ಬೆಳ್ಳಿ ತೆರೆ ಮೇಲೆ ಪ್ರಾಣಿಗಳಿಗೆ ಸಂಬಂಧಪಟ್ಟ ಯಾವುದೇ ಸಿನಿಮಾಗಳು ಬಂದರು ಹಿಟ್ ಆಗಿವೆ. ಯಾವುದೆ ಭಾಷೆಯ ಚಿತ್ರಗಳಾಗಿದ್ದರೂ ಸರಿಯೇ. ಅಲ್ಲಿ ಸಕ್ಸಸ್ ಗ್ಯಾರಂಟಿ ಅನ್ನೋದು ಕೂಡ ಅಷ್ಟೇ ಸತ್ಯವಾದ ಮಾತಾಗಿದೆ.
ಅಂತಹ ಸುಮಾರು ಸಿನಿಮಾಗಳಲ್ಲಿ 777 ಚಾರ್ಲಿ ಸಿನಿಮಾ ಕಮರ್ಷಿಯಲ್ ಸೂಪರ್ ಹಿಟ್ ಆಗಿದೆ. ಚಾರ್ಲಿ ಚಿತ್ರಕ್ಕೂ ಮೊದಲು ಇನ್ನೂ ಒಂದು ಚಿತ್ರ ಬಂದಿತ್ತು. ನಾನು ಮತ್ತು ಗುಂಡ ಅನ್ನೋ ಈ ಚಿತ್ರ ಕೂಡ ಗೆದ್ದಿದೆ. ಚಾರ್ಲಿ ಚಿತ್ರದಷ್ಟು ದೊಡ್ಡಮಟ್ಟದಲ್ಲಿ ಅದು ರೀಚ್ ಆಗಲಿಲ್ಲವಾದರು, ನಿರ್ಮಾಪಕರಿಗೆ ಇದರಿಂದ ಮೋಸ ಏನೂ ಆಗಲಿಲ್ಲ. ಅದಕ್ಕೇನೆ ನಾನು ಮತ್ತು ಗುಂಡ-2 ಸಿನಿಮಾ ಇದೀಗ ನಿರ್ಮಾಣಗೊಳ್ಳುತ್ತಿದೆ.
ಆದರೆ ಇದೆಲ್ಲ ಚಿತ್ರಗಿಂತಲ್ಲೂ ವಿಭಿನ್ನ ಅನಿಸೋ ಇನ್ನೂ ಒಂದು ಸಿನಿಮಾ ಬರ್ತಿದೆ. ಈ ಚಿತ್ರಕ್ಕೆ ವಾಲಾಟ್ಟಿ ಅನ್ನೋ ಹೆಸರಿದೆ. Tale of Tails ಅನ್ನುವ ಸಬ್ ಟೈಟಲ್ ಕೂಡ ಇದು ಹೊಂದಿದೆ. ಎರಡು ನಾಯಿಯ ಒಂದು ಲವ್ ಸ್ಟೋರಿ ಅನ್ನೋದು ಈ ಚಿತ್ರದ ಸ್ಪೆಷಲ್ ಆಗಿದೆ. ಮನುಷ್ಯರ ಮಧ್ಯೆ ಸಾಕು ನಾಯಿಗಳ ಪ್ರೇಮ ಕಥೆ ಇದಾಗಿದೆ.
ಮನುಷ್ಯರ ಮಧ್ಯೆ ಇರೋ ಸಾಕು ನಾಯಿಗಳ ಪರದಾಟ ಮತ್ತು ಲವ್ ಸ್ಟೋರಿ ಇಲ್ಲಿ ಮುಖ್ಯವಾಗಿವೆ. ವಿಶೇಷವೆಂದರೆ ಯಾವುದೇ ವಿಎಫ್ಎಕ್ಸ್ ಬಳಸದೇನೆ ಈ ಒಂದು ಸಿನಿಮಾವನ್ನ ನಿರ್ಮಿಸಲಾಗಿದೆ. ಇದರ ವಿಶೇಷತೆಗಳಲ್ಲಿ ಇದೂ ಒಂದಾಗಿದ್ದು, ನಾಯಿಗಳು ರಿಯಲ್ ಆಗಿಯೇ ಇಲ್ಲಿ ಅಭಿನಯಿಸಿವೆ ಅಂತಲೇ ಸಿನಿಮಾ ತಂಡ ಹೇಳಿಕೊಳ್ಳುತ್ತಿದೆ.
ಈ ಚಿತ್ರದ ಬಗ್ಗೆ ಈಗ ಹೇಳಲಿಕ್ಕೆ ಅಧಿಕೃತ ಟ್ರೈಲರ್ ಕಾರಣ ಆಗಿದೆ. ಇದರಲ್ಲಿರೋ ಕಂಟೆಂಟ್ ಅಷ್ಟು ಸ್ಪೆಷಲ್ ಆಗಿಯೇ ಬಂದಿದೆ. ನಾಯಿಗಳು ಇಲ್ಲಿ ಮಾತನಾಡುತ್ತವೆ. ತಮ್ಮ ಭಾವನೆಗಳನ್ನ ಅವು ಇಲ್ಲಿ ಹೇಳ್ತವೆ ಅನ್ನೋದು ಈ ಟ್ರೈಲರ್ ಮೂಲಕವೇ ನಾವು ತಿಳಿಯಬಹುದು. ಎರಡು ನಾಯಿಗಳ ಸೂಪರ್ ಲವ್ ಸ್ಟೋರಿ ಇದಾಗಿದೆ ಅಂತೆ.
ಅಮಲು ಅನ್ನೋ ಹೆಣ್ಣು ನಾಯಿ ಮತ್ತು ಟಾಮಿ ಅನ್ನುವ ಗಂಡು ನಾಯಿಯ ಲವ್ ಸ್ಟೋರಿನೇ ಈ ಸಿನಿಮಾ ಅಂತಲೇ ಹೇಳಲಾಗುತ್ತಿದೆ. ವಿಶೇಷವೆಂದ್ರೆ ಈ ಚಿತ್ರ ಮಲೆಯಾಳಂ ಭಾಷೆಯಲ್ಲಿ ರೆಡಿ ಆಗಿದೆ. ಮಾಲಿವುಡ್ನ ಹೆಮ್ಮೆಯ ಚಿತ್ರ ಅಂತಲೇ ಹೇಳಲಾಗುತ್ತಿದೆ.