ಬೇಸಿಗೆಯಲ್ಲಿ ಮುಖದ ಚರ್ಮ ತುಂಬಾನೇ ಡಲ್ ಆಗಗಿರುತ್ತದೆ. ಬಹುತೇಕರು ಮುಖದ ಕಾಂತಿಗಾಗಿ ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಬಳಸುತ್ತಾರೆ. ಮುಲ್ತಾನಿ ಮಿಟ್ಟಿ ಪುಡಿಗೆ ಹಾಲು, ರೋಸ್ ವಾಟರ್ ಬೆರೆಸಿ ಪ್ಯಾಕ್ ತಯಾರಿಸುತ್ತಾರೆ. ಆದರೆ ಬೇಸಿಗೆಯಲ್ಲಿ ಇದರೂಂದಿಗೆ ಇನ್ನೂಂದು ವಸ್ತು ಸೇರಿಸಿದರೆ ಮುಖದ ಕಾಂತಿ ದುಪ್ಪಟ್ಟಾಗುವುದರಲ್ಲಿ ಅನುಮನ ಇಲ್ಲ.
ಜೇನುತುಪ್ಪ ಮತ್ತು ಮುಲ್ತಾನಿ ಮಿಟ್ಟಿಯ ಫೇಸ್ ಪ್ಯಾಕ್ ಮಾಡಲು, ಒಂದು ಚಮಚ ಮುಲ್ತಾನಿ ಮಿಟ್ಟಿ ಪುಡಿಯನ್ನು ತೆಗೆದುಕೊಳ್ಳಿ. ನಂತರ ಅದಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ಎರಡು ಚಮಚ ರೋಸ್ ವಾಟರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ದಪ್ಪ ಪೇಸ್ಟ್ ಮಾಡಿಕೊಂಡು ನಂತರ ಅದನ್ನು ಮುಖಕ್ಕೆ ಹಚ್ಚಿ ಮತ್ತು ಅದು ಒಣಗುವವರೆಗೆ ಹಾಗೆ ಬಿಡಬೇಕು. ಒಣಗಿದ ನಂತರ ಮುಖವನ್ನು ನೀರಿನಿಂದ ತೊಳೆಯಿರಿ.
ಜೇನುತುಪ್ಪವು ಆಂಟಿ-ಆಕ್ಸಿಡೆಂಟ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಂಶಗಳಾಗಿವೆ. ಮುಲ್ತಾನಿ ಮಿಟ್ಟಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳಿಲ್ಲಿವೆ. ಇದರಿಂದಾಗಿ ಜೇನುತುಪ್ಪ ಮತ್ತು ಮುಲ್ತಾನಿ ಮಿಟ್ಟಿ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಜೇನುತುಪ್ಪ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಅನ್ನು ಬಳಸುವುದು ಬೇಸಿಗೆಯಲ್ಲಿ ಚರ್ಮಕ್ಕೆ ತಂಪು ನೀಡುತ್ತದೆ. ಇದನ್ನು ಹಚ್ಚುವುದರಿಂದ ತ್ವಚೆಯಲ್ಲಿ ಟ್ಯಾನ್ ಆಗುವ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.
ಜೇನುತುಪ್ಪ ಮತ್ತು ಮುಲ್ತಾನಿ ಮಿಟ್ಟಿಯನ್ನು ಬೆರೆಸಿ ಮುಖಕ್ಕೆ ಬಳಸುವುದರಿಂದ ಚರ್ಮಕ್ಕೆ ಹೊಳಪು ಬರುತ್ತದೆ. ತ್ವಚೆಯಲ್ಲಿನ ಕಪ್ಪನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ಜೇನುತುಪ್ಪ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಚರ್ಮದ ಮೇಲಿನ ಕಲೆಗಳು ಮತ್ತು ಮೊಡವೆಗಳ ಸಮಸ್ಯೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ
ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಮೊಡವೆಗಳು ಮತ್ತು ಮೊಡವೆಗಳ ಕಲೆಗಳನ್ನು ಅಳಿಸಿಹಾಕುವ ಮೂಲಕ ಚರ್ಮವನ್ನು ತಿಳಿಗೊಳಿಸುವಲ್ಲಿ ಸಹಾಯವಾಗುತ್ತದೆ.
ಜೇನು ಮತ್ತು ಮುಲ್ತಾನಿ ಮಿಟ್ಟಿಯಲ್ಲಿ ಮಾಯಿಶ್ಚರೈಸಿಂಗ್ ಏಜೆಂಟ್ ಗಳು ಇರುತ್ತವೆ. ಒಣಗಿದ ಚರ್ಮವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರಿಂದ ತ್ವಚೆ ಮೃದುವಾಗಿರುತ್ತದೆ. ಇದನ್ನು ಒಮ್ಮೆ ಉಪಯೋಗಿಸಿದರೆ ಅದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುವುದು