ಬೆಂಗಳೂರು: ನೆಸ್ಲೆ ಇಂಡಿಯಾ ತನ್ನ ಉಪಕ್ರಮವಾದ ಪ್ರಾಜೆಕ್ಟ್ ಹಿಲ್ದಾರಿಯ ಐದನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಪ್ಲಾನ್ ಫೌಂಡೇಶನ್ ಮತ್ತು ಸ್ತ್ರೀ ಮುಕ್ತಿ ಸಂಘಟನೆ ಸಹಭಾಗಿತ್ವ ಹಾಗೂ ರೇಸಿಟಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ತಾಂತ್ರಿಕ ಪಾಲುದಾರಿಕೆಯಲ್ಲಿ ಉತ್ತಮ ತ್ಯಾಜ್ಯ ನಿರ್ವಹಣೆಗೆಂದು ಈ ಯೋಜನೆಯನ್ನು ಆರಂಭಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಹಿಲ್ದಾರಿ ಯೋಜನೆಯು ಭಾರತದ ಪ್ರಮುಖ ಪ್ರವಾಸಿ ತಾಣಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಅಂತರ್ಗತ ಮತ್ತು ಸ್ಥಿತಿಸ್ಥಾಪಕತ್ವದ ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದೆ. ಪೋಂಡಾ, ಮಸ್ಸೂರಿ, ಮಹಾಬಲೇಶ್ವರ, ಮುನ್ನಾರ್, ಡಾಲ್ಹೌಸಿ, ಡಾರ್ಜಲಿಂಗ್ ಮತ್ತು ಪಾಲಂಪುರದಲ್ಲಿ ಈ ಯೋಜನೆಯನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ನೆಸ್ಲೆ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ಅವರು, “ಐದು ವರ್ಷಗಳ ಹಿಂದೆ ನಾವು ಸಾಮೂಹಿಕ ಪಾಲ್ಗೊಳ್ಳುವಿಕೆಯ ಪ್ರಕ್ರಿಯೆಯ ಮೂಲಕ ನಾವು ಧನಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸುಸ್ಥಿರ ತ್ಯಾಜ್ಯ ನಿರ್ವಹಣಾ ಮಾದರಿಗಳನ್ನು ಅಳವಡಿಸಿಕೊಂಡು ಪ್ರಾಜೆಕ್ಟ್ ಹಿಲ್ದಾರಿಯನ್ನು ಆರಂಭಿಸಿದ್ದೇವೆ. ಬಹು-ಪಾಲುದಾರರ ಪಾಲ್ಗೊಳ್ಳುವಿಕೆ ವಿಧಾನದಿಂದ ನಾವು ಈ ಯೋಜನೆಯನ್ನು 7 ಪ್ರವಾಸಿ ತಾಣಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದೇವೆ ಹಾಗೂ ಯೋಜನೆಗೆ ಇನ್ನಷ್ಟು ಬಲ ಬಂದಿದ್ದು, ಉತ್ತಮ ರೀತಿಯಲ್ಲಿ ಬೆಳೆದಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಿ ನಮ್ಮ ದೃಷ್ಟಿಕೋನವನ್ನು ಸಾಕಾರಗೊಳಿಸಿದ್ದಕ್ಕಾಗಿ ನಾವು ನಮ್ಮ ಎಲ್ಲಾ ಪಾಲುದಾರರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇವೆ’’ ಎಂದರು.
ಪ್ರಾಜೆಕ್ಟ್ ಹಿಲ್ದಾರಿಗೆ ಯಶಸ್ವಿ ಐದು ವರ್ಷ ಪೂರ್ಣಗೊಂಡ ಮೈಲಿಗಲ್ಲು ಸ್ಥಾಪಿಸಿದ್ದರ ಬಗ್ಗೆ ಮಾತನಾಡಿದ ಸ್ತ್ರೀ ಮುಕ್ತಿ ಸಂಘಟನೆಯ ಅಧ್ಯಕ್ಷೆ ಜ್ಯೋತಿ ಮ್ಹಾಪ್ಸೇಕರ್ ಅವರು, “ಕಳೆದ ಐದು ವರ್ಷಗಳಲ್ಲಿ ಪ್ರಾಜೆಕ್ಟ್ ಹಿಲ್ದಾರಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವುದು ತೃಪ್ತಿ ತಂದಿದೆ. ಇಲ್ಲಿ ನಾವು ತ್ಯಾಜ್ಯ ವಿಲೇವಾರಿ ಕಾರ್ಮಿಕ ಸಮುದಾಯದ ವೃತ್ತಿಪರತೆಯಂತಹ ಕೆಲವು ಅರ್ಥಪೂರ್ಣವಾದ ಕೆಲಸವನ್ನು ನಡೆಸಿದ್ದೇವೆ. ಈ ಮೂಲಕ ಎಲ್ಲರಲ್ಲಿಯೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾವು ಸಮರ್ಥರಾಗಿದ್ದೇವೆ ಎಂಬುದಕ್ಕೆ ಹೆಮ್ಮೆ ಎನಿಸುತ್ತಿದೆ. ಈ ಪ್ರವಾಸಿ ತಾಣಗಳಲ್ಲಿನ ಪರಿಸರ ವ್ಯವಸ್ಥೆ ಮೇಲೆ ನಾವು ಸಹಯೋಗ ಮತ್ತು ಧನಾತ್ಮಕವಾದ ಪ್ರಭಾವವನ್ನು ಮುಂದುವರಿಸುತ್ತೇವೆ’’ ಎಂದು ತಿಳಿಸಿದರು.
ರೇಸಿಟಿ ನೆಟ್ವರ್ಕ್ ಇಂಡಿಯಾದ ಸಿಒಒ ಮತ್ತು ಸಿಎಫ್ಒ, ಸಹಸಂಸ್ಥಾಪಕರಾದ ಮೇಹಾ ಲಹರಿ ಅವರು ಮಾತನಾಡಿ, “ರೆಸಿಟಿ ನೆಟ್ವರ್ಕ್ ಇಂಡಿಯಾ ಪ್ಲಾಸ್ಟಿಕ್ ನ ಆವರ್ತ ಆರ್ಥಿಕತೆಯನ್ನು ಹುಟ್ಟುಹಾಕಲು ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಮತ್ತು ಹಿಲ್ದಾರಿ ಈ ಕಾರಣಕ್ಕಾಗಿ ಸಹಾಯ ಮಾಡುವ ಯೋಜನೆಗಳ ಪ್ರಕಾಶಮಾನವಾದ ಉದಾಹರಣೆಗಳಲ್ಲಿ ಒಂದೆನಿಸಿದೆ. ಹಿಲ್ದಾರಿ ಯೋಜನೆಯೊಂದಿಗೆ ನಾವು ಸಾಧಿಸಿರುವ ಪ್ರಗತಿಯ ಬಗ್ಗೆ ನಮಗೆ ತುಂಬಾ ಸಂತೋಷವಾಗಿದೆ ಮತ್ತು ಈ ಕಾರಣವನ್ನು ಮತ್ತಷ್ಟು ಬಲಯುತಗೊಳಿಸಲು ನಿರಂತರ ಪ್ರಯತ್ನಗಳನ್ನು ಮುಂದುವರಿಸುತ್ತೇವೆ’’ ಎಂದು ಹೇಳಿದರು.
ಪ್ರಾಜೆಕ್ಟ್ ಹಿಲ್ದಾರಿ ದೇಶದಲ್ಲಿ ಜಾರಿಯಲ್ಲಿರುವ ಸ್ಥಳಗಳಲ್ಲಿ ತ್ಯಾಜ್ಯ ಸಂಗ್ರಹ ಘಟಕಗಳಲ್ಲಿ ವಿಂಗಡಣೆ ಮಾಡುವ ಮೂಲಕ ಇದುವರೆಗೆ 28,000 ಮೆಟ್ರಿಕ್ ತ್ಯಾಜ್ಯವನ್ನು ವಿಂಗಡಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಸುಮಾರು 20,000 ವಸತಿ ಮತ್ತು ವಾಣಿಜ್ಯ ತ್ಯಾಜ್ಯ ಸಂಗ್ರಹ ಕೇಂದ್ರಗಳಲ್ಲಿ ಶೇ.80 ಮೂಲ ವಿಂಗಡಣೆ ಮಾಡುವಲ್ಲಿ ಯಶಸ್ವಿಯಾಗಿದೆ.
ಸಮಾಜದ ಪ್ರತಿಯೊಬ್ಬ ಸದಸ್ಯರೂ ಸಹ ಸಕಾರಾತ್ಮಕ ಬದಲಾವಣೆಯನ್ನು ಮಾಡಲು ಕೊಡುಗೆಯನ್ನು ನೀಡಬಹುದಾಗಿದೆ ಎಂಬುದನ್ನು ಹಿಲ್ದಾರಿ ನಂಬುತ್ತಾರೆ. ಈ ಪಾಲುದಾರಿಕೆಗಳು ನಾಗರಿಕರಲ್ಲಿ ಐಕಮತ್ಯ ಮತ್ತು ಸಾಮೂಹಿಕ ಮನೋಭಾವವನ್ನು ಉತ್ತೇಜಿಸುತ್ತದೆ. ಮುನ್ಸಿಪಲ್ ಕೌನ್ಸಿಲ್ ಗಳು, ನಾಗರಿಕರು, ಗುತ್ತಿಗೆದಾರರು, ತ್ಯಾಜ್ಯ ಕಾರ್ಮಿಕರು ಮತ್ತು ಪ್ರಭಾವಿಗಳೊಂದಿಗೆ ಬಹು-ಸಹಕಾರಿ ವಿಧಾನದ ಮೂಲಕ ಮೂಲದಲ್ಲಿಯೇ ತ್ಯಾಜ್ಯವನ್ನು ಪ್ರತ್ಯೇಕಿಸಲು ತ್ಯಾಜ್ಯ ವಿಲೇವಾರಿ ಕಾರ್ಮಿಕರನ್ನು ವೃತ್ತಿಪರಗೊಳಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಂತಹಂತವಾಗಿ ಕಾರ್ಯನಿರ್ವಹಣೆ ಮಾಡುತ್ತದೆ. ಈ ಪ್ರಾಜೆಕ್ಟ್ ಹಿಲ್ದಾರಿ ಮೂಲಕ 560 ಕ್ಕೂ ಹೆಚ್ಚು ತ್ಯಾಜ್ಯ ವಿಲೇವಾರಿ ಕಾರ್ಮಿಕರಿಗೆ ಉತ್ತಮ ಮಟ್ಟದಲ್ಲಿ ತರಬೇತಿ ನೀಡಲಾಗಿದೆ. ಯೋಜನೆಯು ಅವರಿಗೆ ಔದ್ಯೋಗಿಕ ಐಡಿ, ಆರೋಗ್ಯ ವಿಮೆಯಂತಹ ಪ್ರಯೋಜನಗಳು, ಅವರ ಕೆಲಸಕ್ಕೆ ಅಗತ್ಯವಾದ ರಕ್ಷಣಾ ಸಾಧನಗಳು ಮತ್ತು ಇತರ ಪ್ರಯೋಜನಗಳನ್ನು ಒದಗಿಸಿದೆ.