ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಮೊಬೈಲ್ ಇಲ್ಲದೆ ದಿನ ಕಳೆಯೋದೆ ಇಲ್ಲ. ಚಿಕ್ಕ ಮಕ್ಕಳಿಗಂತೂ ಊಟ ಮಾಡುವಾಗ ನಿದ್ರೆ ಮಾಡುವಾಗ ಮೊಬೈಲ್ ಬೇಕೇ ಬೇಕು. ಇನ್ನು ಸ್ವಲ್ಪ ದೊಡ್ಡವರಾದ ಮಕ್ಕಳು ಗೇಮ್ಸ್, ರೀಲ್ಸ್, ಸೋಷಿಯಲ್ ಮೀಡಿಯಾ ಅಂತ ಫುಲ್ ಡೇ ಮೊಬೈಲ್ನಲ್ಲಿ ಮುಳುಗಿರ್ತಾರೆ. ಆದರೆ ಈ ಅತಿಯಾದ ಸ್ಕ್ರೀನ್ ಟೈಮ್ ಚಿಕ್ಕಂದಿನಲ್ಲಿ ಮಾತ್ರವಲ್ಲ, ದೊಡ್ಡವರಾದ ಮೇಲೂ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಅನ್ನೋ ವಿಷ್ಯ ನಿಮಗೆ ಗೊತ್ತಿರಲೆ ಬೇಕು ಅಲ್ವಾ?
ಇನ್ನು ದೊಡ್ಡವರಿಗಂತೂ ಮೊಬೈಲ್ ಇಲ್ಲದೆ ಜೀವನವೇ ಇಲ್ಲ ಎಂಬಂತಿದೆ ಇವತ್ತಿನ ದಿನಗಳು. ಕಾಲ್, ಮೆಸೇಜ್, ಲೈಟ್ ಬಿಲ್, ಕೇಬಲ್ ಬಿಲ್, ಎಂಟರ್ಟೈನ್ ಮೆಂಟ್, ಮನಿ ಟ್ರಾನ್ಸ್ಫರ್ ಎಲ್ಲದಕ್ಕೂ ಮೊಬೈಲೇ ಬೇಕು. ಕೆಲವರಂತೂ ಮೂರೂ ಹೊತ್ತು ಮೊಬೈಲ್ನಲ್ಲಿ ಮಾತನಾಡುತ್ತಾ, ಮೆಸೇಜ್ ಮಾಡುತ್ತಾ ಇರುತ್ತಾರೆ.
ಹೀಗೆ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕರವಾಗಲಿದೆ. ಹೃದಯ ಸಂಬಂಧಿತ ಕಾಯಿಲೆಗಳಾದ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗುತ್ತಿದೆ. ಬಹುತೇಕರು ಏಕಾಏಕಿ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲಾ ಮೊಬೈಲ್ ಬಳಕೆ ಕಾರಣವಾಗುತ್ತಿದೆ. ಕೇವಲ ದೊಡ್ಡವರು ಮಾತ್ರವಲ್ಲ ಮಕ್ಕಳು ಸಹ ವಿಪರೀತ ಮೊಬೈಲ್ ಬಳಸುತ್ತಿದ್ದಾರೆ ಎನ್ನುವುದೆ ಯೋಚಿಸುವಂತ ವಿಷಯವಾಗಿದೆ.
ಗೇಮ್, ರೀಲ್ಸ್, ಸೋಷಿಯಲ್ ಮೀಡಿಯಾ ಅಂತ ಫುಲ್ ಡೇ ಮೊಬೈಲ್ನಲ್ಲಿ ಮುಳುಗಿರುವ ಮಕ್ಕಳು ಮುಂದೊಂದು ದಿನ ಮೊಬೈಲ್ ಸಿಗದೇ ಇರುವಾಗ ಅವರು ಯಾವ ಒತ್ತಡಕ್ಕೆ ಸಿಲುಕಬಹುದೆಂದು ಯೋಚಿಸಿ ನೋಡಿ. ಖಂಡಿತ ಅಂತ ಮಕ್ಕಳು ತೀವ್ರ ಮಾನಸಿಕ ಒತ್ತಡದಿಂದ ಬಳಲಿದ್ದಾರೆ ಎಂಬುದಾಗಿ ವೈದ್ಯರು ಹೇಳುತ್ತಾರೆ. ಮೊಬೈಲ್ ನ ರೇಡಿಯೇಷನ್ ಮಾನಸಿಕ ಒತ್ತಡಕ್ಕೆ ಕಾರಣವಾಗುವುದು. ಆದ್ದರಿಂದ ಪೋಷಕರಾದವರು ಮಕ್ಕಳಿಗೆ ಹೆಚ್ಚು ಮೊಬೈಲ್ ಕೈಗೆ ಸಿಗದ ಹಾಗೆ ನೋಡಿಕೊಳ್ಳುವುದು ತುಂಬಾ ಉತ್ತಮ. ಹಾಗೆ ಮಾಡುವುದರಿಂದ ಮುಂದೊಂದು ದಿನ ಬರುವಂತಹ ಮಾನಸಿಕ ಸಮಸ್ಯೆಗಳಿಂದ ಮಕ್ಕಳನ್ನು ಪಾರುಮಾಡಬಹುದು.