ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್ಸಂಗ್, ತನ್ನ ಎಐ ಆಧರಿತ ಹೊಸ ಬೀಸ್ಪೋಕ್ ಗೃಹೋಪಯೋಗಿ ಉಪಕರಣಗಳನ್ನು ಈಗ ಭಾರತದಲ್ಲಿಯೇ ತಯಾರಿಸಲಾಗುತ್ತಿದೆ ಎಂದು ಘೋಷಿಸಿದೆ.
ಭಾರತೀಯ ಗ್ರಾಹಕರ ವಿವಿಧ ರೀತಿ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಈ ಎಐ ಚಾಲಿತ ಬೀಸ್ಪೋಕ್ ಗೃಹೋಪಯೋಗಿ ಉಪಕರಣಗಳು ಸ್ಮಾರ್ಟ್, ವೈಯಕ್ತೀಕರಿಸಿದ ಸೌಲಭ್ಯ ಒದಗಿಸುವ ಮತ್ತು ಕಡಿಮೆ ವಿದ್ಯುತ್ ಬಳಸುವ ಉತ್ಪನ್ನಗಳನ್ನು ನೀಡುವ ಮೂಲಕ ಭಾರತೀಯ ಕುಟುಂಬಗಳು ತಮ್ಮ ದೈನಂದಿನ ಕಾರ್ಯಗಳನ್ನು ನಿರ್ವಹಿಸುವ ವಿಧಾನವನ್ನು ಬದಲಿಸಲು ಮುಂದಾಗಿದೆ. ಜೊತೆಗೆ ಅತ್ಯಾಧುನಿಕ ಸುಧಾರಿತ ಅಂತರ್ಗತ ವೈ-ಫೈ ಮತ್ತು ಎಐ ಚಿಪ್ಗಳ ಮೂಲಕ ಈ ಬೆಸ್ಪೋಕ್ ಎಐ ಉಪಕರಣಗಳು ಬಳಕೆದಾರರ ಆದ್ಯತೆಗಳಿಗೆ ಮತ್ತು ಶೈಲಿಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತವೆ ಮತ್ತು ದೈನಂದಿನ ಕೆಲಸಗಳನ್ನು ಸುಲಭವಾಗಿ, ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತವೆ.
ಸ್ಥಳೀಯವಾಗಿ ಈ ಉಪಕರಣಗಳನ್ನು ತಯಾರಿಸುವ ಮೂಲಕ ಸ್ಯಾಮ್ಸಂಗ್, ಭಾರತೀಯ ಗ್ರಾಹಕರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ವಿಶ್ವದರ್ಜೆಯ ಉತ್ಪನ್ನಗಳನ್ನು ಸುಲಭವಾಗಿ ಪಡೆಯುವಂತೆ ನೋಡಿಕೊಳ್ಳುತ್ತಿದೆ.
ಸ್ಯಾಮ್ಸಂಗ್ ಇತ್ತೀಚೆಗೆ ಬಿಡುಗಡೆ ಮಾಡಿದ 10 ಹೊಸ ಬೀಸ್ಪೋಕ್ ಎಐ ವಾಷಿಂಗ್ ಮೆಷಿನ್ಗಳನ್ನು ಭಾರತದ ಚೆನ್ನೈ ಘಟಕದಲ್ಲಿ ತಯಾರಿಸಲಾಗುತ್ತಿದೆ. ಈ ಹೊಸ 12 ಕೆಜಿ ಬೀಕ್ ಎಐ ವಾಶಿಂಗ್ ಮೆಷಿನ್ ಗಳು ಭಾರತೀಯ ಗ್ರಾಹಕರಿಗೆ ಸೂಕ್ತವಾಗಿದೆ, ಯಾಕೆಂದರೆ ಈ ವಾಶಿಂಗ್ ಮೆಷಿನ್ ಬಟ್ಟೆ ತೊಳೆಯುವ ಪ್ರಕ್ರಿಯೆಯ ಪ್ರತಿಯೊಂದು ಹಂತದಲ್ಲೂ ಎಐ ಮೂಲಕ ನೆರವು ನೀಡುತ್ತದೆ. ಹೊಸ ಆಧುನಿಕ ವಾಷಿಂಗ್ ಮೆಷಿನ್ ಗಳು ಫ್ಲಾಟ್ ಗ್ಲಾಸ್ ಡೋರ್ ಹೊಂದಿದ್ದು, ಬೀಸ್ಪೋಕ್ ವಿನ್ಯಾಸದಲ್ಲಿ ತಯಾರಾಗುತ್ತದೆ. ವಿಶೇಷವಾಗಿ ಎಐ ವಾಶ್, ಎಐ ಎನರ್ಜಿ ಮೋಡ್, ಎಐ ಕಂಟ್ರೋಲ್ ಮತ್ತು ಎಐ ಇಕೋ ಬಬಲ್ ನಂತಹ ಅತ್ಯಾಧುನಿಕ ಎಐ ಫೀಚರ್ ಗಳನ್ನು ಹೊಂದಿವೆ. ಎಐ ವಾಶ್ ಫೀಚರ್ ಅತ್ಯಾಧುನಿಕ ಸೆನ್ಸರ್ ತಂತ್ರಜ್ಞಾನವನ್ನು ಒಳಗೊಂಡಿದ್ದು, ಅದು ಭಾರ, ಬಟ್ಟೆಯ ತೂಕ ಮತ್ತು ಮೃದುತ್ವ, ನೀರಿನ ಮಟ್ಟ, ಡಿಟರ್ಜೆಂಟ್ ಮಟ್ಟ ಮತ್ತು ಮಣ್ಣಿನ ಮಟ್ಟವನ್ನು ಎಐ ಸಾಮರ್ಥ್ಯದ ಮೂಲಕ ತಿಳಿದುಕೊಂಡು ಹೆಚ್ಚು ಸೂಕ್ತವಾದ ರೀತಿಯಲ್ಲಿ ಬಟ್ಟೆ ತೊಳೆಯುತ್ತದೆ. ಸ್ಮಾರ್ಟ್ ಥಿಂಗ್ಸ್ ಆಪ್ ಮೂಲಕ ಲಭ್ಯವಿರುವ ಎಐ ಎನರ್ಜಿ ಮೋಡ್ ಬಳಸಿಕೊಂಡು ಬಳಕೆದಾರರು ತಮ್ಮ ಗೃಹೋಪಯೋಗಿ ಉಪಕರಣಗಳ ವಿದ್ಯುತ್ ಬಳಕೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬಹುದು ಮತ್ತು ಈ ಪ್ರಕ್ರಿಯೆಯಲ್ಲಿ ಸಾಕಷ್ಟು ಹಣವನ್ನು ಉಳಿಸಬಹುದು. ಜೊತೆಗೆ ಇದರಲ್ಲಿ ಲಭ್ಯವಿರುವ ಸೂಪರ್ಸ್ಪೀಡ್ ಆಯ್ಕೆಯು ತೊಳೆಯುವ ಕಾರ್ಯಕ್ಷಮತೆಯಲ್ಲಿ ರಾಜಿ ಮಾಡಿಕೊಳ್ಳದೆ ಬಟ್ಟೆ ತೊಳೆಯುವ ಸಮಯವನ್ನು 39 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳು ಮತ್ತು ಸ್ಮಾರ್ಟ್ ಥಿಂಗ್ಸ್ ಸಾಮರ್ಥ್ಯಗಳನ್ನು ಹೊಂದಿಕೊಂಡು ಸುಸಜ್ಜಿತವಾಗಿ ರೂಪುಗೊಂಡಿರುವ ಹೊಸ ಬೀಸ್ಪೋಕ್ ಎಐ ವಾಶಿಂಗ್ ಮೆಷಿನ್ ಗಳು ಗ್ರಾಹಕರಿಗೆ ಅನುಕೂಲತೆ ಒದಗಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದೆ. ಅದಕ್ಕಾಗಿ ಹೈಪರ್- ಕನೆಕ್ಟೆಡ್ ಪರಿಸರ ವ್ಯವಸ್ಥೆಗೆ ಧನ್ಯವಾದ ಸಲ್ಲಿಸಬೇಕಾಗಿದೆ.
ಸ್ಯಾಮ್ಸಂಗ್ ಭಾರತದಲ್ಲಿ ತನ್ನ ಬೀಸ್ಪೋಕ್ ಸೈಡ್-ಬೈ-ಸೈಡ್ (ಎಸ್ ಬಿ ಎಸ್) ರೆಫ್ರಿಜರೇಟರ್ಗಳನ್ನು ಸಹ ತಯಾರಿಸುತ್ತಿದೆ. ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಉಪಕರಣಗಳ ಮಾರುಕಟ್ಟೆಯಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ಪೂರೈಸುವ ಉತ್ಪನ್ನಗಳನ್ನು ಒದಗಿಸುವ ಬದ್ಧತೆಯನ್ನು ಪ್ರದರ್ಶಿಸುತ್ತದೆ.
ಭಾರತದಲ್ಲಿ ಸ್ಯಾಮ್ಸಂಗ್ ತನ್ನ ಕಾರ್ಯಾಚರಣೆಯನ್ನು ವೇಗಗೊಳಿಸುವ, ಅಭಿವೃದ್ಧಿಗೊಳಿಸುವ ಪ್ರಕ್ರಿಯೆಯನ್ನು ಮುಂದುವರೆಸುತ್ತಿದ್ದು, ಭಾರತೀಯ ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವ ಮತ್ತು ಸುಸ್ಥಿರವಾದ ಅತ್ಯಾಧುನಿಕ ತಂತ್ರಜ್ಞಾನಗಳುಳ್ಳ ಉತ್ಪನ್ನಗಳೊಂದಿಗೆ ಸಬಲೀಕರಣಗೊಳಿಸುವುದರ ಮೇಲೆ ಕಂಪನಿಯು ಗಮನ ಕೇಂದ್ರೀಕರಿಸಿದೆ. ಅತ್ಯಾಧುನಿಕ ಎಐ ಫೀಚರ್ ಗಳನ್ನು ಒದಗಿಸುವ ಮೂಲಕ, ಕಂಪನಿಯು ವೈಯಕ್ತೀಕರಿಸಿದ, ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಿದೆ. ಈ ಉತ್ಪನ್ನಗಳು ಭಾರತೀಯ ಕುಟುಂಬಗಳ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸುತ್ತದೆ. ಜೊತೆಗೆ ದೇಶದ ಆರ್ಥಿಕ ಬೆಳವಣಿಗೆ ಮತ್ತು ತಾಂತ್ರಿಕ ಪ್ರಗತಿಗೆ ಕೊಡುಗೆ ನೀಡುತ್ತದೆ. ಭಾರತದಲ್ಲಿ 29 ವರ್ಷಗಳ ಪ್ರಯಾಣ ಹೊಂದಿರುವ ಸ್ಯಾಮ್ಸಂಗ್ ಇಂಡಿಯಾದ ಗೃಹೋಪಯೋಗಿ ಉಪಕರಣಗಳ ಆವಿಷ್ಕಾರಗಳ ಕೆಲವು
ಉದಾಹರಣೆಗಳು ಈ ಕೆಳಗಿನಂತಿವೆ-
ರೆಫ್ರಿಜರೇಟರ್ ಕನ್ವರ್ಟಿಬಲ್ 5 ಇನ್1 ಕರ್ಡ್ ಮ್ಯಾಸ್ಟ್ರೋ ಪ್ಲಸ್
ತೊಳೆಯುವ ಯಂತ್ರ ಇಕೋ ಬಬಲ್ ಟೆಕ್ನಾಲಜಿ (ಆಕ್ಟಿವ್ ವಾಶ್)
ಎಸಿ ವಿಂಡ್ಫ್ರೀ ಟೆಕ್ನಾಲಜಿ, ಡುರಾಫಿನ್ ಅಲ್ಟ್ರಾ, ಡಿಜಿಟಲ್ ಇನ್ವರ್ಟರ್
ಮೈಕ್ರೋವೇವ್ ಕರ್ಡ್ ಮೇಕರ್, ರೋಟಿ/ ನಾನ್, ಮಸಾಲಾ ಮತ್ತು ಸಂಡ್ರಿ