ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯ ಚಕ್ಷಗುರುಂ ಇರಿತಂ ಏನ ತಸ್ಮೆಶ್ರೀ ಗುರುವೇ ನಮಃ
ಅಜ್ಞಾನದ ಕತ್ತಲೆಯೊಳಗಿದ್ದನಮ್ಮನ್ನು ಜ್ಞಾನದತ್ತ, ಬೆಳಕಿನ ಕಡೆಗೆ ಕರೆದೊಯ್ಯುವ ಗುರುಗಳಿಗೆ ಪ್ರಣಾಮಗಳು ! ‘’ಗುರು” ಎಂದ ತಕ್ಷಣವೇ ಪ್ರತಿಯೋಬ್ಬನ ಮನಸ್ಸಿನಲ್ಲಿ ಒಬ್ಬ ವ್ಯಕ್ತಿಯ ಚಿತ್ರ ಪ್ರಕಟವಾಗುತ್ತದೆ. ಆ ಚಿತ್ರ ಅವರ ಸ್ವರೂಪವನ್ನು ಉದ್ಧರಿಸಿದ ಗುರುವೇ ಆಗಿರುತ್ತಾನೆ ಎಂಬ ಅಭಿಪ್ರಾಯ ನನ್ನದು. ಕೇವಲ ಶಾಲೆ –ಕಾಲೇಜಿನಲ್ಲಿ ವಿಧ್ಯಾರ್ಥಿಗಳ ಜ್ಞಾನ ದಾಹವನ್ನು ತೀರಿಸುವ ಶಿಕ್ಷಕರೇ ಗುರುಗಳು ಎಂದರೆ ಸರಿಯಲ್ಲ ವ್ಯಕ್ತಿಯ ದಿನನಿತ್ಯದ ಜೀವನದಲ್ಲಿ ಯಾವ ಹೊಸ ವಿಷಯಗಳನ್ನು ನಾವು ನಮ್ಮ ಸುತ್ತಮುತ್ತಲಿನವರಿಂದ ಕಲಿಯುತ್ತೆವೆಯೋ ಅವರೆಲ್ಲಾ ನಮ್ಮ ಗುರುಗಳೇ ಅದು ತಂದೆ- ತಾಯಿ ಸಹಪಾಠಿ ಮಿತ್ರರು ಯಾರೇ ಆಗಿದ್ದರು ಅವರು ನಮ್ಮ ಪಾಲಿನ ಗುರುಗಳೇ ಆಗಿರುತ್ತಾರೆ.
‘’ಕೆಲವಂ ಬಲ್ಲವರಿಂದ ಕಲಿತು ಕೆಲವಂ ಶಾಸ್ತ್ರಂಗಳಂ ಕೇಳುತಂ ಕೆಲವಂ ಮಾಳ್ವವರಿಂದ ಕಲಿತು ಕೆಲವಂ ಸುಜ್ಞಾನದಿ ನೂಡುತಂ ಕೆಲವಂ ಸಜ್ಜನ ಸಂಘದಿಂದ ಅರಿಯಲ್ ಸರ್ವಜ್ಞನಪ್ಪಂ ನರಂ’ ಎಂದು ಸೋಮೇಶ್ವರ ತನ್ನ ಸೋಮೇಶ್ವರ ಶತಕದಲ್ಲಿ ಹೇಳಿದ್ದಾನೆ. ಅಂದರೆ ಕೆಲವು ವಿಷಯಗಳನ್ನು ಶಾಸ್ತ್ರಗಳಿಂದ ಕೆಲವು ವಿಷಯಗಳನ್ನು ಬಲ್ಲವರಿಂದ ಕೆಲವೊಂದು ಮಾಡುವವರಿಂದ , ಸುಜ್ಞಾನದಿಂದ ಮತ್ತು ಇನ್ನು ಕೆಲವನ್ನು ಸಜ್ಜನರ ಸಂಘದಿಂದ ತಿಳಿಯಲು ಮನುಷ್ಯನು ಸರ್ವಜ್ಞನಗುತ್ತಾನೆ .
ಗುರುವಿನ ಮಹತ್ವವನ್ನು ತಿಲಿಸಲೆಂದೇ ಸ್ವತಃ ಸರ್ವಜ್ಞನಾಗಿದ್ದ ಶ್ರೀ ಕೃಷ್ಣನು ಸಂದಿಪನಿ ಎಂಬ ಗುರುವಿನ ಬಳಿ ವಿದ್ಯೆಯನ್ನು ಪಡೆದರೇ , ಅದೇ ಕರ್ಣನು ಪರಶುರಾಮರ ಬಳಿ ವಿದ್ಯೆಯನ್ನು ಪಡೆದನು ಆದರೆ ಪರಶುರಾಮರು ಕೇವಲ ಬ್ರಾಹ್ಮಣರಿಗೆ ಮಾತ್ರ ವಿದ್ಯೆಯನ್ನು ನೀಡುತ್ತಿದ್ದು ಕರ್ಣನು ತಾನು ಒಬ್ಬ ಬ್ರಾಹ್ಮಣನೆಂದು ಸುಳ್ಳು ಹೇಳಿ ವಿದ್ಯೆಯನ್ನು ಪಡೆದನು ನಂತರ ಗುರುಗಳಿಗೆ ಅದು ತಿಳಿದು ತನ್ನ ಪರಮ ಶತ್ರುವಿನೊಡನೆ ಯುದ್ಧ ಮಾಡುವಾಗ ತನ್ನ ರಥದ ಚಕ್ರ ರೊಚ್ಚಿನಲ್ಲಿ ಸಿಕ್ಕಿಹಾಕಿ ಕೊಳ್ಳಲೆಂದು ಶಾಪವನ್ನು ಪಡೆದನು . ಅದರಂತೆ ಅರ್ಜುನನೊಡನೆ ಯುದ್ಧ ಮಾಡುವಾಗ ಚಕ್ರ ಸಿಕ್ಕಿಹಾಕಿ ಕೊಳ್ಳುತ್ತದೆ ಆಗ ಕರ್ಣ ಅರ್ಜುನನ ಬಾಣದಿಂದ ಮೃತನಾಗುತ್ತಾನೆ , ಅಂತೆಯೇ ಗುರು ದ್ರೋಹ ಮಾಡಿದರೆ ಏನಾಗುತ್ತದೆ ಎಂದು ಗುರುಗಳೇ ನಮಗೆ ತಿಳಿಸಿ ಕೊಡುತ್ತಾರೆ .
ಅದೇ ಅರ್ಜುನ ತನ್ನ ಗುರು ದ್ರೋಣರಿಗೆ ವಿಧೇಯಕನಾಗಿದ್ದ ಅಂತೆಯೇ ದ್ರೋಣರು ಸಹ ತಮ್ಮ ಸಮಸ್ತ ವಿದ್ಯೆಯನ್ನು ಧಾರೆ ಎರೆದು ಅರ್ಜುನನನ್ನು ಬಿಲ್ವಿದ್ದೆಯಲ್ಲಿ ಅಪ್ರತಿಮ ಶೂರನನ್ನಾಗಿ ಮಾಡಿ ಜಗತ್ತಿಗೆ ಪರಿಚಯಿಸಿದರು . ಇದು ಗುರು ಕಾರುಣ್ಯವನ್ನು ತೋರಿಸುತ್ತದೆ. ಕಲ್ಲಿನ ರೂಪದಲ್ಲಿದ್ದ ನಮ್ಮನ್ನು ತಮ್ಮ ಜ್ಞಾನದ ಆಯುಧದಿಂದ ತಿದ್ದಿ-ತೀಡಿ ನಮ್ಮನ್ನು ಸುಂದರ ಮೂರ್ತಿಯನ್ನಾಗಿ ಮಾಡಿ ಸಮಾಜಕ್ಕೆ ನಮ್ಮನ್ನು ಅರ್ಪಣೆ ಮಾಡುವಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿರುತ್ತದೆ ಎಂದು ತಿಳಿಯಬೇಕಾಗಿದೆ .
ಗುರು ಆಗ ಮತ್ತು ಈಗ :
ಭಾರತದಲ್ಲಿ ಮಾತ್ರವಲ್ಲದೆ ಇಡಿ ಜಗತ್ತಿನಲ್ಲಿ ಅತ್ಯಂತ ದೊಡ್ಡದಾದ ಮತ್ತು ಶ್ರೇಷ್ಠವಾದ ಪರಂಪರೆ ಎಂದರೆ ಅದು ಗುರು ಪರಂಪರೆ.ಇದು ಜಗತ್ತಿನ ಪ್ರತಿಯೊಂದು ದೇಶದಲ್ಲೂ ತನ್ನದೆಯಾದ ಮಹತ್ವವನ್ನು ಪಡೆದಿದೆ. ಅದು ಆ ದೇಶದ ಆಧ್ಯಾತ್ಮಿಕ ಅಥವಾ ಸಾಮಾಜಿಕ ಸುಧಾರಕರಾಗಿದ್ದು ಗುರು ಸ್ಥಾನವನ್ನು ಪಡೆದಿರಬಹುದು. ಆದರೆ ಅವರ ಮುಖ್ಯ ಉದ್ದೇಶ ತಮ್ಮ ಅನುಯಾಯಿಗಳನ್ನು ಮಾರ್ಗದರ್ಶಿಸಿ ಅವರ ಜೀವನವನ್ನು ಸಫಲಗೊಳಿಸುದಾಗಿದೆ .
ಅಂತೆಯೇ ಜಗತ್ತಿನ ವಿವಿಧ ಭಾಗದಲ್ಲಿ ಕಾಲಕಾಲಕ್ಕೆ ಅನೇಕ ದಾರ್ಶನಿಕರು ತಮ್ಮ ಜ್ಞಾನ ಪ್ರಸಾರ ಕಾರ್ಯವನ್ನು ಮಾಡಿದ್ದಾರೆ. ಪ್ಲೇಟೋ, ಅರಿಸ್ಟಾಟಲ್, ಕನ್ಫುಶೀಯಸ್ ಇವರೆಲ್ಲರೂ ಪಾಶ್ಚಾತ್ಯ ದೇಶದಲ್ಲಿದ್ದ ಮಾರ್ಗದರ್ಶಿಗಳಾದರೆ ; ಇಂತಹ ಅನೇಕ ಗುರುಗಳ ದಂಡೆ ಭಾರತದಲ್ಲಿದೆ . ಇದರಲ್ಲಿ ಮಹರ್ಷಿ ವ್ಯಾಸ, ವಾಲ್ಮಿಕಿ,ಚಾರ್ವಾಕಗಳಾದರೆ ಅನಂತರ ಜನಿಸಿದ ಗೌತಮ ಬುದ್ದ , ಮಹಾವೀರರು ಜನಿಸಿ ವಿಶ್ವಕ್ಕೆ ಭಾರತದ ಜ್ಞಾನದ ಬೆಳಕನ್ನು ಹರಿಸಿದರು. ನಂತರ ಗೀತೆಗೆ ತಮ್ಮದೇಯಾದ ರೀತಿಯಲ್ಲಿ ಭಾಷ್ಯವನ್ನು ರಚಿಸಿದ ಶಂಕರ-ಮಧ್ವ ಮತ್ತು ರಾಮಾನುಜಾಚಾರ್ಯರು ಜನಿಸಿ ದ್ವೆತ , ಅದ್ವೆತ , ವಿಶಿಷ್ಟ ಅದ್ವೆತ ಮತವನ್ನು ಸ್ಥಾಪಿಸಿ ಗುರುಸ್ಥಾನವನ್ನು ಪಡೆದರು .
ಇನ್ನು ಇತಿಹಾಸದಲ್ಲೂ ಗುರು ಶಿಷ್ಯರ ಸಂಭಂದವನ್ನು ಇತಿಹಾಸದಲ್ಲಿ ಕಾಣಬಹುದು. ಚಂದ್ರಗುಪ್ತನನ್ನು ಚಂದ್ರಗುಪ್ತ ಮೌರ್ಯನನ್ನಾಗಿಸಿ ಮೌರ್ಯ ವಂಶದ ಸ್ಥಾಪನೆಗೆ ಕಾರಣರಾದವರು ಆಚಾರ್ಯ ಚಾಣಕ್ಯ. ಹಿಂದೂ ಸಾಮ್ರಾಜ್ಯದ ಸ್ಥಾಪನೆಗೆ ಪಣತೊಟ್ಟ ಶಿವಾಜಿ ಮಹಾರಾಜರಿಗೆ ಗುರುಗಳಾಗಿದ್ದು ದಾದಾಜಿ ಕೊಂಡದೇವ ಮತ್ತು ತಾಯಿ ಜೀಜಾಬಾಯಿ. ಇನ್ನು ಆಧುನಿಕ ಸಮಾಜದಲ್ಲಿ ಗುರು ಶಿಷ್ಯರ ಸಂಭಂದ ಅವಿನಾಭಾವದ್ದಾಗಿದೆ. ಇದರಲ್ಲಿ ಭಾರತದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಕೊಂಡೊಯ್ದ ಭಾರತದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಮರೆಯುವಂತಿಲ್ಲ ಅವರ ಗುರು ಶ್ರೀ ರಾಮಕೃಷ್ಣ ಪರಮಹಂಸರು . ಕಾಳಿ ಮಾತೆಯ ದರ್ಶನವನ್ನು ಮಾಡಿಸಿ ವಿಶ್ವಕ್ಕೆ ವಿಶ್ವಗುರುವನ್ನು ಕೊಟ್ಟಂತಹ ಸಾಧನೆ ಶ್ರೀ ಪರಮಹಂಸರದ್ದು . ಓಶೋ , ಮಹರ್ಷಿ ಅರಬಿಂದೋ ಇವರು ಭಾರತದ ಆಧ್ಯಾತ್ಮಿಕ ಗುರುಗಳು ಎನಿಸಿಕೊಂಡಿದ್ದಾರೆ.
ರಾಜಕೀಯದಲ್ಲಿಯೂ ಸಹ ಗುರು ಶಿಷ್ಯರ ಪರಂಪರೆಯನ್ನು ಕಾಣಬಹುದಾಗಿದೆ . ಗೋಪಾಲಕೃಷ್ಣ ಗೋಖಲೆಯವರು ತಮ್ಮ ವಿಶ್ವ ಮಾನವ ಶಿಷ್ಯ ಮಹಾತ್ಮಾ ಗಾಂಧಿಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದರು . ಅದರಂತೆ ಸಾಹಿತ್ಯ ಕ್ಷೇತ್ರದಲ್ಲೂ ಗುರು ಶಿಷ್ಯ ಪರಂಪರೆಯನ್ನು ಕಾಣಬಹುದಾಗಿದೆ .
ಸಮಾಜದ ಪ್ರತಿಯೊಬ್ಬ ಖ್ಯಾತ ವ್ಯಕ್ತಿಯ ಹಿಂದೆ ಗುರುವಿನ ಪಾತ್ರ ಅತ್ಯಂತ ಪ್ರಮುಖವಾಗಿದೆ . ಕೇವಲ ದಿನಪತ್ರಿಕೆಯನ್ನು ಮಾರುತ್ತಿದ್ದ ಯುವಕನ್ನು ಭಾರತದ ರಾಷ್ಟ್ರಪತಿಗಳನ್ನಾಗಿಸಿದ, ಕೀರ್ತಿ ಅವರ ಗುರುಗಳಾದ ಅಯ್ಯಾದೊರೆ ಸೋಲೆಮಾನ ಇವರಿಗೆ ಈ ಸಲ್ಲುತ್ತದೆ ಎಂದು ಡಾ ಕಲಾಂ ಅವರೇ ತಿಳಿಸಿದ್ದಾರೆ. ಇದರ ಮುಖಾಂತರ ಅವರಿಗೆ ತಮ್ಮ ಗುರುಗಳಲ್ಲಿ ಮತ್ತು ತಮ್ಮ ವೃತ್ತಿಯಲ್ಲಿ ಹೊಂದಿದ ಶ್ರದ್ಧೆಯನ್ನು ತಿಳಿಸುತ್ತದೆ . ಗುರು ಎಂಬ ಶಬ್ದದ ಅರ್ಥವೇ ಜ್ಞಾನ ,ಬೆಳಕು ಅಂತಹ ಗುರುಗಳ ಸ್ಮರಣೆ ಮಾರ್ಗದರ್ಶನ ಸದಾ ಇರಲಿ ಎಲ್ಲರಿಗೂ ಗುರುಪೂರ್ಣಿಮೆಯ ಶುಭಾಷಯಗಳು.