ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ತಮ್ಮ ಗ್ಯಾಲಕ್ಸಿ ವಾಚ್ ಧರಿಸಿದ ವ್ಯಕ್ತಿಗಳಲ್ಲಿ ಅನಿಯಮಿತ ಎದೆಬಡಿತ ಕಂಡುಬಂದಾಗ ಸ್ಯಾಮ್ಸಂಗ್ ಹೆಲ್ತ್ ಮಾನಿಟರ್ ಆಪ್ ನಲ್ಲಿ ನೋಟಿಫಿಕೇಷನ್ ನೀಡುವ ಇರ್ ರೆಗ್ಯುಲರ್ ಹಾರ್ಟ್ ರಿದಮ್ ನೋಟಿಫಿಕೇಶನ್ (ಐಎಚ್ಆರ್ಎನ್) ಫೀಚರ್ ಅನ್ನು ಇಂದು ಬಿಡುಗಡೆ ಮಾಡಿದೆ. ಆಪ್ ನಲ್ಲಿ ಈಗಾಗಲೇ ಇರುವ ರಕ್ತದೊತ್ತಡ ಮತ್ತು ಎಲೆಕ್ಟ್ರೋಕಾರ್ಡಿಯೋಗ್ರಾಮ್ (ಇಸಿಜಿ) ಮಾನಿಟರಿಂಗ್ ಫೀಚರ್ ಗಳ ಜೊತೆ ಈ ಹೊಸ ಫೀಚರ್ ಅನ್ನು ಸಂಯೋಜಿಸಲಾಗಿದೆ. ಈ ಫೀಚರ್ ಹೃದಯದ ಹೃತ್ಕರ್ಣದ (ಏಟ್ರಿಯಲ್ ಫೈಬ್ರಿಲೇಷ್- ಎಎಫ್ಐಬಿ) ಕಂಪನವನ್ನು ಸೂಚಿಸುವ ಹೃದಯದ ಲಯವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ, ಆ ಮೂಲಕ ಗ್ಯಾಲಕ್ಸಿ ವಾಚ್ ಬಳಕೆದಾರರಿಗೆ ಅವರ ಹೃದಯದ ಆರೋಗ್ಯದ ಕುರಿತು ಸಂಪೂರ್ಣ ತಿಳುವಳಿಕೆ ನೀಡುತ್ತದೆ.
ಸ್ಯಾಮ್ಸಂಗ್ ಹೆಲ್ತ್ ಮಾನಿಟರ್ ಆಪ್ ನಲ್ಲಿ ಐಹೆಚ್ಆರ್ಎನ್ ಫೀಚರ್ ಅನ್ನು ಒಮ್ಮೆ ಆಕ್ಟಿವೇಟ್ ಮಾಡಿದರೆ ಅನಂತರ ಈ ಗ್ಯಾಲಕ್ಸಿ ವಾಚ್ನಲ್ಲಿರುವ ಬಯೋಆಕ್ಟಿವ್ ಸೆನ್ಸರ್ ಅನ್ನು ಬಳಸಿಕೊಂಡು ಹಿನ್ನೆಲೆಯಲ್ಲಿಯೇ ಅನಿಯಮಿತ ಹೃದಯ ಬಡಿತವನ್ನು ನಿರಂತರವಾಗಿ ಪರಿಶೀಲಿಸುತ್ತಾ ಇರುತ್ತದೆ. ಒಂದು ವೇಳೆ ನಿರ್ದಿಷ್ಟ ಸಂಖ್ಯೆಯ ಅನುಕ್ರಮ ಮಾಪನಗಳು ಅನಿಯಮಿತವಾಗಿದ್ದರೆ ಗ್ಯಾಲಕ್ಸಿ ವಾಚ್ ತಕ್ಷಣವೇ ಸಂಭಾವ್ಯ ಎಎಫ್ಐಬಿ ಚಟುವಟಿಕೆಯ ಕುರಿತು ಬಳಕೆದಾರರಿಗೆ ನೋಟಿಫಿಕೇಷನ್ ನೀಡುತ್ತದೆ. ಆಗ ಬಳಕೆದಾರರು ಹೃದಯದ ಆರೋಗ್ಯದ ಕುರಿತು ನಿಖರ ಮಾಹಿತಿ ಪಡೆಯಲು ವಾಚ್ ನಲ್ಲಿ ಇಸಿಜಿ ಫೀಚರ್ ಅನ್ನು ಬಳಸಬಹುದು. ಈಗಾಗಲೇ ಇರುವ ರಕ್ತದೊತ್ತಡ ಮತ್ತು ಹಾರ್ಟ್ ರೇಟ್ ಮಾನಿಟರಿಂಗ್ ಫೀಚರ್ ಜೊತೆಗೆ ಈ ಹೊಸ ಫೀಚರ್ ಬಳಕೆದಾರರಿಗೆ ಅವರ ಹೃದಯರಕ್ತನಾಳದ ಆರೋಗ್ಯದ ಕುರಿತು ಇನ್ನಷ್ಟು ವಿವರವಾದ ಒಳನೋಟವನ್ನು ನೀಡುತ್ತದೆ.
ಈ ಜಗತ್ತಿನಲ್ಲಿ ಹೃದಯರಕ್ತನಾಳದ ಕಾಯಿಲೆಯು ಮನುಷ್ಯರನ್ನು ಸಾವಿಗೆ ದೂಡುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಎಎಫ್ಐಬಿ ಎಂಬುದು ಒಂದು ರೀತಿಯ ಆರ್ರಿದಮಿಯಾ ಅಂದ್ರೆ ಎದೆಬಡಿತದ ಸಮಸ್ಯೆ ಆಗಿದ್ದು ಪಾರ್ಶ್ವವಾಯು, ಹೃದಯ ವೈಫಲ್ಯ ಮತ್ತು ಇತರ ಸಮಸ್ಯೆಗಳನ್ನು ಒಳಗೊಂಡಂತೆ ಪ್ರಮುಖ ಹೃದಯರಕ್ತನಾಳದ ಸಮಸ್ಯೆಗಳು ಉಂಟಾಗುವ ಎಚ್ಚರಿಕೆ ಸಂಕೇತವನ್ನು ನೀಡುತ್ತದೆ. ಜೊತೆಗೆ ಎಎಫ್ಐಬಿ ಸಮಸ್ಯೆಗಳು ಬಹಳ ಸಲ ಲಕ್ಷಣರಹಿತವಾಗಿರುತ್ತವೆ ಅಥವಾ ಯಾವುದೇ ಲಕ್ಷಣವನ್ನು ತೋರಿಸುವುದಿಲ್ಲ. ಲಕ್ಷಣಗಳೇ ಇಲ್ಲವಾಗಿರುವುದರಿಂದ ಜನರು ತಮಗೆ ಉಂಟಾಗಬಹುದಾದ ಅಪಾಯದ ಕುರಿತು ತಿಳಿದಿರುವುದಿಲ್ಲ.
ಐಹೆಚ್ಆರ್ಎನ್ ಫೀಚರ್ ಅನ್ನು ಅನಾವರಣಗೊಳಿಸುವ ಮೂಲಕ ಗ್ಯಾಲಕ್ಸಿ ವಾಚ್ ಬಳಕೆದಾರರು ಈಗ ತಮ್ಮ ಹೃದಯದ ಆರೋಗ್ಯದ ಪ್ರಮಖ ಅಂಶಗಳ ಮೇಲೆ ನಿಗಾ ಇಡಬಹುದು. ಸ್ಯಾಮ್ಸಂಗ್ನ ಬಯೋಆಕ್ಟಿವ್ ಸೆನ್ಸರ್ ಹೊಂದಿದ್ದು, ಇದು ಬಳಕೆದಾರರಿಗೆ ಆನ್ ಡಿಮ್ಯಾಂಡ್ ಇಸಿಜಿ ರೆಕಾರ್ಡಿಂಗ್ ಮತ್ತು ಅಸಹಜ ಹೆಚ್ಚು ಅಥವಾ ಕಡಿಮೆ ಹೃದಯ ಬಡಿತವನ್ನು ಪತ್ತೆಹಚ್ಚುವ ಎಚ್ ಆರ್ ಅಲರ್ಟ್ ಫಂಕ್ಷನ್ ಒಳಗೊಂಡು ತಮ್ಮ ಹೃದಯದ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಹಲವು ಟೂಲ್ ಗಳನ್ನು ಒದಗಿಸುತ್ತದೆ.
ಅನಿಯಮಿತ ಎದೆ ಬಡಿತದ ನೋಟಿಫಿಕೇಷನ್ ಫೀಚರ್ ಈಗ ಹೊಸದಾಗಿ ಬಿಡುಗಡೆಯಾದ ಗ್ಯಾಲಕ್ಸಿ ವಾಚ್7 ಅಲ್ಟ್ರಾ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ವಾಚ್6, ವಾಚ್5 ಮತ್ತು ವಾಚ್4 ಸರಣಿಯ ವಾಚ್ ಗಳಲ್ಲಿ ಲಭ್ಯವಿದೆ.
ಗ್ಯಾಲಕ್ಸಿ ವಾಚ್ ಬಳಕೆದಾರರು ತಮ್ಮ ಸಾಧನಗಳಲ್ಲಿ ಸ್ಯಾಮ್ಸಂಗ್ ಹೆಲ್ತ್ ಮಾನಿಟರ್ ಆಪ್ ಅನ್ನು ಗ್ಯಾಲಕ್ಸಿ ಸ್ಟೋರ್ ಮೂಲಕ ಅಪ್ ಡೇಟ್ ಮಾಡಿಕೊಳ್ಳಬಹುದು. ನಂತರ ಆಪ್ ನಲ್ಲಿನ ಸೆಟ್ಟಿಂಗ್ ನಲ್ಲಿ ಐಹೆಚ್ಆರ್ಎನ್ ಫೀಚರ್ ಅನ್ನು ಆಕ್ಟಿವೇಟ್ ಮಾಡಬಹುದು.