ನಟ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವರ್ಷಗಳ ಬಳಿಕ ಮತ್ತೆ ತಮ್ಮ ಅಭಿಮಾನಿಗಳೊಟ್ಟಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪ್ರಜ್ವಲ್ರ ಹುಟ್ಟುಹಬ್ಬದ ದಿನ ಅವರ ಸಿನಿಮಾಗಳ ಅಪ್ಡೇಟ್ಗಳು ಹೊರಬಿದ್ದಿವೆ. ಭೂತಕಾಲ-ಭವಿಷ್ಯತ್ ಹೀಗೆ ಭಿನ್ನ ಕಥಾಹೊಂದಿರುವ ಸಿನಿಮಾ ಇದಾಗಿದೆ ಎಂಬ ಸುಳಿವು ಟೀಸರ್ನಲ್ಲಿದೆಯಂತೆ.
ಗಣ ಸಿನಿಮಾದ ಟೀಸರ್ ಅನ್ನು ಪ್ರಜ್ವಲ್ ಅವರ ತಾಯಿ ಚಂದ್ರಲೇಖ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಪ್ರಜ್ವಲ್ರ ತಂದೆ ಡೈನಮಿಕ್ ಸ್ಟಾರ್ ದೇವರಾಜ್, ರಾಗಿಣಿ ಪ್ರಜ್ವಲ್ ಹಾಗೂ ಪ್ರಣಾಮ್ ದೇವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗಣ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ಸ್ ನಡೆಯುತ್ತಿದೆ. ಈವರೆಗೂ ಪ್ರಜ್ವಲ್ ದೇವರಾಜ್ ಅವರು ಮಾಡಿರದ ಪಾತ್ರ ಗಣ ಸಿನಿಮಾದಲ್ಲಿ ಮಾಡಿದ್ದಾರೆ. ಹರಿಪ್ರಾಸಾದ್ ಜಕ್ಕ ಈ ಸಿನಿಮಾದ ನಿರ್ದೇಶನ ಮಾಡಿರುತ್ತಾರೆ.
ಪ್ರಜ್ವಲ್ ದೇವರಾಜ್ ಈ ಸಿನಿಮಾದ ಬಗ್ಗೆ ಮಾತನಾಡುತ್ತಾ,’ಗಣ’ ನಾನು ಈವರೆಗೂ ಮಾಡಿರುವ ಸಿನಿಮಾಗಳಲ್ಲೇ ಬೇಗ ಚಿತ್ರೀಕರಣ ಮುಗಿದಿರುವ ಸಿನಿಮಾ. ಹಾಗೂ ಭಿನ್ನವಾದ ಜಾನರ್ ಕತೆಯುಳ್ಳ ಸಿನಿಮಾ ಸಹ. 1993 ಹಾಗೂ 2023 ಎರಡು ಕಾಲಘಟ್ಟದಲ್ಲಿ ಈ ಕಥೆ ನಡೆಯುತ್ತದೆ. ಸಮಯದ ಜೊತೆ ಹೋರಾಡುವ ಕತೆ. ನನ್ನ ಜೊತೆ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕೆಲಸ ಬಹಳ ಅದ್ಭುತ. ನಮ್ಮ ಸಿನಿಮಾಕ್ಕೆ ಅಭಿಮಾನಿಗಳು ಪ್ರೇಕ್ಷಕರ ಪ್ರೋತ್ಸಾಹ ಇರಲಿ ಎಂದು ಕೇಳಿಕೊಂಡರು.
ಗಣ ಸಿನಿಮಾದಲ್ಲಿ ನಟಿಸಿರುವ ಕೃಷಿ ತಾಪಂಡ, ವೇದಿಕ, ಮಾಸ್ಟರ್ ರಘುನಂದನ್, ಶಿವರಾಜ್ ಕೆ.ಆರ್ ಪೇಟೆ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಕಲಾ ನಿರ್ದೇಶಕ ಸತೀಶ್, ಛಾಯಾಗ್ರಹಕ ಜೈ ಆನಂದ್, ಎಡಿಟರ್ ಹರೀಶ್ ಕೊಮ್ಮೆ ಹಾಗೂ ಗೋಪಿ ಅವರು “ಗಣ” ಸಿನಿಮಾ ಬಗ್ಗೆ ಮಾತನಾಡಿ ತಮ್ಮ ಮೆಚ್ಚುಗೆ ತಿಳಿಸಿದರು. ಸಿನಿಮಾ ಮಾತ್ರ ಹೇಗಿದೆ ಎಂದು ಕಾದು ನೋಡಬೇಕಾಗಿದೆ.