ಹೊಸ ಕಾರು ಖರೀದಿಸಿರುವ ಯಶ್ಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಜತೆಗೆ ರೇಜ್ ರೋವರ್ ಐಷಾರಾಮಿ ಕಾರಿನ ಬೆಲೆ ಎಷ್ಟಿರಬಹುದು ಎಂದು ಫ್ಯಾನ್ಸ್ ಲೆಕ್ಕ ಹಾಕುತ್ತಿದ್ದಾರೆ. ರಾಕಿಂಗ್ ಸ್ಟಾರ್ ಖರೀದಿಸಿರುವ ಹೊಸ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ ಎಂದು ಹೇಳುಲಾಗುತ್ತಿದೆ. ಹೊಸ ರೇಂಜ್ ರೋವರ್ ಕಾರಲ್ಲದೆ, ಆಡಿ Q7, BMW 5, ಮರ್ಸಿಡೆಸ್ ಬೆಂಜ್, ಫಾರ್ಚ್ಯೂನರ್ ಕಾರುಗಳನ್ನು ಹೊಂದಿದ್ದಾರೆ.
ಯಶ್ ಖರೀದಿ ಮಾಡಿರುವ ರೇಂಜ್ ರೋವರ್ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು ವಿಶೇಷವಾಗಿ ರಾಜಕಾರಣಿಗಳು, ಸಿನಿಮಾ ತಾರೆಯರು ಹೆಚ್ಚಾಗಿ ಖರೀದಿಸುತ್ತಾರೆ. ಇದೀಗ ಹೊಸ ಕಾರಿನೊಂದಿಗೆ, ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಕ್ಕಳೊಂದಿಗೆ ಕ್ಯಾಮರಾಗೆ ಫೋಸ್ ನೀಡಿದ್ದಾರೆ.