ಹಳೆಯ ಮನೆಗಳಲ್ಲಿ ಸರ್ವೇ ಸಾಮಾನ್ಯ ಎಂಬAತೆ ಮುಖ್ಯ ಅಂಗಣದಲ್ಲಿ ಒಂದು ಉಯ್ಯಾಲೆ ಇರುವುದನ್ನು ಕಾಣಬಹುದು. ಪಾರಂಪರಿಕ, ನಾಲ್ಕು , ಐದು ತಲೆಮಾರುಗಳು ಬಾಳಿ ಬದುಕಿದ ಮನೆಯಲ್ಲಿ ಉಯ್ಯಾಲೆಗಳನ್ನು ಕಾಣಬಹದು. ಮನೆಯ ಹಿರಿಯರು ಇದರಲ್ಲಿ ಕೂತು ಎನೋ ಒಂದು ಲೆಕ್ಕಚಾರ ಮಾಡುತ್ತಿರತ್ತಾರೆ. ಇಲ್ಲ ವಿಶ್ರಾಂತಿಯನ್ನು ಮಾಡುತ್ತಿರುತ್ತಾರೆ.
ಇದೆ ಉಯ್ಯಾಲೆಯಲ್ಲಿ ಕೂತು ಮಕ್ಕಳು ಮೊಮ್ಮಕ್ಕಳು ಹರಟೆ ಹೊಡುತ್ತಿರುತ್ತಾರೆ. ಇವೆಲ್ಲ ಒಂದು ಸಮಯದಲ್ಲಿ ನಿಜವಾಗಿಯು ನಡೆಯುತ್ತಿತ್ತು ಆದರೆ ಇಂದು ದೃಶ್ಯಗಳೆ ಇಲ್ಲ. ಉಯ್ಯಾಲೆ ಬರೇ ಮನೆಯ ಅಂದ ಚಂದಕ್ಕೆ ಮಾತ್ರ ಅಲ್ಲ, ಅಥವಾ ಬರೆಯ ನೆನಪಿಗೋಸ್ಕರಕ್ಕು ಅಲ್ಲ ಇದಕ್ಕೆ ಒಂದು ವಿಶೇಷತೆ ಇದೆ.
ನಮ್ಮ ಸಂಪ್ರದಾಯದ ಪ್ರಕಾರ ಮರಕ್ಕೆ ವಾಸ್ತುವಿನಲ್ಲಿ ವಿಶೇಷ ಮಹತ್ವವಿದೆ, ಮತ್ತು ಅದನ್ನು ಮನೆಯ ಅಲಂಕಾರದ ಅಂಶವಾಗಿ ಸೇರಿಸುವುದು ಸಹ ಮಂಗಳಕರವಾಗಿದೆ. ಆದ್ದರಿಂದ, ಮರದ ಉಯ್ಯಾಲೆಗಳನ್ನು ಸಾಮಾನ್ಯವಾಗಿ ಲೋಹದ ಉಯ್ಯಾಲೆಗಳಿಗಿಂತ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಉದ್ಯಾನ ಅಥವಾ ಅಂಗಳದಲ್ಲಿ ಅಥವಾ ಮನೆಯ ಒಳಗೆ ಉಯ್ಯಾಲೆಗಳನ್ನು ಇರಿಸಲು ಉತ್ತಮ ದಿಕ್ಕುಗಳು ಉತ್ತರ ಅಥವಾ ಪೂರ್ವ.
ವಾಸ್ತು ಪ್ರಕಾರ ಮನೆಯಲ್ಲಿ ಉಯ್ಯಾಲೆಯನ್ನು ಹೊಂದಿರುವುದು ಮಂಗಳಕರವೆAದು ಪರಿಗಣಿಸಲಾಗಿದೆ. ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಸಂತೋಷವನ್ನು ಆಕರ್ಷಿಸುವುದರಿಂದ ಅವುಗಳನ್ನು ಮಂಗಳಕರವೆAದು ಪರಿಗಣಿಸಲಾಗುತ್ತದೆ.
ಆಟದ ಮೂಲಕ, ಉಯ್ಯಾಲೆಗಳು ಮೆದುಳಿನ ಬೆಳವಣಿಗೆಗೆ ಸಹಕಾರಿ.ಇವುಗಳಿಂದಾಗುವ ಆರೋಗ್ಯಕರ ಪ್ರಯೋಜನಗಳೆಂದರೆ ಮಕ್ಕಳು ಓಡುವಾಗ ಮತ್ತು ಉಯ್ಯಾಲೆಗಳ ಮೇಲೆ ಜಿಗಿಯುವಾಗ ಚಲನೆ, ಸಮತೋಲನ ಮತ್ತು ದೇಹದ ಸಮನ್ವಯ, ಇತರರನ್ನು ತಳ್ಳಲು ಮತ್ತು ಪಂಪಿAಗ್ ಚಲನೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಒಟ್ಟಿನಲ್ಲಿ ಮನೆಯಲ್ಲಿ ಒಂದು ಉಯ್ಯಾಲೆ ವಾಸ್ತು ಪ್ರಕಾರವಾಗಿಯು ಮತ್ತು ಆರೋಗ್ಯದ ಮೇಲಿನ ಉತ್ತಮ ಪ್ರಭಾವಕ್ಕೂ ಒಳ್ಳೆಯದು. ಕೆಲವರಿಗೆ ಇದು ಒಂದು ಸುಂದರ ನೆನಪುಗಳನ್ನು ಕಟ್ಟಿ ಕೊಡಬಹದು.