ಈಗಿನ ಕಾಲದಲ್ಲಿ ಎಲ್ಲರೂ ಡಯಟ್ ಅಂತ ಸ್ವಲ್ಪ ದಿನ ಮಾಡಿ ತೂಕ ಇಳಿಸಿಕೊಳ್ಳುವಲ್ಲಿ ಮಗ್ನರಾಗಿರುತ್ತಾರೆ.
ಜನರಿಗೆ ಎಲ್ಲವೂ ಬೇಗ ಬೇಗನೆ ಆಗಬೇಕು. ನಮ್ಮ ದೇಹದ ತೂಕವು ತುಂಬಾನೇ ಬೇಗ ಜಾಸ್ತಿಯಾಗುತ್ತದೆ, ಆದರೆ ಅದನ್ನು ಕಡಿಮೆ ಮಾಡಿಕೊಳ್ಳಲು ಹೋದಾಗ ಅದಕ್ಕೆ ತುಂಬಾ ಕಷ್ಟಪಟ್ಟು ಆಹಾರದ ನಿಯಂತ್ರಣ ಮಾಡಿ ಮತ್ತೆ ತೂಕ ಇಳಿಕೆಯಾಗುತ್ತದೆ ಎಂಬ ಅರಿವಿಲ್ಲದ ಹಾಗೆ ಜನ ನಡೆದುಕೊಳ್ಳುತ್ತಾರೆ.
ನಮ್ಮಲ್ಲಿ ಕೆಲವರಿಗೆ ಒಂದೆರಡು ದಿನ ಸ್ವಲ್ಪ ಊಟ ಕಡಿಮೆ ಮಾಡಿ, ಜಾಸ್ತಿ ವಾಕಿಂಗ್ ಮಾಡಿದರೆ ಸಾಕು, ಮನೆಯಲ್ಲಿರುವ ದೇಹದ ತೂಕವನ್ನು ನೋಡಿಕೊಳ್ಳುವ ಯಂತ್ರದ ಮೇಲೆ ನಿಂತುಕೊಂಡು ಪದೇ ಪದೇ ತೂಕ ಎಷ್ಟು ಕಡಿಮೆಯಾಗಿದೆ ಅಂತ ನೋಡಿಕೊಳ್ಳುವ ಚಟ ಬೆಳೆದಿರುತ್ತದೆ.
ದೇಹದಲ್ಲಿರುವ ಅದರಲ್ಲೂ ಹೊಟ್ಟೆಯ ಭಾಗದಲ್ಲಿರುವ ಬೊಜ್ಜು ಅಷ್ಟೊಂದು ಸುಲಭವಾಗಿ ಕಡಿಮೆ ಆಗುವುದಿಲ್ಲ. ಅದಕ್ಕೆ ವರ್ಷಾನುಗಟ್ಟಲೆ ಸತತವಾದ ವ್ಯಾಯಾಮ ಜೊತೆಗೆ ಸರಿಯಾದ ಡಯಟ್ ಸಹ ಮಾಡಬೇಕಾಗುತ್ತದೆ. ಹೀಗೆ ಮನೆಯಲ್ಲಿ ದೇಹದ ತೂಕವನ್ನು ನೋಡಿಕೊಳ್ಳುವ ಯಂತ್ರ ಇದೆಯಂತ ದಿನದಲ್ಲಿ ಅನೇಕ ಬಾರಿ ನಿಮ್ಮ ತೂಕವನ್ನು ನೋಡಿಕೊಂಡರೆ, ಆ ಯಂತ್ರ ಮಾತ್ರ ನೀವಿರುವ ತೂಕವನ್ನೇ ಮತ್ತೇ ಮತ್ತೇ ತೋರಿಸುತ್ತಿರುತ್ತದೆ.
ಹಾಗಾದರೆ ಈ ದೇಹದ ತೂಕವನ್ನು ನೋಡಿಕೊಳ್ಳುವ ಸರಿಯಾದ ಸಮಯ ಯಾವುದು ಅಂತ ಅನೇಕರು ಪ್ರಶ್ನೆಯೊಂದನ್ನು ಕೇಳಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನಿಮ್ಮ ದೇಹದ ತೂಕವನ್ನು ಪರೀಕ್ಷಿಸಿಕೊಳ್ಳಬೇಕು. “ಬೆಳ ಬೆಳಗ್ಗೆ ನೀವು ವಾಶ್ರೂಮ್ ಗೆ ಹೋಗಿ ಬಂದ ನಂತರ ನೀರು, ಔಷಧಿ, ಚಹಾ ಯಾವುದನ್ನೂ ಸೇವಿಸದೆ ತೂಕ ನೋಡಿಕೊಂಡರೆ ಅದು ನಿಮ್ಮ ನಿಜವಾದ ದೇಹದ ತೂಕವಾಗಿರುತ್ತದೆ” ಎಂದು ಹೇಳಲಾಗುತ್ತದೆ.
ನಿಮ್ಮ ಹೊಟ್ಟೆಯನ್ನು ಸ್ವಚ್ಛಗೊಳಿಸಿಕೊಂಡ ನಂತರ ಬೆಳಗಿನ ಹೊತ್ತು ನಿಮ್ಮ ತೂಕವನ್ನು ಪರೀಕ್ಷಿಸಿಕೊಳ್ಳುವುದಕ್ಕೆ ಸರಿಯಾದ ಸಮಯವಾಗಿರುತ್ತದೆ. ಅದುಬಿಟ್ಟು ದಿನಾಪೂರ್ತಿ ನಮ್ಮ ವೇಟ್ ನ್ನು ಚೆಕ್ ಮಾಡುತ್ತಿದ್ದಾರೆ ಅದರಲ್ಲಿ ಏನು ವ್ಯತ್ಯಾಸ ಕಾಣುವುದಿಲ್ಲ.
ಆದ್ದರಿಂದ ಈ ಹಿಂದೆ ಜೀರ್ಣವಾದ ಊಟದ ಹೆಚ್ಚುವರಿ ತೂಕವನ್ನು ನೀವು ಹೊಂದಿರುವುದಿಲ್ಲ. ಈ ತೂಕವು 500 ಗ್ರಾಂ ನಿಂದ 1 ಕೆಜಿವರೆಗೆ ಬದಲಾಗುವುದನ್ನು ನೀವು ಗಮನಿಸಬಹುದಾಗಿದೆ.
ಬೆಳಗ್ಗೆಯ ತೂಕವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಸಹ ಮುಖ್ಯವಾಗುತ್ತದೆ. ಪ್ರತಿದಿನ 45 ನಿಮಿಷದಿಂದ ಒಂದು ಗಂಟೆಯವರೆಗೆ ವ್ಯಾಯಾಮ ಮಾಡುವ ಸಾಮಾನ್ಯ ಜನರಿಗೆ, ಇದು ಸಾಮಾನ್ಯವಾಗಿ ಸಂಜೆ ಸ್ವಲ್ಪ ಹೆಚ್ಚಾಗಿರುವ ಸಾಧ್ಯತೆ ಇರುತ್ತದೆ.
ನಿಮ್ಮ ತೂಕವನ್ನು ನೀವು ಎಷ್ಟು ಬಾರಿ ಪರಿಶೀಲಿಸಿಕೊಳ್ಳಬೇಕು? ಮುಂಜಾನೆ ದೇಹದ ತೂಕವನ್ನು ನೋಡಿಕೊಳ್ಳಲು ಸೂಕ್ತ ಸಮಯವಾಗಿದ್ದರೂ, ನಾವು ಪ್ರತಿದಿನ ನಮ್ಮ ತೂಕವನ್ನು ಪರೀಕ್ಷಿಸುವ ಅಗತ್ಯವಿರುವುದಿಲ್ಲ. ತಿಂಗಳಿಗೊಮ್ಮೆ, ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಹೊತ್ತಿನಲ್ಲಿ ತೂಕ ನೋಡಿಕೊಳ್ಳುವುದು ಸೂಕ್ತ. ನೀವು ನಿಮ್ಮ ದೇಹದ ತೂಕದ ಬಗ್ಗೆ ತುಂಬಾನೇ ಕುತೂಹಲ ಹೊಂದಿದ್ದರೆ, ವಾರಕ್ಕೊಮ್ಮೆ ನೋಡಿಕೊಳ್ಳುವುದು ಸಹ ಒಳ್ಳೆಯದು. ಅದು ಬಿಟ್ಟರೆ ಬೇರೆ ಸಮಯಕ್ಕೆ ತೂಕವನ್ನು ನೋಡಿಕೊಳ್ಳಲು ಹೋಗಬೇಡಿ ಒಂದೇ ಮನಸ್ಸಿನಿಂದ ಯೋಗ ಅಭ್ಯಾಸ ಅಥವಾ ವ್ಯಾಯಾಮವನ್ನು ಮಾಡುತ್ತಾ,
ಕಡಿಮೆ ಆಹಾರವನ್ನು ಸೇವಿಸುತ್ತಾ ಹೆಚ್ಚು ನೀರು ಕುಡಿಯುತ್ತಾ ಇದ್ದರೆ ತನ್ನಿಂದ ತಾನಾಗಿಯೇ ತೂಕ ಕಡಿಮೆಯಾಗುತ್ತದೆ.