ಬಾಲ್ಯದ ನೆನಪುಗಳಲ್ಲಿ ಈ ರೆನಾಲ್ಡ್ಸ್ ಪೆನ್ ಕೂಡ ಒಂದು. ನೀಲಿ ಕ್ಯಾಪಿನ ಬಿಳಿ ಬಣ್ಣದ ಈ ಪೆನ್ ಅನ್ನು ಯಾರು ಮರೆಯುವಂತೆಯೇ ಇಲ್ಲ. ಆಗ ರೆನಾಲ್ಡ್ಸ್ ಪೆನ್ ಇಟ್ಟುಕೊಂಡಿದ್ದಾರೆ ಅಂದರೆ ಅದೇನೋ ಗತ್ತು. ಹೋಮ್ವರ್ಕ್ನಿಂದ ಪರೀಕ್ಷೆಯವರೆಗೆ ವಿದ್ಯಾರ್ಥಿಗಳ ಜೊತೆಗೆ ನಿಂತ ಆ ನೀಲಿ-ಬಿಳಿ ಬಣ್ಣದ ಮಾದರಿಯ ರೆನಾಲ್ಡ್ಸ್ ಪೆನ್ ಈಗ ಮಾರುಕಟ್ಟೆಯಿಂದ ಕಾಣದಂತಾಗಿದೆ.
1945ರಲ್ಲಿ ಸ್ಥಾಪನೆ
ರೆನಾಲ್ಡ್ಸ್ ಪೆನ್ನುಗಳಿಗೆ ಆಗ ಪಾರ್ಕರ್, ಪೈಲಟ್ ಮತ್ತು ಮಿತ್ಸುಬಿಷಿ ಅಂತಾ ಸುಮಾರು ಪ್ರತಿಸ್ಪರ್ಧಿಗಳಿದ್ದವು. ಆದರೆ ಜೇಬುಗಳಲ್ಲಿ ಇಟ್ಟುಕೊಂಡಾಗ ಈ ಪೆನ್ಗಳು ಸೋರಿಕೆಯಾಗಿ ಬಟ್ಟೆ, ಬ್ಯಾಗ್ ಎಲ್ಲವೂ ನೀಲಿ ಆಗುತ್ತಿದ್ದವು ಮತ್ತು ಬೆಲೆ ವಿಚಾರವಾಗಿ ದುಬಾರಿ ಕೂಡ ಆಗಿದ್ದವು. ಆದರೆ ರೆನಾಲ್ಡ್ಸ್ ಪೆನ್ನುಗಳಲ್ಲಿ ಈ ದೂರುಗಳೇ ಇರಲಿಲ್ಲ. ಪೆನ್ ಮೇಲೆ 045 ಫೈನ್ ಕಾರ್ಬ್ಯೂರ್ ಎಂದು ಬರೆದಿತ್ತು, ಈ ಸಂಖ್ಯೆಯು ಸ್ಥಾಪನೆಯ ವರ್ಷವನ್ನು ಸೂಚಿಸುತ್ತದೆ.
1945 ರಿಂದ ದಶಕಗಳ ಕಾಲ ಆಳ್ವಿಕೆ ನಡೆಸಿತ್ತು ಈ ಪೆನ್. ಭಾರತಕ್ಕೆ ಪರಿಚಯವಾದ ನಂತರ ಈ ಪೆನ್ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಯಿತು. ಯುಎಸ್ಕ್ಕಿಂತ ಇಲ್ಲಿ ಈ ಪೆನ್ಗಳು ಹೆಚ್ಚಿನ ಮಾರಾಟ ಪಡೆದುಕೊಂಡಿದ್ದವು. ದಶಕಗಳ ಕಾಲ ರೆನಾಲ್ಡ್ಸ್ ಪೆನ್ನುಗಳು ಭಾರತೀಯ ಶಿಕ್ಷಣ ಮತ್ತು ಉದ್ಯೋಗ ವ್ಯವಸ್ಥೆಯ ಭಾಗವಾಗಿತ್ತು.
ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದ್ದ ಪೆನ್
ರೆನಾಲ್ಡ್ಸ್ ಪೆನ್ನುಗಳು ಭಾರತೀಯ ಬ್ರಾಂಡ್ ಮತ್ತು ಬರವಣಿಗೆ ಉಪಕರಣಗಳ ಮಾಜಿ ಅಮೆರಿಕನ್ ಉತ್ಪಾದನಾ ಕಂಪನಿಯಾಗಿದೆ, ಮುಖ್ಯವಾಗಿ ಪೆನ್ನುಗಳು. ರೆನಾಲ್ಡ್ಸ್ ಹೆಸರಿನಡಿಯಲ್ಲಿ ವಾಣಿಜ್ಯೀಕರಣಗೊಂಡ ಉತ್ಪನ್ನಗಳಲ್ಲಿ ಬಾಲ್ ಪಾಯಿಂಟ್, ಜೆಲ್, ರೋಲರ್ಬಾಲ್ ಮತ್ತು ಫೌಂಟೇನ್ ಪೆನ್ನುಗಳು ಮತ್ತು ಯಾಂತ್ರಿಕ ಪೆನ್ಸಿಲ್ಗಳು ಸೇರಿದ್ದವು.
ವಿದ್ಯಾರ್ಥಿಗಳ ಜೊತೆಗಾರ
ಭಾರತೀಯ ಶಿಕ್ಷಣ ವ್ಯವಸ್ಥೆಯು ಬರವಣಿಗೆಗೆ ಹೆಚ್ಚಿನ ಮಹತ್ವವನ್ನು ಪಡೆದಿದೆ ಇದನ್ನು ಸಾಮಾನ್ಯ ಪೆನ್ನಗಳ ಇಂಕು ಹಾಗೂ ಪೆನ್ನಗಳು ಪೂರೈಸಲು ಸಾಧ್ಯವಿಲ್ಲ ಆದ್ದರಿಂದ ಈ ಪೆನ್ನುಗಳು ಆ ಕಾಲದಲ್ಲಿ ಹೆಚ್ಚಿನ ನೀವು ಪ್ರತಿದಿನ, ಎಲ್ಲಾ ಸಮಯದಲ್ಲೂ ಬರೆಯಬೇಕು.ಈ ಹೆಚ್ಚಿನ ಬರವಣಿಗೆ ಪ್ರಕ್ರಿಯೆಯಲ್ಲಿ ಸೋರಿಕೆಯಾಗದೇ, ಬರೆಯಲು ಉತ್ತಮವಾಗಿರುತ್ತಿತ್ತು. ಈ ಪೆನ್ಗಳು. ಉತ್ತಮ ಗುಣಮಟ್ಟ ಹೊಂದಿದ್ದ ಈ ಪೆನ್ಗಳ ರೀಫಿಲ್ ಸೋರಿಕೆಯಾಗುತ್ತಿರಲಿಲ್ಲ ಮತ್ತು ಇಂಕ್ ಕೂಡ ಗಟ್ಟಿಯಾಗುತ್ತಿರಲಿಲ್ಲ. ಹಗುರವಾಗಿದ್ದ ಈ ಪೆನ್ ಹಿಡಿದುಕೊಳ್ಳಲು ಸುಲಭವಾಗಿತ್ತು.