ಬೆಂಗಳೂರು : ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈ. ಲಿಮಿಟೆಡ್ ಇಂದು ಬೆಂಗಳೂರಿನಲ್ಲಿ ಹೊಸ ಅತ್ಯಾಧುನಿಕ “ಬ್ಲೂ ಸ್ಕ್ವೇರ್” ಔಟ್ಲೆಟ್ ಅನ್ನು ತೆರೆದಿದೆ. ಬೆಂಗಳೂರು ವರ್ತೂರು ಹೋಬಳಿಯ ಅಂಬಲಿಪುರದಲ್ಲಿ ಮೋಟೋ ವರ್ಲ್ಡ್ ಹೆಸರಿನಲ್ಲಿ ಈ ಹೊಸ ಔಟ್ಲೆಟ್ ಅನ್ನು ಪ್ರಾರಂಭಿಸಲಾಗಿದ್ದು, ಈ ಔಟ್ಲೆಟ್ 7,100 ಚದರ ಅಡಿಯಷ್ಟು ವಿಶಾಲವಾಗಿದೆ. ಯಮಹಾ ಬ್ಲೂ ಸ್ಕ್ವೇರ್ ಶೋರೂಮ್ಗಳನ್ನು ಗ್ರಾಹಕರಿಗೆ ವೈಯಕ್ತೀಕರಿಸಿದ ವಿಧಾನದಲ್ಲಿ ಅತ್ಯುತ್ತಮ ಮಾರಾಟ, ಸರ್ವೀಸ್ ಮತ್ತು ನೆರವನ್ನು ನೀಡುವ ಮೂಲಕ ಉತ್ತಮ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
ಈ ಬ್ಲೂ ಸ್ಕ್ವೇರ್ ಔಟ್ಲೆಟ್ ಯಮಹಾ ಬ್ರ್ಯಾಂಡ್ನ ಹುಮ್ಮಸ್ಸನ್ನು ದಾಟಿಸುತ್ತದೆ ಮತ್ತು ಗ್ರಾಹಕರಿಗೆ ಸಂಪೂರ್ಣ ಸೇವೆಯನ್ನು ಒದಗಿಸುವಂತೆ ವಿನ್ಯಾಸ ಗೊಂಡಿದೆ. ವೈಯಕ್ತೀಕರಿಸಿದ ವಿಧಾನದ ಮೂಲಕ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದ್ದು, ಪ್ರತಿಯೊಬ್ಬ ಗ್ರಾಹಕರು ತೃಪ್ತಿಕರ ಸೇವೆ ಪಡೆಯುವಂತೆ ನೋಡಿಕೊಳ್ಳಲಾಗುತ್ತದೆ. ಈ ವಿಶೇಷವಾದ ಔಟ್ಲೆಟ್ಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಅನುವು ಮಾಡಿಕೊಟ್ಟಿರುವ ಬ್ರ್ಯಾಂಡ್ ಗ್ರಾಹಕರಿಗೆ ಯಮಹಾ ರೇಸಿಂಗ್ ಜಗತ್ತಿಗೆ ಪ್ರವೇಶಿವ ಅವಕಾಶವನ್ನೂ ನೀಡುತ್ತಿದೆ.
ಈ ಪ್ರೀಮಿಯಂ ಔಟ್ಲೆಟ್ಗಳ ಪ್ರತಿಯೊಂದು ವಿಭಾಗವನ್ನೂ ಅಂತರರಾಷ್ಟ್ರೀಯ ಮೋಟಾರ್ಸ್ಪೋರ್ಟ್ಗಳಲ್ಲಿ ತೊಡಗಿಸಿಕೊಂಡಿರುವ ಜಾಗತಿಕ ಬ್ರ್ಯಾಂಡ್ ಆದ ಯಮಹಾ ಜೊತೆಗೆ ಸಂಬಂಧ ಹೊಂದುವ ಹೆಮ್ಮೆಯ ಭಾವವನ್ನು ಮೂಡಿಸುವಂತೆ ಚಿಂತನಶೀಲವಾಗಿ ರಚಿಸಲಾಗಿದೆ. ಯಮಹಾ, ಬ್ರ್ಯಾಂಡ್ನ ಹೆಮ್ಮೆಯ ರೇಸಿಂಗ್ ಪರಂಪರೆಯನ್ನು ಪ್ರತಿನಿಧಿಸುವ “ಬ್ಲೂ(ನೀಲಿ)” ಬಣ್ಣ ಮತ್ತು ಗ್ರಾಹಕರು ಯಮಹಾದ ಹರ್ಷದಾಯಕ ಮತ್ತು ಸೊಗಸಾದ ಶ್ರೇಣಿಯ ದ್ವಿಚಕ್ರ ವಾಹನಗಳೊಂದಿಗೆ ಸಂಪರ್ಕ ಸಾಧಿಸಲು ರಚಿಸಲಾದ ಪ್ಲಾಟ್ಫಾರ್ಮ್ ಅನ್ನು ಸಂಕೇತಿಸುವ “ಸ್ಕ್ವೇರ್” ಸಂಯೋಜನೆಯ ಮೂಲಕ ಗ್ರಾಹಕರೊಂದಿಗೆ ಉತ್ತಮ ಸಂಪರ್ಕವನ್ನು ಸಾಧಿಸಿದೆ.
ಉದ್ಯಮ-ಪ್ರಧಾನ ಅನುಭವವನ್ನು ಒದಗಿಸುವುದರ ಜೊತೆಗೆ, ಈ ಬ್ಲೂ ಸ್ಕ್ವೇರ್ ಔಟ್ಲೆಟ್ಗಳು ಬ್ಲೂ ಸ್ಟ್ರೀಕ್ಸ್ ರೈಡರ್ಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಯಮಹಾದ ವಿಶೇಷ ಬೈಕರ್ ಸಮುದಾಯದ ಸವಾರರು ಇತರ ಸವಾರರನ್ನು ಭೇಟಿ ಮಾಡಲು ಮತ್ತು ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ. ಹೊಸ ಔಟ್ಲೆಟ್ ಸೇರಿದಂತೆ ಈಗ ಕರ್ನಾಟಕ ಮಾರುಕಟ್ಟೆಯಲ್ಲಿ ಯಮಹಾ 23 ಎಕ್ಸ್ ಕ್ಲೂಸಿವ್ ಬ್ಲೂ ಸ್ಕ್ವೇರ್ ಶೋ ರೂಂಗಳನ್ನು ಹೊಂದಿದೆ.
ಯಮಹಾದ ಸೂಪರ್ಸ್ಪೋರ್ಟ್ ಆರ್3 (321ಸಿಸಿ), ಟಾರ್ಕ್-ರಿಚ್ ಎಂಟಿ -03 (321 ಸಿಸಿ) ಮತ್ತು ಮ್ಯಾಕ್ಸಿ-ಸ್ಪೋರ್ಟ್ಸ್ ಏರಾಕ್ಸ್(155 ಸಿಸಿ) ಮತ್ತು ಏರಾಕ್ಸ್ ವರ್ಷನ್ ಎಸ್ (155 ಸಿಸಿ)ಗಳನ್ನು ಬ್ಲೂ ಸ್ಕ್ವೇರ್ ಶೋರೂಮ್ಗಳ ಮೂಲಕ ವಿಶೇಷವಾಗಿ ಮಾರಾಟ ಮಾಡಲಾಗುತ್ತದೆ. ಈ ಪ್ರೀಮಿಯಂ ಔಟ್ಲೆಟ್ಗಳು ವೈಝಡ್ಎಫ್-ಆರ್15 ಎಂ (155 ಸಿಸಿ), ವೈಝಡ್ಎಫ್-ಆರ್15 ವಿ4 (155ಸಿಸಿ), ವೈಝಡ್ಎಫ್-ಆರ್15ಎಸ್ ವಿ3 (155 ಸಿಸಿ), ಎಂಟಿ-15 ವಿ2 (155 ಸಿಸಿ), ಬ್ಲೂ ಕೋರ್ ತಂತ್ರಜ್ಞಾನ ಆಧರಿತ ಮಾಡೆಲ್ ಗಳಾದ ಎಫ್ಝಡ್ಎಸ್-ಎಫ್ಐ ವರ್ಷನ್ 4.0 (149 ಸಿಸಿ), ಎಫ್ಝಡ್ಎಸ್-ಎಫ್ಐ ವರ್ಷನ್ 3.0 (149 ಸಿಸಿ), ಎಫ್ಝಡ್-ಎಫ್ಐ ವರ್ಷನ್ 3.0 (149 ಸಿಸಿ), ಎಫ್ಝಡ್-ಎಕ್ಸ್ (149 ಸಿಸಿ), ಮತ್ತು ಸ್ಕೂಟರ್ ಗಳಾದ ಫ್ಯಾಸಿನೋ 125 ಎಫ್ಐ ಹೈಬ್ರಿಡ್ (125 ಸಿಸಿ), ರೇ ಝಡ್ಆರ್ 125 ಎಫ್ಐ ಹೈಬ್ರಿಡ್ (125 ಸಿಸಿ), ರೇ ಝಡ್ಆರ್ ಸ್ಟ್ರೀಟ್ ರಾಲಿ 125 ಎಫ್ಐ ಹೈಬ್ರಿಡ್ (125 ಸಿಸಿ) ಮುಂತಾದ ನವೀಕರಿಸಿದ ಲೈನ್-ಅಪ್ ಗಳನ್ನು ಪ್ರದರ್ಶಿಸಲಾಗುತ್ತದೆ. ಹೆಚ್ಚು ಸಮಗ್ರವಾದ ಅನುಭವವನ್ನು ಒದಗಿಸುವ ಭರವಸೆಯನ್ನು ನೀಡುತ್ತಾ, ಈ ಪ್ರೀಮಿಯಂ ಬ್ಲೂ ಸ್ಕ್ವೇರ್ ಔಟ್ಲೆಟ್ಗಳು ಯಮಹಾದ ನಿಜವಾದ ಆ್ಯಕ್ಸೆಸರೀಸ್ಗಳು, ಅಧಿಕೃತ ಉಡುಪುಗಳು ಮತ್ತು ಯಮಹಾo ನಿಜವಾದ ಬಿಡಿಭಾಗಗಳನ್ನು ಗ್ರಾಹಕರಿಗೆ ಪ್ರದರ್ಶನ ಮತ್ತು ಮಾರಾಟ ಮಾಡುತ್ತವೆ.