ಕೆಲವೊಬ್ಬರಿಗೆ ಮಾತ್ರ ಸೊಳ್ಳೆಗಳು ಟಾರ್ಗೆಟ್ ಮಾಡಿದ ರೀತಿಯಲ್ಲಿ ಕಚ್ಚುತ್ತಿರುತ್ತವೆ. ಅಂತವರಿಗೆ ತಮಗೆ ಮಾತ್ರ ಯಾಕೆ ಇಷ್ಟು ಸೊಳ್ಳೆ ಕಚ್ಚುತ್ತವೆ ಎನ್ನುವ ಅನುಮಾನ ಬರುವುದು ಸಹಜ. ಅವರ ರಕ್ತ ತುಂಬಾ ಸಿಹಿ ಹಾಗಾಗಿ ಸೊಳ್ಳೆಗೆ ಇಷ್ಟ, ಆ ಕಾರಣಕ್ಕೆ ಅವರನ್ನೇ ಕಚ್ಚುವುದು ಎಂದು ಕೆಲವೊಬ್ಬರು ಅವರ ಅನುಮಾನಗಳಿಗೆ ತಮಾಷೆಯಾಗಿ ಉತ್ತರಿಸುವುದು ಇದೆ, ಆದರೆ ಇದರ ಹಿಂದಿರುವ ನಿಜವಾದ ಕಾರಣವೇನು ಎಂಬುವುದು ಅವರಿಗೆ ಪ್ರಶ್ನೆಯಾಗಿಯೇ ಉಳಿದು ಬಿಟ್ಟಿರುತ್ತದೆ. ಅದಕ್ಕೆ ಇಲ್ಲಿದೆ ಉತ್ತರ.
ಸಾಮಾನ್ಯವಾಗಿ ಪ್ರತಿ ಹೆಣ್ಣು ಸೊಳ್ಳೆಗಳು ಮನುಷ್ಯರಿಗೆ ಕಚ್ಚುತ್ತವಂತೆ. ಸೊಳ್ಳೆಗಳಿಗೆ ಮೊಟ್ಟೆ ಇಡಲು ನೆರವಾಗುವ ಅಂಶ ಮನುಷ್ಯರ ರಕ್ತದಲ್ಲಿರುತ್ತದೆ. ಹೀಗಾಗಿ ಹೆಣ್ಣು ಸೊಳ್ಳೆಗಳಷ್ಟೇ ಮನುಷ್ಯರ ರಕ್ತ ಹೀರುತ್ತವೆ.
ಕೆಲವೊಬ್ಬರನ್ನು ಮಾತ್ರ ಸೊಳ್ಳೆಗಳು ಟಾರ್ಗೆಟ್ ಮಾಡಲು ಕಾರಣ:
ಸೊಳ್ಳೆ ಏಕೆ ಕೆಲವರಿಗೆ ತುಂಬಾನೇ ಕಚ್ಚುತ್ತದೆ ಎಂಬುವುದರ ಕುರಿತು ರಾಕ್ಫೆಲ್ಲರ್ ಯನಿವರ್ಸಿಟಿಯ ಸಂಶೋಧಕರು ಮೂರು ವರ್ಷಗಳ ಅಧ್ಯಯನ ನಡೆಸಿ ವರದಿಯೊಂದನ್ನು ಸಿದ್ದಪಡಿಸಿದ್ದಾರೆ. ಆದರ ವರದಿಯ ಪ್ರಕಾರ ದೇಹದ ವಾಸನೆ ಗ್ರಹಿಸಿ ಹೆಣ್ಣು ಸೊಳ್ಳೆ ನಮ್ಮನ್ನು ಕಚ್ಚುತ್ತದೆ ಎಂದು ಹೇಳಲಾಗಿದೆ. ನಮ್ಮ ದೇಹ ಸೂಸುವ ವಾಸನೆಗೂ ಸೊಳ್ಳೆ ಕಚ್ಚುವುದಕ್ಕೂ ಸಂಬಂಧವಿದೆ ಎಂದು ವಿವರಿಸಲಾಗಿದೆ.
ಯಾರ ದೇಹ ಕಾರ್ಬೋಕ್ಸಿಲಿಕ್ ಆಮ್ಲ ಹೆಚ್ಚು ಉತ್ಪತ್ತಿ ಮಾಡುತ್ತದೋ ಅವರ ದೇಹದ ವಾಸನೆ ಈಡಿಸ್ ಈಜಿಪ್ಟಿ ಹೆಣ್ಣು ಸೊಳ್ಳೆಯನ್ನು ತುಂಬಾನೇ ಆಕರ್ಷಿಸುತ್ತದೆ. ಇಂಥವರನ್ನು ಸೊಳ್ಳೆ ಬಂದು ಹೆಚ್ಚಾಗಿ ಕಚ್ಚುತ್ತದೆ ಎಂದು ಸಂಶೋಧನೆಯ ವರದಿಯಲ್ಲಿ ತಿಳಿಸಲಾಗಿದೆ.
ಸೊಳ್ಳೆ ಕಚ್ಚುವುದರಿಂದ ರಕ್ಷಿಸಿಕೊಳ್ಳುವುದು ಹೇಗೆ?
*ಆದಷ್ಟು ಮೈಮುಚ್ಚುವ ತುಂಬು ತೋಳಿನ ಬಟ್ಟೆಗಳನ್ನು ಧರಿಸಿ
*ಕಪ್ಪು ಬಣ್ಣದ ಬಟ್ಟೆಗಿಂತ ತಿಳಿ ಬಣ್ಣದ ಬಟ್ಟೆ ಧರಿಸಿ, ಕಪ್ಪು ಬಣ್ಣ ಸೊಳ್ಳೆಗಳನ್ನು ಬೇಗನೆ ಆಕರ್ಷಿಸುತ್ತದೆ.
*ಅಧಿಕ ಪರಿಮಳವನ್ನು ಸೂಸುವ ಲೋಷನ್ಗಳು, ಸೋಪುಗಳು ಮತ್ತು ಶ್ಯಾಂಪೂಗಳನ್ನು ಬಳಸಬೇಡಿ.
*ಬಟ್ಟೆಗೆ ಸೊಳ್ಳೆ ಕಚ್ಚುವಿಕೆ ತಡೆಗಟ್ಟುವ ಸ್ಪ್ರೇ ಅನ್ನು ಹಾಕಿ.
*ಸೊಳ್ಳೆಗಳು ಕಚ್ಚುವುದನ್ನು ತಡೆಗಟ್ಟಲು ಸೊಳ್ಳೆ ಬತ್ತಿಗಳು, ಸ್ಪ್ರೇ ಬಳಸಬಹುದು.
*ಕಿಟಕಿಗಳಿಗೆ ಸೊಳ್ಳೆ ಬಾರದಂತೆ ಸೊಳ್ಳೆ ನೆಟ್ ಹಾಕಿಸಿ.
*ಮನೆಯ ಒಳಗೂ ಹೊರಗೂ ನೀರು ನಿಲ್ಲದಂತೆ ನೋಡಿಕೊಳ್ಳಿ.