ಮಡಿಕೇರಿ: ಇಲ್ಲಿನ ಸಕಾ೯ರಿ ಜಿಲ್ಲಾ ಆಸ್ಪತ್ರೆಯಲ್ಲಿ ಶಾಸಕ ಡಾ, ಮಂಥರ್ ಗೌಡ ಪ್ರಯತ್ನದ ಫಲವಾಗಿ ನೂತನವಾದ ಎಂ ಆರ್ ಐ ವ್ಯವಸ್ಥೆ ಪ್ರಾರಂಭಿಸಲು ಸಕಾ೯ರ ಮುಂದಾಗಿ ಇನ್ನು 45 ದಿನಗಳಲ್ಲಿ ಈ ಸೇವೆ ಜನರಿಗೆ ಲಭ್ಯವಾಗಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ, ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ,
ಮಡಿಕೇರಿಯಲ್ಲಿ ಸುದ್ಗಿಗಾರರೊಂದಿಗೆ ಮಾತನಾಡಿದ ಸಚಿವ ಶರಣ ಪ್ರಕಾಶ ಪಾಟೀಲ, ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಕಾಮಗಾರಿ ಅಪೂಣ೯ವಾಗಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು 55 ಕೋಟಿ ರುಪಾಯಿ ವೆಚ್ಚದಲ್ಲಿ ನಿಮಾ೯ಣ ಮಾಡಲಾಗುತ್ತದೆ,
ಅಂತೆಯೇ 300 ಹಾಸಿಗೆಗಳ ಆಸ್ಪತ್ರೆಯನ್ನೂ ಪ್ರಾರಂಭಿಸಲಾಗುತ್ತದೆ, ಹಾಗೇ ಹೖದ್ರೋಗ ತಪಾಸಣಾ ಘಟಕವನ್ನು ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಲಾಗುತ್ತದೆ, ಕೊಡಗು ಜಿಲ್ಲೆಯಲ್ಲಿ ರೋಗಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಸಕಾ೯ರ ಬದ್ದವಾಗಿದೆ.
ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಕೊರತೆಯನ್ನು ಗಮನಿಸಲಾಗಿದೆ – , ಯಾವ ವಿಭಾಗಗಳಲ್ಲಿ ವೈದ್ಯರ ಕೊರತೆ ಇದೆಯೋ ಗಮನಿಸಿ ಹುದ್ದೆಗಳನ್ನು ಭತಿ೯ ಮಾಡಲಾಗುತ್ತದೆ – ಎಂದು ಸಚಿವ ಶರಣ ಪ್ರಕಾಶ ಪಾಟೀಲ ಭರವಸೆ ನೀಡಿದ್ದಾರೆ.