ಒಂದು ಕಾಲದಲ್ಲಿ ಬಹಳ ಸುಭವಾಗಿ ಕಾಣಸಿಗುವ ಪಕ್ಷಿ ಪರಿವಾಳ. ಹಳೆಯ ಕಟ್ಟಡಗಳಲ್ಲಿ, ದವಸ ದಾನ್ಯಗಳ ಗೋಡಂ ಹತ್ತಿರ ಹೀಗೆ ತಮ್ಮಗೆ ಆಹಾರ ಸಿಗುವಲ್ಲಿ ಮತ್ತು ಸುರಕ್ಷಿತವಾದ ಎತ್ತರದ ಗೋಡೆಯ ಸಂದುಗಳಲ್ಲಿ ವಾಸಿಸುತ್ತದೆ. ಪಾರಿವಾಳಗಳನ್ನು ವಾಸ್ತವವಾಗಿ ಅನೇಕ ವರ್ಷಗಳ ಹಿಂದೆ ಸಾಕಲಾಗುತ್ತಿತ್ತು ಎಂಬ ಅಂಸವನ್ನು ಮರೆಯುವಮತಿಲ್ಲ. ಮೊದಲಿನಿಂದಲೂ ಪಾರಿವಾಳಗಳನ್ನು ನಂಬಲಾಗದಷ್ಟು ಸ್ಮಾರ್ಟ್ ಮತ್ತು ಪ್ರತಿಭಾವಂತ ಜಾತಿ ಎಂದು ಪರಿಗಣಿಸಲಾಗಿದೆ.
ಧಾರ್ಮಿಕ ಮಹತ್ವ
ಪಾರಿವಾಳಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ಮಹತ್ವಾಗಿ ಉಲ್ಲೇಖಿಸಲಾಗಿದೆ. ಕ್ರಿಶ್ಚಿಯನ್ ಧರ್ಮ, ಯಹೂದಿ ಧರ್ಮ, ಇಸ್ಲಾಂ ಧರ್ಮ, ಸಿಖ್ ಧರ್ಮ ಮತ್ತು ಹಿಂದೂ ಧರ್ಮ ಸೇರಿದಂತೆ ಧರ್ಮಗಳಲ್ಲಿ ಸಾಂಕೇತಿಕ ಮಹತ್ವವನ್ನು ನೀಡಲಾಗಿದೆ. ಸಾಕಿದ ಪಾರಿವಾಳಕ್ಕೆ ಸಂಬಂಧಿಸಿದ ಧಾರ್ಮಿಕ ಪ್ರಾಮುಖ್ಯತೆಯ ಮೊದಲ ಐತಿಹಾಸಿಕ ಸೂಚನೆಯು ಕ್ರಿ.ಪೂ 3000 ರಲ್ಲಿ, ಈಜಿಪ್ಟ್ನಲ್ಲಿ ದೇವಾಲಯಗಳು ಮತ್ತು ಸಮಾಧಿಗಳ ಉತ್ಖನನದ ಸಮಯದಲ್ಲಿ ದೊರಕಿವೆ.
ಸಂದೇಶವಾಹಕ
ಪಾರಿವಾಳವು ಬಹುಶಃ 1,300 ಮೈಲಿ (2,092 ಕಿ.ಮೀ) ದೂರದಿಂದ ‘ಮನೆಗೆ’ ಮರಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ. ಮಾನವರು ಈ ಕೌಶಲ್ಯದ ಹೆಚ್ಚಿನ ಲಾಭವನ್ನು ಪಡೆದಿದ್ದಾರೆ. ಸಂದೇಶಗಳನ್ನು ಸಾಗಿಸಲು ಪಾರಿವಾಳವನ್ನು ಬಳಸಲಾಗುತ್ತಿತ್ತು ಎಂಬ ಮೊದಲ ಉಲ್ಲೇಖವು ಕ್ರಿ.ಪೂ 2500 ಕ್ಕಿಂತ ಹಿಂದಿನದು. ಈ ಸಂಪ್ರದಾಯವು ರೋಮನ್ನರು ಮತ್ತು ಪ್ರಾಚೀನ ಗ್ರೀಕರಿಂದ ಹಿಡಿದು ಕ್ರಿ.ಶ 12 ನೇ ಶತಮಾನದಲ್ಲಿ ಸಿರಿಯಾ ಮತ್ತು ಪರ್ಷಿಯಾದಲ್ಲಿ ಸ್ಥಾಪಿಸಲಾದ ಮೊದಲ ಅತ್ಯಾಧುನಿಕ ಸಂದೇಶ ಸೇವೆಯವರೆಗೆ ಇತಿಹಾಸದುದ್ದಕ್ಕೂ ಮುಂದುವರೆದಿದೆ.ಇನ್ನೂ 19 ನೇ ಶತಮಾನದಲ್ಲಿ, ಪಾರಿವಾಳವನ್ನು ಯುರೋಪಿನ ಹಣಕಾಸು ಸಂಸ್ಥೆಗಳು ಮತ್ತು ಸುದ್ದಿ ಸಂಸ್ಥೆಗಳಿಗೆ ಸಂದೇಶಗಳನ್ನು ಸಾಗಿಸಲು ಬಳಸಲಾಗುತ್ತಿತ್ತು. ನಂತರ 20 ನೇ ಶತಮಾನದಲ್ಲಿ, ಪಾರಿವಾಳಗಳನ್ನು ಯುದ್ಧದಲ್ಲಿ ಸಂದೇಶವಾಹಕರಾಗಿ ಬಳಸಲಾಯಿತು.
ಅತ್ಯುತ್ತಮ ನ್ಯಾವಿಗೇಷನ್ ಸ್ಕಿಲ್
ಪಾರಿವಾಳಗಳು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಮನೆಗೆ ಮರಳುವುದು ಮಾತ್ರವಲ್ಲದೆ, ಅದು ಎಂದಿಗೂ ಹೋಗದ ಸ್ಥಳಕ್ಕೆ ಸಂಪೂರ್ಣ ಪ್ರತ್ಯೇಕವಾಗಿ ಸಾಗಿಸಿದ ನಂತರವೂ ತನ್ನ ಮೂಲ ಸ್ಥಳಕ್ಕೆ ಮರಳುವ ಚಾಣಕ್ಷತನ ಹೊಂದಿದೆ. ಇವುಗಳ ಸಂಚರಣಾ ಕೌಶಲ್ಯಗಳು ಮತ್ತು ವೇಗ ಎರಡು ಇದರ ಮಹತ್ವವನ್ನು ಹೆಚ್ಚಿಸುತ್ತದೆ.
ಬುದ್ಧಿವಂತ ಜಾತಿಯ ಪಕ್ಷಿ
ಪಾರಿವಾಳಗಳು ವರ್ಣಮಾಲೆಯ ಎಲ್ಲಾ 26 ಅಕ್ಷರಗಳನ್ನು ಗುರುತಿಸಬಲ್ಲವು, ಮತ್ತು ಅವುಗಳಿಗೆ ತುಲನಾತ್ಮಕವಾಗಿ ಸಂಕೀರ್ಣ ಕ್ರಿಯೆಗಳು ಮತ್ತು ಪ್ರತಿಕ್ರಿಯೆ ಅನುಕ್ರಮಗಳನ್ನು ಕಲಿಸಬಹುದು. ಭಿನ್ನ ಮಾನವರ ಫೋಟೋಗಳು ಮತ್ತು ಒಂದೇ ಛಾಯಾಚಿತ್ರದಲ್ಲಿ ಇಬ್ಬರು ವಿಭಿನ್ನ ಜನರ ನಡುವಿನ ವ್ಯತ್ಯಾಸವನ್ನು ಗುರುತಿಸುತ್ತದೆ.
ಕ್ರೀಡೆ
ಪಾರಿವಾಳ ರೇಸಿಂಗ್ ಅನ್ನು ವಿಶ್ವಾದ್ಯಂತ ಹೆಚ್ಚಿನ ಸಂಖ್ಯೆಯ ಉತ್ಸಾಹಿಗಳು ಇದನ್ನು ಆನಂದಿಸುತ್ತಾರೆ.
ಆಧುನಿಕ ದಿನಗಳಲ್ಲಿ ಪಾರಿವಾಳಗಳನ್ನು ತಿರಸ್ಕಾರ ಮನೋಭಾವದಿಂದ ನೋಡಲಾಗುತ್ತದೆ. ಅನೇಕರು ಕಿರಿಕಿರಿ, ಕೊಳಕು, ಕಸ ತಿನ್ನುವ ಕೀಟಗಳು ಎಂಬAತೆ ನೋಡುತ್ತಾರೆ, ಅದು ಮಲವನ್ನು ಅತ್ಯಂತ ಅನಾನುಕೂಲಕರ ಸ್ಥಳಗಳಲ್ಲಿ ಅಂದರೆ ನಮ್ಮ ಕಾರುಗಳು, ಬೆಂಚುಗಳು ಮತ್ತು ಬಾಲ್ಕನಿಗಳ ಮೇಲೆ ಬಿಡುತ್ತದೆ. ಒಂದು ಕಾಲದಲ್ಲಿ ತಮ್ಮ ಸೇವೆಗಳನ್ನು ನೀಡಿರುವ ಪಾರಿವಾಳಗಳನ್ನು ನಗರ ಕೀಟಗಳಂತೆ ಇಂದು ಜನ ಪರಿಗಣಿಸುತ್ತಾರೆ.”ರೆಕ್ಕೆಗಳನ್ನು ಹೊಂದಿರುವ ಇಲಿಗಳು” ಎಂದು ಕೆಲವರು ಭಾವಿಸಿದರು. ನೇರವಾಗಿ ಯಾರಿಗೂ ತೊಂದರೆ ಕೀಟಲೆ ನೀಡದ ಪಕ್ಷಿಯಾಗಿದೆ.