ಮಂಗಳೂರು: ಹರೀಶ್ ಪೂಂಜಾ ಉದ್ದೇಶ ಬೇರೆ ಇದೆ, ನಾವು ರಾಜ್ಯಕ್ಕೆ ಅನ್ಯಾಯ ಆಗ್ತಾ ಇದೆ ಅಂತಿದೀವಿ ಎಂದು ಬಿಜೆಪಿ ಶಾಸಕ ಹರೀಶ್ ಪೂಂಜಾ ‘ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು’ ಅಭಿಯಾನಕ್ಕೆ ಕರೆ ವಿಚಾರವಾಗಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯಕ್ಕೆ ಅನ್ಯಾಯ ಆಗೋದ್ರಲ್ಲಿ ಸತ್ಯಾಂಶವನ್ನ ಹರೀಶ್ ಪೂಂಜಾ ಒಪ್ಪಿಕೊಳ್ಳಬೇಕು.ಅದನ್ನ ಒಪ್ಪಿಕೊಳ್ಳದೇ ಮೊಂಡುವಾದ ಪ್ರದರ್ಶನ ಮಾಡಿದ್ರೆ ಏನ್ ಹೇಳೋದು.ರಾಜ್ಯಕ್ಕೆ ಬರೋ ತೆರಿಗೆ ಪ್ರಮಾಣದಲ್ಲಿ ಯಾವುದೇ ವೃದ್ದಿಯಾಗಿಲ್ಲ.
ಇದು ರಾಜ್ಯಕ್ಕೆ ಅನ್ಯಾಯ, ಆ ವಿಚಾರ ಪೂಂಜಾ ಮಾತನಾಡಬೇಕು.ಇದರಲ್ಲೂ ಅವರು ಜನರನ್ನು ಒಡೀಬೇಕಂದ್ರೆ ಇದು ದುರ್ದೈವ.ಇವರದ್ದೆಲ್ಲಾ ಇದೇ ಕುತಂತ್ರ, ಧರ್ಮದ ಹೆಸರಿನಲ್ಲಿ ಅನ್ಯಾಯದ ಕೆಲಸ ಮಾಡ್ತಾ ಇದಾರೆ.
ಸಿಎಂ ಅರೆಸ್ಟ್ ಮಾಡೋದು, ವಿರೋಧ ಪಕ್ಷಕ್ಕೆ ತೊಂದರೆ ಕೊಡೋದು ಮಾಡ್ತಾ ಇದಾರೆ.ಸ್ವಯತ್ತ ಸಂಸ್ಥೆಯ ಅಧಿಕಾರಿಗಳು ಕೂಡ ಇವರು ಹೇಳಿದಂತಿದಾರೆ.ಪತ್ರಕರ್ತರ ವಿರುದ್ದವೂ ಜೈಲಿಗೆ ಹಾಕಿಸೋ ಕೆಲಸ ಆಗ್ತಿದೆ.ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಇದು.
ಕಾಂಗ್ರೆಸ್ ಸರ್ಕಾರದ ವಿರುದ್ದ ಕೆಂಪಣ್ಣ 40% ಆರೋಪ ವಿಚಾರ:ನಮ್ಮ ಸರ್ಕಾರ ಬದ್ದತೆ ಮತ್ತು ಪ್ರಾಮಾಣಿಕತೆ ಕೆಲಸ ಮಾಡ್ತಿದೆ.ಕೆಂಪಣ್ಣರ ವಿಷಯ ನಿಜವಾಗಿದ್ರೆ ಬಂದು ಸಿಎಂ ಗೆ ಹೇಳಬಹುದು.
ಅವರು ಯಾವ ವಿಚಾರ ಎಲ್ಲಿ, ಏನಾಗ್ತಿದೆ ಅಂತ ಸ್ಪಷ್ಟವಾಗಿ ಹೇಳಲಿ.ನನ್ನ ಇಲಾಖೆಯಲ್ಲಿ ಆಗ್ತಿದ್ರೆ ನಾನು ತನಿಖೆ ಮಾಡಿಸ್ತೇನೆ.ಕಳೆದ ಬಾರಿ ಅವರು ಅನೇಕ ವಿಷಯ ಪ್ರಸ್ತಾಪ ಮಾಡಿದ್ರು.ಅದರಿಂದ ನಾವು ಅವರ ಆರೋಪಕ್ಕೆ ತನಿಖೆ ಮಾಡಿಸ್ತಾ ಇದೀವಿ.ಅದೇ ರೀತಿ ಇವತ್ತು ಇದ್ದರೂ ಕ್ರಮ ತೆಗೊಳ್ಳೊಣ.ಭ್ರಷ್ಟಾಚಾರಕ್ಕೆ ಯಾವುದೇ ಸಹನೆ ಇರಬಾರದು.ಯಾರದ್ರೂ ನಮ್ಮಲ್ಲಿ ಭ್ರಷ್ಟಾಚಾರ ಮಾಡೋ ದಾಖಲೆ ಇದ್ರೆ ತನಿಖೆ ಮಾಡಿಸೋಣ.
ದ.ಕ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕೋಳಿ ಅಂಕ ನಿರ್ಬಂಧ ವಿಚಾರ:ಕೋಳಿ ಅಂಕದ ವಿಚಾರ ನನಗೆ ಯಾವುದೇ ದೂರು ಬಂದಿಲ್ಲ.ನನ್ನ ಗಮನಕ್ಕೆ ಯಾರೂ ತಂದಿಲ್ಲ, ಬಂದ್ರೆ ಚರ್ಚೆ ಮಾಡ್ತೇನೆ.ಆಟಕ್ಕೋಸ್ಕರ ಮತ್ತು ಜೂಜಿಗಾಗಿ ಕೋಳಿ ಅಂಕ ಮಾಡಲಾಗುತ್ತೆ.ಆಟ ನಮ್ಮ ಕಲೆ ಮತ್ತು ಸಂಪ್ರದಾಯ, ಕ್ರೀಡೆ ಅಂತ ಒಪ್ಪಿಕೊಳ್ಳಬೇಕು.ಕಂಬಳ, ಜಲ್ಲಿಕಟ್ಟು ಮಾಡ್ತಾರೆ, ಆದರೆ ಜೂಜು ಹೆಚ್ಚಾದಾಗ ಕ್ರಮ ಆಗುತ್ತೆ.
ನೈತಿಕ ಪೊಲೀಸ್ ಗಿರಿ: ಕಾನೂನು ಯಾರೇ ಕೈಗೆ ತೆಗೊಂಡರೂ ನಾವು ಸಹಿಸಲ್ಲ.ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ.ನೈತಿಕ ಪೊಲೀಸ್ ಗಿರಿ ಮಾಡೋರ ವಿರುದ್ದ ಕ್ರಮ ಆಗ್ತಿದೆ.ಮೊನ್ನೆಯೂ ಮೂರು ಜನರ ಬಂಧನ ಆಗಿದೆ.ಇದು ಜಿಲ್ಲೆಗೆ ಕೆಟ್ಟ ಹೆಸರು, ಇಡೀ ದ.ಕ ಕ್ಕೆ ಇದೆಲ್ಲ ಕಳಂಕ
ಅದಕ್ಕೆ ದ.ಕ ಜಿಲ್ಲೆಗೆ ಇವತ್ತು ಬೇರೆ ಜನರು ಬರ್ತಾ ಇಲ್ಲ ಈ ಕಳಂಕದಿಂದ ಹೊರ ಬರಬೇಕು, ಸುರಕ್ಷಿತ ವಾತಾವರಣ ಸೃಷ್ಟಿಯಾಗಬೇಕು.ಇಲ್ಲಿ ಆರ್.ಎಸ್. ಎಸ್, ಭಜರಂಗದಳ ಪ್ರಚೋದನೆ ಮಾಡ್ತಾ ಇದೆ.ಇವರ ಪ್ರಚೋದನೆಯಲ್ಲಿ ಇವರು ಹೇಳಿದ್ದೇ ನಡೀಬೇಕು ಅಂದುಕೊಂಡಿದ್ದಾರೆ.
ಇದು ಹಿಂದೂ ದೇಶ, ಹಿಂದುತ್ವ ಅಂತ ಮಾಡ್ತಾ ಇದಾರೆ.ಮೊನ್ನೆ ಕೊಡಗಿನಲ್ಲಿ ಒಬ್ಬ ಹಿಂದೂ ಚುಚ್ಚಿದ ಕಾರಣ ಒಬ್ಬ ಮುಸ್ಲಿಂ ತೀರಿ ಹೋಗಿ ಬಿಟ್ಟ.ಆದರೆ ಅದು ದೊಡ್ಡ ಗಲಾಟೆ ಆಗಿಲ್ಲ, ಅದು ವೈಯಕ್ತಿಕ ಕಾರಣದಿಂದ ಆಗಿದ್ದು.ಯಾವುದೋ ಸಂಧರ್ಭದಲ್ಲಿ ಮಾತುಕತೆ ಆಗಿ ಅಲ್ಲಿ ಕೊಲೆಯಾಯ್ತು.
ಆದರೆ ನಮ್ಮ ಅದೃಷ್ಟ ಏನಂದ್ರೆ ಅಲ್ಲಿ ಮುಸ್ಲಿಂ ತೀರಿ ಹೋಗಿದ್ದು.ಹಿಂದೂ ತೀರಿ ಹೋಗಿದ್ರೆ ಇಡೀ ಊರಿಗೆ ಬೆಂಕಿ ಹಚ್ಚಿರೋರು.ಯಾವುದೇ ಕಾರಣ ಇರಲಿ, ಹಿಂದೂ ಮುಸ್ಲಿಂ ಇದ್ರೆ ಇವರಿಗೆ ಅರ್ಥ ಬೇರೆಯೇ ಆಗಿದೆ.
ಆಂಟಿ ಕಮ್ಯನಲ್ ವಿಂಗ್ ಫೆಲ್ಯೂರ್ ಅಲ್ಲ, ಅವರು ಕ್ರಮ ತೆಗೆದುಕೊಳ್ತಾ ಇದಾರೆ.ಸಹೋದರತ್ಬ ಮತ್ತು ಕೋಮು ಸೌಹಾರ್ದ ನಮಗೆ ಮುಖ್ಯ.ಅನಂತ ಕುಮಾರ್, ನಳಿನ್ ಕಟೀಲ್, ಸುನೀಲ್ ಕುಮಾರ್ ಗೆ ದ್ವೇಷ ಬಂಡವಾಳ.
ಬಿಜೆಪಿಯವರದ್ದು ಇದೇ ಆಗಿದೆ, ಹೆದರಿಸೋದು ಮತ್ತು ಸರ್ವಾಧಿಕಾರ.ವಿರೋಧ ಪಕ್ಷ ರಹಿತ ದೇಶ ಮಾಡಲು ಬಿಜೆಪಿ ಹೊರಟಿದೆ.ಏಕಪಕ್ಷೀಯ ದೇಶ ಮತ್ತು ಒಬ್ಬನೇ ನಾಯಕ ಇರಬೇಕು ಅಂದುಕೊಂಡಿದ್ದಾರೆ.
ಈ ಥರ ಪ್ರಜಾಪ್ರಭುತ್ವ ಈ ದೇಶಕ್ಕೆ ಒಳ್ಳೆದಲ್ಲ.ಬಹಳ ಬುದ್ದಿವಂತಿಕೆಯಿಂದ ಧರ್ಮದ ಹೆಸರಲ್ಲಿ ತಂದು ಮಾಡ್ತಾ ಇದಾರೆ.ಈ ದೇಶದ ಸಮಸ್ಯೆ ಬಗ್ಗೆ ನರೇಂದ್ರ ಮೋದಿ ಮಾತನಾಡಲ್ಲ ಎಂದು ಮಂಗಳೂರಿನಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.