ಎಲ್ಲಾರು ಕ್ಷೇಮವೇ? ನಿಮ್ಮ ಕ್ಷೇಮಕ್ಕೆ ಪತ್ರ ಬರೆ ಅನ್ನು ಕಾಲಾ ಹೋತ್ರಿಯಿಗ ಇನ್ನ ಮುಂದ ಏನಿದ್ರು ವಾಟ್ಸಪ್ ಲಾಸ್ಟ ಸೀನ್ ನೋಡಿ ಮನಷ್ಯಾ ಆರಾಮ ಇದ್ದಾನೋ ಅಲ್ಲಾ ಜೀವಂತ ಇದ್ದಾನೋ ಇಲ್ಲೋ ಅಂತ ತಿಳಕೋಳ್ಳು ಕಾಲ ಬಂದದ್ರಿ. ಹಂತಾದ್ರಾಗ ಇವೇನ್ರಿ ಬರೆ ನೋಡಿದ್ರ ಲವ್ ಆಗ್ತದ ಅಂತ ಬರದಾನ ಅಂತಿರೇನು? ಅದು ನಮಗ ನಿಮಗ ಗೊತ್ತ ಆಗೋದಿಲ್ಲರಿ ಯಾರ ಪ್ರೀತಿನ್ಯಾಗ ಬಿದ್ದಾರ ನೋಡ್ರಿ ಅವರಿಗೆ ಅಷ್ಟ ಅದು ಗೊತ್ತ ಆಗ್ತದ.
ನಂಗ ಒಂದ ತಿಳಿಯೋದಿಲ್ಲಾ ಈ ಪ್ರೀತಿ ಯಾರ ಮಾಡತಿರತಾರಲಾ ಅವರನ್ನ ಯಾವಾಗು ಬಿದ್ದಾವರು ಬಿದ್ದಾವರು ಅಂತ ಯಾಕ ಕರಿತಾರ ಅಂತ? ನಿಮಗೇನಾರೆ ಗೋತ್ತ ಇದ್ದರ ನಂಗು ಸ್ವಲ್ಪ ಹೇಳ್ರಿ ಮತ್ತ ನಾನು ನಿಮ್ಮ ಹಂತಾವ್ರ ಜೋಡಿ ಹತ್ತಿ ಶಾಣ್ಯಾ ಆಗತೇನಿ. ನಂಗ ತಿಳದಿದ್ದ ಪ್ರಕಾರ ಪ್ರೀತಿ ಅನ್ನೋ ಸಮುದ್ರದಾಗ ಅವರಿಬ್ಬರೂ ಬಿದ್ದರು ಅದಕ್ಕ ಅವರನ್ನ ಪ್ರೀತಿನ್ಯಾಗ ಬಿದ್ದಾವರು ಅಂತ ಅಂತಾರ ಅನಸ್ತದ. ನಿನ್ನ ನೀವ ಸಮುದ್ರದಾಗ ಬೀಳತೀರೊ ,ನದ್ಯಾಗ ಬೀಳತಿರೋ, ಕಡಿಕ ಯಲ್ಲಾ ಕೂಡಿ ಬಾವಿನ್ಯಾಗ ಬಿಳತಿರೋ ಅದು ನಿಮ್ಮದ ನಿಮಗ ಬಿಟ್ಟಿದ್ದು. ಆದ್ರ ಒಂದ ಅಂತಿ ಖರೆ ನಾ ಏನಾರೆ ಬಿದ್ದೆ ಅಂದ್ರ ಏಳುದ ಮಾತ್ರ ಭಾಳ ತ್ರಾಸ ಆಗ್ತದ. ಅದಕ್ಕ ನಾ ಎಲ್ಲೂ ಬಿಳಲಿಕ್ಕೆ ಹೋಗುದಿಲ್ಲಾ.
ನಾ ಏನ ಹೆಡ್ಡಿಂಗ್ ಬರದೇನಿ ಆ ಹಾಡು ನೀವೆಲ್ಲಾ ಕೇಳಿರಿ ಅನ್ಕೋತೇನಿ ಆ ಹಾಡಿ ಅಕ್ಷರಶಃ ಅರ್ಥಾ ನಂಗೂ ತಿಳದಿರಲಿಲ್ಲಾ ಆದ್ರ ಮೊನ್ನೆ ನಮ್ಮ ದೋಸ್ತ ಒಬ್ಬಾವ ಅವಂದು ಮತ್ತ ಅವರ ಆಗೋ ಮನ್ಯಾವರ ಬಗ್ಗೆ ಸುದ್ದಿ ಹೇಳಿಕತ್ತಿದ್ದಾ ಅದನ್ನ ಕೇಳಕೋತ ಸುಮ್ಮಿದ್ದೆ ಕಡಿಕ ಅವ ಹೇಳಿದ್ದ ಕೇಳಿದ ಮ್ಯಾಲೆ ಖರೇ ನಂಗ ಈ ಹಾಡಿನ ಅರ್ಥಾಗೊತ್ತಾತು. ಸುಮ್ನ ಬರೆ ನೋಡಿದ್ರನು ಕೆಲವೊಂದ ಸಲಾ ಲವ್ ಆಗ್ತದ ಅಂತ. ಇನ್ನ ಆ ಕಥಿಯೇನು ಅಂತ ಕೇಳ ಬ್ಯಾಡ್ರಿ. ಈ ವಾರ ಭಾಳ ಮಂದಿ ನಿಮ್ಮ ದೋಸ್ತ್ರಿಗೆ ಈ ಲೇಖನ ಬಗ್ಗೆ ಹೇಳ್ರಿ ಅಂದ್ರ ಅಷ್ಟ ಮುಂದಿನ ವಾರ ನಾ ನನ್ನ ದೋಸ್ತನ ಕಥಿ ಹೇಳತೇನಿ ಇಲ್ಲಾ ಅಂದ್ರ ನಾ ಕಥಿ ಅದು ಹೇಳುದಿಲ್ಲಾ ನೀವು ಕೇಳಿಕ್ಕೂ ಹೋಗಬ್ಯಾಡ್ರಿ.
ಈಗ ಹೆಂಗ ಆಗೇದ ಅಂದ್ರ ಬರೆ ನೀವ ಒಬ್ಬರನ್ನ ಭಾಳ ಸಲಾ ನೋಡಿದ್ರಿ ಅಂತ ಇಟ್ಕೋರಿ ಅವರು ನಿಮ್ಮನ್ನ ನೋಡತಾರೋ ಇಲ್ಲೋ ಅದು ಮುಂದಿನ ಮಾತು. ಆದ್ರ ಆಜು ಬಾಜುಕಿನಾವರ ಇರ್ತಾರ ನೋಡ್ರಿ ಅವರು ಹಿಂತಾ ಟೈಮನ್ಯಾಗ ಕೈಯಾಗ ಕಡ್ಡಿ ಹಿಡಕೊಂಡೆ ಕುತ್ತಿರ್ತಾರ ನೋಡ್ರಿ.ಇನ್ನ ನಿಮ್ಮ ಮೈಯ್ಯಾಗ ಕರೆಂಟ್ ಹತ್ತಿರೂದಿಲ್ಲಾ ಅವರು already ನಿಮ್ಮ ಹೆಸ್ರಲೇ ದೀಪಾವಳಿ ಮಾಡತಿರ್ತಾರ ಅವರು ಹಂಗ ನಿಮ್ಮ ಹೆಸ್ರಲೇ ದೀಪಾವಳಿ ಈಗ ಮಾಡತಾರ ಅಂತ ಮುಂದ ಒಂದ ದಿನಾ ನಿಮದೂ ಅಳ್ಯಾತನಾ ಆಗ್ತದ ಇಲ್ಲಾಂದ್ರ ನಮ್ಮ ಹಂತಾವ್ರ ಮಾರಿಗೆ ಎಂದ ಅಳ್ಯಾತನಾ ಆಗೋದೋ ದೇವರಿಗೆ ಗೊತ್ತು.
ಈಗಿನ ಕಾಲೇಜಿನ ಹುಡಗೋರ ಬಿಡ್ರಿ ಸಣ್ಣ ಸಣ್ಣ ಸಾಲಿಗೆ ಹುಡಗೋರು ಪ್ರೀತಿನ್ಯಾಗ ಬಿದ್ದಿರ್ತಾವ ನೋಡ್ರಿ. ನಮ್ಮ ಟೈಮಿನ್ಯಾಗ ನಾವ ನಮ್ಮ ಸಾಲ್ಯಾಗಿನ ಹುಡಗ್ಯಾರ ಜೋಡಿ ಮಾತಾಡ್ಲಿಕ್ಕೆ ಎಷ್ಟ ನಾಚ್ಕೋತಿದ್ವಿ. ಇನ್ನೊಂದ ಹೇಳಬೇಕಂದ್ರ ಅವರೆಲ್ಲಾ ನಮ್ಮ ಕಡೆ ತಿರಗಿನೂ ನೋಡತಿರಲಿಲ್ಲಾ ಆ ಮಾತು ಬ್ಯಾರೆ.
ಹಿಂಗ ನಾ ಹೇಳಿನಿ ಅಂತ ಯಾರ ಯಾರನ್ನಾರೆ ನೋಡಿಕೋತ ಕುಡಬ್ಯಾಡ್ರಿ ಲವ್ ಆಗೋದ ಹೋಗ್ಲಿ ಅವ್ರ ಒಂದ ಕೊಟ್ರ ಮಾರಿ ಹಣಮಪ್ಪ ಆಗ್ತದ. ಅದಕ್ಕ ಹಂಗ ಹಣಮಪ್ಪ ಆಗಲಿಕ್ಕೆ ಹೋಗಬ್ಯಾಡ್ರಿ ಯಾಕಂದ್ರ ಅವನು ಲಗ್ನಾ ಆಗಿಲ್ಲ ನಿಮ್ಮ ಬಾಳೆನೂ ಹಂಗ ಆಗೋದ ಬ್ಯಾಡ ನೋಡ್ರಿ ಅದಕ್ಕ, ನೋಡೋದ ಇತ್ತು ಅಂತ್ರ ಒಬ್ಬರನ್ನ ನೋಡ್ರಿ ಅವರ ಜೋಡಿನ ಕಡಿತಾನಾ ಇರ್ರಿ ಅದನ್ನ ಬಿಟ್ಟ ಎಲ್ಲಾರನೂ ನೋಡತೇನಿ ಅಂದ್ರ ಅದು ಇಲ್ಲಾ ಇದುಯಿಲ್ಲ ಕಡಿಕ ಹಣಮಪ್ಪ ಆಗತ್ತೀರಿ ಹಂಗ ಮಾಡ್ಕೋಬ್ಯಾಡ್ರಿ ಯಾಕಂದ್ರ ತಿರಿಗಿ ನಮ್ಮ ಸಾಲಿ ಹುಡಗ್ಯಾರಿಗೆ ಲಗ್ನಾಆಗಿ ಮಕ್ಕಳೂ ಆದು ನೀವ ಹಿಂಗ ಹ್ಯಾ ಮಾಡಿ ಇವೇನೋ ಬರದಾನ ನೋಡಿದ್ರ ಲವ್ ಆಗತ್ದ ಅಂತ ಹಂಗ ನೋಡಕೋತ ಕುಡಬ್ಯಾಡ್ರಿ ಸ್ವಲ್ಪ ಕೈ ಕಾಲ ಬಡಿರಿ ಅಂದ್ರ ದಡಾ ಸೇರತಿರಿ ಅಲ್ಲಾ ಅಂದ್ರ ಹೇಳಿದೆ ಲಾ ಬಿದ್ದಾವರು ಅಂತಾರ ಅಂತ ಹಂಗ ಆಗ್ತದ ಮತ್ತ ಪರಿಸ್ಥಿತಿ ಅದಕ್ಕ ಸ್ವಲ್ಪ ವಿಚಾರ ಮಾಡ್ರಿ. ಈ ವಾರಕ್ಕ ಇಷ್ಟ ಸಾಕು ಮತ್ತ ಮುಂದಿನವಾರ ಹೊಸ ಕಥಿತೊಗೊಂಡ ಬರತೇನಿ. ಇನ್ನ ನನ್ನ ದೋಸ್ತನ ಕಥಿ ಕೇಳಬೇಕು ಅನ್ನೋ ಆಶಾ ನಿಮಗಿತ್ತು ಅಂತ್ರ ಈ ವಾರ ಜಾಸ್ತಿ ಮಂದಿನ ಕಡೆ ಈ ಲೇಖನಾ ಓದಲ್ಲಿಕ್ಕೆ ಹೇಳ್ರಿ ಅಂದ್ರ ಅಷ್ಟ ಮುಂದಿನ ವಾರ ಕಥಿ ಹೇಳತೇನಿ
ಮುಂದವರಿತದ……..