ದೇಶದ ಪ್ರಮುಖ ಇ ಮಾರ್ಕೆಟ್ ಫ್ಲೇಸ್ ಆಗಿರುವ ರಿಲಯನ್ಸ್ ರಿಟೇಲ್ ಜಿಯೋ ಮಾರ್ಟ್ ಗೆ ಭಾರತೀಯ ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದ್ದಾರೆ.
ಈ ಕ್ಯಾಂಪೇನ್ ಅನ್ನು ಜಿಯೋ ಉತ್ಸವ, ಸೆಲೆಬ್ರೇಶನ್ ಆಫ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಗಿದೆ.
ಜಿಯೋಮಾರ್ಟ್ ಸಿಇಒ ಸಂದೀಪ್ ವರಗಂಟಿ, ನಮ್ಮ ಬ್ರಾಂಡ್ ಅಂಬಾಸಿಡರ್ ಆಗಿ ಎಂಎಸ್ ಧೋನಿ ಅತ್ಯಂತ ಉತ್ತಮವಾಗಿ ಹೊಂದಿಕೆಯಾಗುತ್ತಾರೆ. ಅವರ ವ್ಯಕ್ತಿತ್ವವು ಜಿಯೋಮಾರ್ಟ್ನ ಹಾಗೆಯೇ ವಿಶ್ವಾಸ, ನಂಬಿಕೆ ಮತ್ತು ಖಾತರಿಯನ್ನು ಪ್ರತಿಬಿಂಬಿಸುತ್ತದೆ ಎಂದು ಬರೆದುಕೊಂಡಿದೆ.
ನಮ್ಮ ಪ್ರೀತಿ ಪಾತ್ರರ ಜೊತೆಗೆ ವಿಶೇಷ ಕ್ಷಣಗಳನ್ನು ಕಳೆಯುವುದಕ್ಕೆ ನಮ್ಮ ಹೊಸ ಅಭಿಯಾನ ಅನುವು ಮಾಡುತ್ತದೆ. ಇದರಲ್ಲಿ ಶಾಪಿಂಗ್ ಎಂಬುದು ಒಂದು ಅವಿಭಾಜ್ಯ ಅಂಗ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ.
ಮೆಟ್ರೋ ಹೊರತಾದ ಪ್ರದೇಶಗಳು ಒಟ್ಟಾರೆ ಸೇಲ್ ನಲ್ಲಿ ಸುಮಾರು ಶೇ.60ರಷ್ಟು ಪಾಲು ಹೊಂದಿದೆ. ಇದು ದೇಶದ ರಿಟೇಲ್ ವಲಯ ವಿಕೇಂದ್ರೀಕರಣಗೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಜಿಯೋಮಾರ್ಟ್ ಪ್ಲಾಟ್ಫಾರಂ ಪ್ರಸ್ತುತ 1000 ಕ್ಕೂ ಹೆಚ್ಚು ಕಲಾಕಾರರ ಜೊತೆಗೆ ಕೆಲಸ ಮಾಡುತ್ತಿದ್ದು, 1.5 ಲಕ್ಷ ವಿಶಿಷ್ಟ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.