ತ್ವರಿತ ಸಂದೇಶ ಕಳುಹಿಸಲು ವಾಟ್ಸ್ ಆಪ್ ಸಖತ್ ಫಾಸ್ಟ್ ಆಗಿದ್ದು, ಅದರಲ್ಲಿನ ಫೀಚರ್ಸ್ ಎಲ್ಲರ ಮನಗೆದ್ದಿದೆ. ಇದರಲ್ಲಿನ ಫಾಂಟ್, ಎಮೋಜಿ, ವಿಡಿಯೋ, ಫೋಟೋ ಶೇರ್ ಮಾಡಲು ಇರುವ ಅವಕಾಶ ಎಲ್ಲರಿಗೂ ಇಷ್ಟವಾಗಿದೆ. ಅದರಲ್ಲೂ ಜಿಫ್ ಫಾರ್ಮ್ಯಾಟ್ ನಲ್ಲಿ ಬರುವ ಸಣ್ಣ ವಿಡಿಯೋಗಳು ಮುಗುಳುನಗೆ ತರಲಿದೆ. ನೀವೇ ಜಿಫ್ ಮಾಡೋದು ಹೇಗೆ ಅಂತ ಇಲ್ಲಿದೆ ಸಿಂಪಲ್ ಸ್ಟೆಪ್ಸ್..
• ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ 6 ಸೆಕೆಂಡ್ ಗೂ ಮೀರದೆ ಒಂದು ಸಣ್ಣ ವೀಡಿಯೋ ಮಾಡಿಕೊಳ್ಳಿ.
• ವಾಟ್ಸ್ ಆಪ್ ನಲ್ಲಿ ಜಿಫ್ ಕಳುಹಿಸಲು ಬಯಸುವವರ ಚಾಟ್ ಓಪನ್ ಮಾಡಿಕೊಳ್ಳಿ.
• ಬಳಿಕ + ಆಯ್ಕೆ ಮೇಲೆ ಕ್ಲಿಕ್ ಮಾಡಿ, ಗ್ಯಾಲರಿ ಸೆಲೆಕ್ಟ್ ಮಾಡಿಕೊಳ್ಳಬೇಕು.
• ಅದು ನಿಮ್ಮನ್ನು ಗ್ಯಾಲೆರಿಗೆ ಕೊಂಡೊಯ್ಯುತ್ತದೆ. ಅಲ್ಲಿ ನಿಮ್ಮ ಶಾರ್ಟ್ ವೀಡಿಯೋ ಸೆಲೆಕ್ಟ್ ಮಾಡಿ..
• ಅದು ವಾಟ್ಸ್ ಆಪ್ ನಲ್ಲಿ ಓಪನ್ ಆಗಲಿದೆ. ಆಗ ವಿಡಿಯೋದ ಬಲ ಭಾಗದಲ್ಲಿ ಸಣ್ಣ 2 ಬಟನ್ ಇರುತ್ತದೆ (ವಿಡಿಯೋ, GIF).
• ಅದರಲ್ಲಿ ಜಿಫ್ ಆಯ್ಕೆ ಮಾಡಿಕೊಂಡರೆ ನಿಮ್ಮ ವಿಡಿಯೋ GIF ಆಗಿ ಬದಲಾಗುತ್ತದೆ.