ಬೆಂಗಳೂರು: ಭಾರತದ ಹೆಮ್ಮೆಯ ಟಾಟಾ ಮೋಟರ್ಸ್ ನ ಟಾಟಾ ಮ್ಯಾಜಿಕ್ ಇದೀಗ ನಗರ ಪ್ರದೇಶಗಳ ರಸ್ತೆಗಳಿಂದ ಗ್ರಾಮೀಣ ಭಾಗದ ಕಟ್ಟಕಡೆಯ ಸ್ಥಳಗಳವರೆಗೆ ಲಕ್ಷಾಂತರ ಜನರನ್ನು ಹೊತ್ತೊಯ್ದ ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಇದೀಗ, ಇತ್ತೀಚೆಗೆ ಬಿಡುಗಡೆ ಮಾಡಿರುವ ಟಾಟಾ ಮ್ಯಾಜಿಕ್ ಬೈ-ಫ್ಯುಯೆಲ್ ಈ ಪ್ರಯಾಣವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಮತ್ತು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ. 60 ಲೀಟರ್ ಸಾಮರ್ಥ್ಯದ ಸಿಎನ್ ಜಿ ಟ್ಯಾಂಕ್ ಮತ್ತು 5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ನೊಂದಿಗೆ ಬರುವ ಈ ವಾಹನವು ಒಂದು ಬಾರಿ ಇಂಧನವನ್ನು ಭರ್ತಿ ಮಾಡಿದರೆ 300 ಕಿಲೋಮೀಟರ್ ವರೆಗೆ ಕ್ರಮಿಸಲಿದೆ. ಈ ಮೂಲಕ ವಾಹನವನ್ನು ದೂರದ ಮಾರ್ಗಗಳು ಮತ್ತು ದುರ್ಗಮ ಪ್ರದೇಶಗಳಲ್ಲಿ ಪ್ರಯಾಣಿಸುವ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಈ ಆವಿಷ್ಕಾರಕ ಶ್ರೇಣಿಯ ವಾಹನವನ್ನು ತಡೆರಹಿತವಾಗಿ ಸಿಎನ್ ಜಿ ಮತ್ತು ಪೆಟ್ರೋಲ್ ಬಳಕೆಯನ್ನು ಸುಲಭವಾಗಿ ಬದಲಾಯಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಸಮಯ ಉಳಿತಾಯ ಹಾಗೂ ಇಂಧನ ಬಳಕೆ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗಲಿದೆ.
ಈ ಟಾಟಾ ಮ್ಯಾಜಿಕ್ ಬೈ-ಫ್ಯುಯೆಲ್ ಪ್ರಯಾಣಿಕರು ಮತ್ತು ಚಾಲಕರ ಅಗತ್ಯತೆಗಳನ್ನು ಪೂರೈಸಲಿದೆ. ತನ್ನ ಶ್ರೇಣಿಯಲ್ಲಿ ಅತ್ಯಧಿಕ ಆಸನ ಸಾಮರ್ಥ್ಯವನ್ನು ಅಂದರೆ, 9+ಚಾಲಕ ಸಾಮರ್ಥ್ಯವನ್ನು ಹೊಂದಿರುವ ಈ ವಾಹನವು ರೇಡಿಯಲ್ ಟೈರ್, ಗೇರ್ ಶಿಫ್ಟ್ ಅಡ್ವೈಸರ್ ಮತ್ತು ಉನ್ನತೀಕರಿಸಿದ ಚಾಲಕನ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ವಾಹನವು ಇಂಧನ ಬಳಕೆಯ ಮಟ್ಟವನ್ನು ಗರಿಷ್ಠಗೊಳಿಸುತ್ತದೆ. ಈ ಮೂಲಕ ಮಾಲೀಕರಿಗೆ ಇಂಧನ ಹೊರೆಯನ್ನು ಕಡಿಮೆ ಮಾಡುತ್ತದೆ.
ಎರಡು ವರ್ಷಗಳು ಅಥವಾ ಮೊದಲ 72,000 ಕಿಲೋಮೀಟರ್ ವರೆಗೆ ವಾರಂಟಿಯನ್ನು ಹೊಂದಿರುವ ಈ ಟಾಟಾ ಮ್ಯಾಜಿಕ್ ಬೈ-ಫ್ಯುಯೆಲ್ ವಿಶ್ವಾಸಾರ್ಹತೆ ಮತ್ತು ಬಾಳಿಕೆಯ ಭರವಸೆಗೆ ಪೂರಕವಾಗಿದೆ. ಇದರಿಂದಾಗಿ ಮಾಲೀಕರು ಮತ್ತು ವ್ಯಕ್ತಿಗತ ಆಪರೇಟರ್ ಗಳಿಗೆ ನೆಮ್ಮದಿಯನ್ನು ತಂದುಕೊಡುತ್ತದೆ.