ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್ ಇಂದು ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಸ್ಮಾರ್ಟ್ಫೋನ್ಗಳ ಹೊಸ ದರವನ್ನು ಘೋಷಿಸಿದೆ. ತನ್ನ ಮೊಬೈಲ್ ಗಳಲ್ಲಿ ಸದಾ ಅತ್ಯುತ್ತಮ ಫೀಚರ್ ಗಳನ್ನೇ ಒದಗಿಸುತ್ತಾ ಬಂದಿರುವ ಸ್ಯಾಮ್ ಸಂಗ್ ಇದೀಗ ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಸ್ಮಾರ್ಟ್ ಫೋನ್ ಗಳಲ್ಲಿ ಎಐ ಫೀಚರ್ ಆಗಿರುವ ಸರ್ಕಲ್ ಟು ಸರ್ಚ್ ವಿತ್ ಗೂಗಲ್ ಅನ್ನು ಒದಗಿಸಿದೆ.
ಸ್ಯಾಮ್ ಸಂಗ್ ಇವುಗಳ ಮೇಲೆ ಸೀಮಿತ ಅವಧಿಯ ಆಫರ್ ಅನ್ನು ಘೋಷಿಸಿದ್ದು, ಗ್ಯಾಲಕ್ಸಿ ಎ55 5ಜಿ ಈಗ ಆರಂಭಿಕ ಬೆಲೆ ರೂ. 33999ರಲ್ಲಿ ಲಭ್ಯವಿರುತ್ತದೆ. ಗ್ಯಾಲಕ್ಸಿ ಎ35 5ಜಿ ಆರಂಭಿಕ ಬೆಲೆ ರೂ.25999 ಆಗಿದೆ.
ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಸ್ಮಾರ್ಟ್ ಫೋನ್ ಗಳು ಗೊರಿಲ್ಲಾ ಗ್ಲಾಸ್ ವಿಕ್ಟಸ್ +, ಎಐ ಕ್ಯಾಮೆರಾ ಫೀಚರ್ ಗಳು, ಸ್ಯಾಮ್ಸಂಗ್ ನಾಕ್ಸ್ ವಾಲ್ಟ್, ನಾಲ್ಕು ಓಎಸ್ ಅಪ್ ಡೇಟ್ ಗಳು ಮತ್ತು ಐದು ವರ್ಷಗಳ ಭದ್ರತಾ ಅಪ್ ಡೇಟ್ ಗಳನ್ನು ಒಳಗೊಂಡು ಹಲವಾರು ವಿಶಿಷ್ಟ ಫೀಚರ್ ಗಳನ್ನು ಒದಗಿಸುತ್ತವೆ.
ವಿಶೇಷವಾಗಿ ಗ್ರಾಹಕರು ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸುವಾಗ ಪ್ರಮುಖ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ಗಳನ್ನು ಬಳಸಿಕೊಂಡು ಗ್ಯಾಲಕ್ಸಿ ಎ55 5ಜಿ ಮೇಲೆ ರೂ. 6000 ಮತ್ತು ಗ್ಯಾಲಕ್ಸಿ ಎ35 5ಜಿ ಮೇಲೆ ರೂ. 5000ದಷ್ಟು ಆಕರ್ಷಕ ಬ್ಯಾಂಕ್ ಕ್ಯಾಶ್ಬ್ಯಾಕ್ ಪಡೆಯಬಹುದು. ಆರು ತಿಂಗಳವರೆಗಿನ ಇಎಂಐ ಸೌಲಭ್ಯ ಪಡೆಯು ಅವಕಾಶವೂ ಉಂಟು.
ಗ್ರಾಹಕರು ಗ್ಯಾಲಕ್ಸಿ ಎ55 5ಜಿ ಮೇಲೆ ರೂ. 6000 ಮತ್ತು ಗ್ಯಾಲಕ್ಸಿ ಎ35 5ಜಿ ಮೇಲೆ ರೂ. 5000 ವರೆಗಿನ ಅಪ್ಗ್ರೇಡ್ ಬೋನಸ್ ಅನ್ನು ಹೊಂದಬಹುದು. ಗ್ರಾಹಕರು ಒಂದೋ ಬ್ಯಾಂಕ್ ಕ್ಯಾಶ್ಬ್ಯಾಕ್ ಅಥವಾ ಅಪ್ಗ್ರೇಡ್ ಬೋನಸ್ ಅನ್ನು ಪಡೆಯಬಹುದು.
ಹೊಸ ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಸ್ಮಾರ್ಟ್ ಫೋನ್ ಗಳು ಸರ್ಕಲ್ ಟು ಸರ್ಚ್ ಫೀಚರ್ ಹೊಂದಿವೆ. ಸರ್ಚ್ ಮಾಡುವ ಸಾಂಪ್ರದಾಯಿಕ ವಿಧಾನಗಳನ್ನು ಈ ಫೀಚರ್ ಬದಲಿಸಿದ್ದು, ವಿಶೇಷ ಅನುಭವ ನೀಡುತ್ತದೆ. ಗೂಗಲ್ ಜೊತೆಗಿನ ಸಹಯೋಗದಿಂದ ಸರ್ಚ್ ನ ಉಪಯುಕ್ತತೆ ಮತ್ತು ಅರ್ಥಗರ್ಭಿತತೆಯನ್ನು ಹೆಚ್ಚಿಸಲು ನಿರಂತರವಾಗಿ ಶ್ರಮಿಸಿದ್ದರ ಫಲವಾಗಿ ಈ ಫೀಚರ್ ರೂಪಿಸಲಾಗಿದೆ. ಗ್ಯಾಲಕ್ಸಿ ಎಐಯ ಅತ್ಯಂತ ಜನಪ್ರಿಯ ಫೀಚರ್ ಗಳಲ್ಲಿ ಒಂದಾಗಿರುವ ಸರ್ಕಲ್ ಟು ಸರ್ಚ್ ಬಳಕೆದಾರರಿಗೆ ಪದಗಳ ಮೇಲೆ ಅಥವಾ ಟೆಕ್ಷ್ಟ್ ಮೇಲೆ ಬೆರಳಿಂದ ಸರ್ಕಲ್ ಮಾಡುವ ಮೂಲಕ ಆ ವಿಚಾರದ ಕುರಿತು ಹೆಚ್ಚು ತಿಳಿಯುವ ಅಥವಾ ಸರ್ಚ್ ಮಾಡುವ ಅವಕಾಶ ಒದಗಿಸುತ್ತದೆ. ಈ ಫೀಚರ್ ಬಳಸುವಾಗ ನೀವು ಆಪ್ ಅನ್ನು ಬದಲಿಸುವ ಅಗತ್ಯವೇ ಇಲ್ಲ. ಉದಾಹರಣೆಗೆ, ಬಳಕೆದಾರರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವಾದ ಯಾವುದೋ ಒಂದು ಪೋಸ್ಟ್ ನಲ್ಲಿ ಅವರಿಗೆ ಆಕರ್ಷಕವಾದ ಬಟ್ಟೆ ಕಾಣಿಸುತ್ತದೆ ಅಂತಿಟ್ಟುಕೊಳ್ಳಇ. ಆಗ ಅವರು ಅಂಥಾ ಬಟ್ಟೆಗಳನ್ನು ಆನ್ಲೈನ್ನಲ್ಲಿ ತಕ್ಷಣ ಹುಡುಕಲು ಬಯಸಿದರೆ ಸರ್ಕಲ್ ಟು ಸರ್ಚ್ ಫೀಚರ್ ಅನ್ನು ಬಳಸಿಕೊಂಡು ಆ ಬಟ್ಟೆಯ ಸುತ್ತಲೂ ಒಂದು ವೃತ್ತವನ್ನು ಎಳೆಯಬಹುದು. ಆಗ ಆ ಬಟ್ಟೆ ಕುರಿತ ಎಲ್ಲಾ ಮಾಹಿತಿ ಲಭ್ಯವಾಗುತ್ತದೆ. ಸರ್ಕಲ್ ಟು ಸರ್ಚ್ ಫೀಚರ್ ಗ್ಯಾಲಕ್ಸಿ ಎಸ್24 ಸರಣಿಯ ಆಕರ್ಷಕ ಫೀಚರ್ ಆಗಿತ್ತು. ಈ ಫೀಚರ್ ಸರ್ಕಲ್ ಹಾಕುವ ಮೂಲಕ ನೀವು ವಿಡಿಯೋದಲ್ಲಿರುವ ಮಾಹಿತಿ ತಿಳಿಯಲು ಅಥವಾ ಶಾಪಿಂಗ್ ವಸ್ತುಗಳನ್ನು ಗೊತ್ತು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಅದರಿಂದ ನಿಮ್ಮ ದೈನಂದಿನ ಕಾರ್ಯಗಳಿಗೆ ಸಾಕಷ್ಟ ಸಹಾಯ ಆಗುತ್ತದೆ.
ಅದ್ಭುತ ಕ್ಯಾಮೆರಾ
ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಗ್ಯಾಲಕ್ಸಿಯ ವಿಶೇಷತೆ ಎಂದರೆ ಅದರ ಕ್ಯಾಮೆರಾ. ಇವುಗಳ ಕ್ಯಾಮೆರಾಗಳು ಗ್ಯಾಲಕ್ಸಿಯ ವಿವಿಧ ಕ್ಯಾಮೆರಾ ಆವಿಷ್ಕಾರಗಳಿಂದ ರೂಪಿಸಿದ ಛಾಯಾಗ್ರಹಣ ಸಾಮರ್ಥ್ಯಗಳನ್ನು ಹೊಂದಿದೆ. ವಿಷನ್ ಬೂಸ್ಟರ್ ಜೊತೆಗೆ ಬಳಕೆದಾರರ ವಾತಾವರಣಕ್ಕೆ ಸೂಕ್ತವಾಗಿ ಸರಿಹೊಂದುವ ಅದ್ಭುತವಾದ 6.6-ಇಂಚಿನ ಡಿಸ್ ಪ್ಲೇ ಹೊಂದಿದೆ. ಗ್ಯಾಲಕ್ಸಿ ಎ55 5ಜಿ 50 ಎಂಪಿ ಮುಖ್ಯ ಕ್ಯಾಮೆರಾ ಜೊತೆಗೆ ಓಐಎಸ್ ಹಾಗೂ 12 ಎಂಪಿಯ ಅಲ್ಟ್ರಾ-ವೈಡ್ ಕ್ಯಾಮೆರಾ ಜೊತೆಗೆ ಬರುತ್ತದೆ, ಗ್ಯಾಲಕ್ಸಿ ಎ35 5ಜಿ 50 ಎಂಪಿಯ ಮುಖ್ಯ ಕ್ಯಾಮೆರಾದ ಜೊತೆಗೆ ಓಐಎಸ್ ಹಾಗೂ 8ಎಂಪಿ ಅಲ್ಟ್ರಾ-ವೈಡ್ ಕ್ಯಾಮೆರಾ ಜೊತೆಗೆ ಬರುತ್ತದೆ. ಎರಡೂ 5 ಎಂಪಿಯ ಮ್ಯಾಕ್ರೋ ಹೊಂದಿವೆ. ಗ್ಯಾಲಕ್ಸಿ ಎ55 5ಜಿ 32 ಎಂಪಿಯ ಫ್ರಂಟ್ ಕ್ಯಾಮೆರಾವನ್ನು ಹೊಂದಿದ್ದರೆ ಗ್ಯಾಲಕ್ಸಿ ಎ35 5ಜಿ 13 ಎಂಪಿಯ ಫ್ರಂಟ್ ಕ್ಯಾಮೆರಾ ಹೊಂದಿದೆ.
ವಿಡಿಐಎಸ್ + ಅಡಾಪ್ಟಿವ್ ವಿಡಿಐಎಸ್ (ವೀಡಿಯೊ ಡಿಜಿಟಲ್ ಇಮೇಜ್ ಸ್ಟೆಬಿಲೈಸೇಶನ್) ಮತ್ತು ಓಐಎಸ್ (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಕಾರಣಗಳಿಂದ ಈ ಫೋನ್ ಗಳು 4ಕೆ ಸ್ಟೆಬಿಲೈಸೇಷನ್ ನಂತಹ ಫೀಚರ್ ಹೊಂದಿವೆ. ಅದರಿಂದ ನೀವು ಪ್ರಯಾಣದಲ್ಲಿರುವಾಗ ಚಿತ್ರೀಕರಣ ಮಾಡಿದರೂ ಫೋಟೋಗಳು ಮತ್ತು ವೀಡಿಯೊಗಳು ಸ್ಪಷ್ಟವಾಗಿ ಮೂಡಿ ಬರುತ್ತವೆ. ಗ್ಯಾಲಕ್ಸಿ ಎ55 5ಜಿನಲ್ಲಿ ನೈಟೋಗ್ರಫಿ ಫೀಚರ್ ಅದ್ಭುತವಾಗಿದ್ದು, ಬೆಳಕು ಕಡಿಮೆ ಇದ್ದಾಗ ಸೊಗಸಾಗಿ ಛಾಯಾಗ್ರಹಣ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ಎಂಥಾ ಬೆಳಕಿನ ಪರಿಸ್ಥಿತಿಗಳಲ್ಲಿಯೂ ಅದ್ಭುತ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ಎರಡೂ ಸಾಧನಗಳು ಸೂಪರ್ ಅಮೋಲ್ಡ್ ಡಿಸ್ಪ್ಲೇ ಗಳನ್ನು ಹೊಂದಿದೆ. ಸಂಪೂರ್ಣ ಎಚ್ ಡಿ ಸ್ಪಷ್ಟತೆ ಹೊಂದಿದ್ದು, ಅದ್ಭುತ ವೀಕ್ಷಣಾ ಅನುಭವವನ್ನು ನೀಡುತ್ತದೆ.
ಎಲ್ಲಕ್ಕಿಂತ ಹೆಚ್ಚಾಗಿ ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಸ್ಮಾರ್ಟ್ಫೋನ್ಗಳು ಹೊಚ್ಚ ಹೊಸ ಎಐ ಆಝರಿತ ಕ್ಯಾಮೆರಾ ಫೀಚರ್ ಗಳನ್ನು ಹೊಂದಿದೆ. ಈ ಫೀಚರ್ ಗಳು ಬಳಕೆದಾರರು ಅದ್ಭುತ ಕಂಟೆಂಟ್ ಗಳನ್ನು ಸೃಷ್ಟಿಸುವಂತೆ ಮಾಡುತ್ತದೆ. ಬಳಕೆದಾರರು ಫೋಟೋ ಕ್ಲಿಕ್ ಮಾಡಿದ ನಂತರ ಫೋಟೋ ರೀಮಾಸ್ಟರ್ನಂತಹ ಎಐ- ಸೂಚಿಸಿದ ಎಡಿಟ್ ಆಯ್ಕೆಗಳನ್ನು ಬಳಸಿಕೊಂಡು ತಮ್ಮ ಫೋಟೋಗಳ ಅಂದ ಚಂದವನ್ನು ಹೆಚ್ಚಿಸಬಹುದಾಗಿದೆ. ಪೋರ್ಟ್ರೇಟ್ ಎಫೆಕ್ಟ್ ಫೀಚರ್ ಬಳಕೆದಾರರು ಏನನ್ನು ಅಪೇಕ್ಷಿಸುತ್ತಾರೋ ಅಧನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಆಬ್ಜೆಕ್ಟ್ ಎರೇಸರ್ ಫೀಚರ್ ಅನಗತ್ಯ ಫೋಟೋ- ಬಾಂಬರ್ಗಳು ಮತ್ತು ಪ್ರತಿಫಲನಗಳನ್ನು ತೊಡೆಯಲು ನೆರವಾಗುತ್ತದೆ. ಅತ್ಯಂತ ಜನಪ್ರಿಯವಾಗಿರುವ ಇಮೇಜ್ ಕ್ಲಿಪ್ಪರ್ ಫೀಚರ್ ಬಳಕೆದಾರರಿಗೆ ಯಾವುದೇ ಫೋಟೋದಲ್ಲಿರುವ ವಸ್ತುವನ್ನು ಕ್ಲಿಪ್ ಮಾಡಲು ಮತ್ತು ಅದನ್ನು ಸ್ಟಿಕ್ಕರ್ ಆಗಿ ಬಳಸಲು ಅನುವು ಮಾಡಿ ಕೊಡುತ್ತದೆ. ಅಡ್ಜಸ್ಟ್ ಸ್ಪೀಡ್ ಫೀಚರ್ ಅಧ್ಭುತವಾಗಿದ್ದು, ವೀಡಿಯೊಗಳ ವೇಗವನ್ನು ಬದಲಿಸಲು ಮತ್ತು ವೃತ್ತಿಪರ ಕ್ಯಾಮೆರಾಮನ್ ಗಳು ಚಿತ್ರೀಕರಿಸಿದ ಕ್ಲಿಪ್ಗಳಂತೆಯೇ ಅತ್ಯುತ್ತಮ ವಿಡಿಯೋಗಳನ್ನು ರಚಿಸಲು ಸಹಾಯ ಮಾಡುತ್ತದೆ.
ಅದ್ಭುತ ವಿನ್ಯಾಸ ಮತ್ತು ಬಾಳಿಕೆ
ಐಪಿ67 ರೇಟಿಂಗ್ ಅನ್ನು ಈ ಸ್ಮಾರ್ಟ್ ಫೋನ್ ಗಳು ಹೊಂದಿದ್ದು, ಇವುಗಳು 1 ಮೀಟರ್ ತಾಜಾ ನೀರಿನಲ್ಲಿ 30 ನಿಮಿಷಗಳವರೆಗೆ ಇದ್ದರೂ ಏನೂ ಆಗದಂತಹ ಸಾಮರ್ಥ್ಯವನ್ನು ಹೊಂದಿದೆ. ಧೂಳು ಮತ್ತು ಮರಳು ನಿರೋಧಕ ಗುಣವನ್ನು ಹೊಂದಿದ್ದು, ಇವುಗಳನ್ನು ಯಾವುದೇ ಪರಿಸ್ಥಿತಿಗೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಸ್ಮಾರ್ಟ್ ಫೋನ್ ಗಳಿಗೆ ಸ್ಲಿಪ್ ಆದಾಗ ಅಥವಾ ಬಿದ್ದಾಗ ರಕ್ಷಣೆ ಒದಗಿಸಲು ಮುಂಭಾಗ ಮತ್ತು ಹಿಂಭಾಗದಲ್ಲಿ ಗೊರಿಲ್ಲಾ ಗ್ಲಾಸ್ ವಿಕ್ಟಸ್ + ಬಳಸಿಕೊಂಡು ವಿನ್ಯಾಸ ಮಾಡಲಾಗಿದೆ.
ಅದ್ಭುತ ಕಾರ್ಯ ನಿರ್ವಹಣೆ
4ಎನ್ಎಂ ಪ್ರೊಸೆಸ್ ಟೆಕ್ನಾಲಜಿಯಲ್ಲಿ ನಿರ್ಮಿಸಲಾದ ಹೊಚ್ಚ ಹೊಸ ಎಕ್ಸಿನಾಸ್ 1480 ಪ್ರೊಸೆಸರ್ ಅನ್ನು ಗ್ಯಾಲಕ್ಸಿ ಎ55 5ಜಿ ಹೊಂದಿದೆ. ಗ್ಯಾಲಕ್ಸಿ ಎ35 5ಜಿ ಫೋನನ್ನು 5ಎನ್ಎಂ ಪ್ರೊಸೆಸ್ ಟೆಕ್ನಾಲಜಿಯಲ್ಲಿ ನಿರ್ಮಿಸಲಾಗಿರುವ ಎಕ್ಸಿನಾಸ್ 1380 ಪ್ರೊಸೆಸರ್ಗೆ ಅಪ್ಗ್ರೇಡ್ ಮಾಡಲಾಗಿದೆ. ಈ ಶಕ್ತಿಶಾಲಿ ಸ್ಮಾರ್ಟ್ಫೋನ್ಗಳು ಹಲವಾರು ಎನ್ ಪಿ ಯು, ಜಿಪಿಯು ಮತ್ತು ಸಿಪಿಯು ಅಪ್ಗ್ರೇಡ್ಗಳ ಜೊತೆಗೆ 70%+ ದೊಡ್ಡ ಕೂಲಿಂಗ್ ಚೇಂಬರ್ ಹೊಂದಿದ್ದು, ಅದರಿಂದಾಗಿ ನೀವು ಮಲ್ಟಿ ಟಾಸ್ಕ್ ಮಾಡುವಾಗ ಆಗಲಿ, ಗೇಮ್ ಆಡುತ್ತಿರುವಾಗ ಆಗಲಿ ಉತ್ತಮ ಕಾರ್ಯ ನಿರ್ವಹಣೆ ನೀಡುತ್ತದೆ.
ಅದ್ಭುತ ಸುರಕ್ಷತೆ
ಪ್ರಮುಖ ಗ್ಯಾಲಕ್ಸಿ ಸಾಧನಗಳಲ್ಲಿ ಇದ್ದ ಸ್ಯಾಮ್ ಸಂಗ್ ನ ಅತ್ಯಂತ ನವೀನ ಭದ್ರತಾ ಫೀಚರ್ ಗಳಲ್ಲಿ ಒಂದಾದ ಸ್ಯಾಮ್ ಸಂಗ್ ನಾಕ್ಸ್ ವಾಲ್ಟ್ ಅನ್ನು ಇದೀಗ ಗ್ಯಾಲಕ್ಸಿ ಎ ಸರಣಿಯ ಬಳಕೆದಾರರಿಗೆ ಮೊತ್ತ ಮೊದಲ ಬಾರಿಗೆ ಪರಿಚಯಿಸಲಾಗಿದ್ದು, ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಈ ಫೀಚರ್ ಲಭ್ಯವಿದೆ. ಈ ಹಾರ್ಡ್ವೇರ್- ಆಧಾರಿತ ಮತ್ತು ಟ್ಯಾಂಪರ್-ನಿರೋಧಕ ಭದ್ರತಾ ಫೀಚರ್ ಸಿಸ್ಟಮ್ನ ಮುಖ್ಯ ಪ್ರೊಸೆಸರ್ ಮತ್ತು ಮೆಮೊರಿಯಿಂದ ಭೌತಿಕವಾಗಿ ಪ್ರತ್ಯೇಕವಾಗಿ ಸುರಕ್ಷಿತ ಪರಿಸರವನ್ನು ನಿರ್ಮಿಸುವ ಮೂಲಕ ಹಾರ್ಡ್ವೇರ್ ಮತ್ತು ಸಾಫ್ಟ್ ವೇರ್ ದಾಳಿಗಳ ವಿರುದ್ಧ ಸಮಗ್ರ ರಕ್ಷಣೆ ನೀಡುತ್ತದೆ. ಪಿನ್ ಕೋಡ್ಗಳು, ಪಾಸ್ವರ್ಡ್ಗಳು ಮತ್ತು ಪ್ಯಾಟರ್ನ್ಗಳಂತಹ ಲಾಕ್ ಸ್ಕ್ರೀನ್ ಕ್ರೆಡೆನ್ಷಿಯಲ್ ಗಳು ಒಳಗೊಂಡಂತೆ ಸಾಧನದಲ್ಲಿನ ಅತ್ಯಂತ ಮುಖ್ಯ ಡೇಟಾವನ್ನು ರಕ್ಷಿಸಲು ಇದು ಸಹಾಯ ಮಾಡುತ್ತದೆ.
ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಸ್ಮಾರ್ಟ್ಫೋನ್ಗಳು ಸುರಕ್ಷತೆಗಾಗಿ ಇನ್ನೂ ಅನೇಕ ಫೀಚರ್ ಗಳನ್ನು ಹೊಂದಿದೆ. ಅದರಲ್ಲಿ ಒಂದು ಆಟೋ ಬ್ಲಾಕರ್. ಇದನ್ನು ಸ್ವಿಚ್ ಆನ್ ಮಾಡಿದಾಗ ಅನಧಿಕೃತ ಮೂಲಗಳಿಂದ ಆಪ್ ಇನ್ಸ್ಟಾಲ್ ಆಗುವುದನ್ನು ತಪ್ಪಿಸಬಹುದಾಗಿದೆ. ಸಂಭಾವ್ಯ ಮಾಲ್ವೇರ್ ಅನ್ನು ಸ್ಕ್ಯಾನ್ ಮಾಡಲು ಆಪ್ ಸೆಕ್ಯುರಿಟಿ ಚೆಕ್ ಮಾಡಲು ಅನುವು ಮಾಡಿಕೊಡುತ್ತದೆ. ಯು ಎಸ್ ಬಿ ಕೇಬಲ್ ಬಳಸಿದಾಗ ನಿಮಗೆ ಬರಬಹುದಾದ ದುರುದ್ದೇಶಪೂರಿತ ಆಜ್ಞೆಗಳು ಮತ್ತು ಸಾಫ್ಟ್ ವೇರ್ ಇನ್ ಸ್ಟಾಲೇಷನ್ ಅನ್ನು ಅಟೋ ಬ್ಲಾಕರ್ ಮೂಲಕ ನಿರ್ಬಂಧಿಸಬಹುದಾಗಿದೆ.
ಗ್ಯಾಲಕ್ಸಿ ಎ55 5ಜಿ ಮತ್ತು ಗ್ಯಾಲಕ್ಸಿ ಎ35 5ಜಿ ಸಾಧನಗಳು Samsung.com, ಸ್ಯಾಮ್ ಸಂಗ್ ಮಳಿಗೆಗಳು ಮತ್ತು ಇತರ ಆನ್ಲೈನ್ ಪ್ಲಾಟ್ಫಾರ್ಮ್ಗಳಾದ್ಯಂತ ಖರೀದಿಸಲು ಲಭ್ಯವಿದೆ. ಗ್ಯಾಲಕ್ಸಿ ಎ35 5ಜಿ ಆಸಮ್ ಲೈಲಾಕ್, ಆಸಮ್ ಐಸ್ ಬ್ಲೂ ಮತ್ತು ಆಸಮ್ ನೇವಿ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಗ್ಯಾಲಕ್ಸಿ ಎ55 5ಜಿ ಆಸಮ್ ಐಸ್ ಬ್ಲೂ ಮತ್ತು ಆಸಮ್ ನೇವಿ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ.