ಕೆಲವು ದಿನಗಳಿಂದ ಭಾರತದಲ್ಲಿ ಅನೇಕ ಒನ್ಪ್ಲಸ್ ಬಳಕೆದಾರರು ಗ್ರೀನ್ ಸ್ಕ್ರೀನ್ ಸಮಸ್ಯೆ ಒನ್ಪ್ಲಸ್ ಮೊಬೈಲ್ ನಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೋನ್ ಕಾರ್ಯನಿರ್ವಹಿಸುತ್ತಿದ್ದರೂ ಹಸಿರು ಲೈನ್ ಕಾಣಿಸಿಕೊಳ್ಳುತ್ತಿದೆ ಮತ್ತು AMOLED ಡಿಸ್ಪ್ಲೇ ಹೊಂದಿರುವ ಫೋನ್ಗಳಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ “ಗ್ರೀನ್-ಸ್ಕ್ರೀನ್” ಸಮಸ್ಯೆಯಿಂದ ಬಳಲುತ್ತಿರುವ ಬಳಕೆದಾರರಿಗೆ ಒನ್ಪ್ಲಸ್ ಕಂಪನಿ ಇದೀಗ ಲೈಫ್ಟೈಮ್ ವಾರಂಟಿಯನ್ನು ಘೋಷಿಸಿದೆ.
ಈ ವಾರಂಟಿಯು ಬಹುತೇಕ ಎಲ್ಲ ಮಾಡೆಲ್ಗಳನ್ನು ಒಳಗೊಂಡಿದೆ ಎಂದು ಕಂಪನಿ ಹೇಳುತ್ತದೆ. ಆದರೆ, OnePlus 8 Pro, OnePlus 8T, OnePlus 9, ಮತ್ತು OnePlus 9R ಸೇರಿದಂತೆ ಹಳೆಯ OnePlus ಸಾಧನಗಳನ್ನು ಇದು ಒಳಗೊಂಡಿರುವುದಿಲ್ಲ. ಏಕೆಂದರೆ ಸಮಸ್ಯೆಯನ್ನು ಪರಿಹರಿಸಲು ಯಾವುದೇ “ಬಿಡಿ ಭಾಗಗಳು” ಸಿಗುವುದಿಲ್ಲ ಎನ್ನಲಾಗುತ್ತಿದೆ. ಆದರೂ, ಒನ್ಪ್ಲಸ್ ತಮ್ಮ ಹಳೆಯ ಸಾಧನವನ್ನು ಹೊಸ ಒನ್ಪ್ಲಸ್ ಸಾಧನಕ್ಕೆ ವಿಶೇಷವಾಗಿ OnePlus 10R ಗೆ ಅಪ್ಗ್ರೇಡ್ ಮಾಡಲು 30,000 ರೂ. ವರೆಗೆ ರಿಯಾಯಿತಿ ವೋಚರ್ ಅನ್ನು ಭರವಸೆ ನೀಡುವುದು ಎಂದು ತಿಳಿಸಿದೆ.
ಅಂದರೆ, ಹಳೆಯ ಒನ್ಪ್ಲಸ್ ಬಳಕೆದಾರರು 5,000 ರಿಂದ 10,000 ರೂಪಾಯಿಗಳನ್ನು ನೀಡಿದರೆ ಹೊಸ ಒನ್ಪ್ಲಸ್ 10R ಅನ್ನು ಖರೀದಿಸಬಹುದು. ಆದರೆ, ಜೀವಮಾನದ ವಾರಂಟಿಯನ್ನು ಭಾರತದಲ್ಲಿನ ಬಳಕೆದಾರರಿಗೆ ಮಾತ್ರ ವಿಸ್ತರಿಸಲಾಗಿದೆ ಎಂದು ಆಂಡ್ರಾಯ್ಡ್ ಅಥಾರಿಟಿ ವರದಿ ನೀಡಿದೆ. “ಈ ಸಮಸ್ಯೆಯು ಸ್ಕ್ರೀನ್ ಸಮಸ್ಯೆಯುಳ್ಳ ಬಳಕೆದಾರರಿಗೆ ಹೆಚ್ಚಿನ ಅನಾನುಕೂಲತೆಯನ್ನು ಉಂಟುಮಾಡಿದೆ ಎಂದು ನಾವು ಅರಿತುಕೊಂಡಿದ್ದೇವೆ ಮತ್ತು ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ನಾವು ಸ್ಮಾರ್ಟ್ಫೋನ್ ಡಯಾಗ್ನಸಿಸ್ಗಾಗಿ ಹತ್ತಿರದ ಒನ್ಪ್ಲಸ್ ಸರ್ವೀಸ್ ಸೆಂಟರ್ಗೆ ಭೇಟಿ ಮಾಡಲು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ. ಹಾಗೂ ಗ್ರೀನ್ ಸ್ಕ್ರೀನ್ ಸಮಸ್ಯೆಯುಳ್ಳ ಎಲ್ಲ ಸ್ಮಾರ್ಟ್ಫೋನ್ಗಳಿಗೆ ನಾವು ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಅನ್ನು ಒದಗಿಸುತ್ತೇವೆ ಅಂತಾ ಕೂಡ ಕಂಪನಿ ಹೇಳಿಕೊಂಡಿದೆ.
ಆಯ್ದ OnePlus 8 ಮತ್ತು 9 ಸರಣಿಯ ಸಾಧನಗಳಲ್ಲಿ, ಹೊಸ OnePlus ಸಾಧನಕ್ಕೆ ಅಪ್ಗ್ರೇಡ್ ಮಾಡಲು ಫೋನ್ ಮೌಲ್ಯದ ನ್ಯಾಯೋಚಿತ ಶೇಕಡಾವಾರು ಪ್ರಮಾಣವನ್ನು ಬಳಕೆದಾರರಿಗೆ ಒದಗಿಸುವ ವೋಚರ್ ಅನ್ನು ಸಹ ಒನ್ ಪ್ಲಸ್ ಕಂಪನಿ ನೀಡುತ್ತಿದೆ. ನಾವು ಈಗ ಎಲ್ಲಾ ಪೀಡಿತ ಸಾಧನಗಳಳಿಗೆ ಲೈಫ್ಟೈಂ ಸ್ಕ್ರೀನ್ ವಾರಂಟಿ ನೀಡುತ್ತಿದ್ದೇವೆ. ನಿಮ್ಮ ತಿಳುವಳಿಕೆ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು’’ ಎಂದು ವರದಿ ಹೇಳುತ್ತದೆ.
OnePlus 8 Pro ಬಳಕೆದಾರರು 25,500 ರೂ. ವೋಚರ್ ಸ್ವೀಕರಿಸುತ್ತಾರೆ. ಹಾಗೂ OnePlus 8T 20,000 ರೂ. ಮೌಲ್ಯದ ವೋಚರ್ ಮೌಲ್ಯಕ್ಕೆ ಅರ್ಹವಾಗಿದೆ. ಇನ್ನು, OnePlus 9ಗೆ 23,500 ರೂ. ಮತ್ತು ಒನ್ಪ್ಲಸ್ 9Tಗೆ 19,000 ರೂ. ಮೌಲ್ಯದ ವೋಚರ್ ಮೌಲ್ಯವನ್ನು ಪಡೆಯಲಿದೆ. ಹೆಚ್ಚುವರಿಯಾಗಿ, ಹಳೆಯ ಒನ್ಪ್ಲಸ್ ಫೋನ್ಗಳನ್ನು ಹೊಂದಿರುವ ಬಾಧಿತ ಬಳಕೆದಾರರು OnePlus 10R ಗೆ ಅಪ್ಗ್ರೇಡ್ ಮಾಡಿದರೆ, ಒನ್ಪ್ಲಸ್ ಹೆಚ್ಚುವರಿ 4,500 ರೂ. ಕೊಡುಗೆಯನ್ನು ಒದಗಿಸುತ್ತದೆ ಎಂದು ತಿಳಿದುಬಂದಿದೆ. ಡಿಸ್ಕೌಂಟ್ ವೋಚರ್ಗೆ ಅರ್ಹರಾಗಲು ಸ್ಮಾರ್ಟ್ಫೋನ್ನ ಸ್ಥಿತಿಯ ಬಗ್ಗೆ ಸೂಚನೆಯು ಏನನ್ನೂ ಉಲ್ಲೇಖಿಸಿಲ್ಲ. ಹೀಗಾಗಿ ನಿಮಗೆ ಬೇಕಾದರೆ ಈ ವೋಚರ್ನ ಪ್ರಯೋಜನವನ್ನು ಪಡೆಯಬಹುದು.