ಭಾರತದ ಕಾಶ್ಮೀರ ಕಣಿವೆಯಲ್ಲಿ ಶಾಂತವಾದ ಶ್ರೀನಗರ ನಗರ ಮತ್ತು ದಾಲ್ ಸರೋವರದಲ್ಲಿರುವ ಆಕರ್ಷಕ ಹಳ್ಳಿಯನ್ನು ಕಂಡಿರಬಹುದು. ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವಾಸಿಗರು ಮತ್ತೊಂದು ಆಕರ್ಷಣೆಯಾಗಿದೆ . ಶ್ರೀನಗರದ ದಾಲ್ ಸರೋವರದ ಮೇಲೆ ತೇಲುವ ಅಂಚೆ ಕಚೇರಿ, ದೇಶದ ಮೊದಲನೆಯ, ‘ತೇಲುವ ಅಂಚೆ ಕಚೇರಿ, ದಾಲ್ ಸರೋವರ’ ವಿಶ್ವದ ಏಕೈಕ ಅಂಚೆ ಕಚೇರಿ ಎಂದು ಹೇಳಲಾಗುತ್ತದೆ.
ಕಾಶ್ಮೀರದಲ್ಲಿ ವಿಶ್ವದ ಏಕೈಕ ತೇಲುವ ಅಂಚೆ ಕಚೇರಿ 200 ವರ್ಷಗಳಿಂದ ಸೇವೆಯಲ್ಲಿದೆ. ಎರಡು ಶತಮಾನಗಳಷ್ಟು ಹಳೆಯದಾದ ಈ ತೇಲುವ ಅಂಚೆ ಕಚೇರಿಯನ್ನು ಬ್ರಿಟಿಷ್ ಯುಗದಲ್ಲಿ ಪ್ರಾರಂಭಿಸಲಾಯಿತು ಮತ್ತು ಈಗಲೂ ಸರೋವರದ ಮೇಲೆ ವಾಸಿಸುವ ಜನರಿಗೆ ಪತ್ರಗಳು ಮತ್ತು ಕೊರಿಯರ್ಗಳನ್ನು ತಲುಪಿಸುತ್ತಿದೆ. ಇದು ಇಡೀ ಜಗತ್ತಿನಲ್ಲಿ ತೇಲುವ ಏಕೈಕ ಅಂಚೆ ಕಚೇರಿಯಾಗಿದೆ.
ಈ ಅಂಚೆ ಕಚೇರಿ ಎಲ್ಲಾ ಸಾಮಾನ್ಯ ಅಂಚೆ ಸೌಲಭ್ಯಗಳಂತೆ ನೀಡುತ್ತದೆ.ದಾಲ್ ಸರೋವರದ ಈ ತೇಲುವ ಅಂಚೆ ಕಚೇರಿಯಲ್ಲಿ ಅಂಚೆ ಕಚೇರಿಯ ಎಲ್ಲಾ ಸೇವೆಗಳು ಲಭ್ಯವಿದೆ. ಲಕೋಟೆಯ ಮೇಲೆ ಹಾಕಲು ಅವರು ದೋಣಿಯವರೊಂದಿಗೆ ಶಿಕಾರದ ವಿಶೇಷ ಮುದ್ರೆಯನ್ನು ಬಳಸುತ್ತಾರೆ. ಈ ಅಂಚೆ ಕಚೇರಿಯ ವಿಶೇಷವೆಂದರೆ, ಇಲ್ಲಿಂದ ಪೋಸ್ಟ್ ಮಾಡಲಾದ ಪತ್ರಗಳು ವಿಶೇಷ ವಿನ್ಯಾಸವನ್ನು ಹೊಂದಿದೆ.
ಪತ್ರಗಳ ಮೇಲೆ ದಾಲ್ ಸರೋವರ ಮತ್ತು ಶ್ರೀನಗರ ನಗರದ ಸುಂದರ ದೃಶ್ಯಾವಳಿಗಳನ್ನು ಹೊಂದಿರುತ್ತದೆ. ಇವು ಈ ಪತ್ರಗಳನ್ನು ಯಾವ ವಿಳಾಸಕ್ಕೆ ಪೋಸ್ಟ್ ಮಾಡಲಾಗಿದೆಯೋ ಅಲ್ಲಿಗೆ ಚಿತ್ರಗಳು ತಲುಪುತ್ತವೆ. ಇದ್ದರಿಂದ ಕಾಶ್ಮೀರವನ್ನು ಪ್ರವಾಸಿ ತಾಣವಾಗಿ ಜನಪ್ರಿಯಗೊಳಿಸಲು ಸಹಾಯಕವಾಗಿದೆ. ಇದು ವಾಸ್ತವವಾಗಿ ಪಾರಂಪರಿಕ ಅಂಚೆ ಕಚೇರಿಯಾಗಿದೆ ಬ್ರಿಟಿಷರ ಕಾಲದಿಂದಲೂ ಅಸ್ತಿತ್ವದಲ್ಲಿದೆ. 2011 ಕ್ಕಿಂತ ಮೊದಲು ಕಚೇರಿಯನ್ನು ನೆಹರೂ ಪಾರ್ಕ್ ಪೋಸ್ಟ್ ಎಂದು ಕರೆಯಲಾಗುತ್ತಿತ್ತು. ನಂತರ ಮುಖ್ಯ ಪೋಸ್ಟ್ ಮಾಸ್ಟರ್ ಜಾನ್ ಸ್ಯಾಮ್ಯುಯೆಲ್ ಅದನ್ನು ‘ಫ್ಲೋಟಿಂಗ್ ಪೋಸ್ಟ್ ಆಫೀಸ್’ ಎಂದು ಮರುನಾಮಕರಣ ಮಾಡಿದರು.
ಇದು ಮಹಾರಾಜರ ಕಾಲದಿಂದ ಬ್ರಿಟಿಷ್ ಯುಗದವರೆಗೆ 200 ವರ್ಷಗಳಷ್ಟು ಹಳೆಯದಾದ ಅಂಚೆ ಕಚೇರಿಯಾಗಿದೆ. ಅಂತಿಮವಾಗಿ ಇದನ್ನು ತೇಲುವ ಅಂಚೆ ಕಚೇರಿ ಎಂದು ಕರೆಯಲಾಯಿತು. ಕಳುಹಿಸಲಾದ ಪೋಸ್ಟ್ ಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಅಂಚೆ ಕಚೇರಿಯಲ್ಲಿ ಪೋಟೋ ತೆಗೆದುಕೊಳ್ಳಲು ಸಾವಿರಾರು ಜನರು ಭೇಟಿ ನೀಡುತ್ತಾರೆ. ಇಲ್ಲಿಂದ ವಿಶೇಷ ಕವರ್ ಗಳು, ಪೋಸ್ಟ್ ಕಾರ್ಡ್ ಗಳು ಮತ್ತು ಅಂಚೆಚೀಟಿಗಳನ್ನು ಖರೀದಿಸಬಹುದು.
ಅಂಚೆ ಕಚೇರಿಯ ಹೌಸ್ ಬೋಟ್ ಎರಡು ಸಣ್ಣ ಕೋಣೆಗಳನ್ನು ಹೊಂದಿದೆ. ಒಂದು ಕಚೇರಿಯಾಗಿ ಮತ್ತು ಇನ್ನೊಂದು ಸಣ್ಣ ವಸ್ತುಸಂಗ್ರಹಾಲಯವಾಗಿ ಕಾರ್ಯನಿರ್ವಹಿಸುತ್ತದೆ. ಇದು ಅಂಚೆ ಚೀಟಿಗಳನ್ನು ಮಾರಾಟ ಮಾಡುವ ಅಂಗಡಿಯನ್ನು ಹೊಂದಿದೆ.
2014 ರ ಪ್ರವಾಹದಂತಹ ಬೋಟ್ ಹೌಸ್ನ್ನು ಅನಿಯಂತ್ರಿತವಾಗಿ ಪ್ರವಾಹದಿಂದ ತಳ್ಳಲ್ಪಟ್ಟಿತ್ತು. ರಕ್ಷಣಾ ತಂಡಗಳು ಅದನ್ನು ಲಂಗರು ಹಾಕಬೇಕಾಯಿತು. ನೀರು ಕಡಿಮೆಯಾದ ನಂತರ ಮತ್ತೆ ದಾಲ್ ಗೆ ತರಲಾಯಿತು. ತೇಲುವ ಅಂಚೆ ಕಚೇರಿಯಲ್ಲಿ ಹಳೆಯ ಅಂಚೆಚೀಟಿಗಳ ಸಂಗ್ರಹವಿದೆ. ಸ್ಥಳೀಯರಿಗೆ ತೇಲುವ ಅಂಚೆ ಕಚೇರಿ ಮೇಲೆ ಅಧಿಕ ವ್ಯಾಮೋಹ.