ಗೊರಕೆ ಎನ್ನುವುದು ಚಿಕ್ಕ ಸಮಸ್ಯೆಯಲ್ಲ ಗೊರಕೆಯು ಮನೆಮಂದಿಯ ನಿದ್ದೆಯನ್ನು ಕಸಿಯುತ್ತಿರಬಹುದು. ಇದು ಕೆಲವೊಮ್ಮೆ ದೊಡ್ಡ ಜಗಳಕ್ಕೂ ಕಾರಣವಾಗುತ್ತದೆ. ಇನ್ನು ಅದಕ್ಕೂ ಮೀರಿ ಕೆಲವೊಬ್ಬರ ದಾಂಪತ್ಯ ಜೀವನ ಬಿರುಕು ಮೂಡುವುದಕ್ಕೂ ಕಾರಣವಾಗುತ್ತದೆ. ಇಂತಹ ಗೊರಕೆ ಸಮಸ್ಯೆಯಿಂದ ಬೇಸತ್ತಿರುವವರು ಕೆಲವು ಮನೆ ಮದ್ದುಗಳಿಂದ ನಿವಾರಣೆ ಮಾಡಿಕೊಳ್ಳಬಹುದು.
ಹಬೆ ತೆಗೆದುಕೊಳ್ಳಿ:
ಒಂದು ಬಟ್ಟಲಿನಲ್ಲಿ ಸ್ವಲ್ಪ ಬಿಸಿನೀರನ್ನು ತೆಗೆದುಕೊಂಡು ಅದಕ್ಕೆ ನೀಲಗಿರಿ, ಬೇವು, ಪುದೀನಾ, ಯೂಕಲಿಪ್ಟಸ್ ಮತ್ತು ಲ್ಯಾವೆಂಡರ್ ಅಥವಾ ಯಾವುದೇ ಸಾರಭೂತ ಎಣ್ಣೆಯನ್ನು ಮೂರರಿಂದ ನಾಲ್ಕು ಹನಿಗಳನ್ನು ಸೇರಿಸಿ ಇದರ ಹಬೆಯನ್ನು ತೆಗೆದುಕೊಳ್ಳಿ. ಹಬೆಯನ್ನು ತೆಗೆದುಕೊಳ್ಳುವಾಗ ಉಚ್ಛ್ವಾಸ ಮತ್ತು ನಿಶ್ವಾಸಗಳನ್ನು ಮಾಡುವುದರಿಂದ ಮೂಗಿನಲ್ಲಿರುವ ಕಲ್ಮಶ ನಿವಾರಣೆಯಾಗಿ
ಬೆಳ್ಳುಳ್ಳಿ:
ಬೆಳ್ಳುಳ್ಳಿಯ ಸೂಕ್ಷ್ಮಜೀವಿಯ ವಿರೋಧಿ ಗುಣಲಕ್ಷಣಗಳಿಂದ ಕೂಡಿದ್ದು, ಮೂಗಿನ ಮಾರ್ಗದಲ್ಲಿರುವ ಲೋಳೆ ತೊಡೆದುಹಾಕಲು ಸಹಾಯ ಮಾಡುತ್ತದೆ. ಬರೀ ಸಾಮಾನ್ಯ ಶೀತದಿಂದಾಗಿ ನೀವು ಗೊರಕೆ ಹೊಡೆಯುತ್ತಿದ್ದರೆ, ಬೆಳ್ಳುಳ್ಳಿ ನಿಮಗೆ ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಹಸಿ ಬೆಳ್ಳುಳ್ಳಿ ಮತ್ತು ಲವಂಗವನ್ನು ಅಗಿಯಿರಿ. ನಂತರ ಒಂದು ಲೋಟ ನೀರನ್ನು ಕುಡಿಯಿರಿ.
ಅರಿಶಿನ :
ಅರಿಶಿನ ಗೊರಕೆ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುತ್ತದೆ. ಒಂದು ಗ್ಲಾಸ್ ಬಿಸಿ ಹಾಲಿಗೆ ಎರಡು ಚಮಚ ತಾಜಾ ಅರಿಶಿನ ಪುಡಿಯನ್ನು ಸೇರಿಸಿ, ಮಲಗುವ ಮುನ್ನ ಬೆರೆಸಿ ಕುಡಿಯಿರಿ. ಹೀಗೆ ಅರಶಿನವನ್ನು ಸೇವನೆ ಮಾಡುವುದರಿಂದ ಸಮಸ್ಯೆಯಿಂದ ಬಹುಬೇಗ ಗುಣಮುಖವಾಗಬಹುದಾಗಿದೆ.
ಬಿಸಿ ನೀರಿನ ಬಳಕೆ:
ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಬಿಸಿ ಬಿಸಿಯಾದ ನೀರನ್ನು ಸೇವನೆ ಮಾಡುವುದರಿಂದ ಸಾಮಾನ್ಯ ಶೀತದಿಂದ ಗಂಟಲಿನಲ್ಲಿ ಸಂಗ್ರಹವಾಗಿರುವ ಲೋಳೆಯಂತಹ ಅಂಶ ಕರಗುತ್ತದೆ. ಇದರಿಂದ ಗೊರಕೆ ಸಮಸ್ಯೆಯಿಂದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಏಲಕ್ಕಿ:
ಏಲಕ್ಕಿ ಅತ್ಯುತ್ತಮ ಎಕ್ಸ್ಪೆಕ್ಟೊರೆಂಟ್ ಮತ್ತು ಡಿಕೊಂಜೆಸ್ಟೆಂಟ್ ಹೊಂದಿದೆ. ಇದರಿಂದಾಗಿ ಉಸಿರಾಟದ ಜಾಗದ ಉದ್ದಕ್ಕೂ ಗಾಳಿಯನ್ನು ಸ್ಪಷ್ಟವಾಗಿ ಸಾಗಿಸಲು ಸಹಾಯ ಮಾಡುತ್ತದೆ. ಒಂದು ಲೋಟ ಬಿಸಿ ನೀರಿಗೆ ಸುಮಾರು ಒಂದೂವರೆ ಟೀಸ್ಪೂನ್ ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಮಲಗುವ ಮುನ್ನ ಕನಿಷ್ಠ ಅರ್ಧ ಘಂಟೆಯಾದರೂ ಮುಂಚೆ ಕುಡಿಯಿರಿ.
ಆಲ್ಕೊಹಾಲ್ ತ್ಯಜಿಸಿ:
ಆಲ್ಕೊಹಾಲ್ ನಿದ್ರಾಜನಕವಾಗಿ ಕಾರ್ಯನಿರ್ವಹಿಸುತ್ತದೆ, ನಿಮ್ಮ ಗಂಟಲಿನ ಹಿಂಭಾಗದಲ್ಲಿರುವ ಸ್ನಾಯುಗಳ ಮೇಲೆ ಉದ್ವೇಗವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ನಿಮ್ಮ ಗೊರಕೆಯ ಸಮಸ್ಯೆ ಹೆಚ್ಚಾಗುತ್ತದೆ. ತಂಬಾಕು ಹೊಗೆ, ಮತ್ತೊಂದೆಡೆ ಗಂಟಲಿನಲ್ಲಿರುವ ಲೋಳೆಯ ಪೊರೆಗಳನ್ನು ಸರಿಪಡಿಸುತ್ತದೆ. ಆದ್ದರಿಂದ ಈ ಎರಡನ್ನೂ ನೀವು ಸಂಪೂರ್ಣವಾಗಿ ಬಿಡಬೇಕು ಇದರಿಂದ ಗೊರಕೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.