ಪ್ರತಿಯೊಬ್ಬರ ಮನೆಯಲ್ಲೂ ಪುಸ್ತಕಗಳನ್ನು ಓದುವ ಹವ್ಯಾಸವಿದ್ದರೆ ಸಾಹಿತ್ಯದ ಬೆಳವಣಿಗೆಯೊಂದಿಗೆ ಜ್ಞಾನ ಭಂಡಾರದ ವೃದ್ಧಿಯೂ ನಮ್ಮದಾಗುತ್ತದೆ.
ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಅಪಾರವಾದ ಜ್ಞಾನದ ಅಗತ್ಯವಿದೆ. ಅಂತಹ ಜ್ಞಾನವು ಓದುವಿಕೆಯಿಂದ ಬರುವುದು, ಉತ್ತಮ ಓದುವ ಕೌಶಲ್ಯ ವ್ಯೆಕ್ತಿಯ ಶೈಕ್ಷಣಿಕ ಜ್ಞಾನ ಹಾಗೂ ದೈನಂದಿನ ಜೀವನದ ಅಗತ್ಯತೆಗಳನ್ನು ತಿಳಿಸಿಕೊಡುವುದು. ಓದುವ ಹವ್ಯಾಸ ಅಥವಾ ಆಸಕ್ತಿಯು ವ್ಯಕ್ತಿಗೆ ಚಿಕ್ಕ ವಯಸ್ಸಿನಿಂದಲೇ ಬರಬೇಕು. ವ್ಯಕ್ತಿ ಬೆಳೆದಂತೆ ಬೇರೆ ಬೇರೆ ವಿಷಯಗಳ ಕಡೆಗೆ ಆಸಕ್ತಿಯನ್ನು ಪಡೆದುಕೊಳ್ಳುತ್ತಾ ಹೋಗುತ್ತಾನೆ. ಹಾಗಾಗಿ ಅವರು ಸಮಾಜ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತೆರೆದುಕೊಳ್ಳುವಾಗ ಓದುವ ಹವ್ಯಾಸವನ್ನು ಬೆಳೆಸಬೇಕು.
ಪುಸ್ತಕ ನಮಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತದೆ ಹೆಚ್ಚು ಹೆಚ್ಚು ಓದಿದಂತೆ ಹಾಗೆ ಸಾಕಷ್ಟು ಶಬ್ದಕೋಶಗಳ ಭಂಡಾರ ನಮ್ಮ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ವಿಶೇಷ ಲೇಖನ ಹಾಗೂ ಪುಸ್ತಕಗಳನ್ನು ಓದುವುದರಿಂದ ಮಕ್ಕಳು ತಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ಹಾಗೂ ಜಗತ್ತಿನ ಅಗುಹೋಗುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಅದು ಜೀವನದ ಸಂಸ್ಕೃತಿಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡುವುದು. ಹಾಗೇ ಅವರಲ್ಲಿ ಪ್ರಶ್ನೆಯನ್ನು ಕೇಳುವ ಹಾಗೂ ಉತ್ತರವನ್ನು ಹುಡುಕುವ ಕೌಶಲ್ಯವನ್ನು ಪ್ರೇರೇಪಿಸುವುದು.
ಪುಸ್ತಕದಿಂದ ಪಡೆದುಕೊಳ್ಳುವ ಜ್ಞಾನದ ಪರಿಣಾಮವಾಗಿ ಸಮಾಜದಲ್ಲಿ ವ್ಯಕ್ತಿಯನ್ನು ಗುರುತಿಸುವುದು ಹಾಗೂ ಅವರನ್ನು ಗೌರವಿಸುವ ಉತ್ತಮ ಸ್ವಾಭಾವಗಳನ್ನು ಅಳವಡಿಸಿಕೊಳ್ಳಲು ಉಪಯುಕ್ತವಾಗಿದೆ.