ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದು ಆಸ್ಕರ್ ಪುರಸ್ಕಾರ. ಈ ಪುರಸ್ಕಾರ ಪ್ರಧಾನ ಸಮಾರಂಭವನ್ನು ಪ್ರತಿವರ್ಷ ಒಂದು ನೂರು ದೇಶಗಳಲ್ಲಿ ದೂರದರ್ಶನದ ಮೂಲಕ ನೇರಪ್ರಸಾರ ಮಾಡಲಾಗುತ್ತಿದೆ.
ಈ ಆಸ್ಕರ್ ಸಮಿತಿಯಲ್ಲಿ 10 ಸಾವಿರ ಸದಸ್ಯರು ಇದ್ದಾರೆ. ಪ್ರಪಂಚದ ಬೇರೆ ಬೇರೆ ದೇಶಗಳ ವಿವಿಧ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ಈ ಸಮಿತಿಯಲ್ಲಿ ಸೇರಿಸಲಾಗುತ್ತದೆ.
ಭಾರತೀಯ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಈಗಿಗ ಹೆಸರುಗಳಿಸುತ್ತಿವೆ. ಆಸ್ಕರ್ ಪಡೆಯವ ಹಂತಕ್ಕೆ ನಮ್ಮ ಭಾರತೀಯ ಸಿನಿಮಾಗಳು ಶೈನ್ ಆಗತ್ತಿವೆ ಅನ್ನುವುದೆ ಖುಷಿಯ ವಿಷಯ. ಅಲ್ಲದೇ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ವಿಶ್ವ ಮಟ್ಟದ ವೇದಿಕೆಗಳಲ್ಲಿ ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಎಂದರೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಕಮಿಟಿಯ ಸದಸ್ಯತ್ವವನ್ನು ಭಾರತದ ಕೆಲವರಿಗೆ ನೀಡಲಾಗುತ್ತಿದೆ.
‘ಆರ್ಆರ್ಆರ್’ ಸಿನಿಮಾದಿಂದ ಆಸ್ಕರ್ ವೇದಿಕೆಯಲ್ಲಿ ಮಿಂಚಿದ ಜೂನಿಯರ್ ಎನ್ಟಿಆರ್ ರಾಮ್ ಚರಣ್ ಸೇರಿದಂತೆ ಕೆಲವರಿಗೆ ಈ ಸದಸ್ಯತ್ವ ಸಿಕ್ಕಿರುವುದು ಸಾಧನೆಯೇ ಸರಿ. ನಿರ್ದೇಶಕರಾದ ಕರಣ್ ಜೋಹರ್, ಮಣಿರತ್ನಂ ಅವರಿಗೂ ಈ ಆಫರ್ ನೀಡಲಾಗಿದೆ. ಇದು ಅವರ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.
ಪ್ರತಿ ವರ್ಷ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗುವ ಸಿನಿಮಾ ಮತ್ತು ಸೆಲೆಬ್ರಿಟಿಗಳಿಗೆ ಈ ಸೆಲೆಕ್ಟ್ ಆದ ಸದಸ್ಯರು ವೋಟ್ ಮಾಡುತ್ತಾರೆ. ಆ ಮೂಲಕ ಯಾರಿಗೆ ಪ್ರಶಸ್ತಿ ನೀಡಬೇಕು ಎಂಬುದು ನಿರ್ಧಾರ ಆಗುತ್ತದೆ. ಆಸ್ಕರ್ ಸದಸ್ಯತ್ವ ಇರುವ ಕೆಲವೇ ಭಾರತೀಯರ ಪಟ್ಟಿಗೆ ಈಗ ರಾಮ್ ಚರಣ್, ಕರಣ್ ಜೋಹರ್, ಜೂನಿಯರ್ ಎನ್ಟಿಆರ್ ಮುಂತಾದವರ ಹೆಸರು ಸೇರ್ಪಡೆ ಆಗುತ್ತಿರುವುದು ವಿಶೇಷವಾಗಿದೆ.
ಆರ್ಆರ್ಆರ್’ ಸಿನಿಮಾದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಮತ್ತು ಸಾಹಿತ್ಯ ಬರೆದ ಚಂದ್ರ ಬೋಸ್ ಅವರು ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದರು. ಅವರಿಗೂ ಕೂಡ ಆಸ್ಕರ್ ಸದಸ್ಯತ್ವ ಸ್ವೀಕರಿಸಲು ಆಹ್ವಾನದ ಕರೆ ಬಂದಿದೆ. ಕಾಸ್ಟಿಂಗ್ ನಿರ್ದೇಶಕ ಕೆಕೆ ಸೇಂಥಿಲ್ ಕುಮಾರ್, ಸಾಕ್ಷ್ಯಚಿತ್ರಗಳ ನಿರ್ಮಾಪಕ ಶೌನಕ್ ಸೇನ್ ಅವರಿಗೂ ಸದಸ್ಯತ್ವ ಸಿಗಲಿದೆ.
ವಿವಿಧ ದೇಶಗಳ ತಂತ್ರಜ್ಞರು ಮತ್ತು ಕಲಾವಿದರಿಗೆ ಅಕಾಡೆಮಿ ಸದಸ್ಯತ್ವ ನೀಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಆಸ್ಕರ್ ಆಯೋಜಕರು ಹೇಳಿಕೊಂಡಿದ್ದಾರೆ. ಭಾರತೀಯ ಸಿನಿಮಾಗಳಿಗೆ ಆಸ್ಕರ್ ಸಿಗುವುದು ಕಷ್ಟ ಎಂಬ ಮಾತು ಮೊದಲು ಕೇಳಿ ಬರುತ್ತಿತ್ತು. ಆದರೆ ಆ ಕಷ್ಟದ ಕೆಲಸವನ್ನು ಸಾಧಿಸಿ ತೋರಿಸಿದ್ದು ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು..’ ಹಾಡು. ಅಲ್ಲದೇ ಭಾರತದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಡಾಕ್ಯುಮೆಂಟರಿಗೂ ಈ ವರ್ಷ ಆಸ್ಕರ್ ಪ್ರಶಸ್ತಿ ಸಿಕ್ಕಿತು ಅದು ಹೆಮ್ಮೆಯ ವಿಷಯವಾಗಿದೆ.