ಪ್ರೀಮಿಯಂ ಸ್ಮಾರ್ಟ್ಫೋನ್ ಬ್ರ್ಯಾಂಡ್ ಪ್ರಸಿದ್ಧ ಒನ್ಪ್ಲಸ್ ಕಂಪನಿ ಭಾರತದಲ್ಲಿ ಎರಡು ಬಹುನಿರೀಕ್ಷಿತ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿದೆ. ಒನ್ಪ್ಲಸ್ ನಾರ್ಡ್ 3 5G ಮತ್ತು ಒನ್ಪ್ಲಸ್ ನಾರ್ಡ್ CE 3 5G ಎಂಬ ಎರಡು ಮೊಬೈಲ್ ನ್ನು ಕಂಪನಿ ದೇಶದಲ್ಲಿ ಎಲ್ಲಾ ಕಡೆ ಬಿಡುಗಡೆ ಮಾಡಿದ್ದಾರೆ.
ನಾರ್ಡ್ 3 ಮತ್ತು ನಾರ್ಡ್ CE 3 ಫೋನಿನ ಈ ಎರಡೂ ಫೋನ್ನಲ್ಲಿ ಆಕರ್ಷಕ ಫೀಚರ್ಗಳನ್ನು ನೀಡಲಾಗಿದ್ದು ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಸೇರಿದಂತೆ ಎಲ್ಲ ಆಯ್ಕೆ ಬೆಲೆಗೆ ತಕ್ಕಂತೆ ನೀಡಲಾಗಿದೆ.
ಒನ್ಪ್ಲಸ್ ನಾರ್ಡ್ 3 5G ಸ್ಮಾರ್ಟ್ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 128GB ವೇರಿಯೆಂಟ್ಗೆ 33,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 16GB RAM + 256GB ಸ್ಟೋರೇಜ್ ರೂಪಾಂತರಕ್ಕೆ 37,999 ರೂ. ಬೆಲೆಯನ್ನು ಫಿಕ್ಸ್ ಮಾಡಲಾಗಿದೆ. ಇದು ಜುಲೈ 15 ರಿಂದ ಅಮೆಜಾನ್ನಲ್ಲಿ ಖರೀದಿಗೆ ಸಿಗಲಿದೆ.
ಒನ್ಪ್ಲಸ್ ನಾರ್ಡ್ CE 3 5G ಸ್ಮಾರ್ಟ್ಫೋನ್ ಕೂಡ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 8GB RAM + 128GB ವೇರಿಯೆಂಟ್ಗೆ 26,999 ರೂ. ನಿಗದಿ ಮಾಡಲಾಗಿದೆ. ಅಂತೆಯೆ 12GB RAM + 256GB ಸ್ಟೋರೇಜ್ ರೂಪಾಂತರಕ್ಕೆ 28,999 ರೂ. ಇದೆ. ಈ ಫೋನ್ ಆಗಸ್ಟ್ನಲ್ಲಿ ಮಾರಾಟ ಕಾಣಲಿದೆ ಎಂದು ಕಂಪನಿ ಹೇಳಿದೆ.
ಈ ಸ್ಮಾರ್ಟ್ಫೋನ್ 6.74-ಇಂಚಿನ 120Hz ರಿಫ್ರೆಶ್ರೇಟ್ ಇರುವ AMOLED ಡಿಸ್ ಪ್ಲೇಯನ್ನು ಹೊಂದಿದೆ. 93.5% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 9000 ಚಿಪ್ಸೆಟ್ ಮೂಲಕ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು, 80W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ನಾರ್ಟ್ 3 ಕ್ಯಾಮೆರಾ ಅದ್ಭುತವಾಗಿದೆ. ಪ್ರಾಥಮಿಕ ಕ್ಯಾಮೆರಾ 50MP ಸೋನಿ IMX890 ಸೆನ್ಸಾರ್ ನ್ನು ಸೆಟ್ ಮಾಡಲಾಗಿದೆ. 8MP ಅಲ್ಟ್ರಾ-ವೈಡ್ ಲೆನ್ಸ್, 2MP ಮ್ಯಾಕ್ರೋ ಕ್ಯಾಮೆತಾ ಮತ್ತು ಸೆಲ್ಫಿಗಳಿಗಾಗಿ 16MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು ಇತ್ತೀಚಿನ OxygenOS 13.1 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಒನ್ಪ್ಲಸ್ ನಾರ್ಡ್ CE 3 5G ಫೀಚರ್ಸ್:
ಇದು 120Hz ರಿಫ್ರೆಶ್ ದರದೊಂದಿಗೆ 6.7-ಇಂಚಿನ AMOLED ಡಿಸ್ ಪ್ಲೇಯನ್ನು ಹೊಂದಿದೆ. ಕ್ವಾಲ್ಕಂ ಸ್ನಾಪ್ಡ್ರಾಗನ್ 782G ಪ್ರೊಸೆಸರ್ ಅಳವಡಿಸಲಾಗಿದೆ. ಇದು 80W ವೇಗದ ಚಾರ್ಜಿಂಗ್ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ನಾರ್ಡ್ CE 3 ಹಿಂಭಾಗ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದರಲ್ಲಿ ಪ್ರಾಥಮಿಕ ಕ್ಯಾಮೆರಾ 50MP, 8 MP ಅಲ್ಟ್ರಾವೈಡ್-ಆಂಗಲ್ ಕ್ಯಾಮೆರಾ ಮತ್ತು 2 MP ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿಗಾಗಿ ಇದು 16MP ಕ್ಯಾಮೆರಾವನ್ನು ಇಡಲಾಗಿದೆ.
ಈ ಸ್ಮಾರ್ಟ್ಫೋನ್ಗಳ ಜೊತೆಗೆ, ಒನ್ಪ್ಲಸ್ನ ಹೊಸ ಒನ್ಪ್ಲಸ್ ನಾರ್ಡ್ ಬರ್ಡ್ಸ್ 2r ಅನ್ನು 2,199 ರೂ. ಗೆ ಬಿಡುಗಡೆ ಮಾಡಲಾಗಿದೆ. ಇದು 12.4mm ಡ್ರೈವರ್ಸ್, ಡ್ಯುಯಲ್ ಮೈಕ್ಗಳು ಮತ್ತು ಹೊರಗಿನ ಶಬ್ದವನ್ನು ಫಿಲ್ಟರ್ ಮಾಡುವ ಹಾಗೂ ಧ್ವನಿಗಳನ್ನು ಸ್ಪಷ್ಟವಾಗಿ ಸೆರೆಹಿಡಿಯುವ ‘AI- ಕ್ಲಿಯರ್ ಕಾಲ್ ಅಲ್ಗಾರಿದಮ್’ ನಿಂದ ಕಾರ್ಯನಿರ್ವಹಿಸಲಿದೆ.
ಒಟ್ಟಿನಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಕ್ವಾಲಿಟಿಯ ಈ ಫೋನ್ ಮಾರುಕಟ್ಟೆಗೆ ಆದಷ್ಟು ಬೇಗ ಬರಲಿದೆ.