‘K46′ ಸುದೀಪ್ ಅಭಿನಯಿಸಿರುವ ಚಿತ್ರದ ಟೀಸರ್ ಯಾವಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಆದರೆ ಆ ಕತೂಹಲಕ್ಕೆ ಸುದೀಪ್ ಕಡೆಯಿಂದಲೇ ಅಪ್ಡೇಟ್ ಸಿಕ್ಕಿದೆ.
ವಿಕ್ರಾಂತ್ ರೋಣ’ ರಿಲೀಸ್ ಆದ ಬಳಿಕ ದೀರ್ಘ ಸಮಯ ಕಿಚ್ಚ ಸುದೀಪ್ ಅವರು ನಟನೆಯಲ್ಲಿ ತೊಡಗಿಕೊಂಡಿದ್ದರು. ಸುದೀಪ್ ನಟನೆಯ 46ನೇ ಸಿನಿಮಾ ಕುರಿತು ಮಾಹಿತಿ ಹೊರಬಿದ್ದಿತ್ತು. ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ‘ವಿ ಕ್ರಿಯೇಷನ್ಸ್’ ಜೊತೆ ಅವರು ಕೈ ಜೋಡಿಸಿದ್ದರು.
ಈ ಚಿತ್ರವನ್ನು ಕಲೈಪುಲಿ ಎಸ್. ಧಾನು ನಿರ್ಮಾಣ ಮಾಡುತ್ತಿದ್ದಾರೆ. ಈಗ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ಸುದೀಪ್ ಅವರು ಇತ್ತೀಚಿಗಷ್ಟೇ ಚಿತ್ರದ ಟೀಸರ್ ಶೂಟ್ನಲ್ಲಿ ಭಾಗಿ ಆಗಿ, ಈ ಟೀಸರ್ನ ಕೆಲಸಗಳು ಭರದಿಂದ ಸಾಗುತ್ತಿದೆ ಇದು ಯಾವಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳ ವಲಯದಲ್ಲಿ ಇರುವುದರಿಂದ ಅದಕ್ಕೆ ಸುದೀಪ್ ಅವರೆ ಉತ್ತರ ನೀಡಿದ್ದಾರೆ.
ಈ ಬಗ್ಗೆ ಸುದೀಪ್ ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿ ಹೊರ ಬಿದ್ದಿದೆ. K46 ಚಿತ್ರದ ಟೀಸರ್ ಸಿದ್ಧವಾಗಿದೆ. ತಂಡ ಸಾಕಷ್ಟು ಕಷ್ಟಪಟ್ಟಿದೆ. ಅದನ್ನು ನಿಮ್ಮ ಮುಂದಿಡಲು ಎಗ್ಸೈಟ್ ಆಗಿದ್ದೇವೆ. ದಿನಾಂಕ ಘೋಷಣೆ ಜೂನ್ 27ರಂದು ಆಗಲಿದೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ವಿಕ್ರಾಂತ್ ರೋಣ ರಿಲೀಸ್ ಆದ ಬಳಿಕ ಸುದೀಪ್ ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲು ವಿಳಂಬ ಮಾಡಿದರು. ರಾಜಕೀಯ ಪ್ರಚಾರದಲ್ಲೂ ಅವರು ತೊಡಗಿಕೊಂಡಿದ್ದರು. ಈ ಮಧ್ಯೆ ಹಲವು ಸಿನಿಮಾದ ಟೀಸರ್-ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿ ಆದರು. ಈಗ ಸುದೀಪ್ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲಿ K46 ಚಿತ್ರದ ಟೀಸರ್ ರೀಲೀಸ್ ಆಗಿ ಪ್ರೇಕ್ಷಕರ ಮನ ಸೆಳೆಯಲಿದೆ.