನ್ನು ಬಿಂಬಿಸುತ್ತವೆ. ಈ ಸಾಧನೆಯು ಮಾರಾಟ, ಸರ್ವೀಸ್ ಮತ್ತು ಗ್ರಾಹಕರಿಗೆ ಸಂತೋಷ ಒದಗಿಸುವಿಕೆಯಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುವ ನಮ್ಮ ದೃಷ್ಟಿಗೆ ಸಾಕ್ಷಿಯಾಗಿದೆ” ಎಂದು ಹೇಳಿದರು.
“ಯಮಹಾವನ್ನು ಶ್ರೀಮಂತ ರೇಸಿಂಗ್ ಪರಂಪರೆ ಹೊಂದಿರುವ ಜಾಗತಿಕ ಬ್ರಾಂಡ್ ಆಗಿ ಪರಿಚಯಿಸಲು ರಾಷ್ಟ್ರವ್ಯಾಪಿ ಬ್ಲೂ ಸ್ಕ್ವೇರ್ ಶೋರೂಮ್ಗಳನ್ನು ಸ್ಥಾಪಿಸಿರುವುದು ನಮ್ಮ ಕಾರ್ಯತಂತ್ರದ ಪ್ರಮುಖ ಅಂಶವಾಗಿದೆ. ಈ ಸಾಧನೆಯು ಬ್ಲೂ ಸ್ಕ್ವೇರ್ ಔಟ್ಲೆಟ್ಗಳ ವಿಸ್ತರಣೆಗೆ ಪ್ರೇರೇಪಣೆ ನೀಡುತ್ತದೆ ಎಂದು ನಮಗೆ ವಿಶ್ವಾಸವಿದೆ. ಭಾರತದಲ್ಲಿನ ಪ್ರತಿಯೊಬ್ಬ ಯಮಹಾ ಗ್ರಾಹಕರು ಯಮಹಾದಂತಹ ಜಾಗತಿಕವಾಗಿ ಹೆಸರು ಮಾಡಿದ ಬ್ರ್ಯಾಂಡ್ನಿಂದ ವಿಶಿಷ್ಟ ಅನುಭವವನ್ನು ಪಡೆಯುತ್ತಾರೆ” ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಯಮಹಾದ ಟ್ರ್ಯಾಕ್-ಓರಿಯೆಂಟೆಡ್ ಬೈಕ್ ಆದ ಆರ್3, ಸ್ಟ್ರೀಟ್ ಫೈಟರ್ ಎಂಟಿ-03 ಮತ್ತು ಮ್ಯಾಕ್ಸಿ-ಸ್ಪೋರ್ಟ್ಸ್ ಏರಾಕ್ಸ್ 155 ಸ್ಕೂಟರ್ ಅನ್ನು ಪ್ರತ್ಯೇಕವಾಗಿ ಬ್ಲೂ ಸ್ಕ್ವೇರ್ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಪ್ರೀಮಿಯಂ ಔಟ್ ಲೆಟ್ ಗಳು YZF-R15 V4 (155cc), YZF-R15S V3 (155cc), MT-15 V2 (155cc), FZS-Fi ವರ್ಷನ್ 4.0 (149cc), FZS-Fi ವರ್ಷನ್ 3.0 (149cc), FZ-Fi ವರ್ಷನ್ 3.0 (149cc), FZ-X (149cc) ನಂತಹ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್ (ಟಿಸಿಎಸ್) ಹೊಂದಿದ ಮೋಟಾರ್ ಸೈಕಲ್ ಗಳನ್ನು ಪ್ರದರ್ಶಿಸುತ್ತವೆ. ಯಮಹಾದ ಹೈಬ್ರಿಡ್ ತಂತ್ರಜ್ಞಾನವನ್ನು ಆಧರಿಸಿದ, ಹೆಚ್ಚಿನ ಇಂಧನ ದಕ್ಷತೆಯನ್ನು ಹೊಂದಿದೆ ಸ್ಕೂಟರ್ ಗಳಾದ Fascino 125 FI ಹೈಬ್ರಿಡ್ (125cc), Ray ZR ಹೈಬ್ರಿಡ್ 125 (125cc), Ray ZR ಸ್ಟ್ರೀಟ್ ರಾಲಿ 125 FI ಹೈಬ್ರಿಡ್ (125cc) ಗಳನ್ನೂ ಇಲ್ಲಿ ಪ್ರದರ್ಶನ, ಮಾರಾಟ ಮಾಡಲಾಗುತ್ತದೆ. ಹೆಚ್ಚುವರಿಯಾಗಿ, ಈ ಮಳಿಗೆಗಳು ಯಮಹಾದ ವಿಶೇಷ ಶ್ರೇಣಿಯ ಉಡುಪುಗಳು ಮತ್ತು ಪರಿಕರಗಳನ್ನು ಸಹ ಪ್ರದರ್ಶಿಸುತ್ತವೆ. ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿರುವ 300 ಬ್ಲೂ ಸ್ಕ್ವೇರ್ ಶೋರೂಮ್ಗಳಲ್ಲಿ, ಯಮಹಾ ದಕ್ಷಿಣ ಭಾರತದಲ್ಲಿ 129, ಪೂರ್ವ ಭಾಗದಲ್ಲಿ 81, ಪಶ್ಚಿಮ ಪ್ರದೇಶದಲ್ಲಿ 54 ಮತ್ತು ಉತ್ತರ ಭಾಗದಲ್ಲಿ 37 ಮಳಿಗೆಗಳನ್ನು ಹೊಂದಿದೆ.
ಯಮಹಾ ತನ್ನ ವೆಬ್ಸೈಟ್ನಲ್ಲಿ ಬ್ಲೂ ಸ್ಕ್ವೇರ್ ಶೋರೂಮ್ಗಳಿಗಾಗಿಯೇ ಒಂದು ಪುಟವನ್ನು ಮೀಸಲಿಟ್ಟಿದೆ. ಬ್ಲೂ ಸ್ಕ್ವೇರ್ ಶೋರೂಮ್ಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಗ್ರಾಹಕರು ಈ ಲಿಂಕ್ಗೆ ಭೇಟಿ ನೀಡಬಹುದು: https://www.yamaha-motor-india.com/yamaha-bluesquare.html.