ಭಾರತದ ದೇಶೀಯ ಪಂದ್ಯಾವಳಿಯಾದ ರಣಜಿ ಟ್ರೋಫಿಯ ವೇಳಾಪಟ್ಟಿಯನ್ನು ಭಾನುವಾರ ಬಿಸಿಸಿಐ ಪ್ರಕಟಿಸಿದ್ದು, ರಣಜಿ ಟ್ರೋಫಿಯ ಪಂದ್ಯಾವಳಿಗಳು 2024ರ ಜನವರಿ 5ರಿಂದ ಆರಂಭಗೊಂಡು ಮಾರ್ಚ್ 14 ರವರೆಗೆ ನಡೆಯಲಿದೆ ಎಂದು ತಿಳಿಸಿದೆ.
ಗುಂಪು ಹಂತದ ಪಂದ್ಯಗಳು ಫೆಬ್ರವರಿ 19ರ ವರೆಗೆ ನಡೆಯಲಿದ್ದು, ಬಳಿಕ ನಾಕೌಟ್ ಪಂದ್ಯಗಳು ಫೆಬ್ರವರಿ 23ರಿಂದ ಮಾರ್ಚ್ 14ರ ವರೆಗೆ ನಡೆಯಲಿದೆ. ಟೂರ್ನಿಯನ್ನು ತಲಾ 8 ತಂಡಗಳ 4 ಎಲೈಟ್ ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ಅಗ್ರ 2 ತಂಡಗಳು ನಾಕೌಟ್ ಪ್ರವೇಶಿಸಲಿವೆ.
ಕರ್ನಾಟಕ ತಂಡ ಎಲೈಟ್ ‘ಸಿ’ ಗುಂಪಿನಲ್ಲಿದ್ದು, ಪಂಜಾಬ್, ತಮಿಳುನಾಡು, ರೈಲ್ವೇಸ್, ಗೋವಾ, ಗುಜರಾತ್, ತ್ರಿಪುರಾ ಹಾಗೂ ಚಂಡೀಗಢ ತಂಡಗಳೂ ಇದೇ ಗುಂಪಿನಲ್ಲಿವೆ.ಕಳೆದ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವು ಸೆಮೀಸ್ ಪ್ರವೇಶಿಸಿದರೂ ಫೈನಲ್ ತಲುಪುವಲ್ಲಿ ವಿಫಲವಾಗಿತ್ತು. ಇನ್ನು ಕಳೆದ ಆವೃತ್ತಿಯಲ್ಲಿ ತಂಡಗಳು ತೋರಿದ ಪ್ರದರ್ಶನದ ಆಧಾರದಲ್ಲಿ ತಲಾ 8 ತಂಡಗಳ 4 ಎಲೈಟ್ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಹಾಲಿ ಚಾಂಪಿಯನ್ ಸೌರಾಷ್ಟ್ರ ಹಾಗೂ ಮಹಾರಾಷ್ಟ್ರ ತಂಡಗಳು ಈ ಬಾರಿ ಮತ್ತೊಮ್ಮೆ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಹಾಗೆಯೇ ಚಾಂಪಿಯನ್ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.
ರಣಜಿ ಟ್ರೋಫಿ ವೇಳಾಪಟ್ಟಿ:
ಎಲೈಟ್ ಲೀಗ್ ಹಂತ: ಜನವರಿ 05ರಿಂದ ಫೆಬ್ರವರಿ 19, 2024
ಪ್ಲೇಟ್ ಲೀಗ್ ಸ್ಟೇಜ್: ಜನವರಿ 05ರಿಂದ ಫೆಬ್ರವರಿ 05, 2024
ಎಲೈಟ್ ನಾಕೌಟ್ ಹಂತ: ಫೆಬ್ರವರಿ 23ರಿಂದ ಮಾರ್ಚ್ 14, 2024
ಗುಂಪುಗಳ ವಿವರ:
ಎಲ್ಲ ತಂಡಗಳನ್ನು ಐದುಗುಂಪುಗಳಾಗಿ ವಿಂಗಡಿಸಲಾಗಿದೆ.
*ಎಲೈಟ್ ಗ್ರೂಪ್ ‘ಎ’: ಸೌರಾಷ್ಟ್ರ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ವಿದರ್ಭ, ಹರ್ಯಾಣ, ಮಣಿಪುರ
*ಎಲೈಟ್ ಗ್ರೂಪ್ ‘ಬಿ’: ಬೆಂಗಾಳ, ಆಂಧ್ರ, ಮುಂಬೈ, ಕೇರಳ, ಚತ್ತೀಸ್ಗಡ, ಉತ್ತರಪ್ರದೇಶ, ಅಸ್ಸಾಂ, ಬಿಹಾರ.
*ಎಲೈಟ್ ಗ್ರೂಪ್ ‘ಸಿ’: ಕರ್ನಾಟಕ, ಪಂಜಾಬ್, ರೈಲ್ವೇಸ್, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರ, ಚಂಢೀಗಢ
*ಎಲೈಟ್ ಗ್ರೂಪ್ ‘ಡಿ’: ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಬರೋಡ, ಡೆಲ್ಲಿ, ಒಡಿಶಾ, ಪಾಂಡಿಚೆರಿ, ಜಮ್ಮು ಮತ್ತು ಕಾಶ್ಮೀರ.
*ಪ್ಲೇಟ್ ಗ್ರೂಪ್: ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಜೋರಾಂ, ಅರುಣಾಚಲ ಪ್ರದೇಶ