ಬ್ರಿಟಿಷ್ ಸರಕಾರವು ಸಾವರಕರ ಮೂವರೂ ಸೋದರರನ್ನು ರಾಜದ್ರೋಹಿ ಹಾಗೂ ಅಪಾಯಕಾರಿಗಳೆಂದು ಘೋಷಿಸಿಬಿಟ್ಟಿತು. ಸಾವರಕರರು ಇಂಗ್ಲೆಂಡಿನಿಂದ ಪ್ಯಾರಿಸ್ಸಿಗೆ ಪ್ರಯಾಣ ಮಾಡಿದರು. ಪ್ಯಾರಿಸ್ಸಿನಲ್ಲಿ ಅವರಿಗೆ ತಮ್ಮಇತರೆ ಕ್ರಾಂತಿಕಾರಿಗಳ ನೆನಪು ಕಾಡಲು ಪ್ರಾರಂಭಿಸಿತು. ಅವರ ಕಠಿಣ ಸಮಯದಲ್ಲಿ ತಾವು ಈ ರೀತಿ ಸ್ವಚ್ಛಂದವಾಗಿರುವುದು ಅವರಿಗೆ ಸೂಕ್ತವೆನಿಸದ ಕಾರಣ ಅವರು ಪ್ಯಾರಿಸ್ಗೆ ತೆರಳಿದರು.
ಲಂಡನ್ ನಲ್ಲಿ ಸಾವರ್ಕರ್ ಅವರನ್ನು ರೇಲ್ವೆ ನಿಲ್ದಾಣದಲ್ಲೇ ಬಂಧಿಸಲಾಯಿತು. ಅವರ ಮೇಲೆ ಲಂಡನ್ನಿನ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಯಿತು. ನ್ಯಾಯಾಧೀಶರು “ಭಾರತದಲ್ಲಿ ಸಾವರಕರರ ಮೇಲೆ ಅನೇಕ ಕೇಸುಗಳಿರು ವುದರಿಂದ ಅವರನ್ನು ಭಾರತಕ್ಕೆ ಕರೆದೊಯ್ದು ಅಲ್ಲಿಯೇ ವಿಚಾರಣೆಗಳನ್ನು ನಡೆಸಬೇಕು ಎಂದು ನಿರ್ಣಯವನ್ನು ಕೊಟ್ಟುಬಿಟ್ಟರು. ಕೊನೆಗೆ ಜೂನ್ ತಿಂಗಳಿನಲ್ಲಿ ಸಾವರಕರರನ್ನು ಭಾರತಕ್ಕೆ ಕಳುಹಿಸುವ ಆದೇಶವು ಜಾರಿಯಾಗಿತ್ತು.
1909ರ ಜುಲೈ ನಲ್ಲಿ ‘ಮೋರಿಯಾ’ ಜಲಯಾನದ ಮುಖಾಂತರ ಸಾವರಕರರನ್ನು ಅತ್ಯಂತ ಬಿಗಿಯಾದ ಪೋಲಿಸ ರಕ್ಷಣೆ ಮತ್ತು ಬಂದೋಬಸ್ತಿನಲ್ಲಿ ಸಾವರ್ಕರ್ ಅವರನ್ನು ಭಾರತಕ್ಕೆ ಕರೆತರಲಾಯಿತು.
ಈ ಮಧ್ಯದಲ್ಲೇ ಸಾವರ್ಕರ್ ಪರಾರಿಯಾಗುತ್ತಾರೆ ಎಂಬ ವಾಸನೆಯು ಸಹ ಬ್ರಿಟಿಷ ಅಧಿಕಾರಿಗಳ ಮೂಗಿಗೆ ಬಡಿದಿತ್ತು. ಹೀಗಾಗಿ ಅವರ ಸುರಕ್ಷಾ ವ್ಯವಸ್ಥೆಯು ಅತ್ಯಂತ ಕಟ್ಟುನಿಟ್ಟಿನದಾಗಿತ್ತು. ತಾರೀಖು ಹಡಗು ಮಾರ್ಸೆಲ್ ಬಂದರವನ್ನು ಸಮೀಪಿಸುತ್ತಿದ್ದಂತೆಯೇ ಸಾವರಕರರು ಶೌಚದ ನೆಪದಿಂದ ಪಾಯಖಾನೆಗೆ ಹೊಕ್ಕಿದ್ದರು. ಅಲ್ಲಿದ್ದ ಸಣ್ಣ ಕಿಟಕಿಯಲ್ಲಿ ತಮ್ಮ ದೇಹವನ್ನು ಒಳಗೆ ನುಗ್ಗಿಸಲು ಪ್ರಯತ್ನಿಸಿದರು ಆದರೆ ಅದು ಸಾಧ್ಯವಾಗಲಿಲ್ಲ ಆಗ ಅವರ ತಲೆಯಲ್ಲಿ ಬಂದದ್ದೆ ಪ್ರಾಣಾಯಾಮ ಪ್ರಾಣಾಯಾಮದ ಮುಖಾಂತರ ದೇಹವನ್ನು ನಿಯಂತ್ರಣಕ್ಕೆ ತಂದು ಗಾಜನ್ನು ಒಡೆದು, ಅದೇ ಕಿಟಕಿಯ ಮುಖಾಂತರ ಅಲ್ಲಿಂದ ಅತ್ಯಂತ ನೈಪೂಣ್ಯತೆಯಿಂದ ಸಮುದ್ರಕ್ಕೆ ಹಾರಿದರು. ಹೀಗೆ ಹಾರುವಾಗ ಒಡೆದ ಗಾಜಿನ ಚೂರುಗಳು ಸಾವರ್ಕರ್ ಮೈಗೆ ಚುಚ್ಚಿದವು ಚರ್ಮವನ್ನು ಕತ್ತರಿಸಿತು.
ಹೀಗೆ ಕತ್ತರಿಸಿದ ದೇಹ ಅದರ ಮೇಲೆ ಸಮುದ್ರದ ಲವಣಯುಕ್ತ ನೀರು ಆ ಯಾತನೆಯನ್ನು ಕೇಳಿದರೇ ಮೈ ಝಂ ಎನ್ನುತ್ತದೆ.
ಅಧಿಕಾರಿಗಳಿಗೆ ಅವರು ಸಮುದ್ರದಲ್ಲಿ ಜಿಗಿದ ಸುದ್ದಿಯು ತಿಳಿಯು ತ್ತಿದ್ದಂತೆಯೇ ಬ್ರಿಟಿಷ್ ಆಫೀಸರುಗಳ ತಲೆಯ ಮೇಲೆ ಆಕಾಶವೇ ಕುಸಿದಂತಾಯಿತು. ಸಮುದ್ರದ ತೆರೆಗಳನ್ನು ಛೇದಿಸುತ್ತಾ ಮುನ್ನುಗುತ್ತಿದ್ದ ಸಾವರಕರರ ಮೇಲೆ ಗುಂಡಿನ ಮಳೆ ಸುರಿಸತೊಡಗಿದರು. ಸಾವರಕರರು ಫ್ರಾನ್ಸ್ದ ದಂಡೆಯ ಕಡೆಗೆ ಮುಂದುವರೆಯತೊಡಗಿದ್ದರು. ಕೆಲವೇ ಸಮಯದಲ್ಲಿ ಅವರು ದಂಡೆಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದರು ಕೂಡ. ಇಂತಹ ಸಂದಿಗ್ಧ ಪರಿಸ್ಥಿಯಲ್ಲೂ ಕೂಡ ಸಾವರ್ಕರ ವಿಚಾರ ಶಕ್ತಿಯನ್ನು ಎಂಥವರು ಮೆಚ್ಚಲೇ ಬೇಕಾದದ್ದು, ಅವರು ಬ್ರಿಟಿಷ ದಂಡೆಯ ಬಳಿ ಹೋಗದೆ ಫ್ರಾನ್ಸ ದಂಡೆಯ ಬಳಿ ಸೇರಿದರು ಕಾರಣ ರಾಜತಾಂತ್ರಿಕವಾಗಿ ಫ್ರಾನ್ಸ ಹಾಗೂ ಬ್ರಿಟಿಷರು ವಿರೋಧಿಗಳು ನಾನು ಫ್ರಾನ್ಸ ನೆಲದಲ್ಲಿದ್ದರೆ ಇಲ್ಲಿ ಬ್ರಿಟಿಷರ ಕಾನೂನು ಅನ್ವಯವಾಗುವದಿಲ್ಲ ಎಂಬ ಸಮಯಪ್ರಜ್ಞೆ ಅವರಲ್ಲಿತ್ತು ಆದರೂ ಸಹ ಬ್ರಿಟಿಷರು ಅನ್ಯಾಯದಿಂದ ಅವರನ್ನು ಬಂದಿಸಿದರು.
1910ರಲ್ಲಿ ಸಾವರ್ಕರ ಮೇಲೆ ವಿಚಾರಣೆ ಪ್ರಾರಂಭ ವಾಯಿತು. ಸಾವರ್ಕರಗೆ ಭಾರತದ ನ್ಯಾಯಾಲಯಗಳಿಂದ ತಮಗೆ ನ್ಯಾಯ ಸಿಗುವುದರ ಬಗ್ಗೆ ಒಂದು ಚುರೂ ವಿಶ್ವಾಸವಿಲ್ಲವೆಂದೂ, ಹೀಗಾಗಿ ತಾವು ತಮ್ಮ ಪರವಾಗಿ ಏನೂ ಹೇಳುವುದು ವ್ಯರ್ಥವೆಂದು ಹೇಳಿದರು. ಡಿಸೆಂಬರ ತಿಂಗಳ 23ರಂದು ನ್ಯಾಯಾಲಯವು ಅವರಿಗೆ ಬ್ರಿಟಿಷ್ ಸರ್ಕಾರದ ವಿರುದ್ಧ ಷಡ್ಯಂತ್ರವನ್ನು ರಚಿಸಿದ ಹಾಗೂ ರಿವಾಲ್ವರ್ ಇತ್ಯಾದಿ ಶಸ್ತ್ರಾಸ್ತ್ರಗಳನ್ನು ಭಾರತಕ್ಕೆ ಕಳಿಸಿರುವ ಆಪಾದನೆಗಳನ್ನು ಹೊರಿಸಿ ಆಜೀವ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಿತು. ಅವರ ಎಲ್ಲಾ ಸಂಪತ್ತನ್ನೂ ವಶಪಡಿಸಿಕೊಳ್ಳಲಾಯಿತು.
1911ರಲ್ಲಿಅವರ ವಿರುದ್ಧ ಇನ್ನೊಂದು ವಿಷಯದಲ್ಲಿಯೂ ವಿಚಾರಣೆಯು ಪ್ರಾರಂಭವಾಗಿತ್ತು. 30ನೆಯ ಜನವರಿ ಯಂದು ಮತ್ತೆ ಆಜೀವ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಲಾಗಿತ್ತು. ಈ ರೀತಿಯಲ್ಲಿ ಸಾವರ್ಕರಗೆ ಎರಡು ಆಜೀವ ಕಾರಾಗೃಹವಾಸದ ದಂಡನೆಯನ್ನು ವಿಧಿಸಲಾಗಿತ್ತು. ಸಾವರಕರರಿಗೆ ಈ ರೀತಿಯಲ್ಲಿ ಎರಡು ಆಜೀವ ಕಾರಾಗೃಹ ವಾಸದ ಶಿಕ್ಷೆಗಳನ್ನು ವಿಧಿಸಿದಾಗ, ಅವರು ನಗುತ್ತ, “ನನಗೆ ಇಂದು ಬಹಳ ಖುಷಿಯಾಗಿದೆ. ಏಕೆಂದರೆ ಕ್ರಿಶ್ಚಿಯನ್’ ಎಂದರೆ ಬ್ರಿಟಿಷ ಸರಕಾರವು ನನಗೆ ಎರಡು ಜೀವನಗಳ ಕಾರಾಗೃಹವಾಸದ ದಂಡನೆಯನ್ನು ವಿಧಿಸಿ, ಅಂದರೆ ಪುನರ್ಜನ್ಮದ ಬಗೆಗಿನ ಹಿಂದೂ ಸಿದ್ಧಾಂತವನ್ನು ಒಪ್ಪಿಕೊಂಡಂತಾಗಿದೆ” ಎಂದು ಹೇಳಿದ್ದರು.
ಕೆಲವು ತಿಂಗಳುಗಳ ನಂತರ ಮಹಾರಾಜಾ ಹೆಸರಿನ ಹಡಗಿನಲ್ಲಿ ಸ್ವಾತಂತ್ರ್ಯದ ಮಹಾರಾಜನನ್ನು ಅಂಡಮಾನಿಗೆ ಕಳುಹಿಸಲಾಯಿತು.
ಮುಂದುವರೆಯುತ್ತದೆ…..